NEWSನಮ್ಮಜಿಲ್ಲೆನಮ್ಮರಾಜ್ಯ

ಅತ್ತಹಳ್ಳಿ: 28 ವರ್ಷಗಳಾದರೂ ಮಾಸದ ಬಾಲ್ಯದ ಸಹಪಾಠಿಗಳ ಗೆಳೆತನ- ಸ್ನೇಹ ಮಿಲನದಲ್ಲಿ ಮಿಂದೆದ್ದ ಫ್ರೆಂಡ್ಸ್‌

ವಿಜಯಪಥ ಸಮಗ್ರ ಸುದ್ದಿ

ಗೆಳೆಯ- ಗೆಳತಿಯರೆಂದರೆ ಎಲ್ಲ. ಕಷ್ಟ – ಸುಖಗಳಲ್ಲಿ ಕೈ ಹಿಡಿಯುವ, ಕೆಲವೊಂದು ವಿಚಾರಗಳನ್ನು ಹಂಚಿಕೊಳ್ಳುವ, ತಮಾಷೆ ಮಾಡುವ, ರೇಗಿಸುವ  ಬಂಧ. ಈ ಬಂಧ ಎಲ್ಲ ಸಂಬಂಧನಗಳನ್ನು ಮೀರಿದ ಅನುಬಂಧ. ಹೌದು! ಫ್ರೆಂಡ್‌ಗಳ ಜತೆಗಿನ ಈ ಸಲುಗೆ ಕೆಲವೊಮ್ಮೆ ನಮ್ಮ ರಕ್ತಸಂಬಂಧಿಗಳ ಮನೆಯವರ ನಡುವೆ ಕೂಡ ಕಾಣಲು ಸಾಧ್ಯವಿಲ್ಲ.

ಪಾರ್ಟಿ ಮಾಡುವಾಗ, ಸಿನಿಮಾಗೆ ಹೋಗುವಾಗ, ಬೈಕ್‌ನಲ್ಲಿ ಲಾಂಗ್ ರೈಡ್ ಹೋಗುವಾಗ ಫ್ರೆಂಡ್‌ಗಳ ಸಾಥ್ ಇದ್ದರಂತೂ ಸ್ವರ್ಗಕ್ಕೆ ಮೂರೇ ಗೇಣು ಎನ್ನುವ ರೀತಿ ಬಹಳ ದಿನಗಳ ಕಾಲ ನೆನಪಿನಲ್ಲಿ ಉಳಿಯುವಂತಹ ಸೊಗಸಾದ ಸಂದರ್ಭವದು. ಅದಕ್ಕೇ ಹೇಳೋದು ಸ್ಕೂಲ್ ಲೈಫ್ ಇಸ್ ಗೋಲ್ಡನ್ ಲೈಫ್ !

ಈ ಮಾತನ್ನ ಹೇಳಿದವರಿಗೆ ನಾವು ಕೊನೆಯವರೆಗೂ ಥ್ಯಾಂಕ್ಸ್ ಹೇಳಲೇಬೇಕು. ಏಕೆಂದರೆ ಶಾಲೆಯ ಮೋಜಿನ ದಿನಗಳು, ಗೆಳೆಯರ ಜತೆ ನಾವು ಕಾಲ ಕಳೆದ ಸಂತೋಷದ ಕ್ಷಣಗಳು, ಜತೆಯಲ್ಲಿ ಕಲಿತ ಆಟ – ಪಾಠಗಳು, ಬಿದ್ದು ಗಾಯ ಮಾಡಿಕೊಂಡಾಗ ಒದಗಿ ಬಂದ ಗೆಳೆಯರ ಸಹಕಾರ ಎಲ್ಲವನ್ನು ಈಗ ನೆನೆಸಿಕೊಂಡರೆ ಅದು ಒಂದುರೀತಿ ವರ್ಣನೆಗೆ ನಿಲುಕದ ಖುಷಿಕೊಡುತ್ತದೆ.

ಮತ್ತೊಮ್ಮೆ ಅಂತಹ ದಿನಗಳು ಬರಬಾರದೇ ಅನಿಸುತ್ತದೆ. ಗೆಳೆಯರ ಜತೆ ನಾವು ತುಂಬಾ ಸಲುಗೆಯಿಂದ ಎಲ್ಲ ವಿಷಯಗಳಲ್ಲೂ ನಡೆದುಕೊಂಡಿರುತ್ತೇವೆ. ಗೆಳೆಯರ ಜತೆ ಸೇರಿ ದೊಡ್ಡವರಿಗೆ, ಶಿಕ್ಷಕರಿಗೂ ಕೂಡ ಮಾಡಿದ ಕೀಟಲೆಗಳು ಇಂದಿಗೂ ಕಣ್ಣಿಗೆ ಕಟ್ಟಿದ ಹಾಗೆ ಇರುತ್ತವೆ. ಹಾಗಾಗಿ ಗೆಳೆತನಕ್ಕೆ ಇರುವ ಮೌಲ್ಯ ಬೇರೆ ಯಾವುದಕ್ಕೂ ಸಿಗಲು ಸಾಧ್ಯವೇ ಇಲ್ಲ ಅನ್ನಿಸುತ್ತದೆ.

ಇಂಥ ಸ್ನೇಹದ ಮಿಲನ 28 ವರ್ಷಗಳ ಬಳಿಕವಾದರೆ ಅದರ ಖುಷಿ ಹೇಗಿರಬೇಕು. ಆ ಸಮಯ ಹೇಗಿರಬೇಕು ಅಲ್ವ. ಅಂಥ ಕ್ಷಣವನ್ನು ಆ.11ರ ವಿಶ್ವ ಗೆಳೆಯರ ದಿನದಂದ ಅಂಗವಾಗಿ ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲೂಕಿನ ಬನ್ನೂರು ಹೋಬಳಿಯ ಅತ್ತಹಳ್ಳಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯ 1996ರ ಬ್ಯಾಚ್‌ ವಿದ್ಯಾರ್ಥಿಗಳು ಒಟ್ಟಿಗೆ ಒಂದೆಡೆ ಸೇರುವ ಮೂಲಕ ಸಂಭ್ರಮಿಸಿದ್ದಾರೆ.

ಈ ಸಂಭ್ರಮದಲ್ಲಿ ಕೆಲ ಗೆಳೆಯ-ಗೆಳತಿಯರನ್ನು ಮಿಸ್‌ ಮಾಡಿಕೊಂಡಿದ್ದಾರೆ. ಅಂದರೆ ಕೆಲವರು ಈ ಕ್ಷಣವನ್ನು ಸವಿಯುವುದಕ್ಕೆ ಕೆಲಸದ ಒತ್ತಡದಿಂದ ಸಾಧ್ಯವಾಗಿಲ್ಲ. ಆದರೂ ಪರವಾಗಿಲ್ಲ ಎಲ್ಲ ಗೆಳೆಯರು ಒಂದೆಡೆ ಸೇರಿರುವ ವಿಷಯ ತಿಳಿದು ದೂರದಿಂದಲೇ ಅವರು ಕೂಡ ಖುಷಿ ಪಟ್ಟಿದ್ದಾರೆ.

ಹೌದು! ಈ ಕ್ಷಣ ಸುಮಾರು 28 ವರ್ಷಗಳ ಬಳಿಕ ಬಂದಿದ್ದು, ಸೇರಿದ ಎಲ್ಲರೂ ಲಿಂಗಭೇದ ಮರೆತು ಖುಷಿಯಿಂದ ಬಾಡೂಟ ಇದನ್ನು ತಿನ್ನದವರಿಗೆ ಸಿಹಿ ಊಟ ಸಿದ್ಧಪಡಿಸಿಕೊಂಡು ಅದನ್ನು ಸವಿದ ಆ ಕ್ಷಣವನ್ನು ಮರೆಯುವುದಕ್ಕೆ ಸಾಧ್ಯವಿಲ್ಲ ಎಂದು ತಮ್ಮ ಬಾಲ್ಯದ ನೆನಪಿನ ಬುತ್ತಿಯನ್ನು ಬಿಚ್ಚುವ ಜೊತೆಗೆ ಸಂಭ್ರಮಿಸಿದರು.

ಬನ್ನೂರಿನಿಂದ ಸುಮಾರು 65 ದೂರವಿರುವ ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನಬೆಟ್ಟದಲ್ಲಿ ಒಂದೆಡೆ ಸೇರಿದ ಅಂದಿನ ಬಾಲ್ಯದ ಇಂದು ಗೃಹಸ್ಥರು – ಗೃಹಿಣಿಯರಾಗಿರುವ ಗೆಳೆಯ ಗೆಳತಿಯರು ಸಂಭ್ರಮಿಸಿದ್ದಾರೆ. 28 ವರ್ಷಗಳಿಂದ ಬದುಕು ಕಟ್ಟಿಕೊಳ್ಳುವುದಕ್ಕೋಸ್ಕರ ಬೇರೆ ಬೇರೆ ನೂರಾರು ಕಿಮೀ ದೂರದ ಸ್ಥಳದಲ್ಲಿ ನೆಲೆಸಿರುವ ಈ ಸ್ನೇಹಿತರು ಹೀಗೆ ಒಂದೆಡೆ ಸೇರಲು ಕೇವಲ ಒಂದುವಾರದಲ್ಲೇ ವಾಟ್ಸ್‌ಆಪ್‌ ಮೂಲಕ ಒಬ್ಬರನ್ನೊಬ್ಬರು ಸಂಪರ್ಕಿಸಿ ಪ್ಲಾನ್‌ ಮಾಡಿಕೊಂಡು ಸ್ನೇಹ ಮಿಲನಕ್ಕೆ ಆಗಸ್ಟ್‌ 11ರಂದು ಮೂಹೂರ್ತ ಫಿಕ್ಸ್‌ ಮಾಡಿಕೊಂಡಿದ್ದರು.

ಅದರಂತೆ ಎಲ್ಲರೂ ಸೇರಿ ತಮ್ಮ ಬಾಲ್ಯದ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ಈ ಖುಷಿ ಮತ್ತೆ ನಾವು ಮುಂದಿನ ದಿನಗಳಲ್ಲಿ ಸೇರುವ ವರೆಗೂ ನೆನಪಿನಲ್ಲಿ ಇರುತ್ತದೆ. ಅಲ್ಲದೆ ಕಳೆದ 2023ರ ಆಗಸ್ಟ್‌ 6ರಂದು ಕೂಡ ಬನ್ನೂರಿನಿಂದ ಕೇವಲ 6-7 ಕಿಮೀ ದೂರವಿರುವ ಶ್ರೀ ಒಡ್ಗಲ್‌ರಂಗನಾಥ ಸ್ವಾಮಿ ಬೆಟ್ಟದಲ್ಲಿ ಸಮ್ಮಿಲಗೊಂಡು ಬಾಲ್ಯದ ಸವಿಸವಿ ನೆನಪಿನ ಬುತ್ತಿಯನ್ನು ಬಿಚ್ಚಿಟ್ಟಿದ್ದರು.

ಮತ್ತೆ 28 ವರ್ಷದ ಬಳಿಕ ಬಂದ ಈ ಮಧುರ ಕ್ಷಣಕ್ಕೆ ಅತ್ತಹಳ್ಳಿ ಅರವಿಂದ, ಶಿಕ್ಷಕ ದೇವರಾಜು, ಕೃಷ್ಣ, ಜಗದೀಶ್‌, ಅತ್ತಹಳ್ಳಿ ಸತೀಶ, ಮೇಗಳಕೊಪ್ಪಲು ಸತೀಶ, ಮಹೇಶ್‌ ಬಸವನಹಳ್ಳಿ,  ಮಧುಸೂದನ, ನಂದೀಶ ಅತ್ತಹಳ್ಳಿ, ನವೀನ, ರೇಖಾ, ಭಾಗ್ಯ, ರತ್ನ ಕಗ್ಗಲೀಪುರ, ಸವಿತಾ ಅತ್ತಹಳ್ಳಿ, ಮೀನಾಕ್ಷಿ ಬೆಟ್ಟಹಳ್ಳಿ, ಶಿಕ್ಷಕಿ ಪ್ರತಿಮಾ, ಸುಗುಣ, ಪದ್ಮಾ, ಭವ್ಯ, ಮಂಗಳ, ನಂದೀಶ್‌ ಬೀಡನಹಳ್ಳಿ, ನಾಗರಾಜು ಬೀಡನಹಳ್ಳಿ, ರಂಗಸ್ವಾಮಿ ಅತ್ತಹಳ್ಳಿ, ಮಹೇಶ ಮೇಗಳಕೊಪ್ಪಲು, ನಾಗೇಶ ಅತ್ತಹಳ್ಳಿ ಇವರೆಲ್ಲರೂ ಸಾಕ್ಷಿಯಾದರು.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ನಾನು ಕಾದು ಕುಳಿತಿದ್ದರೂ ಬಸ್‌ ನಿಲ್ಲಿಸಿಲ್ಲ - ಚಾಲಕ, ಕಂಡಕ್ಟರ್‌ ತಿಂಗಳ ಸಂಬಳ ನನಗೆ ನಷ್ಟಪರಿಹಾರ ಕೊಡಿ: ವಕೀಲನ ಒತ್ತ... ಕೆಎಂಎಫ್ ಸಿಬ್ಬಂದಿಗೆ 7ನೇ ವೇತನ ಆಯೋಗ ಜಾರಿ- 2024ರ ಆ.1ರಿಂದಲೇ ಪೂರ್ವಾನ್ವಯ KSRTC ಏಕಸ್ವಾಮ್ಯಕ್ಕೆ ಮೂಗುದಾರ ಹಾಕಿ- ಸರ್ಕಾರದ ಕಾಯ್ದೆ ಸರಿ ಎಂದ ಕೋರ್ಟ್ ಸ್ಮಶಾನ ಜಾಗ ಭೂಗಳ್ಳನಿಗೆ ಬಿಟ್ಟುಕೊಡಲು ಟಿಪ್ಪಣಿ ಮಂಡಿಸಿರುವ ಭ್ರಷ್ಟ ಅಧಿಕಾರಿಗಳು: ಎನ್.ಆರ್.ರಮೇಶ್ ಆರೋಪ ಕ್ರೀಡಾಪಟುಗಳಿಗೆ ಕೊಡುವ ಏಕಲವ್ಯ ಪ್ರಶಸ್ತಿ ಮುಂದುವರಿಸಲಿ: ಶೋಭಾ ನಾರಾಯಣ್ ಬಿಡದಿಯಿಂದ ಹೆದ್ದಾರಿಯಲ್ಲೇ ಮುಂದೆ ಬಂದರೆ ನಿಮಗೆ ಟೋಲ್‌ ಬರೆ ಗ್ಯಾರಂಟಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಸ್ಕಾರ್ಪಿಯೋ ಕಾರು KSRTC ಕನಕಪುರ ಬಸ್‌ ನಿಲ್ದಾಣದಲ್ಲಿ ವಿಕಲ ಚೇತನರಿಂದ ₹700 ವಸೂಲಿ, ಕಂಡಕ್ಟರ್ಸ್‌ ಕೊಡಬೇಕು ₹10 : ಟಿಸಿಗೆ ಡಿಎಂ ಸಾಥ್... ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ