ನ್ಯೂಡೆಲ್ಲಿ: ನಾಲ್ವರು ಅಕ್ಕತಂಗಿಯರು ಒಂದೇ ಬಾರಿಗೆ ಗರ್ಭೀಣಿಯರಾಗಿದ್ದು ಅವರ ಕುಟುಂಬವರಲ್ಲಿ ಸಂಭ್ರಮ ಮನೆ ಮಾಡಿದೆ.
ಕೇಲೀ ಸ್ಟೀವರ್ಟ್, ಜೇ ಗುಡ್ವಿಲ್ಲಿ, ಕೆರ್ರಿ-ಆನ್ ಥಾಮ್ಸನ್ ಹಾಗೂ ಆಮಿ ಗುಡ್ವಿಲ್ಲಿ ಈ ನಾಲ್ವರು ಸಹೋದರಿಯರು ಒಟ್ಟಿಗೆ ಗರ್ಭಿಣಿಯರಾಗಿದ್ದಾರೆ. ಆದರೆ ಇವರ ಹೆರಿಗೆ ದಿನಾಂಕ ಮಾತ್ರ ಬೇರೆ ಬೇರೆನೇ ಇದೆ.
ನಾಲ್ವರು ಸಹೋದರಿಯರು ಒಟ್ಟಿಗೆ ಗರ್ಭಿಣಿಯರಾಗಿದ್ದು, ಕುಟುಂಬಸ್ಥರಲ್ಲಿ ಅಚ್ಚರಿ ಉಂಟುಮಾಡಿದೆ. ಈ ಬಗ್ಗೆ ಸಹೋದರಿಯರು ಮಾತನಾಡಿ ಸಂತೋಷ ಹಂಚಿಕೊಂಡಿದ್ದಾರೆ.
ಜನಿಸುತ್ತಿರುವ ಎಲ್ಲ ಮಕ್ಕಳು ಒಂದೇ ವಯಸ್ಸಿನ ಸೋದರ ಸಂಬಂಧಿಗಳನ್ನು ಹೊಂದಿರುತ್ತಾರೆ. ಈ ವರ್ಷ ಇನ್ನೂ ನಾಲ್ಕು ಮಕ್ಕಳು ನಮ್ಮ ಕುಟುಂಬಕ್ಕೆ ಬರಲಿದ್ದಾರೆ. ಈ ವಿಚಾರವಾಗಿ ನಾವು ತುಂಬಾ ಸಂತೋಷವಾಗಿದ್ದೇವೆ ಎಂದು ಈ ನಾಲ್ವರು ಸಹೋದರಿಯರ ತಾಯಿ ಸಂಭ್ರಮದಿಂದ ಹೇಳಿಕೊಂಡಿದ್ದಾರೆ.
ಸಹೋದರಿಯರು ಒಟ್ಟಿಗೆ ತಾಯಿ ಆಗುತ್ತಿರುವ ಖುಷಿಗೆ ಒಂದು ಪಾರ್ಟಿಯನ್ನು ಆಯೋಜಿಸಲಾಗಿತ್ತು. ಕೇಲೀ ಮತ್ತು ಜೇ ಸಹೋದರಿಯರಿಬ್ಬರು ಗಂಡುಮಕ್ಕಳನ್ನು ನಿರೀಕ್ಷಿಸುತ್ತಿದ್ದಾರೆಂದು ಹೇಳಿಕೊಂಡಿದ್ದಾರೆ.
ನಾವು ನಾಲ್ವರು ಸಹೋದರಿಯರು ಹತ್ತಿರದಲ್ಲಿ ವಾಸಿಸುತ್ತೇವೆ. ಸುಮಾರು ಐದು ನಿಮಿಷಗಳ ಕಾಲ ಪ್ರತಿನಿತ್ಯ ನಡೆಯುತ್ತೇವೆ. ನಮ್ಮ ಅಮ್ಮ ತುಂಬಾ ಉತ್ಸುಕರಾಗಿದ್ದಾರೆ.
ಇನ್ನು ಮಕ್ಕಳು ನರ್ಸರಿ ಮತ್ತು ಶಾಲೆಗೆ ಹೋದ ನಂತರ ಎಲ್ಲರೂ ಒಟ್ಟಿಗೆ ಒಂದೇ ತರಗತಿಯಲ್ಲಿರುತ್ತಾರೆ ಎಂಬ ವಿಚಾರವನ್ನು ನಾನು ಪ್ರೀತಿಸುತ್ತೇನೆ. ನಮಗೆ ಜನಿಸುವ ಮಕ್ಕಳು ಉತ್ತಮ ಸ್ನೇಹಿತರಾಗುತ್ತಾರೆ ಎಂದು ನನಗೆ ಖಾತ್ರಿಯಿದೆ ಎಂದು ನಾಲ್ವರು ಸೋಹದರಿ ಗರ್ಭಿಣಿಯರು ಹೇಳಿಕೊಂಡಿದ್ದಾರೆ.