CrimeNEWSನಮ್ಮಜಿಲ್ಲೆಸಿನಿಪಥ

ಕೆ.ಆರ್‌.ಪೇಟೆ: ಅತಿ ಚಿಕ್ಕವಯಸ್ಸಿನಲ್ಲೇ ಕಿರುತೆರೆ ಕಲಾವಿದ ಪವನ್‌ ಹೃದಯಾಘಾತಕ್ಕೆ ಬಲಿ

ವಿಜಯಪಥ ಸಮಗ್ರ ಸುದ್ದಿ

ಕೆ.ಆರ್‌.ಪೇಟೆ: ಕಿರುತೆರೆ ಕಲಾವಿದ ತಾಲೂಕಿನ ಹರಿಹರಪುರ ಗ್ರಾಮದ ಪವನ್‌ (25) ನಿನ್ನೆ ಹೃದಯಾಘಾತದಿಂದ ಮುಂಬೈನಲ್ಲಿ ಮೃತಪಟ್ಟಿದ್ದಾರೆ.

ಹರಿಹರಪುರದ ನಿವಾಸಿ ನಾಗರಾಜು ಮತ್ತು ಸರಸ್ವತಿಯ ಪುತ್ರ ಪರಭಾಷೆಯ (ಹಿಂದಿ. ತಮಿಳು.)ಕಿರುತೆರೆಯ ಕಲಾವಿದರಾಗಿ ಹೊರಹೊಮ್ಮುತ್ತಿದ ಪವನ್ ಮುಂಬೈ ನಗರದಲ್ಲಿದಲ್ಲಿ ವಾಸವಾಗಿದಲ್ಲಿ ವಾಸವಾಗಿದ್ದರು. ಗುರುವಾರ ಮುಂಜಾನೆ 5 ಗಂಟೆಗೆ ತೀವ್ರ ಹೃದಯಘಾತದಿಂದ ಮುಂಬೈನ್‌ ತಮ್ಮ ನಿವಾಸದಲ್ಲಿ ಕೊನೆ ಉಸಿರೆಳೆದಿದ್ದಾರೆ.

ಕಲಾವಿದರಾಗಿದ್ದ ಪವನ್‌ ತನ್ನ ದೇಹ ಆಕರ್ಷಣೆಗಾಗಿ ಅತಿಯಾದ ವ್ಯಾಯಮ ಮಾಡುತ್ತಿದ್ದರು (ಜಿಮ್). ಇದೇ ಅವರ ಸಾವಿಗೆ ಕಾರಣ ಎಂದು ಹೇಳಲಾಗುತ್ತಿದೆ.

ಪವನ್‌ ಮೃತದೇಹವು ಮುಂಬೈನ ಆಸ್ಪತ್ರೆಯಲ್ಲಿದ್ದು ಮರಣೋತ್ತರ ಪರೀಕ್ಷೆ ನಂತರ ಶುಕ್ರವಾರ (ಇಂದು) ಬೆಳಗ್ಗೆ ಹರಿಹರಪುರದಲ್ಲಿರುವ ಮೃತರ ಜಮೀನಿನಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಮಿನುಗುವ ನಕ್ಷತ್ರವಾಗಿದ್ದ ಕಲಾವಿದ ಪವನ್ ಅಗಲಿಕೆಯಿಂದ ಕುಟುಂಬದ ಸದಸ್ಯರು ದುಃಖದ ಮಡುವಿನಲ್ಲಿದ್ದಾರೆ. ಕುಟುಂಬಕ್ಕೆ ಆಸರೆಯಾಗಿರಬೇಕಾದ ಮುಗ ಪಾಲಕರ ಮುಂದೆಯೇ ಇಹಲೋಕ ತ್ಯಜಿಸಿರುವುದು ಇನ್ನಷ್ಟು ದುಃಖಕ್ಕೆ ಕಾರಣವಾಗಿದೆ.

ಮೃತರ ಕುಟುಂಬಕ್ಕೆ ಶಾಸಕ ಎಚ್.ಟಿ. ಮಂಜು, ಮಾಜಿ ಸಚಿವ ಕೆ.ಸಿ. ನಾರಾಯಣಗೌಡ, ಮಾಜಿ ಶಾಸಕ ಕೆ.ಬಿ. ಚಂದ್ರಶೇಖರ, ಮಾಜಿ ಶಾಸಕ ಬಿ.ಪ್ರಕಾಶ್, ಯುವ ಜನತಾದಳ ರಾಜ್ಯ ಪ್ರಧಾನ ಕಾರ್ಯದರ್ಶಿ ಕುರುಬಹಳ್ಳಿ ನಾಗೇಶ್ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ.

Leave a Reply

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಹಿಂದಿನಿಂದ ವೇಗವಾಗಿ ಬಂದ ಕಾರು ಮುಂದೆ ಹೋಗುತ್ತಿದ್ದ ಕಾರ್‌ ಮೇಲೇರಿತು! ರೈತ ನಾಯಕ ಕುರುಬೂರು ಶಾಂತಕುಮಾರ್‌ಗೆ ಬೆಂಗಳೂರಿನಲ್ಲಿ ಚಿಕಿತ್ಸೆ: ಸಿಎಂ ಸಿದ್ದರಾಮಯ್ಯ ಮಹಾಕುಂಭ ಮೇಳಕ್ಕೆ ತೆರಳುತ್ತಿದ್ದ 18 ಮಂದಿ ದೆಹಲಿ ರೈಲು ನಿಲ್ದಾಣದಲ್ಲಿ ಕಾಲ್ತುಳಿತಕ್ಕೆ ಸಿಲುಕಿ ಮೃತ ಮಳೆ ನೀರು ಕೊಯ್ಲಿನಿಂದ ಅಂತರ್ಜಲ ವೃದ್ಧಿ: ಕೃಷಿ ಇಲಾಖೆ ಉಪ ನಿರ್ದೇಶಕಿ ಗಾಯತ್ರಿ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ನೇಮಕಕ್ಕೆ ಅರ್ಜಿ ಆಹ್ವಾನ ಬಿಬಿಎಂಪಿ: ಕಸ ಬಿಸಾಡುವ ಸ್ಥಳ ನಿರ್ಮೂಲನೆ ಜತೆ ಜೆತೆಗೆ ಸ್ವಚ್ಛತಾ ಅಭಿಯಾನ KSRTC ರಿಯಾಯಿತಿ ದರದ ಪಾಸ್‌ ಇದ್ದರೂ ತಾರತಮ್ಯತೆ: ನಿವೃತ್ತರಾದ ಮೇಲೆ ಅಧಿಕಾರಿಗಳಿಗೆ ಬಡತನ- ನೌಕರರಿಗೆ ಸಿರಿತನ !! ಪಂಜಾಬ್‌ನಲ್ಲಿ ಕುರುಬೂರು ಶಾಂತಕುಮಾರ್ ಇದ್ದ ಕಾರು ಅಪಘಾತ: ಆಸ್ಪತ್ರೆಗೆ ದಾಖಲು ಬಿಬಿಎಂಪಿ: 1.84 ಲಕ್ಷ ಬೀದಿ ನಾಯಿಗಳಿಗೆ "ಸಂಯುಕ್ತ ಲಸಿಕೆ" ಹಾಕುವ ಗುರಿ- ತುಷಾರ್ ಗಿರಿನಾಥ್ ಮೈಕ್ರೋಫೈನಾನ್ಸ್ ಸಂಸ್ಥೆಗಳ ಕಿರುಕುಳ ನಿಯಂತ್ರಣಕ್ಕೆ ಸರ್ಕಾರಿ ಆಧ್ಯಾದೇಶ ಜಾರಿ