NEWSನಮ್ಮಜಿಲ್ಲೆನಮ್ಮರಾಜ್ಯ

ಕೆಎಸ್‌ಆರ್‌ಟಿಸಿ ರಾಮನಗರ: ಹೊಸ ETM ಮಷಿನ್ ಅವಾಂತರ- ಪಾಸ್ ನಮೂದಿಸಿದರೂ ಟಿಕೆಟ್ ಬರುತ್ತದೆ !

ವಿಜಯಪಥ ಸಮಗ್ರ ಸುದ್ದಿ

ರಾಮನಗರ: ಇದೇ ಅಕ್ಟೋಬರ್‌ ಮೊದದಿನದಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನಿರ್ವಾಹಕರಿಗೆ ಕೊಟ್ಟಿರುವ ETM ಮಷಿನ್‌ಗಳಿಂದ ಹಲವಾರು ಸಮಸ್ಯೆಗಳಾಗುತ್ತಿವೆ. ಇದರಿಂದ ನಿರ್ವಾಹಕರು ತಮ್ಮ ಜೇಬು ಖಾಲಿ ಮಾಡಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ.

ಅಲ್ಲದೆ ಈ ಹೊಸ ETM ಮಷಿನ್‌ಗಳು ಬ್ಲಾಸ್ಟ್‌ ಆಗುವ ಆತಂಕ ಕೂಡ ಇದೆ. ಈಗಾಗಲೇ ಚಿಕ್ಕಮಗಳೂರು ವಿಭಾಗದ ಬಸ್ಸೊಂದರ ETM ಮಷಿನ್ ಸಿಡಿದು ಬಸ್‌ನಲ್ಲಿ ಆತಂಕ ಉಂಟುಮಾಡಿ ಪ್ರಯಾಣಿಕರಲ್ಲಿ ಭಯದ ವಾತಾವರಣ ಸೃಷ್ಟಿಸಿದ್ದು ಇದೆ.

ಜತೆಗೆ ಸರಿಯಾಗಿ ಪರಿಶೀಲನೆ ಮಾಡದೆ ಆತುರಾತುರವಾಗಿ ಈ ETM ಮಷಿನ್‌ಗಳನ್ನು ನಿರ್ವಾಹಕರಿಗೆ ಕೊಟ್ಟಿದ್ದು, ನಿರ್ವಾಹಕರು ನಮೋದಿಸುವುದು ಒಂದು ಆದರೆ ಮಷಿನ್‌ನಲ್ಲಿ ಬರುವುದು ಇನ್ನೊಂದು. ಇದರಿಂದ ನಿರ್ವಾಹಕರು ತಮ್ಮದಲ್ಲದ ತಪ್ಪಿಗೆ ಸಂಸ್ಥೆಗೆ ತಮ್ಮ ಹಣವನ್ನು ಕಟ್ಟುವ ಸ್ಥಿತಿ ನಿರ್ಮಾಣವಾಗಿದೆ.

ಪಾಸ್ ನಮೂದಿಸಿದರೂ ಟಿಕೆಟ್ ಬರುತ್ತದೆ: ನೋಡಿ ಇಂದು (ಅ.21) ಬೆಳಗ್ಗೆ 8.51ರಲ್ಲಿ ರಾಮನಗರ ಘಟಕದ ವಾಹನವೊಂದರಲ್ಲಿ ಮಂಚನಬೆಲೆಯಿಂದ ರಾಮನಗರಕ್ಕೆ 9 ಪಾಸ್ ನಮೂದಿಸಿದ ನಿರ್ವಾಹಕನಿಗೆ ತಲಾ 25 ಮುಖಬೆಲೆಯ ಒಂದು ಚೀಟಿ ಬಂದಿದೆ. ಇದರಿಂದ ಗಾಬರಿಗೊಂಡ ನಿರ್ವಾಹಕ ಕೂಡಲೇ ಘಟಕದ ಅಧಿಕಾರಿಗಳಿಗೆ ಈ ಕುರಿತು ಮಾಹಿತಿ ನೀಡಿದ್ದಾರೆ. ಅದಕ್ಕೆ ಅಧಿಕಾರಿಗಳು ಸರಿ Adjust ಮಾಡಿಕೊಂಡು ಬಾ ಎಂದು ಹೇಳಿದ್ದಾರೆ.

ಆದರೆ, 9 ಪಾಸ್ ನಮೂದಿಸಿದ ನಿರ್ವಾಹಕನಿಗೆ ತಲಾ 25 ರೂ. ಮುಖಬೆಲೆಯ ಒಂದು ಚೀಟಿ ಬಂದಿದೆ ಅಂದರೆ ಈ 225 ರೂಪಾಯಿಯನ್ನು ನಿರ್ವಾಹಕ ಕಟ್ಟಬೇಕು. ಇಲ್ಲಿ ನಿರ್ವಾಹಕ ಮಾಡದ ತಪ್ಪಿಗೆ ತಮ್ಮ ಕೈಯಿಂದ ಸಂಸ್ಥೆಗೆ ಹಣಕಟ್ಟಬೇಕು ಎಂದರೆ ಹೇಗೆ? ಅಲ್ಲದೆ ಮಷಿನ್‌ ರೆಡಿ ಮಾಡಿರುವವರು ಈ ಬಗ್ಗೆ ಸರಿಯಾಗಿ ಅಳವಡಿಸಿಲ್ಲ ಎಂದರೆ ಅದು ಅವರ ತಪ್ಪು ಅದಕ್ಕೆ ನಿರ್ವಾಹಕರು ಏಕೆ ದಂಡಕಟ್ಟಬೇಕು.

ಒಟ್ಟಾರೆ ಹೊಸ ETM ಮಷಿನ್ ಅವಾಂತರದಿಂದಾಗಿ ನಿರ್ವಾಹಕರು ನೆಮ್ಮದಿಯಿಂದ ಕರ್ತವ್ಯ ನಿರ್ವಹಿಸಲಾಗದ ಸ್ಥಿತಿ ತಲುಪಿದೆ. 225 ರೂ. ನಿರ್ವಾಹಕನೇ ತನ್ನ ಸಂಬಳದಲ್ಲಿ ಪಾವತಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿರುವುದು ದುರುಂತ. ಇದು ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆಹಾಕು ಎಂಬಂತಾಗಿದೆ.

ಇನ್ನು ಈ ಮಷಿನ್‌ಗಳನ್ನು ಸರಿಪಡಿಸಿ ಇಲ್ಲ ಹಳೇ ಮಷಿನ್‌ಗಳನ್ನೇ ಕೊಡಿ ಎಂದು ನೌಕರರು ಮನವಿ ಮಾಡಿದ್ದರೂ ಕೂಡ ಎಂಡಿ ಅನ್ಬುಕುಮಾರ್‌ ಮಾತ್ರ ಈ ಬಗ್ಗೆ ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಡುತ್ತಿದೆ. ಅನ್ಬುಕುಮಾರ್‌ ಅವರು ನಿಗಮಕ್ಕೆ ಬಂದ ಹೊಸದರಲ್ಲಿ ನೌಕರರ ಪಾಲಿನ ದೇವರು ಎಂಬಂತೆ ಓಡಾಡುತ್ತಿದ್ದರು. ಆದರೆ ಈಗ ನೌಕರರ ಪಾಲಿನ ದೆವ್ವವಾಗುತ್ತಿರುವುದು ನೋಡಿದರೆ ಅಚ್ಚರಿಯಾಗುತ್ತಿದೆ. ಅಲ್ಲದೆ ರಾಯರ ಕುದುರೆ ಆಗುತ್ತಿದ್ದಾರೆ ಎನಿಸುತ್ತಿದೆ.

[TS_Poll id=”1″]

Leave a Reply

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಮೆಟ್ರೋ ದರ ಏರಿಕೆಗೆ ಕೇಂದ್ರ ಸರ್ಕಾರವೇ ಹೊಣೆ: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ವ್ಯಾಪಾರ ವಹಿವಾಟು ಹೆಚ್ಚಿಸಿ, ಉತ್ಪಾದನೆ ಉತ್ತೇಜಿಸುವ ಸರ್ಕಾರದ ಬದ್ಧತೆ ಶ್ಲಾಘನೀಯ: ಕಾಸಿಯಾ ಅಧ್ಯಕ್ಷ ರಾಜಗೋಪಾಲ್ ಮೈಕ್ರೊ ಫೈನಾನ್ಸ್ ಸುಗ್ರಿವಾಜ್ಞೆಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಂಕಿತ ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ ಕರಡಿಗೆ ನಾಗರೀಕರಿಂದ ಬರುವ ಸಲಹೆಗಳ ಸೇರಿಸಿ ಅಂತಿಮ: ರಿಜ್ವಾನ್ ಹರ್ಷದ್ ಎಸ್ಸಿಎಸ್‌ಪಿ, ಟಿಎಸ್ಪಿ ವಿಶೇಷ ಯೋಜನೆ ಫೆ. ಅಂತ್ಯದೊಳಗೆ ಶೇ.100 ರಷ್ಟು ಪ್ರಗತಿ ಸಾಧಿಸಿರಬೇಕು: ಅಧಿಕಾರಿಗಳಿಗೆ ಡಿಸಿ ಆ... ರೈತರ ನಿರಂತರ ಹೋರಾಟಕ್ಕೆ ನಾಳೆಗೆ ವರ್ಷ: ಆದರೂ ಕಿವಿಗೊಡದ ಸರ್ಕಾರ KSRTC: ಫೇಕ್ ಫೋನ್‌ ಪೇ/ UPI ಆಪ್‌ಗಳಿಂದ ದಿನನಿತ್ಯ ನಿರ್ವಾಹಕರಿಗೆ ಆರ್ಥಿಕ ಬರೆ!! KKRTC ಬಸ್‌ನಲ್ಲಿ ಲೈಂಗಿಕ ಕಿರುಕುಳ ನೀಡಿದ ಕಂಡಕ್ಟರ್‌ನಿಂದ ದೂರು ಹಿಂಪಡೆಯುವಂತೆ ಬೆದರಿಕೆ-ಆರೋಪ KSRTC ಅಭಿವೃದ್ಧಿಗೆ ಬಜೆಟ್‌ನಲ್ಲಿ ಅನುದಾನ - ಸಿಎಂ ಜತೆ ಸಚಿವ ರಾಮಲಿಂಗಾರೆಡ್ಡಿ ಚರ್ಚೆ ಬಜೆಟ್‌ನಲ್ಲಿ ನಿಮಗೆ ಸಿಹಿ ಸುದ್ದಿ ಇದೆ: KSRTC ಅಧಿಕಾರಿಗಳಿಗೆ ಸಾರಿಗೆ ಸಚಿವರ ಭರವಸೆ