NEWSಕೃಷಿನಮ್ಮಜಿಲ್ಲೆ

ಕೃಷಿ ಇಲಾಖೆಯಿಂದ ಗ್ರೂಪ್‌ಟಾಕ್‌’ ವಾಯ್ಸ್ ಕಾನ್ಫರೆನ್ಸ್ ಎಂಬ ಹೊಸ ತಂತ್ರಾಂಶ: ಏಕಕಾಲಕ್ಕೆ ಸಾವಿರಾರು ರೈತರಿಗೆ ನೆರವು

ವಿಜಯಪಥ ಸಮಗ್ರ ಸುದ್ದಿ

ಪಿ.ಎನ್.ದೇವೇಗೌಡ ಪಿರಿಯಾಪಟ್ಟಣ
ರೈ
ತರನ್ನು ಸಂಪರ್ಕಿಸಲು ಕೃಷಿ ಇಲಾಖೆ ‘ಗ್ರೂಪ್‌ಟಾಕ್‌’ ವಾಯ್ಸ್ ಕಾನ್ಫರೆನ್ಸ್ ಎಂಬ ಹೊಸ ತಂತ್ರಾಂಶವನ್ನು ಬಳಸಿ ಕೃಷಿಗೆ ಸಂಬಂಧಿಸಿದಂತೆ ಏಕಕಾಲದಲ್ಲಿ ಸಾವಿರಾರು ರೈತರಿಗೆ ಸಲಹೆ, ಸೂಚನೆಗಳನ್ನು ನೀಡುವ ವ್ಯವಸ್ಥೆಗೆ ರೈತರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ.

ಕೃಷಿ ಇಲಾಖೆಯು ರಾಷ್ಟ್ರೀಯ ಮಾಹಿತಿ ಕೇಂದ್ರ (ಎನ್‌ಐಸಿ) ಇ–ಆಡಳಿತದ ಭಾಗವಾಗಿ ನೂತನ ವ್ಯವಸ್ಥೆಯನ್ನು ಅನುಷ್ಠಾನಕ್ಕೆ ತಂದಿದೆ. ಕೃಷಿ, ಇಲಾಖೆಯು ಈ ಸೌಲಭ್ಯವನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಿದ್ದು, ಈ ವ್ಯವಸ್ಥೆಯಲ್ಲಿ ರೈತರು ದ್ವಿಮುಖ ಸಂವಹನ ನಡೆಸಬಹುದಾಗಿದ್ದು, ಜಿಲ್ಲೆಯ ರೈತರು ಹೊಸ ತಾಂತ್ರಿಕ ವ್ಯವಸ್ಥೆಯಡಿ ಆಗಾಗ ಸೇರುತ್ತಿದ್ದು, ಕೃಷಿಗೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಚರ್ಚೆ ನಡೆಸುತ್ತಿದ್ದಾರೆ.

ಪಿರಿಯಾಪಟ್ಟಣ ತಾಲೂಕಿನ ರೈತರನ್ನು ಸಂಪರ್ಕಿಸಲು ಕೃಷಿ ಇಲಾಖೆ ‘ಗ್ರೂಪ್‌ಟಾಕ್‌’ ಅಥವಾ ‘ವಾಯ್ಸ್‌ ಕಾನ್ಫರೆನ್ಸ್‌’ ಈಚೆಗೆ ಬಳಸಿಕೊಂಡಿದೆ. ಆಧಾರ್‌–ಪಹಣಿ ಜೋಡಿಸುವಂತೆ ಸೂಚನೆ ನೀಡಲು ‘ಗ್ರೂಪ್‌ಟಾಕ್‌’ ವ್ಯವಸ್ಥೆಯ ಮೊರೆ ಹೋಗಿದೆ. ಮೂರು ಸಾವಿರಕ್ಕೂ ಹೆಚ್ಚು ರೈತರನ್ನು ಏಕಕಾಲಕ್ಕೆ 45 ನಿಮಿಷಗಳು ಚರ್ಚೆ ಮಾಡಬಹುದು ಎನ್ನುತ್ತಾರೆ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರಸಾದ್.

ತಾಲೂಕಿನಲ್ಲಿ ಮೆಕ್ಕೆಜೋಳಕ್ಕೆ ಕಾಣಿಸಿಕೊಂಡ ಲದ್ದಿಹುಳು ಬಾಧೆ, ಬೆಳೆ ವಿಮೆ ಕಂತು ಪಾವತಿ, ಪೋಷಕಾಂಶಗಳ ನಿರ್ವಹಣೆ, ಬೆಳೆ ಸಮೀಕ್ಷೆ ಸೇರಿ ಹಲವು ವಿಚಾರಗಳಿಗೆ ಸಂಬಂಧಿಸಿದಂತೆ ಮಾಹಿತಿ ನೀಡಿದೆ.

ಆಧಾರ್‌–ಪಹಣಿ ಜೋಡಿಸದ ರೈತರ ಪಟ್ಟಿ ಇಲಾಖೆಯಲ್ಲಿತ್ತು. ಈ ಜೋಡಣೆಯಿಂದ ಆಗುವ ಅನುಕೂಲಗಳನ್ನು ರೈತರಿಗೆ ಮನವರಿಕೆ ಮಾಡಿಕೊಡುವ ಅಗತ್ಯವಿತ್ತು. ಎನ್‌ಐಸಿ ಬೆಂಗಳೂರು ಕಚೇರಿಗೆ ರೈತರ ಹೆಸರು, ಊರು ಹಾಗೂ ದೂರವಾಣಿ ಸಂಖ್ಯೆಯನ್ನು ಒದಗಿಸಿ ‘ಗ್ರೂಪ್‌ಟಾಕ್‌’ಗೆ ಸಮಯ ನಿಗದಿಪಡಿಸುವಂತೆ ಕೋರಿಕೆ ಸಲ್ಲಿಸಲಾಯಿತು. ಜೂನ್‌ 28ರಂದು ಮಧ್ಯಾಹ್ನ 2.30ಕ್ಕೆ ರೈತರೊಂದಿಗೆ ಈ ಸಂವಹನ ಸಾಧ್ಯವಾಯಿತು. ಸುಮಾರು 45 ನಿಮಿಷ ರೈತರೊಂದಿಗೆ ಮಾತುಕತೆ ನಡೆಸಲಾಯಿತು ಎನ್ನುತ್ತಾರೆ.

ಏಕಕಾಲಕ್ಕೆ 5 ಸಾವಿರ ಜನರ ಸಂಪರ್ಕ: ಬೆಂಗಳೂರಿನ ಎನ್‌ಐಸಿ ಕೇಂದ್ರ ಕಚೇರಿಯಿಂದ ಈ ವ್ಯವಸ್ಥೆಯನ್ನು ನಿರ್ವಹಣೆ ಮಾಡಲಾಗುತ್ತಿದೆ. ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಸಂಪರ್ಕಿಸಬೇಕಾದ ಜನರ ಹೆಸರು, ಊರು ಹಾಗೂ ಮೊಬೈಲ್‌ ಸಂಖ್ಯೆಯನ್ನು ಎನ್‌ಐಸಿಗೆ ಒದಗಿಸುತ್ತಾರೆ. ಗರಿಷ್ಠ ಐದು ಸಾವಿರ ಜನರಿಗೆ ಏಕಕಾಲದಲ್ಲಿ ದೂರವಾಣಿ ಕರೆ ಮಾಡಲು ಅವಕಾಶವಿದೆ. ಇದು ದ್ವಿಮುಖ ಸಂವಹನ ವ್ಯವಸ್ಥೆಯಾಗಿದ್ದು, ಅನುಮಾನಗಳನ್ನು ನಿವಾರಿಸಿಕೊಳ್ಳಲು ಪ್ರಶ್ನೆಗಳನ್ನು ಕೇಳಬಹುದಾಗಿದೆ.

ಸಂಪರ್ಕಿಸಬಹುದಾದ ವ್ಯಕ್ತಿಗಳ ಮೊಬೈಲ್‌ ಸಂಖ್ಯೆಗಳನ್ನು ಉಪಕರಣಕ್ಕೆ ಅಳವಡಿಸಿ ಸಮಯ ನಿಗದಿಪಡಿಸಲಾಗುತ್ತದೆ. ‘ಗ್ರೂಪ್‌ಟಾಕ್‌’ಗೆ ನಿಗದಿಪಡಿಸಿದ ದಿನ, ಸಮಯ, ವಿಷಯ ಹಾಗೂ ಮಾತನಾಡುವ ವ್ಯಕ್ತಿಯ ಬಗ್ಗೆ ಜನರಿಗೆ ಸಂದೇಶ ರವಾನೆಯಾಗುತ್ತದೆ. ಈ ಸಂದೇಶ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ರವಾನಿಸಲಾಗುತ್ತದೆ. ನಿಗದಿತ ಸಮಯಕ್ಕಿಂತ ಅರ್ಧ ಗಂಟೆ ಮೊದಲು ಇದೇ ಸಂದೇಶ ಮತ್ತೆ ಸಂಬಂಧಿಸಿದ ವ್ಯಕ್ತಿಯ ಮೊಬೈಲ್‌ಗೆ ಬರುತ್ತದೆ. ಸಮಯ ಬಿಡುವು ಮಾಡಿಕೊಳ್ಳಲು ಇದರಿಂದ ಸಹಕಾರಿಯಾಗುತ್ತದೆ.

ರೈತರನ್ನು ಸಂಪರ್ಕಿಸಿ ಸಲಹೆ, ಸೂಚನೆಗಳನ್ನು ನೀಡಲು ಇದರಿಂದ ಅನುಕೂಲವಾಗಿದೆ. ಇಲಾಖೆಯ ಸೌಲಭ್ಯ, ಬೆಳೆ, ಪೋಷಕಾಂಶ ನಿರ್ವಹಣೆಯ ಕುರಿತು ರೈತರೊಂದಿಗೆ ಮಾತುಕತೆ ನಡೆಸುವುದು ಸಲೀಸಾಗಿದೆ. ಈ ತಾಂತ್ರಿಕ ಸೌಲಭ್ಯವನ್ನು ಇನ್ನಷ್ಟು ಸಮರ್ಪಕವಾಗಿ ಬಳಸಿಕೊಳ್ಳಲು ಸಜ್ಜಾಗುತ್ತಿದ್ದೇವೆ ಎಂದು ಪ್ರಸಾದ್ ವಿವರಿಸುತ್ತಾರೆ.

ಚರ್ಚೆಗೂ ಅವಕಾಶ: ‘ಗ್ರೂಪ್‌ಟಾಕ್‌’ನಲ್ಲಿ ದ್ವಿಮುಖ ಸಂವಹನ ವ್ಯವಸ್ಥೆ ಇರುವುದರಿಂದ ಚರ್ಚೆಗೂ ಅವಕಾಶ ಕಲ್ಪಿಸಲಾಗುತ್ತದೆ. ಅಧಿಕಾರಿ ಅಥವಾ ಸಂಬಂಧಿಸಿದ ವ್ಯಕ್ತಿ ಮಾತನಾಡಿದ ಬಳಿಕ ರೈತರು ಪ್ರಶ್ನೆಗಳನ್ನು ಕೇಳಬಹುದಾಗಿದೆ. ಅನುಮಾನಗಳನ್ನು ನಿವಾರಿಸಿಕೊಳ್ಳಲು ಕೊನೆಯ ಕೆಲ ನಿಮಿಷಗಳನ್ನು ಮೀಸಲಿಡಲಾಗುತ್ತದೆ.

ಇನ್ನು ನಿಗದಿತ ಸಮಯಕ್ಕೆ ವ್ಯಕ್ತಿಗೆ ದೂರವಾಣಿ ಕರೆ ಹೋಗುತ್ತದೆ. ಮೊದಲೇ ಸಂದೇಶ ಗಮನಿಸಿದವರು ಕರೆ ಸ್ವೀಕರಿಸಿ ‘ಗ್ರೂಪ್‌ಟಾಕ್‌’ಗೆ ಸಜ್ಜಾಗುತ್ತಾರೆ. ಕರೆ ಸ್ವೀಕರಿಸದೇ ಇದ್ದರೆ ಅಥವಾ ತಾಂತ್ರಿಕ ಸಮಸ್ಯೆಯಿಂದ ಸಂಪರ್ಕ ಕಡಿತಗೊಂಡವರು ಮತ್ತೆ ಸೇರಬಹುದಾಗಿದೆ. ಪ್ರತಿ ಐದು ನಿಮಿಷಕ್ಕೊಮ್ಮೆ ನಿಯಮಿತವಾಗಿ ಕರೆ ಮಾಡಲಾಗುತ್ತದೆ. ಪ್ರಶ್ನೆ ಕೇಳಲು ಅನುಮಾನ ನಿವಾರಿಸಿಕೊಳ್ಳಲು ‘0’ ಪ್ರೆಸ್‌ ಮಾಡುವಂತೆ ಸೂಚಿಸಲಾಗುತ್ತದೆ. ಇಂತಹವರಿಗೆ ಮಾತನಾಡಲು ಅವಕಾಶ ನೀಡಲಾಗುತ್ತದೆ.

ಮೆಕ್ಕೆಜೋಳಕ್ಕೆ ತಗುಲಿದ ಲದ್ದಿ ಹುಳು ಬಾಧೆಗೆ ಸಂಬಂಧಿಸಿದ ಮಾಹಿತಿ ‘ಗ್ರೂಪ್‌ಟಾಕ್‌’ನಲ್ಲಿ ಸಿಕ್ಕಿತು. ಇ–ಕೆವೈಸಿಯಲ್ಲಿ ಆಗುತ್ತಿರುವ ಸಮಸ್ಯೆಯನ್ನು ರೈತರು ಬಗೆಹರಿಸಿಕೊಳ್ಳಲು ಅನುಕೂಲವಾಗುತ್ತದೆ ಎನ್ನುತ್ತಾರೆ ಈ ಭಾಗದ ರೈತರು.

ಇನ್ನು ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಬಯಸುವ ರೈತರು ಸಮೀಪದ ಕೃಷಿ ಕೇಂದ್ರಗಳಿಗೆ ಭೇಟಿ ನೀಡಬಹುದಾಗಿದೆ.

 ಕೃಷಿ ಇಲಾಖೆಯ ಸೌಲಭ್ಯ, ಬೆಳೆ, ಪೋಷಕಾಂಶ ನಿರ್ವಹಣೆಯ ಕುರಿತು ರೈತರೊಂದಿಗೆ ಮಾತುಕತೆ ನಡೆಸುವುದು ಸಲೀಸಾಗಿದೆ. ಈ ತಾಂತ್ರಿಕ ಸೌಲಭ್ಯವನ್ನು ಇನ್ನಷ್ಟು ಸಮರ್ಪಕವಾಗಿ ಬಳಸಿಕೊಳ್ಳಲು ಕೃಷಿ ಇಲಾಖೆ ಸಜ್ಜಾಗಿದೆ.

l ಪ್ರಸಾದ್ ಕೃಷಿ ಇಲಾಖೆ ಸಹಾಯಕ ನಿರ್ದೇಶಕರು

Leave a Reply

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಹಿಂದಿನಿಂದ ವೇಗವಾಗಿ ಬಂದ ಕಾರು ಮುಂದೆ ಹೋಗುತ್ತಿದ್ದ ಕಾರ್‌ ಮೇಲೇರಿತು! ರೈತ ನಾಯಕ ಕುರುಬೂರು ಶಾಂತಕುಮಾರ್‌ಗೆ ಬೆಂಗಳೂರಿನಲ್ಲಿ ಚಿಕಿತ್ಸೆ: ಸಿಎಂ ಸಿದ್ದರಾಮಯ್ಯ ಮಹಾಕುಂಭ ಮೇಳಕ್ಕೆ ತೆರಳುತ್ತಿದ್ದ 18 ಮಂದಿ ದೆಹಲಿ ರೈಲು ನಿಲ್ದಾಣದಲ್ಲಿ ಕಾಲ್ತುಳಿತಕ್ಕೆ ಸಿಲುಕಿ ಮೃತ ಮಳೆ ನೀರು ಕೊಯ್ಲಿನಿಂದ ಅಂತರ್ಜಲ ವೃದ್ಧಿ: ಕೃಷಿ ಇಲಾಖೆ ಉಪ ನಿರ್ದೇಶಕಿ ಗಾಯತ್ರಿ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ನೇಮಕಕ್ಕೆ ಅರ್ಜಿ ಆಹ್ವಾನ ಬಿಬಿಎಂಪಿ: ಕಸ ಬಿಸಾಡುವ ಸ್ಥಳ ನಿರ್ಮೂಲನೆ ಜತೆ ಜೆತೆಗೆ ಸ್ವಚ್ಛತಾ ಅಭಿಯಾನ KSRTC ರಿಯಾಯಿತಿ ದರದ ಪಾಸ್‌ ಇದ್ದರೂ ತಾರತಮ್ಯತೆ: ನಿವೃತ್ತರಾದ ಮೇಲೆ ಅಧಿಕಾರಿಗಳಿಗೆ ಬಡತನ- ನೌಕರರಿಗೆ ಸಿರಿತನ !! ಪಂಜಾಬ್‌ನಲ್ಲಿ ಕುರುಬೂರು ಶಾಂತಕುಮಾರ್ ಇದ್ದ ಕಾರು ಅಪಘಾತ: ಆಸ್ಪತ್ರೆಗೆ ದಾಖಲು ಬಿಬಿಎಂಪಿ: 1.84 ಲಕ್ಷ ಬೀದಿ ನಾಯಿಗಳಿಗೆ "ಸಂಯುಕ್ತ ಲಸಿಕೆ" ಹಾಕುವ ಗುರಿ- ತುಷಾರ್ ಗಿರಿನಾಥ್ ಮೈಕ್ರೋಫೈನಾನ್ಸ್ ಸಂಸ್ಥೆಗಳ ಕಿರುಕುಳ ನಿಯಂತ್ರಣಕ್ಕೆ ಸರ್ಕಾರಿ ಆಧ್ಯಾದೇಶ ಜಾರಿ