ಬೆಂಗಳೂರು: ಗಂಡ-ಹೆಂಡತಿ ಜಗಳಕ್ಕೆ ಕಾರು ಪಲ್ಟಿಯಾದ ಘಟನೆ ನಗರದ ಹಲಸೂರು ಗೇಟ್ ಪೊಲೀಸ್ ಠಾಣೆಯ ಸಮೀಪ ತಡರಾತ್ರಿ ನಡೆದಿದೆ.
ಮಾರುಕಟ್ಟೆ ಕಡೆಯಿಂದ ಬರುತ್ತಿದ್ದ ಐ 20 ಕಾರು ಪಲ್ಟಿಯಾಗಿರುವುದು. ಕಾರಿನಲ್ಲಿ ಪತಿ-ಪತ್ನಿ ನಡುವೆ ಮಾತಿನ ಚಕಮಕಿ ನಡೆದಿದೆ. ಇದರಿಂದ ತಾಳ್ಮೆ ಕಳೆದುಕೊಂಡ ಪತ್ನಿ ದಿಢೀರನೇ ಕಾರಿನ ಸ್ಟೇರಿಂಗ್ ಎಳೆದಿದ್ದು, ಪರಿಣಾಮ ಕಾರು ಪಲ್ಟಿ ಹೊಡೆದಿದೆ.
ಅವಘಡದಿಂದ ದಂಪತಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪರಾಗಿದ್ದಾರೆ. ಕುಡಿದ ಅಮಲಿನಲ್ಲಿ ಕಾರು ಚಲಾಯಿಸಿರುವ ಶಂಕೆಯೂ ವ್ಯಕ್ತವಾಗಿದೆ.
ಘಟನೆ ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಹಲಸೂರು ಗೇಟ್ ಪೊಲೀಸರು ಭೇಟಿ ನೀಡಿ ಪಲ್ಟಿಯಾಗಿದ್ದ ಕಾರನ್ನು ಮೇಲೆತ್ತಿ ದಂಪತಿಯನ್ನು ರಕ್ಷಣೆ ಮಾಡಿದ್ದಾರೆ.
ಪ್ರಕರಣ ಸಂಬಂಧ ಹಲಸೂರು ಗೇಟ್ ಸಂಚಾರ ಪೊಲೀಸರು ದಂಪತಿಯ ವಿಚಾರಣೆ ನಡೆಸಿದ್ದಾರೆ.