CrimeNEWSನಮ್ಮರಾಜ್ಯಮೈಸೂರು

ತಿ.ನರಸೀಪುರ ವೇಣುಗೋಪಾಲ್‌ ಹತ್ಯೆ ಹಿಂದೆ ಸಚಿವ ಮಹದೇವಪ್ಪ ಪುತ್ರನ ಕೈವಾಡವಿದೆ: ಚಕ್ರವರ್ತಿ ಸೂಲಿಬೆಲೆ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ತಿ.ನರಸೀಪುರದಲ್ಲಿ ಹನುಮ ಜಯಂತಿ ವೇಳೆ ವೇಣುಗೋಪಾಲ್‌ ಎಂಬ ವ್ಯಕ್ತಿಯ ಹತ್ಯೆಯಯಾಗಿದ್ದು. ಈ ಕೊಲೆಯ ಹಿಂದೆ ಸಚಿವ ಮಹದೇವಪ್ಪ ಅವರ ಪುತ್ರ ಸುನಿಲ್‌ ಬೋಸ್‌ ಕೈವಾಡವಿದೆ ಎಂದು ಯುವ ಬ್ರಿಗೇಡ್‌ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ನೇರ ಆರೋಪ ಮಾಡಿದ್ದಾರೆ.

ವೇಣುಗೋಪಾಲ್ ಹತ್ಯೆ ಹಿಂದೆ ಕಾಂಗ್ರೆಸ್ ಸರ್ಕಾರದ ಕೈವಾಡ ಇದೆ. ಮಹದೇವಪ್ಪ ಮಗ ಸುನೀಲ್‍ಬೋಸ್ ತನ್ನ ಸಹಚರರಿಂದ ಈ ಕೆಲಸ ಮಾಡಿಸಿದ್ದಾರೆ ಎಂದು ವೇಣುಗೋಪಾಲ್ ಮನೆಯವರು, ಸ್ನೇಹಿತರು ಹೇಳುತ್ತಿದ್ದಾರೆ ಎಂದು ಪಬ್ಲಿಕ್‌ ಟಿವಿ ಜತೆ ಮಾತನಾಡುವಾಗ ಆರೋಪಿಸಿದರು.

ವೇಣುಗೋಪಾಲ್‌ ಮೃತದೇಹವನ್ನು ನೋಡಲು ತೆರಳಿದ ಮೊದಲ ದಿನವೇ ತಿ.ನರಸಿಪುರದ ಸ್ನೇಹಿತರು ಈ ಕೃತ್ಯವನ್ನು ಸುನಿಲ್‌ ಬೋಸ್‌ ಕಡೆಯವರು ಮಾಡಿದ್ದಾರೆ ಎಂದು ಹೇಳಿದ್ದರು. ಆದರೆ ಅಧಿಕೃತ ದಾಖಲೆಗಳು ಇಲ್ಲದೇ ಹೇಳುವುದು ಸರಿಯಲ್ಲ ಎಂದು ನಾನು ಹೇಳಲಿಲ್ಲ. ಆದರೆ ಈಗ ಸುನಿಲ್‌ ಬೋಸ್‌ ಜತೆಗೆ ಆರೋಪಿಗಳಿಗೆ ಇರುವ ಸಂಬಂಧ, ಫೋಟೋಗಳು ಎಲ್ಲವನ್ನು ನೋಡಿದಾಗ ಇದು ದೃಢವಾಗುತ್ತದೆ. ಹತ್ಯೆ ಮಾಡಿದ ಆರೋಪಿಗಳು ಕಾಂಗ್ರೆಸ್‌ ಪಕ್ಷ ಕಾರ್ಯಕರ್ತರು ಎಂದು ಹೇಳಿದರು.

ದಲಿತ ವರ್ಗಕ್ಕೆ ಸೇರಿದ್ದ ವೇಣುಗೋಪಾಲ್‌ ಆರಂಭದಲ್ಲಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು. ಯುವ ಬ್ರಿಗೇಡ್‌ ಸಂಪರ್ಕಕ್ಕೆ ಬಂದ ಬಳಿಕ ತಂಡವನ್ನು ಕಟ್ಟಿ ಕೆರೆ ಸ್ವಚ್ಛಗೊಳಿಸಿ ಬಾಳೆ ಮಂಡಿ ಹಾಕುವ ಮಟ್ಟಕ್ಕೆ ಬೆಳೆದಿದ್ದರು. ಅಷ್ಟೇ ಅಲ್ಲದೇ ತಾಲೂಕಿನ ಯುವ ಬಿಗ್ರೇಡ್‌ ಸಂಚಾಲಕರಾಗಿದ್ದರು. ವೇಣುಗೋಪಾಲ್‌ ಬೆಳವಣಿಗೆಯನ್ನು ಸಹಿಸದೇ ಅವರನ್ನು ಸುನಿಲ್‌ ಬೋಸ್‌ ಕಡೆಯವರು ಹತ್ಯೆ ಮಾಡಿದ್ದಾರೆ ಎಂದು ದೂರಿದರು.

ಕಳೆದ ವರ್ಷ ಹನುಮಾನ್‌ ಜಯಂತಿ ಕಾರ್ಯಕ್ರಮಕ್ಕೆ ಅಡ್ಡಿ ಮಾಡಿದ್ದರೂ ಬಹಳ ವಿಜೃಂಭಣೆಯಿಂದ ಆಚರಣೆ ಮಾಡಿದ್ದರು. ಈ ಬಾರಿಯೂ ಕಾರ್ಯಕ್ರಮಕ್ಕೆ ಅಡ್ಡಿ ಮಾಡಲು ಪ್ರಯತ್ನಿಸಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ. ಸಾಕಷ್ಟು ಸಂಖ್ಯೆಯಲ್ಲಿ ಜನ ಸೇರಿದ್ದರು. ಪುನೀತ್‌ ರಾಜ್‌ಕುಮಾರ್‌ ಫೋಟೋ ವಿಚಾರಕ್ಕೆ ಗಲಾಟೆ ನಡೆದಿದೆ ಎಂಬುದನ್ನು ನಂಬಲು ಸಾಧ್ಯವಿಲ್ಲ. ವೇಣುಗೋಪಾಲ್‌ ಪುನೀತ್‌ ಅವರ ಅಭಿಮಾನಿಯಾಗಿದ್ದರು ಎಂದರು.

ಇನ್ನು ಪೊಲೀಸರು ತನಿಖೆಯನ್ನು ಸರಿಯಾಗಿ ನಡೆಸಿದರೆ ಸತ್ಯಾಂಶ ಹೊರ ಬರಬಹದು. ನಗರ ಪಾಲಿಕೆಯ ಬಿಜೆಪಿ ಸದಸ್ಯೆಯ ಸಹೋದರ 4ನೇ ಆರೋಪಿ ಆಗಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ, ಕೃತ್ಯ ಯಾರೇ ಮಾಡಿದರೂ ಅದು ತಪ್ಪು. ಬಿಜೆಪಿ ಪಕ್ಷದ ಸದಸ್ಯನಾಗಿದ್ದರೆ ಆತನನ್ನು ವಜಾ ಮಾಡಲಿ, ಅದೇ ರೀತಿಯಾಗಿ ಸಂಪುಟದಿಂದ ಮಹದೇವಪ್ಪ ಅವರನ್ನು ಕೈಬಿಡಲಿ. ಈ ಮೂಲಕ ಎಲ್ಲ ಕಾಂಗ್ರೆಸ್‌ ನಾಯಕರಿಗೆ ಸಿದ್ದರಾಮಯ್ಯ ಒಂದು ಸಂದೇಶ ಕಳುಹಿಸಲಿ ಎಂದರು.

ಒಂದು ವೇಳೆ ಈಗಲೇ ಕ್ರಮ ಕೈಗೊಳ್ಳದೇ ಇದ್ದರೆ ಮುಂದೆ ಮತ್ತಷ್ಟು ಯುವ ಜನರ ಹತ್ಯೆಯಾಗಬಹುದು. ಮತದಾನಕ್ಕೆ ಹಾಕಿದ ಶಾಯಿ ಇನ್ನೂ ಅಳಿಸಿಲ್ಲ. ಸರ್ಕಾರ ಅಧಿಕಾರಕ್ಕೆ ಬಂದು 60 ದಿನ ಆಗಿಲ್ಲ. ಇನ್ನು 60 ತಿಂಗಳಲ್ಲಿ ಎಷ್ಟು ಮಂದಿ ಬಲಿಯಾಗಬೇಕು ಎಂದು ಸೂಲಿಬೆಲೆ ಸಿದ್ದರಾಮಯ್ಯ ಸರ್ಕಾರವನ್ನು ಪ್ರಶ್ನಿಸಿದರು.

Leave a Reply

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಹಿಂದಿನಿಂದ ವೇಗವಾಗಿ ಬಂದ ಕಾರು ಮುಂದೆ ಹೋಗುತ್ತಿದ್ದ ಕಾರ್‌ ಮೇಲೇರಿತು! ರೈತ ನಾಯಕ ಕುರುಬೂರು ಶಾಂತಕುಮಾರ್‌ಗೆ ಬೆಂಗಳೂರಿನಲ್ಲಿ ಚಿಕಿತ್ಸೆ: ಸಿಎಂ ಸಿದ್ದರಾಮಯ್ಯ ಮಹಾಕುಂಭ ಮೇಳಕ್ಕೆ ತೆರಳುತ್ತಿದ್ದ 18 ಮಂದಿ ದೆಹಲಿ ರೈಲು ನಿಲ್ದಾಣದಲ್ಲಿ ಕಾಲ್ತುಳಿತಕ್ಕೆ ಸಿಲುಕಿ ಮೃತ ಮಳೆ ನೀರು ಕೊಯ್ಲಿನಿಂದ ಅಂತರ್ಜಲ ವೃದ್ಧಿ: ಕೃಷಿ ಇಲಾಖೆ ಉಪ ನಿರ್ದೇಶಕಿ ಗಾಯತ್ರಿ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ನೇಮಕಕ್ಕೆ ಅರ್ಜಿ ಆಹ್ವಾನ ಬಿಬಿಎಂಪಿ: ಕಸ ಬಿಸಾಡುವ ಸ್ಥಳ ನಿರ್ಮೂಲನೆ ಜತೆ ಜೆತೆಗೆ ಸ್ವಚ್ಛತಾ ಅಭಿಯಾನ KSRTC ರಿಯಾಯಿತಿ ದರದ ಪಾಸ್‌ ಇದ್ದರೂ ತಾರತಮ್ಯತೆ: ನಿವೃತ್ತರಾದ ಮೇಲೆ ಅಧಿಕಾರಿಗಳಿಗೆ ಬಡತನ- ನೌಕರರಿಗೆ ಸಿರಿತನ !! ಪಂಜಾಬ್‌ನಲ್ಲಿ ಕುರುಬೂರು ಶಾಂತಕುಮಾರ್ ಇದ್ದ ಕಾರು ಅಪಘಾತ: ಆಸ್ಪತ್ರೆಗೆ ದಾಖಲು ಬಿಬಿಎಂಪಿ: 1.84 ಲಕ್ಷ ಬೀದಿ ನಾಯಿಗಳಿಗೆ "ಸಂಯುಕ್ತ ಲಸಿಕೆ" ಹಾಕುವ ಗುರಿ- ತುಷಾರ್ ಗಿರಿನಾಥ್ ಮೈಕ್ರೋಫೈನಾನ್ಸ್ ಸಂಸ್ಥೆಗಳ ಕಿರುಕುಳ ನಿಯಂತ್ರಣಕ್ಕೆ ಸರ್ಕಾರಿ ಆಧ್ಯಾದೇಶ ಜಾರಿ