NEWSನಮ್ಮಜಿಲ್ಲೆನಮ್ಮರಾಜ್ಯ

ನಾರಿಯರಿಂದ ಸಾರಿಗೆಗೆ ಶಕ್ತಿ – ₹179,28,08,410 ಆದಾಯ : ಅಧಿಕಾರಿಗಳು, ನೌಕರರು ಖುಷ್‌

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಹೆಂಗಳೆಯರಿಗಾಗಿ ತಂದಿರುವ ಶಕ್ತಿ ಯೋಜನೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತಪವಾಗುತ್ತಿದೆ.

ಹೊರಗಡೆ ಹೋಗುವುದಕ್ಕೆ ಆರ್ಥಿಕ ತೊಂದರೆ ಅನುಭವಿಸುತ್ತಿದ್ದ ನಾರಿಯರು ಈಗ ತಮ್ಮ ತಮ್ಮ ಮನೆಕೆಲಸ ಕಾರ್ಯಗಳನ್ನು ಮುಗಿಸಿಕೊಂಡು ಸಿಟಿ ರೌಂಡ್ಸ್‌ ಅಥವಾ ಪ್ರಕ್ಷಣೀಯ, ಧಾರ್ಮಿಕ ಸ್ಥಳಗಳಿಗೆ ಹೋಗುತ್ತಿದ್ದಾರೆ.

ಇದರಿಂದ ಸಾರಿಗೆ ನಿಗಮಗಳು ಆರ್ಥಿಕ ಚೈತನ್ಯದತ್ತ ದಾಪುಗಾಲಿಡುತ್ತಿವೆ. ನಿಗಮಗಳ ಅಧಿಕಾರಿಗಳು ಮತ್ತು ನೌಕರರಿಗೆ ವೇತನ ಕೊಡುವುದಕ್ಕೆ ಮತ್ತು ವಾಹನಗಳಿಗೆ ಡಿಸೇಲ್‌ ತುಂಬಿಸುವುದಕ್ಕೆ ಪರದಾಡುವ ಸ್ಥಿತಿಯಲ್ಲಿದ್ದ ನಿಗಮಗಳು ಮಹಿಳಾ ಪ್ರಯಾಣಿಕರಿಂದ ಆರ್ಥಿಕ ಸದೃಢತೆ ಕಾಣುತ್ತಿವೆ.

ಹೌದು! ಶಕ್ತಿ ಯೋಜನೆ ಜಾರಿಗೆ ಬಂದಾಗಿನಿಂದ ಜೂನ್‌ 25ರವರೆಗೆ ಬರೊಬ್ಬರಿ 7,64,40,526 ಮಹಿಳೆಯರು ಪ್ರಯಾಣಿಸಿದ್ದಾರೆ. ಹೀಗಾಗಿ ನಾಲ್ಕೂ ನಿಗಮಗಳಿಗೂ ಒಟ್ಟು 179,28,08,410 ರೂಪಾಯಿ ಆದಾಯ ಬಂದಿದೆ.

ನಿತ್ಯ ಎಷ್ಟು ಪ್ರಯಾಣಿಕರು ಸಂಚರಿಸಿದರು: * ಭಾನುವಾರ (ಯೋಜನೆ ಜಾರಿಯಾದ ದಿನ ಜೂ. 11): 5,71,023 ಮಹಿಳೆಯರು ಪ್ರಯಾಣಿಸಿದ್ದು, ಪ್ರಯಾಣದ ಮೌಲ್ಯ 1,40,22,878 ರೂಪಾಯಿ. * ಸೋಮವಾರ (ಜೂ.12): 41,34,726 ಮಹಿಳೆಯರು ಪ್ರಯಾಣಿಸಿದ್ದು, ಪ್ರಯಾಣದ ಮೌಲ್ಯ 8,83,53,434 ರೂಪಾಯಿ.

ಮಂಗಳವಾರ (ಜೂ.13): 51,52,769 ಮಹಿಳೆಯರು ಪ್ರಯಾಣಿಸಿದ್ದು, ಪ್ರಯಾಣದ ಮೌಲ್ಯ 10,82,02,191 ರೂಪಾಯಿ. * ಬುಧವಾರ (ಜೂನ್​ 14): 50,17,174 ಮಹಿಳೆಯರು ಪ್ರಯಾಣಿಸಿದ್ದು, ಪ್ರಯಾಣದ ಮೌಲ್ಯ 11,51,08,324 ರೂಪಾಯಿ.

ಗುರುವಾರ (ಜೂ.15): 54,05,629 ಮಹಿಳೆಯರು ಪ್ರಯಾಣಿಸಿದ್ದು, ಪ್ರಯಾಣದ ಮೌಲ್ಯ 12,37,89,585 ರೂಪಾಯಿ. * ಶುಕ್ರವಾರ (ಜೂ. 16): 55,09,770 ಮಹಿಳೆಯರು ಪ್ರಯಾಣಿಸಿದ್ದು, ಪ್ರಯಾಣದ ಮೌಲ್ಯ 12,45,19,265 ರೂಪಾಯಿ. * ಶನಿವಾರ (ಜೂ. 17): 54,30,150 ಮಹಿಳೆಯರು ಪ್ರಯಾಣಿಸಿದ್ದು, ಪ್ರಯಾಣದ ಮೌಲ್ಯ 12,88,81,618 ರೂಪಾಯಿ.

ಹೀಗೆಯೇ ಶನಿವಾರ (ಜೂ.24) KSRTC -32,27,875, BMTC – 33,20,903, KKRTC – 15,79,871 ಹಾಗೂ NWKRTC – 2481,186 ಮಂದಿ ಪ್ರಯಾಣಿಸಿದ್ದು ಅವರಲ್ಲಿ ಮಹಿಳಾ ಪ್ರಯಾಣಿಕರು KSRTC -17,29,314, BMTC – 18,95,144, KKRTC – 7,88,156 ಹಾಗೂ NWKRTC – 14,01,910 ಮಂದಿ ಮಹಿಳೆಯರು ಪ್ರಯಾಣಿಸಿದ್ದಾರೆ.

ಜೂನ್‌ 24ರಂದು ಪ್ರಯಾಣಿಸಿದ ಮಹಿಳೆಯರ ಒಟ್ಟು ಟಿಕೆಟ್‌ ಮೌಲ್ಯ KSRTCಗೆ 4,92,92,066 ರೂ.ಗಳು, BMTC – 2,41,94,354 ರೂ.ಗಳು, KKRTC – 2,55,94,985 ಹಾಗೂ NWKRTC – 3,50,40,233 ರೂ.ಗಳಾಗಿದೆ.

ಇನ್ನು ಭಾನುವಾರ (ಜೂ.25) KSRTC -27,49,521, BMTC – 28,67,726, NWKRTC – 20,86,505 ಹಾಗೂ KKRTC- 13,40,203 ಮಂದಿ ಪ್ರಯಾಣಿಸಿದ್ದು ಅವರಲ್ಲಿ ಮಹಿಳಾ ಪ್ರಯಾಣಿಕರು KSRTC -14,92,291, BMTC – 14,80,038, NWKRTC – 12,15,139 ಹಾಗೂ KKRTC – 6,94,283 ಮಂದಿ ಮಹಿಳೆಯರು ಪ್ರಯಾಣಿಸಿದ್ದಾರೆ.

ಜೂನ್‌ 25ರಂದು ಪ್ರಯಾಣಿಸಿದ ಮಹಿಳೆಯರ ಒಟ್ಟು ಟಿಕೆಟ್‌ ಮೌಲ್ಯ KSRTCಗೆ 5,08,21,599 ರೂ.ಗಳು, BMTC – 1,98,52,340 ರೂ.ಗಳು, NWKRTC – 3,51,02,593 ಹಾಗೂ KKRTC – 2,61,04,352 ರೂ.ಗಳು. ಅಂದರೆ ಜೂನ್‌25ರಂದು ನಾಲ್ಕೂ ನಿಗಮಗಳಿಗೆ ಒಟ್ಟು 13,18,80,884 ರೂ.ಗಳ ಆದಾಯ ಬಂದಿದೆ.

ಶಕ್ತಿ ಯೋಜನೆ ಜಾರಿಯಾದ ಜೂ.11ರಿಂದ ಜೂ.25ರವರೆಗೂ ಮಹಿಳಾ ಪ್ರಯಾಣಿಕರ ಪ್ರಯಾಣದ ಮೌಲ್ಯ 179 ಕೋಟಿ 28 ಲಕ್ಷದ 08 ಸಾವಿರದ 410 ರೂಪಾಯಿ ಆಗಿದೆ. ಒಟ್ಟಾರೆ ಹೀಗೆಯೇ ಮಹಿಳಾ ಪ್ರಯಾಣಿಕರು ಸಂಚರಿಸುತ್ತಿದ್ದರೆ ಸಾರಿಗೆ ನಿಗಮಗಳು ಈ ಹಿಂದಿನಂತೆ ಸ್ವಾವಲಂಬಿಯಾಗಿ ಆರ್ಥಿಕ ಸದೃಢತೆಯನ್ನು ಹೊಂದುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.

 

Leave a Reply

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಮೆಟ್ರೋ ದರ ಏರಿಕೆಗೆ ಕೇಂದ್ರ ಸರ್ಕಾರವೇ ಹೊಣೆ: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ವ್ಯಾಪಾರ ವಹಿವಾಟು ಹೆಚ್ಚಿಸಿ, ಉತ್ಪಾದನೆ ಉತ್ತೇಜಿಸುವ ಸರ್ಕಾರದ ಬದ್ಧತೆ ಶ್ಲಾಘನೀಯ: ಕಾಸಿಯಾ ಅಧ್ಯಕ್ಷ ರಾಜಗೋಪಾಲ್ ಮೈಕ್ರೊ ಫೈನಾನ್ಸ್ ಸುಗ್ರಿವಾಜ್ಞೆಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಂಕಿತ ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ ಕರಡಿಗೆ ನಾಗರೀಕರಿಂದ ಬರುವ ಸಲಹೆಗಳ ಸೇರಿಸಿ ಅಂತಿಮ: ರಿಜ್ವಾನ್ ಹರ್ಷದ್ ಎಸ್ಸಿಎಸ್‌ಪಿ, ಟಿಎಸ್ಪಿ ವಿಶೇಷ ಯೋಜನೆ ಫೆ. ಅಂತ್ಯದೊಳಗೆ ಶೇ.100 ರಷ್ಟು ಪ್ರಗತಿ ಸಾಧಿಸಿರಬೇಕು: ಅಧಿಕಾರಿಗಳಿಗೆ ಡಿಸಿ ಆ... ರೈತರ ನಿರಂತರ ಹೋರಾಟಕ್ಕೆ ನಾಳೆಗೆ ವರ್ಷ: ಆದರೂ ಕಿವಿಗೊಡದ ಸರ್ಕಾರ KSRTC: ಫೇಕ್ ಫೋನ್‌ ಪೇ/ UPI ಆಪ್‌ಗಳಿಂದ ದಿನನಿತ್ಯ ನಿರ್ವಾಹಕರಿಗೆ ಆರ್ಥಿಕ ಬರೆ!! KKRTC ಬಸ್‌ನಲ್ಲಿ ಲೈಂಗಿಕ ಕಿರುಕುಳ ನೀಡಿದ ಕಂಡಕ್ಟರ್‌ನಿಂದ ದೂರು ಹಿಂಪಡೆಯುವಂತೆ ಬೆದರಿಕೆ-ಆರೋಪ KSRTC ಅಭಿವೃದ್ಧಿಗೆ ಬಜೆಟ್‌ನಲ್ಲಿ ಅನುದಾನ - ಸಿಎಂ ಜತೆ ಸಚಿವ ರಾಮಲಿಂಗಾರೆಡ್ಡಿ ಚರ್ಚೆ ಬಜೆಟ್‌ನಲ್ಲಿ ನಿಮಗೆ ಸಿಹಿ ಸುದ್ದಿ ಇದೆ: KSRTC ಅಧಿಕಾರಿಗಳಿಗೆ ಸಾರಿಗೆ ಸಚಿವರ ಭರವಸೆ