NEWSಆರೋಗ್ಯಉದ್ಯೋಗ

ಮಾನಸಿಕ ಆರೋಗ್ಯ ಸಮಾಲೋಚಕರ  ಹುದ್ಧೆಗೆ ಅರ್ಜಿ ಆಹ್ವಾನ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು ಗ್ರಾಮಾಂತರ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ರಾಷ್ಟ್ರೀಯ ಆರೋಗ್ಯ ಅಭಿಯಾನ ಯೋಜನೆಯ 2024-25ನೇ ಸಾಲಿನ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ (ಎನ್.ಎಂ.ಎಚ್.ಪಿ) ಅಡಿಯಲ್ಲಿ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಮಾನಸಿಕ ಆರೋಗ್ಯ ಸಮಾಲೋಚಕರನ್ನು ಗೌರವಧನದ ಮೇರೆಗೆ ನಿಯೋಜಿಸಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ವಿದ್ಯಾರ್ಹತೆ: Clinical Psychologist/Master of arts in psychologist/Master of science in psychology ಕರ್ತವ್ಯ: ಸಮಾಲೋಚಕರಾಗಿ ಕಾಲೇಜು, ನಗರ ಕೋಳಗೇರಿಗಳಲ್ಲಿ ಮಾನಸಿಕ ಅಸ್ವಸ್ತರನ್ನು ಸಮಾಲೋಚನೆ ಮಾಡುವುದು.

ವಾರಕ್ಕೋಮ್ಮೆ ಪ್ರತಿವಾರ ತಿಂಗಳ ಒಟ್ಟು 2 ದಿನಗಳಲ್ಲಿ ಮತ್ತು ನಗರ ಕೋಳಗೇರಿಗಳಲ್ಲಿ ವಾರಕ್ಕೊಮ್ಮೆ ತಿಂಗಳ ಒಟ್ಟು 4 ದಿನಗಳಲ್ಲಿ ಇಡೀ ಒಂದು ಕೆಲಸದ ದಿನಕ್ಕೆ ರೂ.1000 (ಒಂದು ಸಾವಿರ ಮಾತ್ರ) ಕೆಳಗಿನ ಷರತ್ತುಗಳೊಂದಿಗೆ(ಎನ್.ಎಂ.ಎಚ್.ಪಿ)ಅಡಿಯಲ್ಲಿ ಸಮಾಲೋಚಕರಾಗಿ ಕೆಲಸ ಮಾಡಬೇಕು.

ಈ ಕೆಲಸವು ಎನ್.ಎಂ.ಎಚ್.ಪಿ ಅಡಿಯಲ್ಲಿ ನಿಗದಿತ ದಿನಗಳು ಮತ್ತು ನಿಗದಿತ ರೂ.1000 ಗೌರವಧನದೊಂದಿಗೆ ತಾತ್ಕಾಲಿಕ ನಿಯೋಜನೆಯಾಗಿರುತ್ತದೆ. ಈ ಹುದ್ದೆಯಲ್ಲಿ ಬಡ್ತಿ ಶಾಶ್ವತ ಕೆಲಸ ಬದಲಾವಣೆ ಹಕ್ಕು ಪಡೆದಿರುವುದಿಲ್ಲ. ಈ ಹುದ್ದೆಯು ಒಂದು ಹಣಕಾಸು ವರ್ಷಕ್ಕೆ ಮಾತ್ರ ಮಾನ್ಯವಾಗಿರುತ್ತದೆ. ಶಾಶ್ವತ ಹುದ್ದೆಯನ್ನಾಗಿ ಮಾಡಲು ಯಾವುದೇ ಹಕ್ಕು ಪಡೆದಿರುವುದಿಲ್ಲ.

ಎನ್.ಎಂ.ಎಚ್.ಪಿ ಕೌನ್ಸಿಲಿಂಗ್ ಕೆಲಸ ಮಾಡುವ ದಿನಗಳಂದು ಬೇರೆ ಯಾವುದೇ ಸರ್ಕಾರಿ ಅಥವಾ ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುವಂತಿಲ್ಲ. ಈ ಹುದ್ದೆಯು ತಾತ್ಕಾಲಿಕ ನಿಯೋಜನೆಯಾಗಿರುವುದರಿಂದ ಯಾವುದೇ ಟಿಎ ಮತ್ತು ಡಿಎಯನ್ನು ನೀಡುವುದಿಲ್ಲ. ಫಲಾನುಭವಿಯ ಸಂಪೂರ್ಣ ಗೌಪ್ಯತೆಯನ್ನು ಕಾಪಾಡಿಕೊಳ್ಳಬೇಕಾಗಿರುತ್ತದೆ.

ಕೆಲಸ ಮಾಡುವಾಗ ಯಾವುದೇ ಅಹಿತಕರ ಘಟನೆ ಸಂಭವಿಸಿದ್ದಲ್ಲಿ ಸರ್ಕಾರ ಜವಾಬ್ದಾರಿಯಾರುವುದಿಲ್ಲ. ಕೌನ್ಸಿಲಿಂಗ್ ಸಮಯದಲ್ಲಿ (Medical Ethics) ಕಟ್ಟುನಿಟ್ಟಾಗಿ ಅನುಸರಿಸಬೇಕು. ಪ್ರತಿ ತಿಂಗಳು ಕೆಲಸದ ಪ್ರಗತಿ ವರದಿಯನ್ನು ಜಿಲ್ಲಾಆರೋಗ್ಯ ಮತ್ತುಕುಟುಂಬ ಕಲ್ಯಾಣಾಧಿಕಾರಿಗಳ ಕಛೇರಿ ಅಥವಾ ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿಗಳ ಕಛೇರಿ ಜಿಲ್ಲಾಡಳಿತ ಭವನ, ಬೀರಸಂದ್ರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ ಇಲ್ಲಿಗೆ ಸಲ್ಲಿಸಬಹುದು.

ಆಸಕ್ತಿಯುಳ್ಳವರು 2024 ಸೆಪ್ಟೆಂಬರ್ 25 ರಿಂದ 2024 ಆಕ್ಟೋಬರ್ 08ರ ವರೆಗೆ ಸಂಬಂಧಪಟ್ಟ ದಾಖಲಾತಿಗಳೊಂದಿಗೆ ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿಗಳ ಕಛೇರಿ ಕೊಠಡಿ ಸಂಖ್ಯೆ: 207 2ನೇ ಮಹಡಿ ಜಿಲ್ಲಾಡಳಿತ ಭವನ, ಬೀರಸಂದ್ರ ಗ್ರಾಮ, ದೇವನಹಳ್ಳಿ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಸಂಪರ್ಕಿಸಬಹುದಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಆರೋಗ್ಯಾಧಿಕಾರಿ ತಿಳಿಸಿದ್ದಾರೆ.

Leave a Reply

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಮೆಟ್ರೋ ದರ ಏರಿಕೆಗೆ ಕೇಂದ್ರ ಸರ್ಕಾರವೇ ಹೊಣೆ: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ವ್ಯಾಪಾರ ವಹಿವಾಟು ಹೆಚ್ಚಿಸಿ, ಉತ್ಪಾದನೆ ಉತ್ತೇಜಿಸುವ ಸರ್ಕಾರದ ಬದ್ಧತೆ ಶ್ಲಾಘನೀಯ: ಕಾಸಿಯಾ ಅಧ್ಯಕ್ಷ ರಾಜಗೋಪಾಲ್ ಮೈಕ್ರೊ ಫೈನಾನ್ಸ್ ಸುಗ್ರಿವಾಜ್ಞೆಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಂಕಿತ ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ ಕರಡಿಗೆ ನಾಗರೀಕರಿಂದ ಬರುವ ಸಲಹೆಗಳ ಸೇರಿಸಿ ಅಂತಿಮ: ರಿಜ್ವಾನ್ ಹರ್ಷದ್ ಎಸ್ಸಿಎಸ್‌ಪಿ, ಟಿಎಸ್ಪಿ ವಿಶೇಷ ಯೋಜನೆ ಫೆ. ಅಂತ್ಯದೊಳಗೆ ಶೇ.100 ರಷ್ಟು ಪ್ರಗತಿ ಸಾಧಿಸಿರಬೇಕು: ಅಧಿಕಾರಿಗಳಿಗೆ ಡಿಸಿ ಆ... ರೈತರ ನಿರಂತರ ಹೋರಾಟಕ್ಕೆ ನಾಳೆಗೆ ವರ್ಷ: ಆದರೂ ಕಿವಿಗೊಡದ ಸರ್ಕಾರ KSRTC: ಫೇಕ್ ಫೋನ್‌ ಪೇ/ UPI ಆಪ್‌ಗಳಿಂದ ದಿನನಿತ್ಯ ನಿರ್ವಾಹಕರಿಗೆ ಆರ್ಥಿಕ ಬರೆ!! KKRTC ಬಸ್‌ನಲ್ಲಿ ಲೈಂಗಿಕ ಕಿರುಕುಳ ನೀಡಿದ ಕಂಡಕ್ಟರ್‌ನಿಂದ ದೂರು ಹಿಂಪಡೆಯುವಂತೆ ಬೆದರಿಕೆ-ಆರೋಪ KSRTC ಅಭಿವೃದ್ಧಿಗೆ ಬಜೆಟ್‌ನಲ್ಲಿ ಅನುದಾನ - ಸಿಎಂ ಜತೆ ಸಚಿವ ರಾಮಲಿಂಗಾರೆಡ್ಡಿ ಚರ್ಚೆ ಬಜೆಟ್‌ನಲ್ಲಿ ನಿಮಗೆ ಸಿಹಿ ಸುದ್ದಿ ಇದೆ: KSRTC ಅಧಿಕಾರಿಗಳಿಗೆ ಸಾರಿಗೆ ಸಚಿವರ ಭರವಸೆ