ರಾಜಿಯಾಗಿದೆ ಅಂದರೂ KSRTC ಡ್ರೈವರ್‌ಗೆ 7 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟು 2 ಸಾವಿರ ರೂ. ಕೊಟ್ಟಮೇಲೆ ಬಸ್ ಬಿಟ್ಟ ಪೊಲೀಸ್
- ಲಂಚಕೋರ ಪೊಲೀಸ್ ಸಿಬ್ಬಂದಿಗಳಾದ ಭರತ್ ಕುಮಾರ್, ಪುನೀತ್ ಅಮಾನತಿಗೆ ಆಗ್ರಹ
ಮೈಸೂರು: ನಗರದ ವಾಲ್ಮೀಕಿ ಸರ್ಕಲ್ ಬಳಿ ಕಾರ್ ಹಾಗೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (KSRTC) ಬಸ್ ನ.2ರಂದು ಮಧ್ಯಾಹ್ನ 12ಗಂಟೆ ಸುಮಾರಿಗೆ ಸಣ್ಣ ಅಪಘಾತವಾಗಿದೆ. ಈ ವೇಳೆ ಕಾರು ಚಾಲಕ ಮತ್ತು ಸಾರಿಗೆ ನಿಗಮದ ಚಾಲಕರು ರಾಜೀಸಂಧಾನ ಮಾಡಿಕೊಂಡಿದ್ದಾರೆ.
ಆದರೆ, ಮೈಸೂರು ವಿ.ವಿ.ಪುರಂ ಸಂಚಾರಿ ಠಾಣೆ ಪೊಲೀಸರು ದೂರು ನೀಡದಿದ್ದರೂ ಕಾರು ಮತ್ತು ಬಸ್ ಎರಡನ್ನು ಠಾಣೆಗೆ ತೆಗೆದುಕೊಂಡು ಬರುವಂತೆ ಹೇಳಿದ್ದಾರೆ. ಈ ವೇಳೆ ಇಲ್ಲ ಸರ್ ನಾವು ರಾಜೀಸಂಧಾನ ಮಾಡಿಕೊಂಡಿದ್ದೇವೆ ಎಂದು ಹೇಳಿದ್ದಾರೆ. ಆದರೂ ಬಿಡದೆ ಪೊಲೀಸ್ ಠಾಣೆಗೆ ವಾಹನಗಳನ್ನು ತೆಗೆದುಕೊಂಡು ಬರುವಂತೆ ಬಲವಂತ ಮಾಡಿದ್ದಾರೆ.
ಆ ಬಳಿಕ ವಾಹನಗಳನ್ನು ಠಾಣೆಗೆ ತೆಗೆದುಕೊಂಡು ಇಬ್ಬರು ಚಾಲಕರು ಹೋಗಿದ್ದಾರೆ. ಠಾಣೆಯಲ್ಲಿ ನಾವು ದೂರು ಕೊಡುವುದಿಲ್ಲ ರಾಜೀಸಂಧಾನ ಮಾಡಿಕೊಂಡಿದ್ದೇವೆ ನಾವು ಹೋಗಲು ಬಿಡಿ ಎಂದು ಸಾರಿಗೆ ಬಸ್ ಚಾಲಕ ಬಾಲರಾಜ್ ಮತ್ತು ಕಾರು ಚಾಲಕ ಶಿವರಾಜೇಗೌಡ ಇಬ್ಬರು ಪೊಲೀಸರಲ್ಲಿ ಮನವಿ ಮಾಡಿದ್ದಾರೆ.
ಈ ವೇಳೆ ಕಾರು ಚಾಲಕ ಹಾಗೂ ಕೆಎಸ್ಆರ್ಟಿಸಿ ಚಾಲಕರ ಹತ್ತಿರ ಒಟ್ಟು 7ಸಾವಿರ ರೂಪಾಯಿಗಳನ್ನು ಅಂದರೆ ಕಾರು ಚಾಲಕ ಶಿವರಾಜೇಗೌಡ ಅವರ ಹತ್ತಿರ 2ಸಾವಿರ ರೂಪಾಯಿ ಹಾಗೂ ಕೆಎಸ್ಆರ್ಟಿಸಿ ಚಾಲಕರ ಹತ್ತಿರ 5ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟು ನೀವು 7 ಸಾವಿರ ರೂಪಾಯಿ ಕೊಟ್ಟರೆ ವಾಹನಗಳನ್ನು ಬಿಡಿ ಎಂದು ನಮ್ಮ ಸಾಹೇಬರು ಹೇಳಿದ್ದಾರೆ ಎಂದು ಪೊಲೀಸರಿಬ್ಬರು ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ.
ಆ ಇಬ್ಬರೂ ಸಂಚಾರಿ ಪೊಲೀಸರಲ್ಲಿ ಒಬ್ಬ ಭರತ್ ಕುಮಾರ್ ಹಾಗೂ ಮತ್ತೊಬ್ಬ ಪುನೀತ್ ಎಂಬುವವರು. ಈ ಇಬ್ಬರು ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ. ಈ ವೇಳೆ ಕಾರು ಚಾಲಕ ನಾನೇಕೆ ಲಂಚ ಕೊಡಬೇಕು ನಾನೇನು ತಪ್ಪು ನಾಡಿಲ್ಲ ಎಂದು ಹೇಳಿದ್ದಾರೆ. ಆಗ ಕೆಎಸ್‌ಆರ್‌ಟಿಸಿ ಚಾಲಕನ ಡಿಎಲ್ ರದ್ದು ಮಾಡುತ್ತೇನೆ ಎಂದು ಕಾರು ಚಾಲಕನ ಬಳಿ ಬೆದರಿಕೆ ಹಾಕಿದ್ದಾರೆ.
ಅಷ್ಟೇ ಅಲ್ಲದೆ ಕಾರು ಚಾಲಕ ಮತ್ತು ಸಾರಿಗೆ ಬಸ್ ಚಾಲಕ ಇಬ್ಬರು ರಾಜೀಸಂಧಾನ ಮಾಡಿಕೊಂಡಿದ್ದೇವೆ ಎಂದ ಮೇಲು 7 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದು ಅಲ್ಲದೆ ಇದು ಕೋರ್ಟ್‌ಗೆ ದಂಡ ಕಟ್ಟುವುದಕ್ಕೆ ಎಂದು ದಬಾಯಿಸಿ ಬೆದರಿಸಿದ್ದಾರೆ. ಈ ವೇಳೆ ವಿಧಿ ಇಲ್ಲದೆ ಕೆಎಸ್‌ಆರ್‌ಟಿಸಿ ಬಸ್ ಚಾಲಕ ಬಾಲರಾಜ್ ಅವರು 2 ಸಾವಿರ ರೂಪಾಯಿ ಲಂಚ ಕೊಟ್ಟಿದ್ದಾರೆ.
ಈ ಎಲ್ಲ ನಡೆಯುವಷ್ಟರಲ್ಲಿ ಸಂಜೆ 6 ಗಂಟೆ ಆಗಿದೆ. 2 ಸಾವಿರ ಲಂಚಕೊಟ್ಟ ಮೇಲೆ ಕಾರು ಮತ್ತು ಬಸ್ ಎರಡನ್ನು ಬಿಟ್ಟುಕಳುಹಿಸಿದ್ದಾರೆ. ಇನ್ನು 2 ಸಾವಿರ ರೂಪಾಯಿ ಲಂಚವನ್ನು ಪೊಲೀಸ್ ಸಿಬ್ಬಂದಿ ಪುನೀತ್ ಚಾಲಕನಿಂದ ತೆಗೆದುಕೊಂಡು ಜೇಬಿಗೆ ಹಾಕಿಕೊಂಡಿದ್ದಾನೆ.
ಇನ್ನು ಭರತ್ ಕುಮಾರ್ ಎಂಬ ಪೊಲೀಸ್ ಸಿಬ್ಬಂದಿ ತನ್ನ ಮೊದಲ ಪಾಳಿಯ ಕೆಲಸ ಮುಗಿದಿದ್ದರಿಂದ ಹಬ್ಬಕ್ಕೆ ಪಟಾಕಿ ತೆಗೆದುಕೊಂಡು ಹೋಗಬೇಕು ಎಂದು ಹೇಳಿ ಪುನೀತ್‌ಗೆ ಲಂಚ ತೆಗೆದುಕೊಳ್ಳುವ ಜವಾಬ್ದಾರಿಯನ್ನು ಭಾರಿ ನಿಷ್ಠೆಯಿಂದ ವಹಿಸಿ ಹೋಗಿದ್ದಾನೆ. ಅಂದರೆ ಇಂಥ ಲಂಚಕೋರ ಪೊಲೀಸರಿಂದ ನಿಷ್ಠಾವಂತ ಪೊಲೀಸರನ್ನು ಸಾರ್ವಜನಿಕರು ಕೆಟ್ಟ ದೃಷ್ಟಿಯಿಂದ ನೋಡುವಂತಾಗಿದೆ.
ಅಲ್ಲದೆ ಕಾರು ಮತ್ತು ಸಾರಿಗೆ ಬಸ್ ಚಾಲಕರು ಸ್ಥಳದಲ್ಲೇ ರಾಜೀಸಂಧಾನ ಮಾಡಿಕೊಂಡ ಮೇಲೆ ಅವರನ್ನು ಅವರ ಪಾಡಿಗೆ ಹೋಗಲು ಬಿಡಬಹುದಿತ್ತು. ಆದರೆ ಹಾಗೆ ಮಾಡದಿದ್ದರಿಂದ ಬೆಂಗಳೂರಿನಿಂದ ಕೊಡಗಿಗೆ ಮೂರು ದಿನಗಳ ಬಾಡಿಗೆಗಾಗಿ ಕಾರು ಚಾಲಕ ತಮಿಳುನಾಡು ಪ್ರವಾಸಿಗರನ್ನು ಕರೆದುಕೊಂಡು ಬಂದಿದ್ದ ಬಾಡಿಗೆ ಸುಮಾರು 13 ಸಾವಿರ ರೂಪಾಯಿಯನ್ನು ಕಳೆದುಕೊಳ್ಳಬೇಕಾಯಿತು.
ಅಲ್ಲದೆ ಆ ಪ್ರವಾಸಿಗರು ಮಧ್ಯಾಹ್ನ ಸುಮಾರು 3.30ರವರೆಗೂ ಕಾದು ಬಳಿಕ ಬೇರೆ ಕಾರನ್ನು ಬಾಡಿಗೆಗೆ ಪಡೆದು ಹೋಗಬೇಕಾಯಿತು. ಈ ವೇಳೆ ಸರಿಯಾದ ಸಮಯಕ್ಕೆ ತಲುಪಬೇಕಾದ ಸ್ಥಳವನ್ನು ತಲುಪಲಾಗಲಿಲ್ಲವಲ್ಲ ಎಂದು ಚಾಲಕನ ಬಗ್ಗೆ ಅಸಮಾಧಾನಗೊಂಡು ಬೆಂಗಳೂರಿನಿಂದ ಬಂದಿದ್ದ ಬಾಡಿಗೆ ಹಣವನ್ನು ಕೊಡದೆ ಹೋಗಿದ್ದಾರೆ.
ಈ ಪೊಲೀಸರ ಲಂಚದಾಸೆಗೆ ಪಾಪ ಕಾರು ಚಾಲಕ 13 ಸಾವಿರ ರೂಪಾಯಿ ಆದಾಯವನ್ನು ಕಳೆದುಕೊಳ್ಳುವಂತಾಯಿತು. ಜತೆಗೆ ಮತ್ತೆ ಬೆಂಗಳೂರಿಗೆ ಪ್ರಯಾಣಿಕರಿಲ್ಲದೆ ವಾಪಸ್ ಹೋಗಬೇಕಾಯಿತು. ಇದರಿಂದ ಡೀಸೆಲ್ ಹಣ ಮತ್ತು ಅವರ ನಿತ್ಯದ ಸಂಪಾದನೆಯನ್ನು ಕಳೆದುಕೊಳ್ಳಬೇಕಾಯಿತು.
ಇನ್ನು ಕೆಎಸ್‌ಆರ್‌ಟಿಸಿ ಬಸ್ ಕೂಡ ಪೊಲೀಸ್ ಠಾಣೆಯಲ್ಲಿ ಸುಮಾರು 6 ಗಂಟೆ ತನಕ ನಿಂತಿದ್ದರಿಂದ ಸಾರಿಗೆ ಸಂಸ್ಥೆಯೂ 10 ಸಾವಿರ ರೂಪಾಯಿಗೂ ಹೆಚ್ಚು ಆದಾಯ ಕಳೆದುಕೊಳ್ಳಬೇಕಾಯಿತು. ಪೊಲೀಸರು ಇನ್ನಾದರೂ ಈ ರೀತಿಯ ವರ್ತನೆಯನ್ನು ಬದಲಾಯಿಸಿಕೊಂಡರೆ ಸಾರ್ವಜನಿಕರಿಗೆ ಮತ್ತು ಸರ್ಕಾರದ ಇಲಾಖೆಗಳಿಗೆ ಆಗುವ ನಷ್ಟವನ್ನು ತಪ್ಪಿಸಬಹುದಾಗಿದೆ.
ಅಲ್ಲದೆ ಮುಖ್ಯವಾಗಿ ಈ ರೀತಿ ಲಂಚಕ್ಕಾಗಿ ಸಮಯ ಹಾಳುಮಾಡಿದ ಈ ಇಬ್ಬರು ಪೊಲೀಸ್ ಸಿಬ್ಬಂದಿಗಳನ್ನು ಕೂಡಲೇ ಅಮಾನತು ಮಾಡಿ ಕಾನೂನು ಕ್ರಮ ಜರುಗಿಸಬೇಕು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರನ್ನು ಒತ್ತಾಯಿಸಿದ್ದಾರೆ.
Related
You Might Also Like
ಮೆಟ್ರೋ ದರ ಏರಿಕೆಗೆ ಕೇಂದ್ರ ಸರ್ಕಾರವೇ ಹೊಣೆ: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ
ಮಂಗಳೂರು: ಮೆಟ್ರೋ ದರ ಏರಿಕೆಗೆ ಕೇಂದ್ರ ಸರ್ಕಾರವೇ ಹೊಣೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ. ಮಂಗಳೂರಿನ ಆರ್ಟಿಒ ಕಚೇರಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ದೇಶದ...
ವ್ಯಾಪಾರ ವಹಿವಾಟು ಹೆಚ್ಚಿಸಿ, ಉತ್ಪಾದನೆ ಉತ್ತೇಜಿಸುವ ಸರ್ಕಾರದ ಬದ್ಧತೆ ಶ್ಲಾಘನೀಯ: ಕಾಸಿಯಾ ಅಧ್ಯಕ್ಷ ರಾಜಗೋಪಾಲ್
ಬೆಂಗಳೂರು: ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ (ಕಾಸಿಯಾ) ಹೊಸದಾಗಿ ಅನಾವರಣಗೊಂಡ ಕೈಗಾರಿಕಾ ನೀತಿ 2025-30 ಅನ್ನು ಸ್ವಾಗತಿಸುತ್ತದೆ. ಈ ನೀತಿಯು ರಾಜ್ಯದಲ್ಲಿ ಕೈಗಾರಿಕಾ ಬೆಳವಣಿಗೆ ಮತ್ತು ಉದ್ಯೋಗ...
ಮೈಕ್ರೊ ಫೈನಾನ್ಸ್ ಸುಗ್ರಿವಾಜ್ಞೆಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಂಕಿತ
ಬೆಂಗಳೂರು: ರಾಜ್ಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿರುವ ಮೈಕ್ರೊ ಫೈನಾನ್ಸ್ ಸುಗ್ರಿವಾಜ್ಞೆಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಂಕಿತ ಹಾಕಿದ್ದಾರೆ. ಸಾಲಗಾರರ ಮೇಲೆ ದೌರ್ಜನ್ಯ ಎಸಗುತ್ತಿರುವ ಮೈಕ್ರೊ ಫೈನಾನ್ಸ್ಗಳ...
ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ ಕರಡಿಗೆ ನಾಗರೀಕರಿಂದ ಬರುವ ಸಲಹೆಗಳ ಸೇರಿಸಿ ಅಂತಿಮ: ರಿಜ್ವಾನ್ ಹರ್ಷದ್
ಬೆಂಗಳೂರು: ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ ಕರಡಿಗೆ ನಾಗರೀಕರಿಂದ ಬರುವ ಸಲಹೆಗಳನ್ನು ಸೇರಿಸಿ ಅಂತಿಮಗೊಳಿಸಲಾಗುವುದೆಂದು ಕರ್ನಾಟಕ ವಿಧಾನ ಮಂಡಲ ಜಂಟಿ ಪರಿಶೀಲನಾ ಸಮಿತಿಯ ಅಧ್ಯಕ್ಷ ರಿಜ್ವಾನ್ ಹರ್ಷದ್...
ಎಸ್ಸಿಎಸ್‌ಪಿ, ಟಿಎಸ್ಪಿ ವಿಶೇಷ ಯೋಜನೆ ಫೆ. ಅಂತ್ಯದೊಳಗೆ ಶೇ.100 ರಷ್ಟು ಪ್ರಗತಿ ಸಾಧಿಸಿರಬೇಕು: ಅಧಿಕಾರಿಗಳಿಗೆ ಡಿಸಿ ಆದೇಶ
ಬೆಂಗಳೂರು: 2024-25ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ವಿಶೇಷ ಯೋಜನೆ (ಎಸ್ಸಿಎಸ್‌ಪಿ, ಟಿಎಸ್ಪಿ ಯೋಜನೆ) ಯಡಿ ಇಲಾಖೆಗಳಿಗೆ ಬಿಡುಗಡೆ ಆಗಿರುವ ಅನುದಾನವನ್ನು ಇದೇ ತಿಂಗಳ ಅಂದರೆ...
ರೈತರ ನಿರಂತರ ಹೋರಾಟಕ್ಕೆ ನಾಳೆಗೆ ವರ್ಷ: ಆದರೂ ಕಿವಿಗೊಡದ ಸರ್ಕಾರ
ನ್ಯೂಡೆಲ್ಲಿ: ಕನೂರಿ ಗಡಿಯ ಹೋರಾಟ ದೇಶದ ರೈತರ ಹಿತರಕ್ಷಣೆಯ ಹೋರಾಟವಾಗಿದ್ದು ಈ ಹೋರಾಟಕ್ಕೆ ನಾಳೆಗೆ ಒಂದು ವರ್ಷವಾಗುತ್ತಿದ್ದು ರೈತರಿಗೆ ದುಃಖದ ವರ್ಷವಾಗಿಯೇ ತುಂಬುತ್ತಿದೆ. ಸಂಯುಕ್ತ ಕಿಸಾನ್ ಮೋರ್ಚಾ...
KSRTC: ಫೇಕ್ ಫೋನ್ ಪೇ/ UPI ಆಪ್‌ಗಳಿಂದ ದಿನನಿತ್ಯ ನಿರ್ವಾಹಕರಿಗೆ ಆರ್ಥಿಕ ಬರೆ!!
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳಲ್ಲಿ ಫೇಕ್ ಫೋನ್ ಪೇ/ UPI ಆಪ್‌ಗಳಿಂದ ದಿನನಿತ್ಯ ನಿರ್ವಾಹಕರು ತಮ್ಮ ಕೈಯಿಂದ ಹಣವನ್ನು ಘಟಕಕ್ಕೆ ಕಟ್ಟಿ ಹೋಗುತ್ತಿದ್ದಾರೆ, ಈ ಬಗ್ಗೆ...
KKRTC ಬಸ್‌ನಲ್ಲಿ ಲೈಂಗಿಕ ಕಿರುಕುಳ ನೀಡಿದ ಕಂಡಕ್ಟರ್‌ನಿಂದ ದೂರು ಹಿಂಪಡೆಯುವಂತೆ ಬೆದರಿಕೆ-ಆರೋಪ
ರಾಯಚೂರು : ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಗೆ ನಿರ್ವಾಹಕ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿ ದೂರು ನೀಡಿದ ಮಹಿಳೆ ಸಂಬಂಧಿಕರಿಗೆ...
KSRTC ಅಭಿವೃದ್ಧಿಗೆ ಬಜೆಟ್‌ನಲ್ಲಿ ಅನುದಾನ – ಸಿಎಂ ಜತೆ ಸಚಿವ ರಾಮಲಿಂಗಾರೆಡ್ಡಿ ಚರ್ಚೆ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ (KSRTC) ಸೇರಿದಂತೆ ಪ್ರಮುಖ ಸಾರಿಗೆ ನಿಗಮಗಳ ಅಭಿವೃದ್ಧಿಗೆ ಬಜೆಟ್‌ನಲ್ಲಿ ನೀಡಬೇಕಾದ ಅನುದಾನ, ಬಿಡುಗಡೆ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅರೊಂದಿಗೆ ಚರ್ಚಿಸಿದ್ದೇನೆ...