NEWSನಮ್ಮಜಿಲ್ಲೆನಮ್ಮರಾಜ್ಯ

ವಿಜಯಪಥ: ಸಂಬಳ ಕುರಿತ KSRTC ಅಧಿಕಾರಿಗಳು/ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: 100ಕ್ಕೆ 100ರಷ್ಟು ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರು 7ನೇ ವೇತನ ಆಯೋಗದಂತೆ ಸರಿ ಸಮಾನ ವೇತನವೇ ಬೇಕು ಎಂದು ಸರ್ಕಾರಕ್ಕೆ ಮತ್ತು ಸಾರಿಗೆಯ ಆಡಳಿತ ಮಂಡಿಗಳಿಗೆ ಮನವಿ ಮಾಡುತ್ತಿದ್ದಾರೆ.

ವೇತನ ಸಂಬಂಧ ಸಾರಿಗೆಯ 4 ನಿಗಮಗಳ ಅಧಿಕಾರಿಗಳು/ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನ ಹಮ್ಮಿಕೊಂಡಿರುವ ವಿಜಯಪಥ.ಇನ್‌ ಮೀಡಿಯಾಕ್ಕೆ ತಮ್ಮ ತಮ್ಮ ಅಭಿಪ್ರಾಯ ತಿಳಿಸುತ್ತಿರುವ ನೌಕರರು ವೇತನ ಆಯೋಗದಂತೆ ಸರಿ ಸಮಾನ ವೇತನವೇ ಬೇಕು ಎನ್ನುತ್ತಿದ್ದಾರೆ.

ಇನ್ನು 2.ಅಗ್ರಿಮೆಂಟ್‌ ಬೇಕಾ ಎಂಬುದಕ್ಕೆ ಈವರೆಗೂ ಒಂದೇಒಂದು ಅಭಿಪ್ರಾಯವೂ ಕೂಡ ಬಂದಿಲ್ಲ. ಅಂದರೆ ಸಾರಿಗೆ ನಿಗಮಗಳ ಅಧಿಕಾರಿಗಳು/ನೌಕರರಿಗೆ ವೇತನ ಆಯೋಗದಂತೆಯೇ ಸರಿ ಸಮಾನ ವೇತನ ಬೇಕು ಎಂಬುವುದು ಇಲ್ಲಿ ಸ್ಪಷ್ಟವಾಗಿ ತಿಳಿಯುತ್ತಿದೆ.

ವಿಜಯಪಥ.ಇನ್‌ ಮೀಡಿಯಾ ಕೂಡ ಪಾರದರ್ಶಕತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಪ್ರತ್ಯೇಕವಾಗಿ ಅಂದರೆ ಮರೆ ಮಾಚುವ ಕೆಲಸಕ್ಕೆ ಕೈಹಾಕದೆ ಎಲ್ಲರ ಅಭಿಪ್ರಾಯವನ್ನು ಅವರ ಹೆಸರು ಸಹಿತ ಬಹಿರಂಗ ಪಡಿಸುತ್ತ ಅಧಿಕಾರಿಗಳು/ನೌಕರರ ಅಭಿಪ್ರಾಯವನ್ನು ಸಂಗ್ರಹಿಸುತ್ತಿದೆ.

ಹೀಗಾಗಿ ಇಲ್ಲಿ ಯಾರಿಗೂ ಅನುಮಾನ (Doubt) ಬರಬಾರದು ಎಂಬ ಉದ್ದೇಶದಿಂದ ಎಲ್ಲ ಅಭಿಪ್ರಾಯವನ್ನು ಬಹಿರಂಗಪಡಿಸುತ್ತಿದ್ದೇವೆ. ಜತೆಗೆ ಅಧಿಕಾರಿಗಳು/ ನೌಕರರ ಮನಸ್ಸಿನಲ್ಲಿರುವುದನ್ನು ನೇರವಾಗಿ ತಿಳಿಸುತ್ತಿದ್ದೇವೆ. ಏಕೆಂದರೆ ಇಲ್ಲಿ ವ್ಯಕ್ತವಾಗುತ್ತಿರುವ ಅಭಿಪ್ರಾಯಗಳನ್ನು ಬೇರೆ ಯಾರು ಕೂಡ ತಿರುಚಲು ಸಾಧ್ಯವಿಲ್ಲ.

ಇನ್ನು ಒಟ್ಟಾರೆ ಸಾರಿಗೆ ನೌಕರರು ಈ ಅಗ್ರಿಮೆಂಟ್‌ ಎಂಬುದರ ಹಿಂದೆ ಬಿದ್ದು ಈ ಹಿಂದಿನಿಂದಲೂ ಅನುಭವಿಸಿರುವ ವಜಾ, ಅಮಾನತು, ವರ್ಗಾವಣೆ ಹಾಗೂ ಪೊಲೀಸ್‌ ಕೇಸ್‌ಗಳಿಂದ ಮುಕ್ತಿ ಪಡೆಯುವುದಕ್ಕೆ ನಮಗೆ ಸರಿ ಸಮಾನ ವೇತನವೇ ಬೇಕು ಎಂದು ಗಟ್ಟಿಧ್ವನಿಯಲ್ಲಿ ಕೇಳುತ್ತಿದ್ದಾರೆ.

ಅದಕ್ಕೆ ಕಾಂಗ್ರೆಸ್‌ ಸರ್ಕಾರ ಕೂಡ ತನ್ನ ಚುನಾವಣೆ ಪ್ರಣಾಳಿಕೆಯಲ್ಲೇ ಭರವಸೆ ನೀಡಿದೆ. ಇದಕ್ಕೂ ಮೊದಲು ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ಕೂಡ ನಿಮ್ಮನ್ನು ಸರ್ಕಾರಿ ನೌಕರರಾಗಿ ಪರಿಗಣಿಸಲು ಸಾಧ್ಯವಿಲ್ಲ. ಆದರೆ, ಸರ್ಕಾರಿ ನೌಕರರಿಗೆ ಸರಿ ಸಮಾನವಾದ ವೇತನ ಕೊಡುತ್ತೇವೆ ಎಂದು ಭರವಸೆ ನೀಡಿತ್ತು.

ಆ ನಿಟ್ಟಿನಲ್ಲಿ ಸಾರಿಗೆ ಅಧಿಕಾರಿಗಳು/ನೌಕರರ ವೇತನ ಪಟ್ಟಿಯನ್ನು ಸಿದ್ಧಪಡಿಸಿಕೊಂಡಿತ್ತು. ಆದರೆ, ಅಂದಿನ ಸರ್ಕಾರಕ್ಕೆ ಯಾರು ಕಿವಿವೂದಿದರೋ ಗೊತ್ತಿಲ್ಲ ತಾನೆ ಕೊಟ್ಟ ಭರವಸೆಯಿಂದ ಬಿಜೆಪಿ ಸರ್ಕಾರ ಹಿಂದೆ ಸರಿಯಿತು. ಪರಿಣಾಮ ವಿಧಾನಸಭೆ ಚುನಾವಣೆಯಲ್ಲಿ ಅದಕ್ಕೆ ತಕ್ಕ ಪಾಠವನ್ನು ನೌಕರರು ಕಲಿಸಿದರು.

ಈಗ ಅದೆಲ್ಲ ಮುಗಿದು ಹೋಗಿರುವ ವಿಷಯ. ಪ್ರಸ್ತುತ ಕಾಂಗ್ರೆಸ್‌ ಸರ್ಕಾರ ಅಧಿಕಾರದಲ್ಲಿದ್ದು, ಚುನಾವಣೆ ಪ್ರಣಾಳಿಕಯಲ್ಲಿ ಕೊಟ್ಟಿರುವ ಭರವಸೆಯಂತೆ ನೌಕರರಿಗೆ ಸರಿ ಸಮಾನ ವೇತನ ಕೊಡಲು ಮುಂದಾಗಿದೆ. ಈ ನಡುವೆಯೇ ನೌಕರರು ಸರಿ ಸಮಾನ ವೇತನ ಬೇಡ ಅಗ್ರಿಮೆಂಟ್‌ ಬೇಕು ಎಂದು ಕೇಳುತ್ತಿದ್ದಾರೆ ಎಂದು ಕೆಲ ಸಂಘಟನೆಗಳ ಪದಾಧಿಕಾರಿಗಳು ಮಾಧ್ಯಮಗಳ ಮುಂದೆ ಹೇಳಿಕೆ ನೀಡುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ವಿಜಯಪಥ.ಇನ್‌ ಮೀಡಿಯಾ ನೌಕರರ ಅಭಿಪ್ರಾಯ ಸಂಗ್ರಹ ಮಾಡುತ್ತಿದ್ದು, ಇದೇ ಅಕ್ಟೋಬರ್‌ 30ರವರೆಗೂ ಅಭಿಯಾನ ನಡೆಯಲಿದೆ. ಹೀಗಾಗಿ ಅಧಿಕಾರಿಗಳು/ನೌಕರರು ತಮ್ಮ ಅಭಿಪ್ರಾಯವನ್ನು ಮುಕ್ತವಾಗಿ ಹಂಚಿಕೊಳ್ಳಬೇಕು. ತಾವು ಹಂಚಿಕೊಂಡ ಅಭಿಪ್ರಾಯವನ್ನು ಸರ್ಕಾರ ಮತ್ತು ಸಾರಿಗೆ ನಿಗಮಗಳ ಆಡಳಿತ ಮಂಡಳಿಗೆ ನಿಮ್ಮ ಅಧಿಕಾರಿಗಳು ಮತ್ತು ನೌಕರರ ಸಂಘಟನೆಗಳ ಮುಖಂಡರ ಜತೆಗೂಡಿಯೇ ಸಲ್ಲಿಸಲಾಗುವುದು.

ಹೀಗಾಗಿ ಯಾರು ಕೂಡ ಹಿಂದೆ ಸರಿಯದೆ ನಿಮಗೆ 1.ವೇತನ ಆಯೋಗದಂತೆ ಸರಿ ಸಮಾನ ವೇತನ ಬೇಕಾ? 2.ಅಗ್ರಿಮೆಂಟ್‌ ಬೇಕಾ? ಎಂಬುದನ್ನು ತಿಳಿಸಿ. ನಿಮ್ಮ ಅಭಿಪ್ರಾಯಗಳನ್ನು ಸ್ಪಷ್ಟವಾಗಿ ತಿಳಿದುಕೊಂಡು ಸಂಘಟನೆಗಳು ಸರ್ಕಾರದ ಮುಂದೆ ಹೋಗುವುದಕ್ಕೂ ಅನುಕೂಲವಾಗುತ್ತದೆ. ಆಗ ಸರ್ಕಾರ ಕೂಡ ನಿಮ್ಮ ಅಭಿಪ್ರಾಯಕ್ಕೆ ಮನ್ನಣೆ ನೀಡಬಹುದು.

15 Comments

Leave a Reply

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಹಿಂದಿನಿಂದ ವೇಗವಾಗಿ ಬಂದ ಕಾರು ಮುಂದೆ ಹೋಗುತ್ತಿದ್ದ ಕಾರ್‌ ಮೇಲೇರಿತು! ರೈತ ನಾಯಕ ಕುರುಬೂರು ಶಾಂತಕುಮಾರ್‌ಗೆ ಬೆಂಗಳೂರಿನಲ್ಲಿ ಚಿಕಿತ್ಸೆ: ಸಿಎಂ ಸಿದ್ದರಾಮಯ್ಯ ಮಹಾಕುಂಭ ಮೇಳಕ್ಕೆ ತೆರಳುತ್ತಿದ್ದ 18 ಮಂದಿ ದೆಹಲಿ ರೈಲು ನಿಲ್ದಾಣದಲ್ಲಿ ಕಾಲ್ತುಳಿತಕ್ಕೆ ಸಿಲುಕಿ ಮೃತ ಮಳೆ ನೀರು ಕೊಯ್ಲಿನಿಂದ ಅಂತರ್ಜಲ ವೃದ್ಧಿ: ಕೃಷಿ ಇಲಾಖೆ ಉಪ ನಿರ್ದೇಶಕಿ ಗಾಯತ್ರಿ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ನೇಮಕಕ್ಕೆ ಅರ್ಜಿ ಆಹ್ವಾನ ಬಿಬಿಎಂಪಿ: ಕಸ ಬಿಸಾಡುವ ಸ್ಥಳ ನಿರ್ಮೂಲನೆ ಜತೆ ಜೆತೆಗೆ ಸ್ವಚ್ಛತಾ ಅಭಿಯಾನ KSRTC ರಿಯಾಯಿತಿ ದರದ ಪಾಸ್‌ ಇದ್ದರೂ ತಾರತಮ್ಯತೆ: ನಿವೃತ್ತರಾದ ಮೇಲೆ ಅಧಿಕಾರಿಗಳಿಗೆ ಬಡತನ- ನೌಕರರಿಗೆ ಸಿರಿತನ !! ಪಂಜಾಬ್‌ನಲ್ಲಿ ಕುರುಬೂರು ಶಾಂತಕುಮಾರ್ ಇದ್ದ ಕಾರು ಅಪಘಾತ: ಆಸ್ಪತ್ರೆಗೆ ದಾಖಲು ಬಿಬಿಎಂಪಿ: 1.84 ಲಕ್ಷ ಬೀದಿ ನಾಯಿಗಳಿಗೆ "ಸಂಯುಕ್ತ ಲಸಿಕೆ" ಹಾಕುವ ಗುರಿ- ತುಷಾರ್ ಗಿರಿನಾಥ್ ಮೈಕ್ರೋಫೈನಾನ್ಸ್ ಸಂಸ್ಥೆಗಳ ಕಿರುಕುಳ ನಿಯಂತ್ರಣಕ್ಕೆ ಸರ್ಕಾರಿ ಆಧ್ಯಾದೇಶ ಜಾರಿ