NEWSನಮ್ಮಜಿಲ್ಲೆನಮ್ಮರಾಜ್ಯರಾಜಕೀಯ

ವಿಧಾನಸೌಧದಲ್ಲಿ ನಡೆದ ಹೈಡ್ರಾಮದ ಬಗ್ಗೆ ಮಾಜಿ ಸಿಎಂ ಎಚ್‌ಡಿಕೆ ಪ್ರತಿಕ್ರಿಯೆ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ದೇಶದ ಹಲವಾರು ರಾಷ್ಟ್ರೀಯ ಪಕ್ಷಗಳು, ಮಹಾಘಟ ಬಂಧನ್ ಸಭೆ ಮಾಡಿದ್ದರು. ಆ ಸಭೆಗೆ ರಾಜ್ಯದ ಹಿರಿಯ ಅಧಿಕಾರಿಗಳನ್ನು ಸ್ವಾಗತ ಕೋರಲು ಬಳಕೆ ಮಾಡಿಕೊಂಡಿದ್ದಾರೆ. ಇದು ಅಧಿಕಾರಿಗಳ ದುರ್ಬಳಕೆ ಅಲ್ಲದೇ ಮತ್ತೇನು ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ವಿಧಾನಸೌಧದಲ್ಲಿ ನಿನ್ನೆ (ಜುಲೈ 19) ನಡೆದ ಹೈಡ್ರಾಮದ ಬಗ್ಗೆ ಪ್ರತಿಕ್ರಿಯಿಸಿರುವ ಎಚ್‌ಡಿಕೆ ಅವರು, ಸ್ವೀಕರ್ ಕಚೇರಿಯಲ್ಲಿ ಸಂಧಾನ ಸಭೆ ನಡೆಸಿದ ವೇಳೆ ಕಾಂಗ್ರೆಸ್ ನಾಯಕರು ನಾವು ಏನೂ ತಪ್ಪು ಮಾಡಿಲ್ಲವೆಂದು ಪ್ರತಿಷ್ಠೆ ತೋರಿದರು. ಆ ಪ್ರಕರಣವನ್ನು ಎರಡು ನಿಮಿಷಗಳಲ್ಲಿ ಬಗೆಹರಿಸಬಹುದಿತ್ತು. ಮುಂದೆ ಈ ರೀತಿ ಆಗಲ್ಲ ಎಂದು ಹೇಳಬಹುದಿತ್ತು. ಇದಕ್ಕೆ ವಿಷಾದ ಸಹ ವ್ಯಕ್ತಪಡಿಸುವ ಅವಶ್ಯಕತೆ ಇರಲಿಲ್ಲ ಎಂದು ಹೇಳಿದರು.

ಇನ್ನು ಊಟಕ್ಕೆ ಬಿಡದೆ ಸಿಎಂ ಹೇಳಿದರು ಅಂತ ಕಲಾಪ ನಡೆಸಿದರು. ಹಿಂದೆ ಕಾಂಗ್ರೆಸ್ ಈ ರೀತಿ ಮಾಡಿಲ್ಲ. ಈಗ ದಲಿತ ಉಪಾಧ್ಯಕ್ಷರ ಮೇಲೆ ಅನುಕಂಪ ಬಂದಿದೆ ಅವರಿಗೆ. ಈಗ ಅವರಿಗೆ ದಲಿತ ಅಂತ ನೆನಪು ಬಂತಾ? ಪುಟ್ಟರಂಗ ಶೆಟ್ಟಿ ಬೇಡ ಅಂದಿದ್ದಕ್ಕೆ ಗುರುತಿಸಿದ್ದೀರಾ ಎಂದು ಪ್ರಶ್ನಿಸಿದರು.

ನಾನು ಪ್ರಿಯಾಂಕ್ ಖರ್ಗೆಗೆ ಕೇಳುತ್ತೀನಿ, ನೀವೇ ಸ್ವೀಕರ್ ಆಗಿ ಅವರನ್ನು ಮಂತ್ರಿ ಮಾಡಬಹುದಿತ್ತಲ್ವಾ? ನಾನು ಸಿಎಂ ಆಗಿದ್ದ ವೇಳೆ ಅಧಿಕಾರಿಗಳನ್ನು ದುರುಪಯೋಗ ಮಾಡಿಕೊಂಡಿಲ್ವ ಎಂದು ನನಗೆ ಸವಾಲು ಹಾಕಿದ್ದೀರಿ. ನಾನು ಮಾಡಿಲ್ಲ, ನಾನು ಪ್ರಮಾಣವಚನ ಸ್ವೀಕಾರ ಮಾಡಿದ ಮೇಲೆ ಅಧಿಕಾರಿಗಳ ದುರ್ಬಳಕೆ ಮಾಡಿಕೊಂಡಿಲ್ಲ. ನಿಮಗೆ ದಾಖಲೆ ಇದ್ದರೆ ಬಿಡುಗಡೆ ಮಾಡಿ ಎಂದು ಸವಾಲ್ ಹಾಕಿದರು.

ನಿನ್ನೆ ವಿಧಾನಸಭೆಯಲ್ಲಿ ಏನಾಗಿತ್ತು..?: ಕಾಂಗ್ರೆಸ್ ‘ಮಹಾಘಟಬಂಧನ್’ ಸಭೆಗೆ IAS ಅಧಿಕಾರಿಗಳ ಬಳಕೆಗೆ ವಿರೋಧಿಸಿ ವಿಧಾನಸಭೆಯಲ್ಲಿ ಪ್ರತಿಪಕ್ಷಗಳು ಪ್ರತಿಭಟನೆ ನಡೆಸುತ್ತಿದ್ದವು. ಗದ್ದಲ, ಗಲಾಟೆಯ ಕಲಾಪದ ಮಧ್ಯೆ ಊಟದ ಸಮಯವಾಗಿತ್ತು. ಡೆಪ್ಯೂಟಿ ಸ್ಪೀಕರ್ ಊಟಕ್ಕೂ ಬಿಡದ ಹಿನ್ನೆಲೆ ಬಿಜೆಪಿ ಸದಸ್ಯರು ಪೇಪರ್ ಹರಿದು ಎಸೆದು ಆಕ್ರೋಶ ವ್ಯಕ್ತಪಡಿಸಿದ್ದರು.

ತಮ್ಮ ಮುಖದ ಮೇಲೆ ಪೇಪರ್ ಎಸೆದಿದ್ದಕ್ಕೆ ಡೆಪ್ಯೂಟಿ ಸ್ಪೀಕರ್ ರುದ್ರಪ್ಪ ಲಮಾಣಿ ಪ್ರತಿಕ್ರಿಯಿಸಿ, ನಾನೊಬ್ಬ ದಲಿತ. ನನ್ನ ಮೇಲೆ ಈ ರೀತಿ ಮಾಡೋದು ಸರಿಯಲ್ಲ ಎಂದ ಹೇಳಿದರು. ಈ ಗಲಾಟೆಯ ಮಧ್ಯೆ ಬಿಜೆಪಿ ಸದಸ್ಯರ ವಿರುದ್ಧ ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದರು.

ಪ್ರತಿಪಕ್ಷ ನಾಯಕರು ಪೇಪರ್ ಹರಿದು ಎಸೆದ ಸಂದರ್ಭದಲ್ಲಿ ಮಾರ್ಷಲ್‌ಗಳು ರಕ್ಷಣೆಗೆ ಬಂದಿಲ್ಲ. ಇದರಿಂದ ಇನ್ನಷ್ಟು ಆಕ್ರೋಶಗೊಂಡ ಸಚಿವ ಭೈರತಿ ಸುರೇಶ್, ಮಾರ್ಷಲ್‌ಗಳನ್ನು ಸಸ್ಪೆಂಡ್ ಮಾಡಿ ಎಂದು ಒತ್ತಾಯಿಸಿದ್ದರು.

ಗಲಾಟೆ ತೀವ್ರಗೊಳ್ಳುತ್ತಿದ್ದಂತೆಯೇ ಸ್ಪೀಕರ್ ಖಾದರ್, ಬಿಜೆಪಿ ನಾಯಕರಾದ ಆರ್.ಅಶೋಕ್, ವೇದವ್ಯಾಸ್ ಕಾಮತ್, ಕೋಟ್ಯಾನ್, ಭರತ್ ಶೆಟ್ಟಿ, ಸುನಿಲ್ ಕುಮಾರ್, ಆರಗ ಜ್ಞಾನೇಂದ್ರ, ಅರವಿಂದ ಬೆಲ್ಲದ್, ಧೀರಜ್ ಮುನಿರಾಜ್, ಅಶ್ವತ್ಥ ನಾರಾಯಣ್, ಯಶ್‌ಪಾಲ್ ಅವರನ್ನು ಅಮಾನತು ಮಾಡಿ ಆದೇಶಿಸಿದ್ದರು.

Leave a Reply

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಹಿಂದಿನಿಂದ ವೇಗವಾಗಿ ಬಂದ ಕಾರು ಮುಂದೆ ಹೋಗುತ್ತಿದ್ದ ಕಾರ್‌ ಮೇಲೇರಿತು! ರೈತ ನಾಯಕ ಕುರುಬೂರು ಶಾಂತಕುಮಾರ್‌ಗೆ ಬೆಂಗಳೂರಿನಲ್ಲಿ ಚಿಕಿತ್ಸೆ: ಸಿಎಂ ಸಿದ್ದರಾಮಯ್ಯ ಮಹಾಕುಂಭ ಮೇಳಕ್ಕೆ ತೆರಳುತ್ತಿದ್ದ 18 ಮಂದಿ ದೆಹಲಿ ರೈಲು ನಿಲ್ದಾಣದಲ್ಲಿ ಕಾಲ್ತುಳಿತಕ್ಕೆ ಸಿಲುಕಿ ಮೃತ ಮಳೆ ನೀರು ಕೊಯ್ಲಿನಿಂದ ಅಂತರ್ಜಲ ವೃದ್ಧಿ: ಕೃಷಿ ಇಲಾಖೆ ಉಪ ನಿರ್ದೇಶಕಿ ಗಾಯತ್ರಿ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ನೇಮಕಕ್ಕೆ ಅರ್ಜಿ ಆಹ್ವಾನ ಬಿಬಿಎಂಪಿ: ಕಸ ಬಿಸಾಡುವ ಸ್ಥಳ ನಿರ್ಮೂಲನೆ ಜತೆ ಜೆತೆಗೆ ಸ್ವಚ್ಛತಾ ಅಭಿಯಾನ KSRTC ರಿಯಾಯಿತಿ ದರದ ಪಾಸ್‌ ಇದ್ದರೂ ತಾರತಮ್ಯತೆ: ನಿವೃತ್ತರಾದ ಮೇಲೆ ಅಧಿಕಾರಿಗಳಿಗೆ ಬಡತನ- ನೌಕರರಿಗೆ ಸಿರಿತನ !! ಪಂಜಾಬ್‌ನಲ್ಲಿ ಕುರುಬೂರು ಶಾಂತಕುಮಾರ್ ಇದ್ದ ಕಾರು ಅಪಘಾತ: ಆಸ್ಪತ್ರೆಗೆ ದಾಖಲು ಬಿಬಿಎಂಪಿ: 1.84 ಲಕ್ಷ ಬೀದಿ ನಾಯಿಗಳಿಗೆ "ಸಂಯುಕ್ತ ಲಸಿಕೆ" ಹಾಕುವ ಗುರಿ- ತುಷಾರ್ ಗಿರಿನಾಥ್ ಮೈಕ್ರೋಫೈನಾನ್ಸ್ ಸಂಸ್ಥೆಗಳ ಕಿರುಕುಳ ನಿಯಂತ್ರಣಕ್ಕೆ ಸರ್ಕಾರಿ ಆಧ್ಯಾದೇಶ ಜಾರಿ