ತಿ. ನರಸೀಪುರ: ರಾಜ್ಯದಲ್ಲಿ ಸಾಕ್ಷರತಾ ಪ್ರಮಾಣ ಹೆಚ್ಚಿಸಲು ವೀರಶೈವ ಲಿಂಗಾಯತ ಮಠಗಳು ಪ್ರಮುಖ ಪಾತ್ರ ವಹಿಸುತ್ತಿವೆ ಎಂದು ಸುತ್ತೂರು ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ತಿಳಿಸಿದ್ದಾರೆ.
ತಾಲೂಕಿನ ಮುಡುಕುತೊರೆ ಕಲ್ಲು ಮಠದ ಶ್ರೀ ನಂದಿಕೇಶ್ವರಸ್ವಾಮಿಗಳ ವೀರಕ್ತಾಶ್ರಮಾಧಿಕಾರ ಮಹೋತ್ಸವದ ದಿವ್ಯ ಸಾನಿಧ್ಯವಹಿಸಿ ಮಾತನಾಡಿದ ಸುತ್ತೂರು ಶ್ರೀಗಳು ರಾಜ್ಯದಲ್ಲಿ ವೀರಶೈವ ಲಿಂಗಾಯತ ಮಠಗಳು ದಾಸೋಹ, ಶಿಕ್ಷಣ, ಸೇರಿದಂತೆ ಸಾಮಾಜಿಕ ಕಾರ್ಯಗಳಿಗೆ ಹೆಚ್ಚಿನ ಒತ್ತು ನೀಡಿವೆ ಎಂದರು.
ಗ್ರಾಮಗಳ ಮಠಗಳಿಗೆ ಮಠಾಧಿಪತಿಗಳನ್ನು ನೇಮಿಸಿದರೆ ಸಾಲದು ಮಠಾಧಿಪತಿಗಳಿಗೆ ಭಕ್ತರ ಸಹಕಾರ ಬಹಳ ಮುಖ್ಯವಾದದ್ದು ಮಠಗಳು ಅಭಿವೃದ್ಧಿಗೆ ಭಕ್ತರು ನೀಡುವ ಗೌರವ ಮತ್ತು ಸಹಕಾರ ಬಹಳ ಮುಖ್ಯ ಮಠಗಳು ಬೆಳೆದಂತೆ ಆ ಮಠದಿಂದ ಅಭಿವೃದ್ಧಿ ಕಾರ್ಯಗಳು ನಿರಂತರವಾಗಿ ಸಾಗುತ್ತವೆ ಎಂದರು.
ಮುಂದುವರೆದು ಮಾತನಾಡಿದ ಸುತ್ತೂರು ಶ್ರೀಗಳು ಮುಡುಕುತೊರೆ ಕಲ್ಲು ಮಠವು, ಶ್ರೀ ಭ್ರಮರಾಂಭ ಸಮೇತ ಮಲ್ಲಿಕಾರ್ಜುನ ಸ್ವಾಮಿ ಸನ್ನಿಧಿಯಲ್ಲಿ ಇರುವುದರಿಂದ ಮಠಕ್ಕೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರಲಿದ್ದಾರೆ ನೂತನ ಮಠಾಧೀಶರು ಭಕ್ತರೊಡನೆ ಅಭಿನಭಾವ ಸಂಬಂಧ ಇಟ್ಟುಕೊಂಡು ಮಠದ ಕೀರ್ತಿಯನ್ನು ಉತ್ತುಂಗಕ್ಕೆ ಕೊಂಡೊಯ್ಯಬೇಕು ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ವಾಟಾಳು ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿಗಳು ಮುಡುಕುತೊರೆ ಕಲ್ಲು ಮಟವು ತೀರಾ ಹಳೆಯದಾಗಿದ್ದು ಮಠದ ಕಟ್ಟಡದ ಅಭಿವೃದ್ಧಿಗೆ ಸುತ್ತೂರು ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಜಿಗಳು ಸಹಕಾರ ನೀಡಬೇಕೆಂದು ಕೋರಿದರು.
ಈ ಸಂದರ್ಭದಲ್ಲಿ ಬೆಟ್ಟದ ಮಠದ ಶ್ರೀ ಚನ್ನಬಸವ ದೇಶಿ ಕೇಂದ್ರ ಸ್ವಾಮೀಜಿಗಳು, ಮಾಡ್ರಹಳ್ಳಿ ಮಠದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮಿಗಳು, ಹಲವಾರ ಮಠದ ಶ್ರೀ ಷಡಕ್ಷರಿ ದೇಶಿ ಕೇಂದ್ರ ಸ್ವಾಮಿಗಳು, ಮುಡುಕುತೊರೆ ತೋಪಿನ ಮಠದ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು, ದಂಡಿಕೆರೆ ಶ್ರೀ ಬಸವಲಿಂಗ ಸ್ವಾಮಿಗಳು, ರಾಗಿ ಬೊಮ್ಮನಹಳ್ಳಿ ಪಟ್ಟದ ಮಠದ ಶ್ರೀ ಪ್ರಭುಲಿಂಗ ಸ್ವಾಮಿಗಳು, ಸೇತುವೆ ಮಠದ ಶ್ರೀ ಸಹಜಾನಂದ ಸ್ವಾಮಿಗಳು.
ಬಿಲಿಗೆರೆ ಹುಂಡಿ ಮಠದ ಶ್ರೀ ಗುರುಸ್ವಾಮಿಗಳು, ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಎಸ್ ಎಂ ಆರ್ ಪ್ರಕಾಶ್, ನಿವೃತ್ತಿ ಶಿಕ್ಷಕ ಶಂಬುದೇವನಪುರ ಪುಟ್ಟಬುದ್ದಿ, ಸುಗಂಧರಾಜು, ಮರಿಸ್ವಾಮಿ, ಶಿವಕುಮಾರ್,ದೊಡ್ಡನ ಹುಂಡಿ ನಂಜುಂಡಸ್ವಾಮಿ,ಮುಡುಕುತೊರೆ, ಶಂಭುದೇವನಪುರ ಮತ್ತು ದೊಡ್ಡನ ಹುಂಡಿ ಗ್ರಾಮಗಳ ಗೌಡ್ರುಗಳು ಯಜಮಾನರುಗಳು ಸೇರಿದಂತೆ ಕಲ್ಲು ಮಠದ ಅಪಾರ ಭಕ್ತರು ಇದ್ದರು.