ಮಂಡ್ಯ: ಜಿಲ್ಲಾದ್ಯಂತ ಇರುವ ದೇವಸ್ಥಾನಗಳಿಗೆ ಸಾರ್ವಜನಿಕರ ಭೇಟಿ ನೀಡಬಾರದು. ಕೆಲವು ದೇವಸ್ಥಾನಗಳಲ್ಲಿ ನಡೆಯುವ ಅರಕೆ ರೂಪದ ಔತಣವನ್ನು ರದ್ದು ಪಡಸಲಾಗಿದೆ. ಎಂದು ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಆದೇಶ ಹೊರಡಿಸಿದ್ದಾರೆ.
ಜಿಲ್ಲಾದ್ಯಂತ ಮಾ. 31ರ ವರೆಗೆ ಸಂಪೂರ್ಣ ನಿಷೇಧ. ಜತೆಗೆ ಕೊರೊನಾ ವೈರಸ್ ಬಗ್ಗೆ ಜಿಲ್ಲಾಡಳಿತ ಕಟ್ಟು ನಿಟ್ಟಿನ ಕ್ರಮ ವಹಿಸಿದೆ. ಜಿಲ್ಲೆಯಲ್ಲಿ ಇಲ್ಲಿಯವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲಾ. ಮುಂದಿನ ಎರಡು ವಾರ ಬಹಳ ಜಾಗೃತಿ ವಹಿಸಲಾಗುವುದು.ಕೊರೊನಾ ವೈರಸ್ ಎರಡನೇ ಹಂತದಿಂದ ಮೂರನೇ ಹಂತಕ್ಕೆ ಕಾಲಿಡುತ್ತಿದೆ. ಈ ಸಂದರ್ಭದಲ್ಲಿ ಅತಿ ಹೆಚ್ಚು ಜನರಿಗೆ ಕಾಯಿಲೆ ಅರಡುವ ಸಾಧ್ಯತೆ ಇದೆ. ಹೆಚ್ಚು ಜನಸಂದಣಿ ಇರುವ ಸ್ಥಳಕ್ಕೆ ಯಾರು ಭೇಟಿ ನೀಡಬಾರದು ಎಂದು ತಿಳಿಸಿದ್ದಾರೆ.
ಗ್ರಾಮಾಂತರ ಪ್ರದೇಶಗಳಲ್ಲಿ ಜಾಗೃತಿ
ಕೊರೊನಾ ವೈರಸ್ ಬಗ್ಗೆ ಅತೀ ಹೆಚ್ಚು ಜಾಗರೂಕತೆ ವಹಿಸಲಾಗಿದೆ. ಹೀಗಾಗಲೇ ಕಾಯಿಲೆಯ ಪ್ರಮಾಣ ಕಡಿಮೆ ಯಾಗಿದೆ. ಭಾರತ ಸರ್ಕಾರ ಹಾಗೂ ರಾಜ್ಯ ಸರ್ಕಾರ ತೆಗೆದು ಕೊಂಡಿರುವ ಕಠಿಣ ಶಿಸ್ತು ಕ್ರಮದಿಂದ ಕಾಯಿಲೆ ನಿಯಂತ್ರಣ ಮಾಡಲು ಸಾಧ್ಯವಾಗಿದೆ. ಹೊರ ದೇಶದಿಂದ ಬಂದಿರುವವರನ್ನ ಹೋಂ ಕ್ವಾರಂಟಿನಲ್ಲಿಡಲಾಗಿದೆ. ಇಲ್ಲಿಯವರೆಗೆ 45ಜನರನ್ನ ಹೋಂ ಕ್ವಾರಂಟಿನಲ್ಲಿಡಲಾಗಿದೆ. ಅವರ ಮೇಲೆ ಸಂಪೂರ್ಣವಾಗಿ ನಿಗವಹಿಸಲಾಗಿದೆ. ಮಂಡ್ಯದಲ್ಲಿ ಒಂದು ಪ್ರಕರಣ ಬರಬಾರದು ಎಂದು ಕಟ್ಟು ನಿಟ್ಟಾಗಿ ಜಿಲ್ಲಾಡಳಿತ ನಿಗ ವಹಿಸಿದೆ ಎಂದರು.
ಇಂದಿನಿಂದ ಜಿಲ್ಲಾದ್ಯಂತ ಕೋಳಿ ಮಾರಾಟ ನಿಷೇಧ
ಮೈಸೂರಿನ ಕುಂಬಾರ ಕೊಪ್ಪಲಿನಲ್ಲಿ ಹಕ್ಕಿ ಜ್ವರ ಪತ್ತೆಯಾಗಿದೆ. ಕೇರಳದ ಬಂದಂತಹ ಕೋಳಿಯಿಂದ ಹಕ್ಕಿ ಜ್ವರ ಪತ್ತೆಯಾಗಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹರಡಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಮೂರು ದಿನಗಳಿಂದ ಶ್ರೀರಂಗಪಟ್ಟಣದಲ್ಲಿ ಕೋಳಿಗಳ ಸಾಗಣೆಗೆ ನಿರ್ಬಂಧ ಹೇರಲಾಗಿತ್ತು. ಇಂದಿನಿಂದ ಜಿಲ್ಲಾದ್ಯಂತ ಕಟ್ಟು ನಿಟ್ಟಿನ ನಿರ್ಬಂಧ ಹೇರಲಾಗಿದೆ. ಕೊಕ್ಕರೆ ಬೆಳ್ಳೂರಿನಲ್ಲಿರುವ ಪಕ್ಷಿಗಳಲ್ಲಿ ಹಕ್ಕಿ ಜ್ವರದ ಬಗ್ಗೆ ಪಶುಸಂಗೋಪನೆ ಅಧಿಕಾರಿಯೊಂದಿಗೆ ಚರ್ಚಿಸಲಾಗಿದೆ. ಪಕ್ಷಿಧಾಮಗಳಲ್ಲಿ ಹಕ್ಕಿ ಜ್ವರದ ಲಕ್ಷಣ ಕಂಡುಬಂದಿಲ್ಲಾ. ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶುಚಿತ್ವ ಕಾಪಾಡಿಕೊಳ್ಳಬೇಕು. ಸುತ್ತಮುತ್ತಲಿನ ಕೋಳಿಗಳ ಮೇಲೆ ನಿಗ ಹಿಡಲಿಕೆ ಕ್ರಮ ವಹಿಸಲಾಗಿದೆ ಎಂದು ವಿವರಿಸಿದರು.
ಮಂಡ್ಯದಲ್ಲಿ ಹಕ್ಕಿ ಜ್ವರದ ಭೀತಿ ಇಲ್ಲಾ
ಮುಂದಿನ ಎರಡು ವಾರ ಬಹಳ ಜಾಗುರುಕತೆಯಿಂದ ಇರಬೇಕು. ಎಲ್ಲರೂ ಸಹಕರಿಸಿ ಮಂಡ್ಯವನ್ನ ಸಂರಕ್ಷಿಸಿ ಎಂದು ಮನವಿ ಮಾಡಿದ ಜಿಲ್ಲಾಧಿಕಾರಿಗಳು. ಕೆ.ಆರ್.ಪೇಟೆಯಿಂದ ಹೊರ ರಾಜ್ಯಕ್ಕೆ ಖಾಸಗಿ ಬಸ್ ಸಂಚರಿಸುತ್ತಿರುವ ಹಿನ್ನೆಲೆ ಹೊರ ರಾಜ್ಯಗಳಿಂದ ಬರುತ್ತಿರುವ ಬಸ್ ಗಳನ್ನ ತಪಾಸಣೆ ಮಾಡುವಂತೆ ಸೂಚಿಸಲಾಗಿದೆ. ಜ್ವರ ಮತ್ತು ಇತರೆ ಲಕ್ಷಣಗಳು ಕಂಡು ಬಂದಲ್ಲಿ ಅಂತವರನ್ನ ಹೋಂ ಕ್ವಾರಂಟಿನಲ್ಲಿಡಲಿಕೆ ಸೂಚಿಸಲಾಗಿದೆ. ವಾಹನ ಮಾಲೀಕರೊಂದಿಗೆ ಮಾತನಾಡಿ ತುರ್ತುಸ್ಥಿತಿ ಇದ್ರೆ ಮಾತ್ರ ಬಸ್‌ಗಳನ್ನು ಚಾಲನೆ ಮಾಡುವಂತೆ ಇಲ್ಲದಿದ್ದರೆ ಸ್ವಲ್ಪ ದಿನಗಳ ಕಾಲ ಮುಂದೂಡಲು ನಿರ್ದೇಶಿಸಲಾಗುವುದು,ಎಂದು ಜಿಲ್ಲಾಧಿಕಾರಿ ವೆಂಕಟೇಶ್ ತಿಳಿಸಿದರು.