ಗದಗ: ಶಿರಹಟ್ಟಿ ಮತ್ತು ಬನ್ನಿಕೊಪ್ಪ ರೇಷ್ಮೆ ನೂಲು ಬಿಚ್ಚಾಣಿಕೆ ಘಟಕಗಳಲ್ಲಿ ರೇಷ್ಮೆ ಗೂಡು ಖರೀದಿಸುವ ರೀಲರ್ಗಳು ಖರೀದಿಸಿದ ಗೂಡಿನಿಂದ ರೇಷ್ಮೆ ನೂಲು ಬಿಚ್ಚಾಣಿಕೆ ಹಾಗೂ ಅದರ ವಹಿವಾಟು ಮತ್ತು ಸಾಗಾಣಿಕೆ ಮಾಡಲು ಏ.4ರಿಂದ 14ರ ವರೆಗೆ ಷರತ್ತುಗಳೊಂದಿಗೆ ಜಿಲ್ಲಾಧಿಕಾರಿಗಳು ಅನುಮತಿ ನೀಡಿದ್ದಾರೆ.
ರೇಷ್ಮೆ ನೂಲು ಬಿಚ್ಛಾಣಿಕೆ ಘಟಕಗಳಲ್ಲಿ ರೈತರು ಆಗಮಿಸಿದ್ದಲ್ಲಿ ಕಡ್ಡಾಯವಾಗಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಮತ್ತು ಒಬ್ಬರಿಂದ ಮತ್ತೊಬ್ಬರ ಮಧ್ಯೆ ಒಂದು ಮೀಟರ ಅಂತರವಿರುವಂಎ ಗೆರೆ ಎಳೆದು ಅಂತರ ಕಾಯ್ದುಕೊಳ್ಳಬೇಕು.
ನೂಲು ಬಿಚ್ಛಾಣಿಕ ಘಟಕಗಳಲ್ಲಿ ನೈರ್ಮಲ್ಯ ಮತ್ತು ಶುಚಿತ್ವವನ್ನು ಕಾಪಾಡಿಕೊಳ್ಳುವುದು, ಸರಕಾರದಿಂದ ಕಾಲ-ಕಾಲಕ್ಕೆ ನೀಡುವ ನಿರ್ದೇಶನಗಳನ್ನು ಕಡ್ಡಾಯವಾಗಿ ಪಾಲಿಸುವುದು,ರೇಷ್ಮೆ ನೂಲು ಬಿಚ್ಛಾಣಿಕೆ ಘಟಕಗಳಲ್ಲಿ ಸುರಕ್ಷಿತ ವಸ್ತ್ರಗಳನ್ನು ಉಪಯೋಗಿಸಿ ರೋಗಾಣು ಹರಡದಂತೆ ನೋಡಿಕೊಳ್ಳಬೇಖು.
ಅಲ್ಕೋಹಾಲ ಮಿಶ್ರಿತ ದ್ರಾವಣ ಹಾಗೂ ಸೋಪಿನಿಂದ ಕೈಗಳನ್ನು ಮೇಲಿಂದ ಮೇಲೆ ತೊಳೆದುಕೊಳ್ಳುವುದು, ಕೆಮ್ಮುವಾಗ ಅಥವಾ ಸೀನುವಾಗ ಮೂಗು ಮತ್ತು ಬಾಯಿಯನ್ನು ಕರವಸ್ತ್ರ ಅಥವಾ ಟಿಶ್ಯು ಪೇಪರನಿಂದ ಅಡ್ಡವಾಗಿ ಮುಚ್ಚಿಕೊಳ್ಳಬೇಕು.
ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದು ಶಿಕ್ಷಾರ್ಹ,ರೇಷ್ಮೆ ನೂಲು ಬಿಚ್ಛಾಣಿಕೆ ಘಟಕಗಳಲ್ಲಿ ನೆಗಡಿ, ಕೆಮ್ಮು ಮತ್ತು ಜ್ವರ ಇರುವ ರೋಗಿಗಳಿಗೆ ಪ್ರವೇಶವಿಲ್ಲ, ನೆಗಡಿ, ಕೆಮ್ಮು ಮತ್ತು ಜ್ವರದ ಲಕ್ಷಣಗಳಿದ್ದರೆ ಕೂಡಲೇ ಸ್ವಯಂ ಪ್ರೇರಿತವಾಗಿ ವೈದ್ಯಕೀಯ ಪರೀಕ್ಷೆಗೆ ಒಳಪಡಬೇಖು.
ಕೊರೊನಾ ವೈರಸ್ ಬಗ್ಗೆ ಯಾವುದೇ ಅನುಮಾನಾಸ್ಪದ ಪ್ರಕರಣಗಳು ಕಂಡುಬಂದಲ್ಲಿ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆಗೆ ಮಾಹಿತಿ ನೀಡಲು ಕೋರಿದೆ, ಈ ಷರತ್ತುಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ತಪ್ಪಿದ್ದಲ್ಲಿ ಅಂತಹ ತಪ್ಪಿತಸ್ಥರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಆದೇಶಿಸಿದ್ದಾರೆ.