NEWSನಮ್ಮರಾಜ್ಯರಾಜಕೀಯ

10 ಕೋಟಿ ರೂ.ಗೆ ಇಂಧನ ಇಲಾಖೆ ಮಾರಾಟವಾಗಿದೆ: ಪೆನ್ ಡ್ರೈವ್ ಹಿಡಿದುಕೊಂಡು ಬಂದ ಎಚ್‌ಡಿಕೆ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಇಂಧನ ಇಲಾಖೆ ಟ್ರಾನ್ಸ್ ಫರ್ ಆಗಿದೆ. 10 ಕೋಟಿ ರೂ.ಗೆ ನಿನ್ನೆ ಬಿಕರಿಯಾಗಿದೆ. ನಗರ ಅಭಿವೃದ್ಧಿ ಇಲಾಖೆ ಇಲ್ಲ. ಇಲ್ಲಿರೋದು ನಗದು ಅಭಿವೃದ್ಧಿ ಇಲಾಖೆ ಎಂದು ಕಾಂಗ್ರೆಸ್ ಸರ್ಕಾರದ ನಡೆಯ ವಿರುದ್ಧ ಆರೋಪ ಮಾಡಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ನನ್ನ ಬಳಿ ದಾಖಲೆ ಇದೆ ಅಂತಾ ಪೆನ್ ಡ್ರೈವ್ ಪ್ರದರ್ಶನ ಮಾಡಿದರು. ಶರ್ಟ್ ಜೇಬಿನಿಂದ ಪೆನ್ ಡ್ರೈವ್ ತೆಗೆದುಕೊಂಡು ಕೈಯಲ್ಲಿ ಹಿಡಿದುಕೊಂಡು ಬಂದ ಅರುವ, ವರ್ಗಾವಣೆ ದಂಧೆಯ ಆಡಿಯೋ ಇದೆ ಎಂದು ಹೇಳುವ ಮೂಲಕ ಮತ್ತೊಂದು ಬಾಂಬ್ ಸಿಡಿಸಿದರು.

KST ಟ್ಯಾಕ್ಸ್ ನಾನ್ ಇಟ್ಕೊಂಡಿಲ್ಲ. ತಾಜ್ ವೆಸ್ಟೆಂಡ್‍ದ್ದು ಬಾಕಿ ಬಿಲ್ ಕಾಂಗ್ರೆಸ್‍ಗೆ ಕಳಿಸಿದರ ಎಂದು ಪ್ರಶ್ನಿಸಿದರು. ನಾನೇನು ಬೀದಿಲಿ ಹೋಗುವವನಾ?. 2-3 ಲಕ್ಷ ರೂಪಾಯಿ ಖರ್ಚು ಮಾಡುವ ಯೋಗ್ಯತೆ ನನಗಿಲ್ವಾ? ಬ್ಲ್ಯೂಫಿಲ್ಮ್‍ಂ ಅನ್ನು ಟೆಂಟ್‌ನಲ್ಲಿ ತೋರಿಸಿ ಬಂದವನಲ್ಲ ನಾನು ಎಂದು ವಾಗ್ದಾಳಿ ನಡೆಸಿದರು.

ಮಂಗಳವಾರ ಮಂಡ್ಯದಲ್ಲಿ ವರ್ಗಾವಣೆ ಆಯ್ತಲ್ಲ. ತನಿಖೆಗೊಳಪಟ್ಟವರು, ಅಮಾನತು ಆದವರನ್ನು ಮತ್ತೆ ತೆಗೆದುಕೊಳ್ಳುತ್ತಾರೆ. ಲಾಟರಿ ದಂಧೆ ನಡೆಸಿದವರನ್ನು ಆಚೆ ಕಳಿಸಿದ್ದೇನೆ. ಈಗಲೂ ನಾನು ತಾಜ್ ವೆಸ್ಟೆಂಡ್‍ಗೆ ಹೋಗ್ತೀನಿ. ನಾನೇನ್ ಕಾಂಗ್ರೆಸ್ ನವರನ್ನು ಕೇಳ್ಕೊಂಡು ಹೋಗಬೇಕಾ?. ಪರಿಹಾರದ ದುಡ್ಡಲ್ಲಿ ಮಜಾ ಮಾಡಿದವರು ನೀವು ಎಂದು ಗರಂ ಆದರು.

ಸಮಯ ಬರಲಿ ಪೆನ್ ಡ್ರೈವ್ ಬಿಡುಗಡೆ ಮಾಡ್ತೀನಿ. ಮೈ ಕೈ ಪರಚಿಕೊಳ್ಳುವುದು ಬೇಡ ಅಂತಾ ಗುಂಡೂರಾವ್ ಹೇಳಿದರಲ್ಲ, ನಾನೇಕೆ ಮೈ ಕೈ ಪರಚಿಕೊಳ್ಳಲಿ ಎಂದು ಪ್ರಶ್ನಿಸಿದರು. ಸೋತಾಗ್ಲೂ ಜನರ ಕಷ್ಟ-ಸುಃಖ ಕೇಳಿದ್ದೇವೆ. ನನ್ನ ಆಸ್ತಿಯ ಬಗ್ಗೆ ತನಿಖೆ ಮಾಡಲಿ. ರಾಜಕೀಯಕ್ಕೆ ಬರುವ ಮುಂಚೆ ಎಷ್ಟಿತ್ತು?. ಈಗ ಎಷ್ಟಿದೆ ಎಂದು ತನಿಖೆ ಮಾಡಿ ಎಂದು ಸವಾಲೆಸೆದರು.

ಇನ್ನು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ನನ್ನ ಬಗ್ಗೆ ಒಳ್ಳೆಯ ಮಾತಾನಾಡಿದ್ದಾರೆ. ಯಾರ್ಯಾರು ನನ್ನ ಜತೆ ರಾಜ್ಯದ ಸಂಪತ್ತು ಉಳಿಸಲು ಕೈ ಜೋಡಿಸ್ತಾರೋ ಅವರಿಗೆ ಸ್ವಾಗತ ಕೋರುತ್ತೇನೆ ಎಂದು ಎಚ್‍ಡಿಕೆ ಹೇಳಿದರು.

ಸುರಂಗ ಮಾಡೋಕೆ ಹೋಗಿ ಬೆಂಗಳೂರನ್ನು ಸಮಾಧಿ ಮಾಡಿದೀರಿ, ಈಗಾಗಲೇ ಅಭಿವೃದ್ಧಿ ವಿಚಾರದಲ್ಲಿ ಸಮಾಧಿಯಾಗಿದೆ. ಅಂಬೇಡ್ಕರ್ ಹೆಸರು ಹೇಳಿಕೊಂಡು ಲೂಟಿ ಮಾಡುತ್ತಿದ್ದೀರಾ. ಬೆಂಗಳೂರು ಸಮಸ್ಯೆಗೆ ವೈಜ್ಞಾನಿಕ ರೀತಿಯಲ್ಲಿ ಕೆಲಸ ಮಾಡಿ. ಸುರಂಗ ಮಾಡಿಸೋಕೆ ಹೋಗಿ ಬೆಂಗಳೂರು ಹಾಳು ಮಾಡಬೇಡಿ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರಿಗೂ ಕುಮಾರಸ್ವಾಮಿ ಟಾಂಗ್ ಕೊಟ್ಟರು.

Leave a Reply

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಹಿಂದಿನಿಂದ ವೇಗವಾಗಿ ಬಂದ ಕಾರು ಮುಂದೆ ಹೋಗುತ್ತಿದ್ದ ಕಾರ್‌ ಮೇಲೇರಿತು! ರೈತ ನಾಯಕ ಕುರುಬೂರು ಶಾಂತಕುಮಾರ್‌ಗೆ ಬೆಂಗಳೂರಿನಲ್ಲಿ ಚಿಕಿತ್ಸೆ: ಸಿಎಂ ಸಿದ್ದರಾಮಯ್ಯ ಮಹಾಕುಂಭ ಮೇಳಕ್ಕೆ ತೆರಳುತ್ತಿದ್ದ 18 ಮಂದಿ ದೆಹಲಿ ರೈಲು ನಿಲ್ದಾಣದಲ್ಲಿ ಕಾಲ್ತುಳಿತಕ್ಕೆ ಸಿಲುಕಿ ಮೃತ ಮಳೆ ನೀರು ಕೊಯ್ಲಿನಿಂದ ಅಂತರ್ಜಲ ವೃದ್ಧಿ: ಕೃಷಿ ಇಲಾಖೆ ಉಪ ನಿರ್ದೇಶಕಿ ಗಾಯತ್ರಿ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ನೇಮಕಕ್ಕೆ ಅರ್ಜಿ ಆಹ್ವಾನ ಬಿಬಿಎಂಪಿ: ಕಸ ಬಿಸಾಡುವ ಸ್ಥಳ ನಿರ್ಮೂಲನೆ ಜತೆ ಜೆತೆಗೆ ಸ್ವಚ್ಛತಾ ಅಭಿಯಾನ KSRTC ರಿಯಾಯಿತಿ ದರದ ಪಾಸ್‌ ಇದ್ದರೂ ತಾರತಮ್ಯತೆ: ನಿವೃತ್ತರಾದ ಮೇಲೆ ಅಧಿಕಾರಿಗಳಿಗೆ ಬಡತನ- ನೌಕರರಿಗೆ ಸಿರಿತನ !! ಪಂಜಾಬ್‌ನಲ್ಲಿ ಕುರುಬೂರು ಶಾಂತಕುಮಾರ್ ಇದ್ದ ಕಾರು ಅಪಘಾತ: ಆಸ್ಪತ್ರೆಗೆ ದಾಖಲು ಬಿಬಿಎಂಪಿ: 1.84 ಲಕ್ಷ ಬೀದಿ ನಾಯಿಗಳಿಗೆ "ಸಂಯುಕ್ತ ಲಸಿಕೆ" ಹಾಕುವ ಗುರಿ- ತುಷಾರ್ ಗಿರಿನಾಥ್ ಮೈಕ್ರೋಫೈನಾನ್ಸ್ ಸಂಸ್ಥೆಗಳ ಕಿರುಕುಳ ನಿಯಂತ್ರಣಕ್ಕೆ ಸರ್ಕಾರಿ ಆಧ್ಯಾದೇಶ ಜಾರಿ