ಬೆಂಗಳೂರು: ರಾಜ್ಯದ 11 ನಗರಸಭೆ, 17 ಪುರಸಭೆ ಹಾಗೂ 20 ಪಟ್ಟಣ ಪಂಚಾಯಿತಿಗಳಲ್ಲಿ ಸೋಲಾರ್ ಬೀದಿ ದೀಪ ಅಳವಡಿಸಲಾಗಿದೆ ಎಂದು ಪೌರಾಡಳಿತ, ತೋಟಗಾರಿಕೆ ಹಾಗೂ ರೇಷ್ಮೆ ಸಚಿವ ನಾರಾಯಣ ಗೌಡ ತಿಳಿಸಿದರು.
ಶುಕ್ರವಾರ ವಿಧಾನಸಭೆಯಲ್ಲಿ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಕೆ.ಎಂ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿ ಮಾತನಾಡಿ, ರಾಜ್ಯದಲ್ಲಿ ಪ್ರಸ್ತುತ 59 ನಗರಸಭೆಗಳು, 116 ಪುರಸಭೆಗಳು ಹಾಗೂ 95 ಪಟ್ಟಣ ಪಂಚಾಯಿತಿಗಳಿವೆ. ಅವುಗಳಲ್ಲಿ 11 ನಗರಸಭೆ, 17 ಪುರಸಭೆ ಹಾಗೂ 20 ಪಟ್ಟಣ ಪಂಚಾಯಿತಿಗಳಲ್ಲಿ ಭಾಗಶಃ ಸೋಲಾರ್ ಬೀದಿ ದೀಪಗಳನ್ನು ಅಳವಡಿಸಲಾಗಿದೆ ಎಂದು ಸಭೆ ಗಮನಕ್ಕೆತಂದರು.
ರಾಜ್ಯದಲ್ಲಿ ಪ್ರಸ್ತುತ 48 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಅಂದಾಜು 2060 ಸೋಲಾರ್ ಬೀದಿ ದೀಪಗಳನ್ನು ಅಳವಡಿಸಲಾಗಿದ್ದು, ಇವುಗಳ ಉಪಯೋಗದಿಂದ, ವಾರ್ಷಿಕ ಅಂದಾಜು 2,59,404 ಯೂನಿಟ್ಸ್ ಉಳಿತಾಯವಾಗಬಹುದಾಗಿದ್ದು, ಇದರ ವಾರ್ಷಿಕ ಉಳಿತಾಯದ ಒಟ್ಟು ಮೊತ್ತ ಸುಮಾರು 13.61 ಲಕ್ಷ ರೂ.ಗಳು ಎಂದು ಅಂದಾಜಿಸಿದೆ ಎಂದು ವಿವರಿಸಿದರು.
ಪ್ರತಿ ಸೋಲಾರ್ ಬೀದಿ ದೀಪಗಳಿಗೆ, ಬೀದಿ ದೀಪದ ಸಾಮಥ್ರ್ಯಕ್ಕನುಗುಣವಾಗಿ ಪ್ರತ್ಯೇಕವಾಗಿ ಸೋಲಾರ್ ಪ್ಯಾನೆಲ್‌ಗಳನ್ನು ಅಳವಡಿಸುತ್ತಿದ್ದು ಮತ್ತು ಸದರಿ ಪ್ಯಾನಲ್‍ನ ಸಾಮರ್ಥ್ಯವು ಕಡಿಮೆ ಪ್ರಮಣದ್ದಾಗಿರುವುದರಿಂದ ಹಾಗೂ ಸುರಕ್ಷತೆ ದೃಷ್ಟಿಯಿಂದ ಅವುಗಳು ನೇರವಾಗಿ ವಿದ್ಯುತ್ ಗ್ರಿಡ್‍ಗೆ ಸಂಪರ್ಕಿತವಾಗಿಲ್ಲ ಆದ್ದರಿಂದ ಅವುಗಳಿಗೆ ಪತ್ಪತ್ತಿಯಾದ ಹೆಚ್ಚುವರಿ ವಿದ್ಯುತ್ ನೇರವಾಗಿ ಕೈಗಾರಿಕೆಗಳಿಗೆ ಅಥವಾ ರೈತನ ಕೃಷಿ ವಿದ್ಯುತ್ ಪಂಪ್‍ಸೆಟ್ಗಳಿಗೆ ಸರಬರಾಜು ಮಾಡಲು ಬರುವುದಿಲ್ಲ. ಆದರೆ ಸೋಲಾರ್ ಬೀದಿ ದೀಪಗಳು ಗ್ರಿಡ್‍ನ ವಿದ್ಯುತ್‍ನ್ನು ಉಪಯೋಗಿಸದೇ ಇರುವುದರಿಂದ ಸದರಿ ಬೀದಿ ದಿಪಗಳಿಗೆ ಉಪಯೋಗಿಸಬಹುದಾದ ವಿದ್ಯುತ್ ಪ್ರಮಾಣದಷು ವಿದ್ಯುಚ್ಛಕ್ತಿಯೂ ಇಂಧನ ಇಲಾಖೆಗೆ ಉಳಿತಾಯವಾಗುತ್ತದೆ. ಸದರಿ ಉಳಿತಾಯವಾದ ವಿದುತ್‍ನ್ನು ಕೈಗಾರಿಕೆಗಳು ಮತ್ತು ರೈತರ ಕೃಷಿ ಪಂಪ್‍ಸೆಟ್‍ಳಿಗೆ ಉಪಯೋಗಿಸಲ್ಪಡುತ್ತಿದೆ ಎಂದು ಹೇಳಿದರು.