Search By Date & Category

NEWSದೇಶ-ವಿದೇಶನಮ್ಮರಾಜ್ಯಸಿನಿಪಥ

ದುಬೈನಲ್ಲಿ ಹುಟ್ಟು ಹಬ್ಬ ಆಚರಿಸಿಕೊಂಡ ಯಶ್‌ ಜತೆ ₹400 ಕೋಟಿ ನಿರ್ಮಾಪಕ

ವಿಜಯಪಥ ಸಮಗ್ರ ಸುದ್ದಿ

ದುಬೈ:  ಕೆಲವೇ ಕೆಲವು ಆಪ್ತರ ಜತೆ ಇಂದು ದುಬೈನಲ್ಲಿ ರಾಕಿಂಗ್ ಸ್ಟಾರ್ ಯಶ್ ತಮ್ಮ ಹುಟ್ಟು ಹಬ್ಬವನ್ನುಆಚರಿಸಿಕೊಂಡಿದ್ದಾರೆ.

ಪತ್ನಿ ರಾಧಿಕಾ ಪಂಡಿತ್ ಕುಟುಂಬದ ಜತೆ ಎರಡು ದಿನಗಳ ಹಿಂದೆಯಷ್ಟೇ ದುಬೈಗೆ ಹೋಗಿರುವ ಯಶ್, ಅಲ್ಲಿಯೇ ಈ ಬಾರಿ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.

ಇತ್ತ ಯಶ್ ಅವರ ಹೊಸ ಸಿನಿಮಾ ಬಗ್ಗೆ 6-7 ತಿಂಗಳಿಂದ ಹೊಸ ಹೊಸ ಸುದ್ದಿಗಳು ಬರುತ್ತಲೇ ಇವೆ. ಆದರೆ ಅವು ಬಂದ ವೇಗದಲ್ಲೇ ಹುಸಿಯಾಗುತ್ತಿವೆ. ಈ ನಡುವೆಯೇ ಅವರ ಹೊಸ ಸಿನಿಮಾದ ಅಚ್ಚರಿಯ ಸಂಗತಿಯೊಂದು ಹೊರ ಬಿದ್ದಿದ್ದು, ಮುಂದಿನ ಸಿನಿಮಾ ಬಜೆಟ್ ಬರೋಬ್ಬರಿ ₹400 ಕೋಟಿ ಎಂದು ಹೇಳಲಾಗುತ್ತಿದೆ. ಈ ಪ್ರಮಾಣದಲ್ಲಿ ಹಣ ಹೂಡಿಕೆ ಮಾಡುತ್ತಿರುವವರು ಯಾರು ಎಂದುಕೊಳ್ಳುತ್ತಿದ್ದಂತೆ ಥಟ್‌ ಅಂತ ಕೆವಿಎನ್ ಸಂಸ್ಥೆ ಎಂದೂ ಕೂಡ ಹೇಳಲಾಗುತ್ತಿದೆ.

ಅದು ನಿಜನಾ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಂತೆ ಕೆವಿಎನ್ ಪ್ರೊಡಕ್ಷನ್‌ನ ವೆಂಕಟ್ ಕೋಣಂಕಿ ನಾರಾಯಣ್ ಅವರು ಯಶ್ ಜತೆ ಕಾಣಿಸಿಕೊಂಡಿದ್ದಾರೆ. ದುಬೈನಲ್ಲಿ ಆಚರಿಸಿಕೊಂಡ ಹುಟ್ಟು ಹಬ್ಬದ ಪಾರ್ಟಿಯಲ್ಲಿ ವೆಂಕಟ್ ಕೂಡ ಭಾಗಿಯಾಗಿ ಶುಭ ಹಾರೈಸಿದ್ದಾರೆ. ಇದೆಲ್ಲವನ್ನು ಗಮನಿಸಿದರೆ ಇವರೇ ಮುಂದಿನ ಸಿನಿಮಾದ ನಿರ್ಮಾಪಕರು ಎನ್ನುವುದು ಬಹುತೇಕ ಖಚಿತ ಎಂಬಂತಾಗುತ್ತಿದೆ.

ಇನ್ನು ಯಶ್ ಅವರ 19ನೇ ಸಿನಿಮಾ ದಕ್ಷಿಣದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್‌ನಲ್ಲಿ ಎಂಬವರ್ತಮಾನ ಗಾಂಧಿನಗರದಲ್ಲಿ ಬಲವಾಗಿಯೇ ಕೇಳಿ ಬರುತ್ತಿದ್ದಕ್ಕೆ ಇದು ಇನ್ನಷ್ಟು ಪುಷ್ಠಿ ನೀಡಿದೆ ಎಂದೇ ಹೇಳಲಾಗುತ್ತಿದೆ.

ಈ ಹಿಂದೆ ಯಶ್, ಗೋವಾದ ಮುಖ್ಯಮಂತ್ರಿಗಳನ್ನು ಭೇಟಿಯಾದಾಗ ಇದೇ ವೆಂಕಟ್ ಕೂಡ ಜತೆಗಿದ್ದರು. ಅವತ್ತೇ ಒಂದು ಸುಳಿವನ್ನೂ ಅವರು ಬಿಟ್ಟುಕೊಟ್ಟಿದ್ದರು.

ಈಗ ಪದೇಪದೆ ಯಶ್ ಜತೆ ವೆಂಕಟ್ ಕಾಣಿಸಿಕೊಳ್ಳುತ್ತಿರುವುದು ಸ್ವತಃ ಯಶ್ ಅವರೇ ಹೇಳಿದಂತೆ ಮುಂದಿನ ದಿನಗಳಲ್ಲಿ ದೊಡ್ಡ ಸುದ್ದಿಯನ್ನೇ ಅವರ ಅಭಿಮಾನಿಗಳಿಗೆ ಕೊಡಲಿದ್ದಾರೆ. ಆ ದೊಡ್ಡ ಸುದ್ದಿಯಲ್ಲಿ ವೆಂಕಟ್ ಅವರ ಹೆಸರೂ ಇರಲಿದೆಯೇ ಎನ್ನುವುದು ಸದ್ಯಕ್ಕಿರುವ ಕುತೂಹಲ.

Leave a Reply

error: Content is protected !!