NEWSದೇಶ-ವಿದೇಶ

78ನೇ ಸ್ವಾತಂತ್ರ ದಿನಾಚರಣೆ: ದೇಶ ಬಲಪಡಿಸುವ ಮೂಲಕ ದೊಡ್ಡ ಸುಧಾರಣೆಗೆ ಬದ್ಧ – ಪ್ರಧಾನಿ ಮೋದಿ

ವಿಜಯಪಥ ಸಮಗ್ರ ಸುದ್ದಿ

ನ್ಯೂಡೆಲ್ಲಿ: ನಮ್ಮ ದೇಶದ ಜನರ ಜೀವನ ಬದಲಾಯಿಸುವ ಮತ್ತು ದೇಶವನ್ನು ಇನ್ನಷ್ಟು ಬಲಪಡಿಸುವ ಮೂಲಕ ದೊಡ್ಡ ಸುಧಾರಣೆ ತರುವುದಕ್ಕೆ ನಾವು ಬದ್ಧರಿದ್ದೇವೆ. ಈ ನಡುವೆ ನಮಗೆ ರಾಷ್ಟ್ರವೇ ಮೊದಲು ಎಂದು  ಪ್ರತಿಜ್ಞೆ ಮಾಡಿದರು.

78ನೇ ಸ್ವಾತಂತ್ರ ದಿನಾಚರಣೆ ಹಿನ್ನೆಲೆಯಲ್ಲಿ ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿ ಬಳಿಕ ದೇಶವನ್ನುದ್ದೇಶಿ ಮಾತನಾಡಿದರು.

ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನೇ ಸಮರ್ಪಣೆ, ಸಂಘರ್ಷ ಮಾಡಿದ ಅಗಣಿತ ಸ್ವಾತಂತ್ರ್ಯ ಹೋರಾಟಗಾರರ ಸ್ಮರಣೆ ಮಾಡುವ ಶುಭ ದಿನ ಎಂದ ಅವರು, ಸುಧಾರಣೆಗಳಿಗೆ ನಮ್ಮ ಬದ್ಧತೆ ಗುಲಾಬಿ ಪತ್ರಿಕೆಯ ಸಂಪಾದಕೀಯಕ್ಕಾಗಿ ಅಲ್ಲ. ದೇಶವನ್ನು ಬಲಿಷ್ಠಗೊಳಿಸುವುದು ಎಂದು ನಾನು ದೇಶವಾಸಿಗಳಿಗೆ ಭರವಸೆ ನೀಡಲು ಬಯಸುತ್ತೇನೆ ಎಂದರು.

ಇನ್ನು ತಜ್ಞರು ಅಥವಾ ಬೌದ್ಧಿಕ ಚರ್ಚಾ ಕ್ಲಬ್‌ಗಳನ್ನು ತೃಪ್ತಿಪಡಿಸಲು ಸರ್ಕಾರವು ವ್ಯಾಪಕವಾದ ಸುಧಾರಣೆಗಳನ್ನು ಜಾರಿಗೆ ತಂದಿಲ್ಲ. ದೇಶವನ್ನು ಪ್ರಗತಿಯತ್ತ ಕೊಂಡೊಯ್ಯುವ ‘ನೇಷನ್ ಫಸ್ಟ್’ ಪ್ರತಿಜ್ಞೆಯೇ ನಮ್ಮ ಆದ್ಯತೆ ಎಂದು ತಿಳಿಸಿದರು.

ದೇಶದ ರಕ್ಷಣೆ ಮತ್ತು ನಿರ್ಮಾಣಕ್ಕೆ ಪೂರ್ಣ ಮನಸ್ಸಿನಿಂದ, ಬದ್ಧತೆಯಿಂದ ರೈತರು ಮತ್ತು ಯುವಕರು ಕೆಲಸ ಮಾಡುತ್ತಿದ್ದಾರೆ. ನಾನು ಎಲ್ಲರಿಗೂ ಗೌರವ ಪೂರ್ವಕವಾಗಿ ನಮಸ್ಕರಿಸುತ್ತೇನೆ. ಅವಿರತ ಹೋರಾಟದಿಂದ ಸ್ವಾತಂತ್ರ್ಯ ಬಂದಿದೆ. ಅಂದು 40 ಕೋಟಿ ಜನರು ಒಂದು ಕನಸು, ಸಂಕಲ್ಪದೊಂದಿಗೆ ಹೋರಾಡಿದರು. ಅವರದೇ ರಕ್ತ ನಮ್ಮಲ್ಲಿ ಇದೆ ಎನ್ನುವ ಹೆಮ್ಮೆ ಇದೆ ಎಂದರು.

ಇನ್ನು 40 ಕೋಟಿ ಜನರು ವಿಶ್ವದ ಬಲಿಷ್ಠ ಸರ್ಕಾರವನ್ನು ಕಿತ್ತೊಗೆಯಿತು. 140 ಕೋಟಿ ಜನರು ಸಂಕಲ್ಪದೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಹೊರಟರೇ ಏನೇ ಸವಾಲು ಬಂದರೂ, ಎಲ್ಲವನ್ನೂ ಮೀರಿ ನಾವು ಸಮೃದ್ಧ ಭಾರತ್, ವಿಕಸಿತ ಭಾರತ ಕನಸು ಪೂರ್ಣ ಮಾಡಬಹುದು ಎಂದು ಕರೆ ನೀಡಿದರು.

ಅಂದು ದೇಶಕ್ಕೆ ಸಾಯಲು ಜನರು ಕಟಿಬದ್ಧವಾಗಿದ್ದರು. ಅಂತೆಯೇ ನಾವು ಅಭಿವೃದ್ಧಿ ಭಾರತಕ್ಕೆ ಪ್ರತಿಬದ್ಧರಾಗಿರಬೇಕು. ವಿಕಸಿತ ಭಾರತಕ್ಕಾಗಿ ದೇಶದ ಜನರು ಸಾಕಷ್ಟು ಸಲಹೆ ನೀಡಿದ್ದಾರೆ. ದೇಶದ ಪ್ರತಿಯೊಬ್ಬರ ಕನಸು, ಸಂಕಲ್ಪ ಅದರೊಳಗಿದೆ. 2047 ಸ್ವಾತಂತ್ರ್ಯ ದಿನಾಚರಣೆ 100 ವರ್ಷಕ್ಕಾಗಿ ಸಾಕಷ್ಟು ಸಲಹೆ ನೀಡಿದ್ದಾರೆ. ಕೆಲವು ಜನರು ಉತ್ಪಾದನೆ ಹಬ್, ಸ್ಕಿಲ್ ಸಿಟಿ, ಆತ್ಮ ನಿರ್ಭರ್, ಸಿರಿ ಧಾನ್ಯಗಳನ್ನು ಜನಪ್ರಿಯ ಮಾಡಲು ಸೇರಿ ಅನೇಕ ಸಲಹೆ ನೀಡಿದ್ದಾರೆ.

ಈ ನಡುವೆ ನ್ಯಾಯ ವಿಳಂಬದ ಹಿನ್ನೆಲೆ ನ್ಯಾಯ ವಲಯದಲ್ಲಿ ವೇಗಬೇಕು. ಭಾರತದ ಸ್ಪೇಸ್ ಸ್ಟೇಷನ್ ನಿರ್ಮಾಣ, ಗ್ರೀನ್ ಸಿಟಿ ನಿರ್ಮಾಣ, ಪಾರಂಪರಿಕ ಔಷಧ ಅಭಿವೃದ್ಧಿ ಹೀಗೆ ಸಾಕಷ್ಟು ಸಲಹೆಗಳಿವೆ. ನನ್ನ ದೇಶದ ಸಾಮಾನ್ಯ ನಾಗರಿಕರು ಈ ಸಲಹೆ ನೀಡಿದ್ದಾರೆ. ದೇಶದ ಜನರಲ್ಲಿ ಇಷ್ಟು ದೊಡ್ಡ ಕನಸ್ಸುಗಳಿವೆ. ಇದರಿಂದ ನನ್ನ ಮನಸ್ಸಿನಲ್ಲಿ ಆತ್ಮ ವಿಶ್ವಾಸ ಇನ್ನಷ್ಟು ಹೆಚ್ಚುತ್ತದೆ ಎಂದರು.

ಏನಿದೆ ಅದರಲ್ಲಿ ಜೀವನ ಮಾಡಿ, ಏನು ಹೆಚ್ಚಿನದು ಆಗುವುದಿಲ್ಲ ಎನ್ನುವ ಮನಸ್ಥಿತಿ ಜನರಲ್ಲಿ ಇತ್ತು. ಈ ಮಾನಸಿಕತೆ ಬದಲಿಸಬೇಕಿತ್ತು. ಜನರಲ್ಲಿ ಬದಲಾಗುವ ಮನಸ್ಸಿದ್ದರೂ, ಅವರನ್ನು ಬದಲಾಗಲು ಬಿಡಲಿಲ್ಲ. ನಮಗೆ ಅವಕಾಶ ಸಿಕ್ಕಾಗ ನಾವು ಬದಲಾವಣೆ ಆರಂಭಿಸಿದೆವು. ದೇಶದ ಜನರಲ್ಲಿ ಬದಲಾವಣೆ ತರುವ ಸಂಕಲ್ಪ ಮಾಡಿದೆವು. ನಮ್ಮ ಬದ್ಧತೆ ನಾಲ್ಕು ದಿನದ್ದಲ್ಲ, ದೇಶಕ್ಕೆ ನಿರಂತರ ಶಕ್ತಿ ತುಂಬುವುದು ಎಂದು ತಿಳಿಸಿದರು.

ಇನ್ನು ಕೊರೊನಾ ಸಂಕಷ್ಟ ಮರೆಯಲು ಸಾಧ್ಯವಿಲ್ಲ. ಕೋಟ್ಯಂತರ ಜನರಿಗೆ ಉಚಿತವಾಗಿ ಲಸಿಕೆ ನೀಡಲಾಯಿತು. ಭಯೋತ್ಪಾದಕರು ದಾಳಿ ಮಾಡಿ ಹೋಗುತ್ತಿದ್ದರು. ಈಗ ನಮ್ಮ ಸೇನೆ ಸರ್ಜಿಕಲ್ ಸ್ಟ್ರೈಕ್, ಏರ್ ಸ್ಟೈಕ್ ಮಾಡುತ್ತದೆ. ಇದನ್ನು ನೋಡಿ ನಮ್ಮ ಸೇನೆಯ ಬಗ್ಗೆ ಹೆಮ್ಮೆಯಾಗುತ್ತದೆ ಎಂದು ಸಂತಸ ವ್ಯಕ್ತಪಡಿಸಿದರು.

Leave a Reply

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಹಿಂದಿನಿಂದ ವೇಗವಾಗಿ ಬಂದ ಕಾರು ಮುಂದೆ ಹೋಗುತ್ತಿದ್ದ ಕಾರ್‌ ಮೇಲೇರಿತು! ರೈತ ನಾಯಕ ಕುರುಬೂರು ಶಾಂತಕುಮಾರ್‌ಗೆ ಬೆಂಗಳೂರಿನಲ್ಲಿ ಚಿಕಿತ್ಸೆ: ಸಿಎಂ ಸಿದ್ದರಾಮಯ್ಯ ಮಹಾಕುಂಭ ಮೇಳಕ್ಕೆ ತೆರಳುತ್ತಿದ್ದ 18 ಮಂದಿ ದೆಹಲಿ ರೈಲು ನಿಲ್ದಾಣದಲ್ಲಿ ಕಾಲ್ತುಳಿತಕ್ಕೆ ಸಿಲುಕಿ ಮೃತ ಮಳೆ ನೀರು ಕೊಯ್ಲಿನಿಂದ ಅಂತರ್ಜಲ ವೃದ್ಧಿ: ಕೃಷಿ ಇಲಾಖೆ ಉಪ ನಿರ್ದೇಶಕಿ ಗಾಯತ್ರಿ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ನೇಮಕಕ್ಕೆ ಅರ್ಜಿ ಆಹ್ವಾನ ಬಿಬಿಎಂಪಿ: ಕಸ ಬಿಸಾಡುವ ಸ್ಥಳ ನಿರ್ಮೂಲನೆ ಜತೆ ಜೆತೆಗೆ ಸ್ವಚ್ಛತಾ ಅಭಿಯಾನ KSRTC ರಿಯಾಯಿತಿ ದರದ ಪಾಸ್‌ ಇದ್ದರೂ ತಾರತಮ್ಯತೆ: ನಿವೃತ್ತರಾದ ಮೇಲೆ ಅಧಿಕಾರಿಗಳಿಗೆ ಬಡತನ- ನೌಕರರಿಗೆ ಸಿರಿತನ !! ಪಂಜಾಬ್‌ನಲ್ಲಿ ಕುರುಬೂರು ಶಾಂತಕುಮಾರ್ ಇದ್ದ ಕಾರು ಅಪಘಾತ: ಆಸ್ಪತ್ರೆಗೆ ದಾಖಲು ಬಿಬಿಎಂಪಿ: 1.84 ಲಕ್ಷ ಬೀದಿ ನಾಯಿಗಳಿಗೆ "ಸಂಯುಕ್ತ ಲಸಿಕೆ" ಹಾಕುವ ಗುರಿ- ತುಷಾರ್ ಗಿರಿನಾಥ್ ಮೈಕ್ರೋಫೈನಾನ್ಸ್ ಸಂಸ್ಥೆಗಳ ಕಿರುಕುಳ ನಿಯಂತ್ರಣಕ್ಕೆ ಸರ್ಕಾರಿ ಆಧ್ಯಾದೇಶ ಜಾರಿ