ವಿಜಯಪಥ ಸಮಗ್ರ ಸುದ್ದಿ
ಪಿರಿಯಾಪಟ್ಟಣ: ತಾಲೂಕಿನ ಪಂಚವಳ್ಳಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ನಸರತ್ ಬಾನು ಹಾಗೂ ಉಪಾಧ್ಯಕ್ಷರಾಗಿ ಸಿ.ಎಸ್.ರವಿ ಆಯ್ಕೆಗೊಂಡರು.
ಪಂಚವಳ್ಳಿ ಗ್ರಾ.ಪಂ.ಆವರಣದಲ್ಲಿ ಶನಿವಾರ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಸಾಮಾನ್ಯ ವರ್ಗಕ್ಕೆ ಮೀಸಲಿದ್ದ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ನಸರತ್ ಬಾನು ಮತ್ತು ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಎಸ್.ಎಸ್.ಸುರೇಶ್ ಮತ್ತು ಸಾಮಾನ್ಯ ವರ್ಗಕ್ಕೆ ಮೀಸಲಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಸಿ.ಎಸ್.ರವಿ ಹಾಗೂ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ನಂಜುಂಡಸ್ವಾಮಿ ನಾಮಪತ್ರ ಸಲ್ಲಿಸಿದ್ದರು.
ಪಂಚಾಯಿತಿಯಲ್ಲಿ ಒಟ್ಟು 21 ಸದಸ್ಯರ ಪೈಕಿ, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ನಸರತ್ ಬಾನು 13 ಮತಗಳನ್ನು ಪಡೆದು ಜಯಶೀಲಾರಾಗಿದ್ದು ಪ್ರತಿಸ್ಫರ್ಧಿ ಎಸ್.ಎಸ್.ಸುರೇಶ್ 8 ಮತಗಳನ್ನು ಪಡೆದು ಪರಾಭವಗೊಂಡರು.
ಅದೇ ರೀತಿ ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಸಿ.ಎಸ್.ರವಿ 12 ಮತಗಳನ್ನು ಪಡೆದು ಗೆಲುವು ಸಾಧಿಸಿದರೆ ಪ್ರತಿಸ್ಪರ್ಧಿ ನಂಜುಂಡಸ್ವಾಮಿ 09 ಮತಗಳನ್ನು ಪಡೆದು ಪರಾಭವಗೊಂಡಿದ್ದಾರೆ ಎಂದು ಚುನಾವಣಾಧಿಕಾರಿ ಎನ್.ಪ್ರಭು ಘೋಷಣೆ ಮಾಡಿದರು.
ಪಿಡಿಒ ವೀರಭದ್ರಶೆಟ್ಟಿ, ಸದಸ್ಯರಾದ ಮಂಜು, ಕೆ.ಎಸ್.ಪೂರ್ಣಿಮಾ, ಮಧುಕರ್, ಈರಮ್ಮ, ಫಷಿಯಾ ಬೇಗಂ, ಮಹದೇವ್, ರುಕ್ಮಿಣಿ, ಕಾಳೇಗೌಡ, ಸುನಂದ, ಮೇಘಾ, ಗೋವಿಂದರಾಜು, ಜ್ಯೋತಿ, ಬಿ,ಬಿ.ಸಾರಾ, ರೂಪಶ್ರೀ, ರವೀಂದ್ರ, ಕಮಲ, ಸುಬ್ರಹ್ಮಣ್ಯ, ಮುಖಂಡರಾದ ಲಕ್ಷ್ಮೇಗೌಡ, ಹಿಟ್ಗಳ್ಳಿ ಮಹದೇವ್, ರಫಿಕ್, ಕುಮಾರ್, ನಾಸಿರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.