Breaking NewsNEWSನಮ್ಮರಾಜ್ಯರಾಜಕೀಯ

ಕೊರೊನಾ ಮಹಾಮಾರಿ: ಬೆಡ್‌, ಔಷಧ ಸಿಗದೆ ಬೀಳುತ್ತಿವೆ ರಾಶಿ ರಾಶಿ ಹೆಣಗಳು

ವಿಜಯಪಥ ಸಮಗ್ರ ಸುದ್ದಿ

ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಕೊರೊನಾ ಸೋಂಕಿತರಿಗೆ ಸರಿಯಾದ ಔಷಧ ಮತ್ತು ಬೆಡ್‌ ವ್ಯವಸ್ಥೆ ಇಲ್ಲದೆ ದಿನಕ್ಕೆ ನೂರಾರು ಸೋಂಕಿತರು ರಾಜ್ಯದಲ್ಲಿ ಅಸುನೀಗುತ್ತಿದ್ದಾರೆ.

ಆದರೆ, ಈ ರೀತಿ ಕೋವಿಡ್‌ನಿಂದ ಮೃತಪಡುತ್ತಿದ್ದರೂ ಅದರ ಹೊಣೆಯನ್ನು ಹೊರಲು ಮಾತ್ರ ಸರ್ಕಾರದ ಯಾವುದೇ ಮಂತ್ರಿಮಹೋದಯರು ಹಾಗೂ ಅಧಿಕಾರಿಗಳು ಸಿದ್ಧರಿಲ್ಲ.

ಇದು ಹೀಗೆ ಮುಂದುವರಿದರೆ, ರಾಜ್ಯದ ಪ್ರತೀ ಹಳ್ಳಿಯ ರಸ್ತೆ ರಸ್ತೆಗಳಲ್ಲೂ ಮೃತದೇಹಗಳು ಅನಾಥವಾಗಿ ಬೀಳಲಿವೆ. ಹೀಗಾಗಿ ಈಗಲಾದರೂ ಸರ್ಕಾರ ಮತ್ತು ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು.

ಶೀಘ್ರದಲ್ಲೇ ಕೊರೊನಾ ಸೋಂಕಿತರಿಗೆ ಸರಿಯಾದ ಬೆಡ್‌ ವ್ಯವಸ್ಥೆ ಮತ್ತು ಔಷಧಗಳನ್ನು ಒದಗಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಜನರು ಈ ಸೋಂಕನ್ನು ಲೆಕ್ಕಿಸದೆ ಬೀದಿಗಿಳಿದು ಹೋರಾಟ ಮಾಡಲಿದ್ದಾರೆ.

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಮಹಾಮಾರಿ ಹೆಚ್ಚಾಗುತ್ತಿದ್ದು, ಲೆಕ್ಕಕ್ಕೆ ಸಿಗದಷ್ಟು ಮಂದಿ ಮೃತಪಡುತ್ತಿದ್ದಾರೆ. ಆದರೆ, ಸರ್ಕಾರ ಮತ್ತು ಸ್ಥಳೀಯ ಸಂಸ್ಥೆಗಳು ತಮಗೆ ಸಿಕ್ಕ ಮಾಹಿತಿಯನ್ನು ಮಾತ್ರ ನೀಡುತ್ತಿದ್ದು, ಇನ್ನುಳಿದ ಸಾವಿನ ಲೆಕ್ಕವನ್ನು ಮರೆ ಮಾಚುವ ಕೆಲಸವನ್ನು ಮಾಡುತ್ತಿವೆ.

ಒಂದು ಕಡೆ ಹಸಿವು, ಇನ್ನೊಂದು ಕಡೆ ಈ ಮಹಾಮಾರಿಯಿಂದ ಬಳಲುತ್ತಿರುವ ನಾಡಿನ ಜನರಿಗೆ ಸರಿಯಾದ ಆಸರೆ ಒದಗಿಸಬೇಕಾದ್ದು ಸರ್ಕಾರದ ಕರ್ತವ್ಯ. ಹೀಗಾಗಿ ಸರ್ಕಾರ ಮತ್ತು ಸ್ಥಳೀಯ ಆಡಳಿತ ಬಿಗಿ ಕ್ರಮ ಜರುಗಿಸಿ ರಾಜ್ಯದ ಪ್ರತೀ ಜನರಿಗೂ ಅರೋಗ್ಯ ಸೌಲಭ್ಯ ನೀಡುವಲ್ಲಿ ತೋರುತ್ತಿರುವ ಉದಾಸೀನ ನಡೆಯಿಂದ ಹೊರಬರಬೇಕಿದೆ.

Leave a Reply

error: Content is protected !!
LATEST
NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು