ವಿಜಯಪಥ ಸಮಗ್ರ ಸುದ್ದಿ
ಪಿರಿಯಾಪಟ್ಟಣ: ಕೊರೊನಾ ಎರಡನೇ ಅಲೆ ಬಹುಬೇಗ ಹರಡುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಲಸಿಕೆ ಪಡೆದು ಸರ್ವಜನಿಕ ಸ್ಥಳಗಳಲ್ಲಿ ಓಡಾಡುವ ಬದಲು ಮನೆಯಲ್ಲಿಯೇ ಸುರಕ್ಷಿತವಾಗಿರಬೇಕು ಎಂದು ಮಾಜಿ ಶಾಸಕ ಕೆ ವೆಂಕಟೇಶ್ ತಿಳಿಸಿದರು
ಪಟ್ಟಣದ ಆಸ್ಪತ್ರೆಯಲ್ಲಿ ಸೋಮವಾರ ಕೋವಿಸೀಲ್ಡ್ ಲಸಿಕೆ ಪಡೆದು ಮಾತನಾಡಿದರು.
ಜಗತ್ತು ಕಂಡು ಕೇಳರಿಯದ ರೀತಿಯಲ್ಲಿ ಕೊರೊನಾ ವೈರಸ್ ಆವರಿಸಿ ಜನರನ್ನು ಸಂಕಷ್ಟಕ್ಕೀಡಿತ್ತು. ಇತ್ತೀಚೆಗೆ ಲಸಿಕೆ ಬಂದ ನಂತರ ಜನತೆ ಭಯದಿಂದ ಹೊರಬಂದು ಚೇತರಿಸಿಕೊಳ್ಳುತ್ತಿರುವುದು ಕಂಡು ಬರುತ್ತಿತ್ತು.
ಆದರೆ ಈಗ ಆದರೆ ಕೊರೊನಾ ವೈರಸ್ ಎರಡನೇ ಅಲೆ ಸಾಗರೋಪಾದಿಯಲ್ಲಿ ಹರಡುವ ಮೂಲಕ ಮತ್ತೆ ಜನತೆಯನ್ನು ಸಂಕಷ್ಟಕ್ಕೆ ತಳ್ಳುತ್ತಿರುವುದು ಕಂಡು ಬರುತ್ತಿದೆ. ಈ ಹಿನ್ನೆಲೆಯಲ್ಲಿ ಸಾರ್ವನಜಿಕರು ಸ್ವಯಂ ಪ್ರೇರಿತವಾಗಿ ಮುಂದೆ ಬಂದು ವೈದ್ಯರ ಸಲಹೆ ಮತ್ತು ಅಗತ್ಯ ಚಿಕಿತ್ಸಾ ವಿಧಾನಗಳನ್ನು ಪಡೆಯುವಂತೆ ಸೂಚಿಸಿದರು.
ಕಾಂಗ್ರೆಸ್ ಮುಖಂಡರಾದ ಎಸ್.ಎನ್.ಭುಜಂಗ, ಬಿ.ಜೆ.ಬಸವರಾಜ್, ಮಹೇಂದ್ರ ಕುಮಾರ್, ತಾಲೂಕು ಆರೋಗ್ಯ ಅಧಿಕಾರಿ ಡಾ.ಶರತ್ ಬಾಬು, ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಜೆ.ಶ್ರೀನಿವಾಸ್, ಆಸ್ಪತ್ರೆಯ ಸಿಬ್ಬಂದಿಗಳಾದ ಅಣ್ಣೇಗೌಡ ಶೇಷಗಿರಿ ಇತರರು ಇದ್ದರು.