NEWSದೇಶ-ವಿದೇಶನಮ್ಮರಾಜ್ಯ

ಮೂರನೇ ಕೊರೊನಾ ಅಲೆ: ಮಕ್ಕಳಿಗೆ ಔಷಧ ಕೊಡುವ ಮುನ್ನಾ ಎಚ್ಚರ.. ಎಚ್ಚರ..

ವಿಜಯಪಥ ಸಮಗ್ರ ಸುದ್ದಿ

ವಿಜಯಪಥ ಸಮಗ್ರ ಸುದ್ದಿ
ನ್ಯೂಡೆಲ್ಲಿ: ಕೋವಿಡ್‌-19 ಎರಡನೇ ಅಲೆ ಮುಗಿದು ಮೂರನೇ ಅಲೆ ಅಕ್ಟೋಬರ್‌ನಲ್ಲಿ ಆರಂಭವಾಗಲಿದೆ ಎಂದು ತಜ್ಞರು ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ಆ ವೇಳೆ ಕೊರೊನಾ ಸೋಂಕಿಗೆ ಒಳಗಾಗುವ ಮಕ್ಕಳಿಗೆ ಚಿಕಿತ್ಸೆ ನೀಡುವ ವಿಚಾರವಾಗಿ ಕೇಂದ್ರ ಆರೋಗ್ಯ ಸೇವೆಗಳ ನಿರ್ದೇಶನಾಲಯ (DGHS) ನೂತನ ಮಾರ್ಗಸೂಚಿ ಹೊರಡಿಸಿದೆ.

ಮಕ್ಕಳಲ್ಲಿ ಸೋಂಕು ಕಾಣಿಸಿಕೊಂಡರೆ ಯಾವ ರೀತಿಯ ಚಿಕಿತ್ಸೆ ನೀಡಬೇಕು, ಗಂಭೀರ ಮತ್ತು ಸಾಧಾರಣ ಸೋಂಕಿಗೆ ಹೇಗೆ ಪ್ರತ್ಯೇಕ ಚಿಕಿತ್ಸಾ ವಿಧಾನ ಅನುಸರಿಸಬೇಕು, ಯಾವೆಲ್ಲಾ ಔಷಧಗಳನ್ನು ಮಕ್ಕಳಿಗೆ ನೀಡಬಾರು ಎನ್ನುವ ಬಗ್ಗೆ ಮಾಹಿತಿ ನೀಡಿದೆ.

ಪ್ರಸ್ತು ಕೊರೊನಾ ಎರಡನೇ ಅಲೆ ವಯಸ್ಕರನ್ನು ಇನ್ನಿಲ್ಲದಂತೆ ಕಾಡಿದೆ. ಈ ನಡುವೆಯೂ ಮೂರನೇ ಅಲೆಗೂ ಮುನ್ನವೇ ಮಕ್ಕಳಲ್ಲಿ ಸೋಂಕಿನ ಪ್ರಮಾಣ ಹೆಚ್ಚು ಕಾಣಿಸಿಕೊಳ್ಳುತ್ತಿರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಈ ಮಾರ್ಗಸೂಚಿಯನ್ನು ಪ್ರಕಟಿಸಲಾಗಿದೆ.

ಮಕ್ಕಳಲ್ಲಿ ಕೊರೊನಾ ಸೋಂಕು ದೃಢಪಟ್ಟರೂ ಯಾವುದೇ ಕಾರಣಕ್ಕೂ ರೆಮ್​ಡಿಸಿವಿರ್ ಬಳಕೆ ಮಾಡುವುದು ಬೇಡ ಎಂದು ಡಿಜಿಎಚ್​ಎಸ್​ ಸ್ಪಷ್ಟವಾಗಿ ತಿಳಿಸಿದೆ. ಅಲ್ಲದೇ, ಸ್ಟೀರಾಯ್ಡ್​ ಬಳಕೆಯ ಕುರಿತಾಗಿಯೂ ಎಚ್ಚರಿಸಿಲಾಗಿದ್ದು, ವೈದ್ಯರ ನಿರ್ದೇಶನವಿಲ್ಲದೇ ಸ್ಟೀರಾಯ್ಡ್ ಬಳಕೆಯನ್ನು ಮಾಡಲೇಬಾರದು. ಆಸ್ಪತ್ರೆಯಲ್ಲೂ ಮಕ್ಕಳಿಗೆ ಸ್ಟೀರಾಯ್ಡ್ ನೀಡುವಾಗ ಅನಿವಾರ್ಯತೆ ಇದೆಯೇ ಎಂದು ಗಮನಿಸಿ ಸೂಕ್ತ ಡೋಸ್​ ಮಾತ್ರ ಬಳಸಬೇಕು.ಇದರ ಹೊರತಾಗಿ ಮನೆಯಲ್ಲಿಯೇ ಇರಿಸಿ ಸ್ಟೀರಾಯ್ಡ್ ನೀಡುವುದನ್ನು ಖಡಾಖಂಡಿತವಾಗಿ ತಡೆಯಬೇಕು ಎಂದು ತಿಳಿಸಿದೆ.

ಬಹುಮುಖ್ಯವಾಗಿ ಆ್ಯಂಟಿಮೈಕ್ರೋಬಿಯಲ್ ಥೆರಪಿ ಮತ್ತು ಪ್ರೊಫಿಲ್ಯಾಕ್ಸಿಸ್ ಬಳಕೆ ಬಗ್ಗೆ ಪ್ರಸ್ತಾಪಿಸಲಾಗಿದ್ದು, ಗುಣಲಕ್ಷಣವಿಲ್ಲದ ಅಥವಾ ಕಡಿಮೆ ರೋಗ ಲಕ್ಷಣ ಇರುವ ಮಕ್ಕಳಿಗೆ ಈ ಔಷಧಗಳನ್ನು ನೀಡುವುದು ಬೇಡ. ಒಂದು ವೇಳೆ ಸೋಂಕು ಹೆಚ್ಚಳವಾಗಿದ್ದರೆ ಅಥವಾ ಗಂಭೀರವಾಗಿದ್ದರೆ ಸೂಕ್ತ ಚಿಕಿತ್ಸೆ ನಂತರ ವೈದ್ಯರ ಸಲಹೆಯ ಮೇರೆಗಷ್ಟೇ ನೀಡಬೇಕು ಎಂದು ಕಟ್ಟುನಿಟ್ಟಾಗಿ ಸೂಚಿಸಲಾಗಿದೆ.

ಗುಣಲಕ್ಷಣವಿಲ್ಲದ ಮತ್ತು ಕಡಿಮೆ ರೋಗ ಲಕ್ಷಣ ಇರೋ ಮಕ್ಕಳಿಗೆ ಸ್ಟಿರಾಯ್ಡ್​ ನೀಡುವುದನ್ನ ನಿರ್ಬಂಧಿಸುವ ಜತೆಗೆ, ಅಗತ್ಯವಿದ್ದರೆ ಮಾತ್ರ ಎಚ್​ಆರ್​ಸಿಟಿ ಮಾಡಿಸಲು ವೈದ್ಯರು ಸಲಹೆ ನೀಡಬೇಕು, ಅನಗತ್ಯವಾಗಿ ಎಚ್​ಆರ್​ಸಿಟಿ ಮಾಡಿಸಕೂಡದು ಎನ್ನುವುದನ್ನು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಕಡಿಮೆ ಗುಣಲಕ್ಷಣ ಹೊಂದಿರುವ ಮಕ್ಕಳಿಗೆ ಪ್ಯಾರಸಿಟಮಾಲ್ ನೀಡಬಹುದು. ಅದು ಕೂಡಾ ಮಕ್ಕಳ ದೇಹದ ತೂಕಕ್ಕೆ ತಕ್ಕಂತೆ ನೀಡಬೇಕಾಗಿದ್ದು, ಜ್ವರ ಹಾಗೂ ಗಂಟಲು ಸಮಸ್ಯೆ ನಿವಾರಿಸುವ ಸಲುವಾಗಿ ಪ್ರತಿ 4ರಿಂದ 6ಗಂಟೆಗೊಮ್ಮೆ ಕೊಡಬಹುದು ಎಂದು ಸಲಹೆ ನೀಡಲಾಗಿದೆ. ಅದರೊಂದಿಗೆ, ಕಫ ಕಾಣಿಸಿಕೊಂಡರೆ ಉಪ್ಪು ನೀರಿನಲ್ಲಿ ಬಾಯಿ ಮುಕ್ಕಳಿಸುವುದು ಉತ್ತಮ ಎಂದು ಹೇಳಲಾಗಿದೆ.

ಮಗುವಿನ ದೇಹದಲ್ಲಿ ಕೊರೊನಾ ಸೋಂಕು ತುಸು ಹೆಚ್ಚಿನ ಪ್ರಭಾವ ಬೀರುತ್ತಿದೆ ಎನ್ನುವುದು ಕಂಡುಬಂದ ಕೂಡಲೇ ಆಕ್ಸಿಜನ್​ ಥೆರಪಿ ನೀಡಬೇಕು. ಮಕ್ಕಳ ಆರೋಗ್ಯದ ಮೇಲೆ ನಿಗಾ ಇಡಲು ಪಲ್ಸ್ ಆಕ್ಸಿಮೀಟರ್ ಅಳವಡಿಸುವುದು ಉತ್ತಮ. 12ವರ್ಷ ಮೇಲ್ಪಟ್ಟ ಮಕ್ಕಳನ್ನು ಪೋಷಕರ ಉಸ್ತುವಾರಿಯಲ್ಲಿ 6 ನಿಮಿಷ ನಿರಂತರವಾಗಿ ನಡೆಸುವ ಮೂಲಕ ಮೂಲಕ ದೇಹದಲ್ಲಿ ಆಕ್ಸಿಜನ್ ಮಟ್ಟ ತಿಳಿದುಕೊಳ್ಳಬಹುದು ಅಲ್ಲದೇ ಯಾವುದೇ ಸಂದರ್ಭದಲ್ಲಿ ತೀವ್ರ ತೆರನಾದ ಉಸಿರಾಟದ ಸಮಸ್ಯೆ ಕಾಣಿಸಿಕೊಂಡರೆ ತಕ್ಷಣವೇ ಚಿಕಿತ್ಸೆ ದೊರಕಿಸಬೇಕು ಎನ್ನುವುದನ್ನೂ ತಿಳಿಸಲಾಗಿದೆ.

ಕೊರೊನಾ ಮೂರನೇ ಅಲೆ ಮಕ್ಕಳಿಗೆ ಮಾರಕವಾಗಬಹುದು ಎಂದು ಇಲ್ಲಿಯ ತನಕ ಕೆಲ ವರದಿಗಳು ತಿಳಿಸಿವೆ. ಆದರೆ, ಇದನ್ನು ನಿರಾಕರಿಸಿರುವ ಸರ್ಕಾರ ಅದನ್ನು ದೃಢವಾಗಿ ಹೇಳಲು ಯಾವುದೇ ಸ್ಪಷ್ಟ ಆಧಾರಗಳಿಲ್ಲ. ಆದರೂ, ಪರಿಸ್ಥಿತಿ ಹದಗೆಡದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಈಗಾಗಲೇ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ.

Leave a Reply

error: Content is protected !!
LATEST
NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು