ವಿಜಯಪಥ ಸಮಗ್ರ ಸುದ್ದಿ
ಮುಂಬೈ: ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಅಸಂಖ್ಯಾತ ಕುಟುಂಬಗಳಿಗೆ ಬಾಲಿವುಡ್ ನಟ ಸೋನು ಸೂದ್ ಭಾರತೀಯ ಆಡಳಿತ ಸೇವೆ (ಐಎಎಸ್) ಆಕಾಂಕ್ಷಿಗಳಿಗೆ ಉಚಿತ ತರಬೇತಿಗಾಗಿ ಸ್ಕಾಲರ್ ಶಿಪ್ ಘೋಷಿಸಿದ್ದಾರೆ.
ಈ ಮೂಲಕವೂ ತಮ್ಮ ಸಮಾಜ ಸೇವೆಗೆ ಹೆಸರಾಗಿದ್ದು, ಆದಾಗ್ಯೂ, ಅವರ ದತ್ತಿ ಉಪಕ್ರಮಗಳು ಕೇವಲ ಕೋವಿಡ್ ರೋಗಿಗಳಿಗೆ ಅಥವಾ ಸಾಂಕ್ರಾಮಿಕ ರೋಗದಿಂದ ಬಳಲುತ್ತಿರುವವರಿಗೆ ಮಾತ್ರ ಸೀಮಿತವಾಗಿಲ್ಲ ಎಂಬುವುದು ಇಲ್ಲಿ ದಾಖಲಾರ್ಹವಾಗಿದೆ.
ಹೌದು ಯುಪಿಎಸ್ಸಿಯಂತಹ ಪರೀಕ್ಷೆಗಳನ್ನು ಬರೆಯಲು ಐಎಎಸ್ ಗೆ ಸೇರಲು ಬಯಸುವ ವಿದ್ಯಾರ್ಥಿಗಳಿಗೆ ಉಚಿತ ಕೋಚಿಂಗ್ ಸ್ಕಾಲರ್ ಶಿಪ್ ಒದಗಿಸುವುದಾಗಿ ನಟ ತನ್ನ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ ‘ಸಂಭವಂ’ ಎಂಬ ಉಪಕ್ರಮದ ಬಗ್ಗೆ ಬರೆದುಕೊಂಡಿದ್ದಾರೆ. “ನೀವು ಐಎಎಸ್‌ಗೆ ತಯಾರಿ ನಡೆಸಲು ಬಯಸಿದರೆ, ನಾವು ನಿಮ್ಮ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತೇವೆ” ಎಂದು ಅವರು ಟ್ವೀಟ್ ಮಾಡಿದ್ದಾರೆ.
ಸೋನು ಸೂದ್ ಚಾರಿಟಿ ಫೌಂಡೇಶನ್ ವೆಬ್‌ಸೈಟ್ ಪ್ರಕಾರ, ಸ್ಕಾಲರ್ ಶಿಪ್ ಗಾಗಿ ನೋಂದಾಯಿಸಲು ಕೊನೆಯ ದಿನಾಂಕ 2021 ಜೂನ್ 30 ಆಗಿದ್ದು, ಆಕಾಂಕ್ಷಿಗಳು www.soodcharityfoundation.org ಗೆ ಭೇಟಿ ನೀಡುವ ಮೂಲಕ ಫೌಂಡೇಶನ್‌ನಲ್ಲಿ ನೋಂದಾಯಿಸಿಕೊಳ್ಳಬಹುದಾಗಿದೆ.
“ಜೀವನವು ನಿಮ್ಮನ್ನು ಆರ್ಥಿಕವಾಗಿ ಸಬಲವಾಗಿಸಿದಾಗ ನಿಮ್ಮ ಜೀವನ ಮಟ್ಟವನ್ನು ಹೆಚ್ಚಿಸಿಕೊಳ್ಳುವ ಬದಲು . ನಿಮ್ಮ ದಾನದ ಗುಣಮಟ್ಟವನ್ನು ಹೆಚ್ಚಿಸಿ ಎಂದು ಶನಿವಾರ ಪೋಸ್ಟ್ ಮಾಡಿದ ತನ್ನ ಟ್ವೀಟ್‌ನಲ್ಲಿ ಸೂದ್ ಹೇಳಿದ್ದಾರೆ.
ಇ-ರಿಕ್ಷಾ ಮತ್ತು ಇತರ ವಿಧಾನಗಳ ಮೂಲಕ ಉದ್ಯೋಗವನ್ನು ಒದಗಿಸುವುದರಿಂದ ಹಿಡಿದು ವೈದ್ಯಕೀಯ ಚಿಕಿತ್ಸೆಯನ್ನು ನೀಡುವವರೆಗೆ ಜನರಿಗೆ ಸಹಾಯ ಮಾಡಲು ಸೋನು ಹಲವಾರು ಬಗೆಯಲ್ಲಿ ನೆರವಾಗುತ್ತಾರೆ.
ಜತೆಗೆ ಕೊರೊನಾದಿಂದ ಪಾಲಕರನ್ನು ಕಳೆದುಕೊಂಡಿರುವ ಮಕ್ಕಳಿಗೆ ಉಚಿತ ಶಿಕ್ಷಣವನ್ನು ಸೋನು ಆಗಾಗ್ಗೆ ಪ್ರತಿಪಾದಿಸಿದ್ದಾರೆ. ಈ ತಿಂಗಳ ಆರಂಭದಲ್ಲಿ, ಮಾರಣಾಂತಿಕ ವೈರಸ್ ವಿರುದ್ಧದ ಯುದ್ಧದಲ್ಲಿ ಪಾಲಕರನ್ನು ಕಳೆದುಕೊಂಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣವನ್ನು ಒದಗಿಸಲು ಪಂಜಾಬ್‌ನ ಸಿಟಿ ವಿಶ್ವವಿದ್ಯಾಲಯದೊಂದಿಗಿನ ಸಹಯೋಗವನ್ನು ಅವರು ಘೋಷಿಸಿದ್ದರು.