ವಿಜಯಪಥ ಸಮಗ್ರ ಸುದ್ದಿ
ನ್ಯೂಯಾರ್ಕ್: ಷಿನ್ ಜಿಯಾಂಗ್ ಪ್ರಾಂತ್ಯದಲ್ಲಿ ಮುಸ್ಲಿಂರನ್ನು ಸೆರೆ ಹಿಡಿಯಲು ರಹಸ್ಯವಾಗಿ ಚೀನಾ ಬೃಹತ್ ಜೈಲುಗಳನ್ನು ನಿರ್ಮಿಸಿರುವ ಕುರಿತು ತನಿಖಾ ವರದಿ ಪ್ರಕಟಿಸಿದ ಭಾರತೀಯ ಮೂಲದ ಪತ್ರಕರ್ತೆ ಮೇಘಾ ರಾಜಗೋಪಾಲನ್ ಸೇರಿದಂತೆ ಮೂವರಿಗೆ ಅಮೆರಿಕದ ಪ್ರತಿಷ್ಠಿತ ಪುಲಿಟ್ಜರ್ ಪ್ರಶಸ್ತಿ ಸಂದಿದೆ.
ಮೇಘಾ ರಾಜಗೋಪಾಲನ್ ಅವರು ಬಝ್ ಫೀಡ್ ನ್ಯೂಸ್ ಎಂಬ ಸುದ್ದಿಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಟೆಂಪಾ ಬೇ ಟೈಮ್ಸ್ ನ ವರದಿಗಾರರಾದ ನೀಲ್ ಬೇಡಿ ಹಾಗೂ ಕ್ಯಾಥ್ಲಿನ್ ಮ್ಯಾಕ್ ಗ್ರೋರಿ ಸಹ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಷಿನ್ ಜಿಯಾಂಗ್ ಪ್ರಾಂತ್ಯದಲ್ಲಿ ರಹಸ್ಯವಾಗಿ ಜೈಲುಗಳನ್ನು ನಿರ್ಮಿಸಿ ಮತ್ತು ಸಾಮೂಹಿಕ ತಡೆ ಶಿಬಿರಗಳನ್ನು ಮಾಡಿ ಅದರಲ್ಲಿ ಮಕ್ಕಳು ಸೇರಿದಂತೆ ಲಕ್ಷಾಂತರ ಮುಸ್ಲಿಂರನ್ನು ಬಂಧಿಸಿಟ್ಟಿದ್ದ ವಿಚಾರವನ್ನು ಮೇಘಾ ರಾಜಗೋಪಾಲ್ ತಮ್ಮ ತನಿಖಾ ವರದಿಯಲ್ಲಿ ಬಹಿರಂಗಪಡಿಸಿದ್ದರು.