ಬೆಂಗಳೂರು: ಸಿಂಗಾಪುರದಲ್ಲಿ ರಾಜಕುಳ್ಳ, ಸ್ಯಾಂಡಲ್‌ವುಡ್‌ನ ಸಕಲಕಲಾವಲ್ಲಭ ಹಿರಿಯ ನಟ ನಮ್ಮ ಪ್ರೀತಿಯ ಕುಳ್ಳ ದ್ವಾರಕೀಶ್ ಅವರು ಗೌರವ ಡಾಕ್ಟರೇಟ್‌ಗೆ ಭಾಜನರಾಗಿದ್ದಾರೆ.
ಹಲವು ವರ್ಷಗಳ ಚಿತ್ರರಂಗದ ದ್ವಾರಕೀಶ್ ಅವರ ಕಲಾಸೇವೆ ಗುರುತಿಸಿ, ಬೆಂಗಳೂರು ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್ ಘೋಷಣೆ ಮಾಡಿದೆ.
ನಟ, ನಿರ್ದೇಶಕ, ನಿರ್ಮಾಪಕ, ಹೀಗೆ ಕನ್ನಡ ಚಲನಚಿತ್ರದ ಮೂಲಕ ಕಲಾಸೇವೆ ಸಲ್ಲಿಸಿರುವ ದ್ವಾರಕೀಶ್ ಅವರು ಗೌರವ ಡಾಕ್ಟರೇಟ್‌ಗೆ ಭಾಜನರಾಗಿರುವುದು ಅವರ ಕಲಾ ಸೇವೆಗೆ ಸಂದ ಗೌರವವಾಗಿದೆ.
ನೂರಾರು ಸಿನಿಮಾಗಳಲ್ಲಿ ನಟನೆ, 40ಕ್ಕೂ ಹೆಚ್ಚು ಸಿನಿಮಾಗಳ ನಿರ್ಮಾಣ ಮಾಡಿ ಭೇಸ್ ಎನಿಸಿಕೊಂಡಿರುವ ಸ್ಯಾಂಡಲ್‌ವುಡ್‌ನಲ್ಲಿ ಅವರೇ ಕರೆದುಕೊಳ್ಳುವ ಕುಳ್ಳ ದ್ವಾರಕೀಶ್‌ಗೆ ಬೆಂಗಳೂರು ವಿಶ್ವವಿದ್ಯಾಲಯ ತನ್ನ 57ನೇ ಘಟಿಕೋತ್ಸವದಂದು ಗೌರವ ಡಾಕ್ಟರೇಟ್ ಪ್ರದಾನ ಮಾಡಿ ಗೌರವಿಸಲಿದೆ.
ಚಲನಚಿತ್ರ ವಿಭಾಗದಲ್ಲಿ ದ್ವಾರಕೀಶ್, ಕಾನೂನು ಅಟಾರ್ನಿ ಹಾಗೂ ನ್ಯಾಯ ಸಲಹೆಗಾರರು ವಿಭಾಗ ಅಮರನಾಥ ಗೌಡ, ವರ್ಣ ಚಿತ್ರಕಾರರು ವಿಭಾಗ ಡಾ.ಟಿ. ಅನಿಲ್ ಕುಮಾರ್ ಸೇರಿದಂತೆ ಗೌರವ ಡಾಕ್ಟರೇಟ್ ಅನ್ನು ಡಿ.5ರಂದು ಜ್ಞಾನ ಭಾರತಿ ಆಡಿಟೋರಿಯಂನಲ್ಲಿ ನಡೆಯಲಿರುವ ಘಟಿಕೋತ್ಸವ ಸಮಾರಂಭದಲ್ಲಿ ಪ್ರದಾನ ಮಾಡಿ ಗೌರವಿಸಲಾಗುವುದು.