NEWSನಮ್ಮಜಿಲ್ಲೆನಮ್ಮರಾಜ್ಯ

ಸಾರಿಗೆ ನೌಕರರ ಧರಣಿ- ಬಸ್‌ ನಿಲ್ಲಿಸಿ ಹೋರಾಟ ಮಾಡಲು ಪರೋಕ್ಷವಾಗಿ ಅಧಿಕಾರಿಗಳ  ಸೂಚನೆ ಹಿನ್ನೆಲೆ ನಾಳೆ ತುರ್ತು ಸಭೆ ಕರೆದ ವೇದಿಕೆ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಪ್ರಮುಖವಾಗಿ ನಾಲ್ಕು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರ ಸಮಾನ ಮನಸ್ಕರ ವೇದಿಕೆ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಎರಡನೇ ದಿನವು ಮುಂದುವರಿದಿದೆ. ಆದರೆ, ಸಾರಿಗೆ ಸಚಿವರಾಗಲಿ ಇಲ್ಲ ಸಂಸ್ಥೆಗಳ ಆಡಳಿತ ಮಂಡಳಿಯವರಾಗಲಿ ಸ್ಪಂದಿಸದ ಕಾರಣ ನಾಳೆ (ಮಾ.3) ವೇದಿಕೆಯ ಪದಾಧಿಕಾರಿಗಳ ತುರ್ತು ಸಭೆ ಕರೆಯಲಾಗಿದೆ.

ಇನ್ನು ಸಾರಿಗೆ ನೌಕರರ ಧರಣಿಯ ಬಗ್ಗೆ ಈಗಲೂ ತಾತ್ಸಾರ ಮಾಡುತ್ತಿರುವ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಅಧಿಕಾರಿಗಳು ತೆರೆ ಮರೆಯಲ್ಲಿ ಕಸರತ್ತು ನಡೆಸುತ್ತಿದ್ದು, ಬಸ್‌ ನಿಲ್ಲಿಸಿ ಹೋರಾಟ ಮಾಡುವಂತೆ ಪರೋಕ್ಷವಾಗಿ ಬೆಂಬಲ  ಸೂಚಿಸುತ್ತಿದ್ದಾರೆ ಎನ್ನಲಾಗುತ್ತಿದ್ದು, ಈ ಹಿನ್ನೆಲೆ ನಾಳೆ ಬೆಳಗ್ಗೆ ತುರ್ತು ಸಭೆ ಕರೆಯಲಾಗಿದೆ ಎಂದು ತಿಳಿದು ಬಂದಿದೆ.

ಸರ್ಕಾರ ಮತ್ತು ಸಾರಿಗೆ ಸಚಿವರು ಕೊಟ್ಟ ಭರವಸೆಗಳು ಇನ್ನೂ ಭರವಸೆಗಳಾಗಿಯೇ ಉಳಿದಿವೆ. ಹೀಗಾಗಿ ನಮ್ಮ ಬೇಡಿಕೆ ಈಡೇರಿಸುವ ಪತ್ರದೊಂದಿಗೆ ಬರಬೇಕು ಎಂದು ನೌಕರರು ಪಟ್ಟು ಹಿಡಿದು ಧರಣಿ ನಡೆಸುತ್ತಿದ್ದಾರೆ. ಆದರೆ, ಈ ನಡುವೆ ಸರ್ಕಾರವೇ ಲಿಖಿತವಾಗಿ ಕೊಟ್ಟ ಭರವಸೆ ಈಡೇರಿಸದೆ ಮಾತು ತಪ್ಪಿದೆ.

ಇನ್ನು ಮುಖ್ಯಮಂತ್ರಿಗಳು ಮತ್ತು ಸಾರಿಗೆ ಸಚಿವರು ಮಾತು ಉಳಿಸಿಕೊಳ್ಳದೆ ಸಾರಿಗೆ ನೌಕರರಿಗೆ ದ್ರೋಹ ಬಗೆಯುತ್ತಿದ್ದಾರೆ. ಅಲ್ಲದೆ ನಮ್ಮ ಹೋರಾಟವನ್ನು ಹತ್ತಿಕ್ಕುವುದಕ್ಕೂ ತೆರೆ ಮರೆಯಲ್ಲೇ ದಾಳ ಉರುಳಿಸುತ್ತಿದ್ದಾರೆ. ಆದರೆ, ನಾವು ಅವರ ತಾಳಕ್ಕೆ ಮತ್ತು ದಾಳಕ್ಕೆ ಹೆದರುವ ಪ್ರಶ್ನೆಯೇ ಇಲ್ಲ. ಹೀಗಾಗಿ ಮುಂದಿನ ಹೋರಾಟವನ್ನು ಯಾವ ರೀತಿ ರೂಪಿಸಿಕೊಳ್ಳಬೇಕು ಎಂಬುದರ ಬಗ್ಗೆ ಚರ್ಚಿಸಲು ವೇದಿಕೆಯಿಂದ ಈ ಸಭೆ ಕರೆಯಲಾಗಿದೆ ಎಂದು ಸಮಾನ ಮನಸ್ಕರ ವೇದಿಕೆ ತಿಳಿಸಿದೆ.

ಇನ್ನು ತುರ್ತು ಸಭೆಯಲ್ಲಿ ಮಹತ್ವದ ನಿರ್ಧಾರ ತೆಗೆದುಕೊಳ್ಳುವ ಬಗ್ಗೆ ಅಂದರೆ ಇನ್ನು ಎರಡು ಮೂರು ದಿನಗಳಲ್ಲೇ ನಾಲ್ಕೂ ನಿಗಮಗಳ ಎಲ್ಲ ಡಿಪೋಗಳಲ್ಲೇ ಬಸ್‌ಗಳನ್ನು ನಿಲ್ಲಿಸಿ ಸ್ಥಳೀಯವಾಗಿ ಬೆಂಗಳೂರಿಗೆ ಬರದೆ ಧರಣಿ ಸತ್ಯಾಗ್ರಹ ನಡೆಸುವಂತಹ ತೀರ್ಮಾನ ತಗೆದುಕೊಳ್ಳುವ ಸಾಧ್ಯತೆ ಇದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.

ಈ ಬಾರಿ ಬೆಂಗಳೂರಿನಲ್ಲಿರುವ ನೌಕರರನ್ನು ಹೊರತು ಪಡಿಸಿ ರಾಜ್ಯಾದ್ಯಂತ ಇರುವ ಎಲ್ಲ ಡಿಪೋಗಳ ಮಟ್ಟದಲ್ಲೇ ಹೋರಾಟ ಮಾಡುವ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಮುಂದಾಗಲಿದ್ದಾರೆ. ಇನ್ನು ವಿಶೇಷವೆಂದರೆ ನೌಕರರ ಹೋರಾಟಕ್ಕೆ ಡಿಪೋ ಮತ್ತು ವಿಭಾಗೀಯ ಮಟ್ಟದ ಅಧಿಕಾರಿಗಳೇ ಸರ್ಕಾರದ ನಡೆಯಿಂದ ಬೇಸತ್ತಿದ್ದು, ನೌಕರರಿಗೆ ಪರೋಕ್ಷವಾಗಿ ಬೆಂಬಲ ನೀಡುವುದಕ್ಕೆ ನಿರ್ಧರಿಸಿದ್ದಾರೆ ಎಂಬ ಗುಸುಗುಸು ಕೂಡ ಕೇಳಿ ಬರುತ್ತಿದೆ.

ಕಳೆದ 2021ರ ಏಪ್ರಿಲ್‌ನಲ್ಲಿ ನಡೆದ ಮುಷ್ಕರದ ವೇಳೆ ನಾವೇ ತಪ್ಪು ಮಾಡಿ ನೌಕರರಿಗೆ ಕಿರಿಕಿರಿ ಉಂಟುಮಾಡಿದೆವು. ಅದರ ಫಲವಾಗಿ ನಾವು ಈವರೆಗೂ ವೇತನ ಹೆಚ್ಚಳವಿಲ್ಲದೆ ದುಡಿಯುತ್ತಿದ್ದೇವೆ. ಇನ್ನು ಐಎಎಸ್‌ ಮತ್ತು ಐಪಿಎಸ್‌ ಅಧಿಕಾರಿಗಳಿಗೆ ಈ ಹೋರಾಟದ ಅವಶ್ಯಕತೆ ಇಲ್ಲ. ಆದರೆ, ನಮಗೆ ವೇತನ ಹೆಚ್ಚಳವಾಗಬೇಕು ಎಂದರೆ ನಾವು ಕೂಡ ನೌಕರರಿಗೆ ಸಾಥ್‌ ನೀಡಬೇಕು ಎಂಬ ಬಗ್ಗೆ ಗೌಪ್ಯ ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.

ಇನ್ನು ಈ ಬಾರಿ ಬಸ್‌ ನಿಲ್ಲಿಸಿ ಹೋರಾಟಕ್ಕೆ ನೌಕರರು ಮುಂದಾದರೆ ಅವರ ವಿರುದ್ಧ ಕೇಸ್‌ ದಾಖಲಿಸುವ ಬದಲಿಗೆ ನಾವು ಕೂಡ ಅವರ ಪರವಾಗಿ ನಿಲ್ಲುವ ಕೆಲಸ ಮಾಡೋಣ. ಕಾರಣ ಸರ್ಕಾರ ಮತ್ತು ಆಡಳಿತ ಮಂಡಳಿ ಮಾತುಕೇಳಿ ಕಳೆದ 2020ರ ಜನವರಿಯಲ್ಲೇ ಆಗಬೇಕಿದ್ದ ವೇತನ ಹೆಚ್ಚಳವನ್ನು ಮಿಸ್‌ ಮಾಡಿಕೊಂಡಿದ್ದೇವೆ.

ಮತ್ತೆ ನಾವು ಸರ್ಕಾರ ಮತ್ತು ಆಡಳಿತ ಮಂಡಳಿಯ ಮಾತು ಕೇಳಿದರೆ ನಮಗೆ ಈ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಉಂಡೆನಾಮ ಹಾಕುವುದು ಗ್ಯಾರಂಟಿ. ಇನ್ನು ಹೊಸ ಸರ್ಕಾರ ಬಂದ ನಂತರ ಅವರು ನಾವು ಈಗ ಬಂದಿದ್ದೇವೆ ಈ ಬಗ್ಗೆ ಪರಿಶೀಲನೆ ಮಾಡುತ್ತೇವೆ 2020ರ ಜನವರಿಯಿಂದಲೇ ಕಾದಿರುವ ನಿಮಗೆ ಇನ್ನೊಂದು 2-3 ತಿಂಗಳು ಕಾಯುವುದಕ್ಕೆ ಆಗುವುದಿಲ್ಲವೇ ಎಂದು ಮತ್ತೆ ವೇತನ ಹೆಚ್ಚಳ ಮಾಡದೆ ಮುಂದಕ್ಕೆ ಹಾಕುತ್ತಾರೆ. ಇದು ನಮಗೆ ಬೇಕಾ ಎಂದು ಅಧಿಕಾರಿಗಳು ತಮಗೆ ತಾವೇ ಪ್ರಶ್ನೆ ಮಾಡಿಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

error: Content is protected !!
LATEST
ಡಿ.9ರಿಂದ ವಿಧಾನಮಂಡಳ ಅಧಿವೇಶನ, ಉಕ ಪ್ರಗತಿಗೆ ಒತ್ತು: ಸ್ಪೀಕರ್ ಖಾದರ್ ವಿವಿಧ ಬೇಡಿಕೆಗಳ  ಈಡೇರಿಸಿ ಆಗ್ರಹಿಸಿ ಇಪಿಎಸ್ ಪಿಂಚಣಿದಾರರ ಪ್ರತಿಭಟನೆ: ಅಧಿಕಾರಿಗಳ ವಿರುದ್ಧ ಆಕ್ರೋಶ ಸರ್ಕಾರದ ತಾತ್ಸಾರದಿಂದಾಗಿ ಆರ್ಥಿಕವಾಗಿ ಸಬಲವಾಗಿದ್ದರೂ ಸಂಕಷ್ಟದ ಪರಿಸ್ಥಿತಿ ತಲುಪಿದ KSRTC ಸಾರಿಗೆ ನಿಗಮಗಳು! KSRTC ಚಾಲನಾ ಸಿಬ್ಬಂದಿ ಕಾರ್ಮಿಕರಲ್ಲ ನೌಕರರು - ಹುದ್ದೆ ಅರಿವಿಲ್ಲದವರು ಕಾರ್ಮಿಕ ಪದ ಬಳಸುತ್ತಿದ್ದಾರೆ..! ಸಾರಿಗೆ ಸಿಬ್ಬಂದಿಗಳಿಗೆ ಮೋಸ ಮಾಡಿರುವ ನಿಮಗೆ ಯಾವ ನೈತಿಕತೆ ಇದೆ: ಬಿಜೆಪಿಗರ ತರಾಟೆಗೆ ತೆಗೆದುಕೊಂಡ ರಾಮಲಿಂಗಾರೆಡ್ಡಿ ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್... ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ