NEWSನಮ್ಮಜಿಲ್ಲೆಬೆಂಗಳೂರುಸಂಸ್ಕೃತಿ

ಜಾನಪದವೆಂಬ ತಾಯಿಬೇರಿನ ನೀರು ಜೀವವಾಹಿನಿ: ಜಾನದಪ ವಿದ್ವಾಂಸ ಎಂ.ಬೈರೇಗೌಡ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಜಾನಪದ ಜಗತ್ತಿನ ಎಲ್ಲ ಸಾಹಿತ್ಯ ಪ್ರಕಾರಗಳ ತಾಯಿಬೇರು ಎಂಬುದು ಕ್ಲೀಷೆಯ ವಿಚಾರವಾಗಿದ್ದರೂ ಪದೇ ಪದೇ ಅದೇ ವಿಚಾರವನ್ನು ನೆನಪಿಸಬೇಕಾದ ಅಗತ್ಯ ಹಿಂದೆಂದಿಗಿಂತಲೂ ಇಂದು ಅಗತ್ಯವಾಗಿದೆ. ತಾಯಿಬೇರಿನ ನೀರು ಕುಡಿದೇ ನಲಿಯುತ್ತಿರುವ ನಾವು ಮರಳಿ ಆ ಮೂಲಕ್ಕೆ ಹೋಗಿಯೇ ಅನುಭವಿಸಬೇಕು ಎಂದು ಜಾನದಪ ವಿದ್ವಾಂಸ ಎಂ. ಬೈರೇಗೌಡ ನುಡಿದರು.

ಅವರು ಕೃಷ್ಣಾಪುರದೊಡ್ಡಿಯ ಕೆ.ಎಸ್. ಮುದ್ದಪ್ಪ ಸ್ಮಾರಕ ಟ್ರಸ್ಟ್ ಸಾರ್ವಜನಿಕ ಗ್ರಂಥಾಲಯ ಇಲಾಖೆ ಸಹಯೋಗದಲ್ಲಿ ನಗರದ ಹಂಪಿನಗರ ಕೇಂದ್ರ ಗ್ರಂಥಾಲಯದಲ್ಲಿ ಕಳೆದ ಇಪ್ಪತ್ತು ವರ್ಷಗಳಿಂದ ಓದಿನರಮನೆಯಲ್ಲಿ ತಿಂಗಳ ಒನಪು ಎಂಬ ವಿಶಿಷ್ಟ ಕಾರ್ಯಕ್ರಮ ಸರಣಿಯ 179ನೇ ಗಾದೆಗೊಂದು ಪುಸ್ತಕ, ಒಗಟಿಗೊಂದು ಪುಸ್ತಕ ಬಹುಮಾನ ಎಂಬ ವಿನೂತನ ಕ್ವಿಜ್ ಕಾರ್ಯಕ್ರಮದಲ್ಲಿ ಮಾತನಾಡಿ ಗಾದೆ ಒಗಟುಗಳ ಮಹತ್ವ ತಿಳಿಸಿದರು.

ನಿಜಕ್ಕೂ ಪುಸ್ತಕ ಪ್ರೇಮಿಗಳು ಹೆಮ್ಮೆಪಡುವ ವಿಚಾರವಿದು. ಪುಸ್ತಕಗಳ ಒಳಹೂರಣ ಮಸ್ತಕಕ್ಕೆ ಇಳಿಯುವ ಕೆಲಸವಾದರೆ ಸಮಾಜ ಒಳ್ಳೇ ದಿಕ್ಕಿನಲ್ಲಿ ಸಾಗಲು ಸಾಧ್ಯ ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಂಪಿನಗರ ನಗರಕೇಂದ್ರ ಗ್ರಂಥಾಲಯ ಉಪನಿರ್ದೇಶಕಿ ಸಿ. ಪಾರ್ವತಮ್ಮ ಶ್ಲಾಘಿಸಿದರು.

ಓದುವ ಗೀಳು ನಮ್ಮ ಜೀವನದ ದಿಕ್ಕನ್ನೇ ಬದಲಿಸುತ್ತದೆ. ಸಮಾಜವನ್ನು ಸರಿಮಾರ್ಗದಲ್ಲಿ ಕೊಂಡೊಯ್ಯುವ ಶಕ್ತಿ ಪುಸ್ತಕಗಳಿಗಿದೆ. ಪುಸ್ತಕ ಸಂಸ್ಕೃತಿಯ ಪ್ರಚಾರ ಮತ್ತು ಪ್ರಸಾರಕ್ಕಾಗಿ ಇಂಥದ್ದೂ ಒಂದು ಕಾರ್ಯಕ್ರಮ ಮಾಡಿ ಯಶಸ್ವಿಯಾಗಬಹುದೆಂದು ಬೈರೇಗೌಡರು ತೋರಿಸಿಕೊಟ್ಟಿದ್ದಾರೆ ಎಂದರು.

ತಾವೇ ಸಂಗ್ರಹಿಸಿಕೊಂಡು ಬಂದ ಗಾದೆ, ಒಗಟುಗಳನ್ನು ಕೇಳುತ್ತ, ಉತ್ತರಿಸಿದವರಿಗೆ ಒಂದೊAದು ಅಮೂಲ್ಯ ಗ್ರಂಥಗಳನ್ನು ನೀಡುವ ಕೆಲಸವನ್ನು ಕ್ವಿಜ್ ಮಾಸ್ಟರ್ ಜಿ.ಪಿ. ರಾಮಣ್ಣ ನಿರ್ವಹಿಸಿದರು.

ಜಗತ್ತಿನ ಸಾವಿರಾರು ಬಗೆಯ ನಾಣ್ಯಗಳೂ, ನೋಟುಗಳು, ಸ್ಟಾಂಪುಗಳ ಸಂಗ್ರಾಹಕ ಕೆ. ವಿಶ್ವನಾಥ್ ನಿರ್ಣಾಯಕರಾಗಿದ್ದರು. ವಿದುಷಿ ವಿನುತಾ ಬೂದಿಹಾಲ್ ಅವರ ಶಿಷ್ಯವೃಂದ ಸುಗಮ ಸಂಗೀಯ ಕಾರ್ಯಕ್ರಮ ನಡೆಸಿಕೊಟ್ಟರು. ಮುನ್ನೂರಕ್ಕೂ ಹೆಚ್ಚು ಸ್ಪರ್ಧಾಳುಗಳು ಉತ್ಸಾಹದಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿ ನೂರೈವತ್ತಕ್ಕು ಹೆಚ್ಚು ಪುಸ್ತಕಗಳನ್ನು ಪಡೆದರು.

Leave a Reply

error: Content is protected !!
LATEST
NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು