NEWSನಮ್ಮಜಿಲ್ಲೆನಮ್ಮರಾಜ್ಯ

KSRTC: ಮುಖ್ಯಮಂತ್ರಿ, ಸಾರಿಗೆ ಸಚಿವರ ಮುಂದೆ ಬೇಡಿಕೆ ಮಂಡಿಸಿದ ಸಾರಿಗೆ ನೌಕರರು

ವಿಜಯಪಥ ಸಮಗ್ರ ಸುದ್ದಿ

ಜೈಪುರ್‌: ರಾಜಸ್ಥಾನ ರಾಜ್ಯ ರಸ್ತೆ ಸಾರಿಗೆ ನೌಕರರ ವೇತನ ಆಯೋಗದ ಮಾದರಿಯಲ್ಲಿ ಸಂಬಳ ಪಡೆಯುತ್ತಿದ್ದಾರೆ ಅಂದರೆ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರು ಅಗ್ರಿಮೆಂಟ್‌ ಮಾದರಿಯ ವೇತನ ಪಡೆಯುತ್ತಿದ್ದು, ಕಾರ್ಮಿಕ ಸಂಘಟನೆಗಳ ಬೇಜವಾಬ್ದಾರಿಯಿಂದ ಶೇ.50 ರಿಂದ ಶೇ.53 ಕಡಿಮೆ ವೇತನ ಪಡೆಯುತ್ತಿದ್ದಾರೆ.

ಇದನ್ನು ಕೆಲವರು ನಂಬಲು ಅಸಾಧ್ಯ ಎನ್ನಬಹುದು ಆದರೆ, ಇದೇ ಸತ್ಯ. ರಾಜಸ್ಥಾನ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ( RSRTC)ಯ ಒಬ್ಬ ತಾಂತ್ರಿಕ ಸಿಬ್ಬಂದಿ (ಮೆಕ್ಯಾನಿಕ್) ಅವರ 16ವರ್ಷ ಸೇವಾವಧಿಯಲ್ಲಿ 56,243 ರೂಪಾಯಿ ವೇತನ ಪಡೆಯುತ್ತಿದ್ದಾರೆ. ಅದೇ ಕೆಎಸ್‌ಅರ್‌ಟಿಸಿಯಲ್ಲಿ ಕೇವಲವ 27 ಸಾವಿರ ರೂಪಾಯಿ ಅಷ್ಟೇ ಬರುತ್ತಿದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ಮೆಕ್ಯಾನಿಕ್‌ಗಳಿಗೆ ಅಷ್ಟೇ ಇದು ಅನ್ವಯವಾಗುತ್ತಿಲ್ಲ ಚಾಲನಾ ಸಿಬ್ಬಂದಿಗೂ ಅನ್ವಯವಾಗುತ್ತದೆ. ಅದೂ ಕೂಡ 15-16 ವರ್ಷದಿಂದಲೂ ಸೇವೆ ಸಲ್ಲಿಸುತ್ತಿರುವವರಿಗೆ ಕೊಡುತ್ತಿರುವ ಪ್ರಸ್ತುತ ವೇತನ. ಅಂದರೆ ಈ ಬಗ್ಗೆ ಇಲ್ಲೇ ಲೆಕ್ಕಾಚಾರ ಹಾಕಿದರೂ ಕೂಡ ಸಾಮಾನ್ಯರಿಗೂ ಇದು ಅರ್ಥವಾಗುತ್ತದೆ. ಬೇರೆ ರಾಜ್ಯದ ಸಾರಿಗೆ ಸಿಬ್ಬಂದಿಗೂ ಮತ್ತು ಕರ್ನಾಟಕ ರಾಜ್ಯದ ಸಾರಿಗೆ ಸಿಬ್ಬಂದಿಗೂ ಬರುತ್ತಿರುವ ವೇತನದಲ್ಲಿ ಎಷ್ಟು ವ್ಯತ್ಯಾಸ ಇದೇ ಎಂಬುವುದು.

ಇನ್ನು ರಾಜ್ಯದಲ್ಲಿ ಅತ್ಯಂತ ಕಡಿಮೆ ವೇತನ ಪಡೆಯುತ್ತಿರುವ ಸರ್ಕಾರಿ ಅಥವಾ ಅರೆ ಸರ್ಕಾರಿ ನೌಕರರು ಇದ್ದಾರೆ ಎಂದರೆ ಅದು ಕೆಎಸ್‌ಆರ್‌ಟಿಸಿಯ ನಾಲ್ಕೂ ನಿಗಮಗಳ ಸಿಬ್ಬಂದಿ ಎಂದು ಪ್ರಸ್ತುತ ವೇತನ ಚೀಟಿ (Pay slip or Salary slip) ಸಹಿತ ಸಾಬೀತು ಮಾಡಬಹುದು.

ಇನ್ನು ನಮ್ಮ ರಾಜ್ಯದಲ್ಲೂ ಸಿಎಂ, ಸಚಿವರು, ಸರ್ಕಾರಿ ಅಧಿಕಾರಿಗಳ ಕಾರು ಚಾಲಕರು ತಿಂಗಳಿಗೆ 50ರಿಂದ 80 ಸಾವಿರ ರೂ.ವರೆಗೂ (ಅವರ 15-16 ವರ್ಷದ ಸೇವಾವಧಿಗೆ ) ವೇತನ ಪಡೆಯುತ್ತಿದ್ದಾರೆ. ಅದರೆ, ಸಾರಿಗೆ ನಿಗಮದಿಂದ ಕಳಿಸಿರುವ ಚಾಲಕರಿಗೆ ನಿಗಮದಲ್ಲಿ ನೀಡುತ್ತಿರುವ ವೇತನವೇ ಬರುತ್ತಿದೆ. ಇಲ್ಲಿಯೂ ಕೂಡ ವೇತನ ವ್ಯತ್ಯಾಸ ಅಥವಾ ತಾರತಮ್ಯತೆಯನ್ನು ನಾವು ನೋಡಬಹುದು.

ಅಂದರೆ, ಸರ್ಕಾರ ವಾಹನ ಚಾಲಕನಾಗಿ ಕೆಲಸಕ್ಕೆ ಸೇರಿದ ವ್ಯಕ್ತಿಗೆ ಒಳ್ಳೆ ವೇತನ ಸಿಗುತ್ತಿದೆ. ಜತೆಗೆ ಅವರು ಭಾರಿ ವಾಹನ ಓಡಿಸುವುದಿಲ್ಲ ಲಘು ವಾಹನಗಳನ್ನಷ್ಟೇ ಓಡಿಸುತ್ತಾರೆ. ಅಲ್ಲದೆ ಅವರಿಗೆ ನಿರಂತವಾಗಿ 8 ರಿಂದ 12 ಗಂಟೆಗಳ ಕಾಲ ಚಾಲನೆ ಮಾಡುವುದಿಲ್ಲ. ಆದರೆ, ಭಾರಿ ವಾಹನ ಓಡಿಸುವ ಅದರಲ್ಲೂ ನಿರಂತರವಾಗಿ 8ರಿಂದ12 ಗಂಟೆಗಳ ಕಾಲ ಚಾಲನೆ ಮಾಡುವ ಸಾರಿಗೆ ನೌಕರರಿಗೆ ವೇತನ ಕೊಡುವುದು ಮಾತ್ರ ತೀರ ಕಡಿಮೆ.

ಇನ್ನು ಈ ಎಲ್ಲದರ ಬಗ್ಗೆ ಪ್ರಸ್ತುತ ತಮಗೂ ತಿಳಿಸಿದ್ದರೂ ಕೂಡ ರಾಜ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ನೌಕರರಿಗೆ ಭರವಸೆ ಮಾತ್ರ ಈಗಲೂ ಕೊಡುತ್ತಲೇ ಕಾಲಕಳೆಯುತ್ತಿದ್ದಾರೆಯೇ ಹೊರತು ಅದನ್ನು ಕಾರ್ಯರೂಪಕ್ಕೆ ತರಲು ಮೀನಮೇಷ ಎಣಿಸುತ್ತಿದ್ದಾರೆ.

ಹೀಗಾಗಿ ನೌಕರರು ನಮಗೆ ಸರ್ಕಾರಿಗೆ ನೌಕರರಿಗೆ ಇರುವಂತೆ ವೇತನ ಆಯೋಗದ ಮಾದರಿಯಲ್ಲಿ ವೇತನ ನೀಡಬೇಕು. ಈ ಮೂಲಕ ನಾಲ್ಕೂ ವರ್ಷಕ್ಕೊಮ್ಮೆ ನಾವು ಅನುಭವಿಸುತ್ತಿರುವ ವಜಾ, ವರ್ಗಾವಣೆ, ಅಮಾನತು, ಪೊಲೀಸ್‌ ಕೇಸ್‌ ಹೀಗೆ ಹತ್ತಾರು ಕಿರುಕುಳಗಳಿಗೆ ಶಾಶ್ವತ ಪರಿಹಾರ ಬೇಕು ಎಂದು ನೂತನ ಸರ್ಕಾರದ ಮುಂದೆ ತಮ್ಮ ಬೇಡಿಕೆ ಮಂಡಿಸಿದ್ದಾರೆ.

Leave a Reply

error: Content is protected !!
LATEST
NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು