CrimeNEWSಬೆಂಗಳೂರು

ಬಾಂಬ್‌ ಬೆದರಿಕೆ ಮೇಲ್‌ ಬಂದಿರುವ ಈ 28 ಶಾಲೆಗಳಿಗೆ ಬಾಂಬ್​ ಪತ್ತೆ ದಳ, ನಿಷ್ಕ್ರಿಯ ದಳ ಭೇಟಿ ಪರಿಶೀಲನೆ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ರಾಜ್ಯ ರಾಜಧಾನಿಯ ಪ್ರಮುಖ 28 ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ ಮೇಲ್​ ಬಂದಿದ್ದು, ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಕರಲ್ಲಿ ಆತಂಕದ ಮನೆ ಮಾಡಿದೆ. ಪೊಲೀಸ್‌ ಆಯುಕ್ತ ದಯಾನಂದ್‌ ಅವರು   ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಚುರುಕಾಗಿದ್ದು, ಎಲ್ಲ ಶಾಲೆಗಳಿಗೆ ಬಾಂಬ್​ ಪತ್ತೆ ದಳ, ನಿಷ್ಕ್ರಿಯ ದಳವನ್ನು ಕಳುಹಿಸಿ ಪತ್ತೆಹಚ್ಚುವ ಕಾರ್ಯದಲ್ಲಿ ತೊಡಗಿದ್ದಾರೆ.

ಇನ್ನು ಈ ಬಗ್ಗೆ ಯಾವ ಪಾಲಕರು ಆತಂಕ ಪಡಬೇಡಿ ಎಂದು ಎಕ್ಸ್‌ ಮೂಲಕ ಮನವಿ ಮಾಡಿದ್ದಾರೆ. ಆದರೂ ಮುಂಜಾಗ್ರತಾ ಕ್ರಮವಾಗಿ 1000ಕ್ಕೂ ಹೆಚ್ಚು ಮಕ್ಕಳು ಕಲಿಯುತ್ತಿರುವ ಶಾಲೆಗಳ ಆಡಳಿತ ಮಂಡಳಿ ಸ್ವಯಂಪ್ರೇರಿತವಾಗಿಯೇ ರಜೆ ಘೋಷಣೆ ಮಾಡಿವೆ.

ಹೀಗಾಗಿ ನಗರದ ನೂರಾರು ಶಾಲೆಗಳು ಇಂದು ಬೆಳಗ್ಗೆ ಶಾಲೆಗೆ ಹಾಜರಾದ ಮಕ್ಕಳನ್ನು ವಾಪಸ್‌ ಕರೆದುಕೊಂಡು ಹೋಗುವಂತೆ ಪಾಲಕರಿಗೆ ಫೋನ್‌ ಕರೆ ಮಾಡಿ ತಿಳಿಸಿದರು ಎಂಬ ಮಾಹಿತಿ ಲಭ್ಯವಾಗಿದೆ.

ಇನ್ನು ಸಾವಿರಕ್ಕೂ ಕಡಿಮೆ ಮಕ್ಕಳಿರುವ ಶಾಲೆಗಳ ಆಡಳಿತ ಮಂಡಳಿ ಯಾವುದೇ ಬೆದರಿಕೆ ಮೇಲ್‌ ಬಂದಿಲ್ಲ ಎಂದು ಪಾಲಕರಿಗೆ ತಿಳಿಸಿದ್ದು, ನಿಮಗೆ ಭಯವಿದ್ದರೆ ನಿಮ್ಮ ಮಕ್ಕಳನ್ನು ಕರೆದುಕೊಂಡು ಹೋಗಬಹುದು ಎಂದು ಸಲಹೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಯಾವೆಲ್ಲ ಶಾಲೆಗಳಿಗೆ ಈ ಬೆದರಿಕೆ ಬಂದಿದೆ: 1) ಮಾರತಹಳ್ಳಿ ಮತ್ತು ಬಸವೇಶ್ವರ ನಗರ ಪಿಎಸ್- ನೇಷನ್ ಅಕಾಡೆಮಿ ಶಾಲೆ, 2)ಯಲಹಂಕ ನ್ಯೂ ಟೌನ್ – ನ್ಯಾಷನಲ್ ಪಬ್ಲಿಕ್ ಸ್ಕೂಲ್, 3) ಭಾರತಿ ನಗರ – ಸೇಂಟ್ ಜಾನ್ಸ್ ಶಾಲೆ, 4)ಯಲಹಂಕ – ವಿದ್ಯಾಶಿಲ್ಪ ಶಾಲೆ, 5) ಸದಾಶಿವ ನಗರ – ನ್ಯೂ ಶಾಲೆ.

6) ಚಾಮರಾಜಪೇಟೆ – ಬೆಂಗಳೂರು ಟ್ರಸ್ಟ್ ಶಾಲೆ, 7) ಎಚ್ಎಸ್ಆರ್ ಲೇಔಟ್ – ಫ್ರೀಡಂ ಇಂಟರ್ನ್ಯಾಷನಲ್ ಸ್ಕೂಲ್, 8) ಅಮೃತಹಳ್ಳಿ – ಜೈನ್ ಇಂಟರ್‌ನ್ಯಾಶನಲ್ ಸ್ಕೂಲ್, 9) ಕಬ್ಬನ್ ಪಾರ್ಕ್ – ಬಿಷಪ್ ಕಾಟನ್ ಶಾಲೆ, 10) ಪರಪ್ಪನ ಅಗ್ರಹಾರ – ಕೇಂಬ್ರಿಡ್ಜ್ ಶಾಲೆ.

11) ವೈಟ್‌ಫೀಲ್ಡ್ – ನ್ಯೂ ಅಕಾಡೆಮಿ ಸ್ಕೂಲ್, 12) ಕೆಆರ್ ಪುರಂ – ದಿಯಾ ಶಾಲೆ, 13) ಕೆಂಗೇರಿ – ಚಿತ್ರಕೂಟ ಶಾಲೆ, 14) ಜ್ಞಾನಭಾರತಿ – ಚಿತ್ರಕೂಟ ಕೌಶಲ್ಯ ಶಾಲೆ, 15) ಕೊಡಿಗೇಹಳ್ಳಿ – ಟ್ರಿಯೊ ಶಾಲೆ, 16) ಸಂಪಿಗೆಹಳ್ಳಿ – ಕ್ಯಾಪ್ಟನ್ ಪಬ್ಲಿಕ್ ಶಾಲೆ, 17) ಕೆಎಸ್ ಲೇಔಟ್ – ಆಲ್ಪೈನ್ ಶಾಲೆ.

18) ಬ್ಯಾಡರಹಳ್ಳಿ – ದಿ ಗ್ರೇಟ್ ಇಂಟರ್‌ನ್ಯಾಶನಲ್ ಸ್ಕೂಲ್, 19) ಮಲ್ಲೇಶ್ವರಂ – ಅನುಪಮಾ ಶಾಲೆ, 20) ಜೆಪಿ ನಗರ – ಲಾರೆನ್ಸ್ ಶಾಲೆ, 21) ಬಾಗಲೂರು – ದೆಹಲಿ ಪಬ್ಲಿಕ್ ಸ್ಕೂಲ್, 22) ಹಲಸೂರು ಪಿಎಸ್ – ಸೇಂಟ್ ಅಂತೋನಿ ಶಾಲೆ, 23) ಹಾಲ್ಸೂರ್ ಪಿಎಸ್ – ಆರೋ ಮ್ಯಾರಿ ಇಂಟರ್ನ್ಯಾಷನಲ್ ಸ್ಕೂಲ್.

24) ಕೆ ಜಿ ಹಳ್ಳಿ ಪಿಎಸ್ – ಜೆಎಸ್ಎಸ್ ಶಾಲೆ, 25) ಮಹದೇವಪುರ ಪಿ.ಎಸ್ ಗೋಪಾಲನ್ ಶಾಲೆ, 26) ಬೆಳ್ಳಂದೂರು ಪಿಎಸ್ – ಏರ್ ಇನ್ನೋವೇಟಿವ್ ಇಂಟ್. ಶಾಲೆ, 27) ವರ್ತೂರು ಪಿಎಸ್ – ದೆಹಲಿ ಪಬ್ಲಿಕ್ ಸ್ಕೂಲ್, 28) ಬೆಳ್ಳಂದೂರು ಪಿಎಸ್ – ವಿಬ್ಗ್ಯೋರ್ (VIBGYOR) ಶಾಲೆ.

Leave a Reply

error: Content is protected !!
LATEST
NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು