ವಿಜಯಪುರ: ಬೆಂಗಳೂರಿಂದ ವಿಜಯಪುರಕ್ಕೆ ಬರುತ್ತಿದ್ದ ಜನತಾ ಟ್ರಾವೆಲ್ಸ್ಗೆ ಸೇರಿದ ಬಸ್ನ ಟೈರ್ ಬ್ಲಾಸ್ಟ್ಆದ ಪರಿಣಾಮ ಬಸ್ಗೆ ಬೆಂಕಿಹೊತ್ತಿಕೊಂಡು ಕ್ಷಣಾರ್ಧದಲ್ಲಿ ಭಸ್ಮವಾದ ಘಟನೆ ನಡೆದಿದೆ. ಸದ್ಯ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸದೆ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ.
ಬೆಂಗಳೂರು – ವಿಜಯಪುರ ಮಾರ್ಗವಾಗ ಕಾರ್ಯಾಚರಣೆ ಮಾಡುತ್ತಿದ್ದ ಜನತಾ ಟ್ರಾವೆಲ್ಸ್ಗೆ ಸೇರಿದ ಬಸ್ ಹಿಟ್ಟನಹಳ್ಳಿ ಬಳಿ ಬರುತ್ತಿದ್ದಂತೆ ಟೈರ್ ಬ್ಲಾಸ್ಟ್ ಆಗಿದೆ. ಆ ಕ್ಷಣದಲ್ಲೇ ಬಸ್ಗೆ ಬೆಂಕಿಹೊತ್ತುಕೊಂಡು ಧಗ ಧಗ ಹೊತ್ತಿ ಉರಿದಿದೆ. ಆದರೆ ಟೈರ್ ಬ್ಲಾಸ್ಟ್ ಆದ ಶಬ್ಧ ಕೇಳಿದ ಬಸ್ನಲ್ಲಿದ್ದ ಎಲ್ಲರೂ ತಕ್ಷಣ ಕೆಳಕ್ಕೆ ಇಳಿದಿದ್ದಾರೆ.
ಹೀಗಾಗಿ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಲಿಲ್ಲ ಎಂದು ಸ್ಥಳೀಯರು ಮಾಹಿತಿ ನೀಡಿದ್ದು, ದೊಡ್ಡ ಅನಾಹುತವೊಂದು ತಪ್ಪಿದೆ ಎಂದು ಆತಂಕದಿಂದಲೇ ಹೇಳಿದ್ದಾರೆ. ಬೆಂಕಿ ಹೊತ್ತಿಕೊಂಡಿದ್ದರಿಂದ ನಡು ರಸ್ತೆಯಲ್ಲೇ ಬಸ್ ಸಂಪೂರ್ಣ ಸುಟ್ಟು ಕರಕಾಲಾಗಿದ್ದು ಭಾರೀ ಪ್ರಮಾಣದಲ್ಲಿ ಸುತ್ತಂಉತ್ತ ಹೊಗೆ ಆವರಿಸಿಕೊಂಡಿತ್ತು. ಜತೆ ಬಸ್ನಲ್ಲಿದ್ದ ಪ್ರಯಾಣಿಕರ ಬ್ಯಾಗ್ಗಳೆಲ್ಲ ಸುಟ್ಟು ಭಸ್ಮವಾಗಿವೆ.
ಘಟನೆಯಿಂದ ಪ್ರಯಾಣಿಕರು ಗಾಬರಿಗೊಂಡಿದ್ದು, ಬ್ಯಾಗ್ಗಳು ಬೆಂಕಿಗಾಹುತಿ ಆಗಿದ್ದರಿಂದ ಬ್ಯಾಗ್ನಲ್ಲಿದ್ದ ಬೆಳೆ ಬಾಳುವ ವಸ್ತುಗಳು, ಬಟ್ಟೆಗಳು, ನಗದು ಒಡವೆ ಎಲ್ಲ ಸುಟ್ಟು ಕರಕಲಾಗಿವೆ ಎಂದು ಕಣ್ಣೀರು ಹಾಕುತ್ತ ಗೋಳಾಡುತ್ತಿದ್ದರು.
ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ವಿಜಯಪುರ ಗ್ರಾಮೀಣ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದು, ಅಗ್ನಿ ಶಾಮಕದಳ ಕೂಡ ಸ್ಥಳದಲ್ಲಿದ್ದು, ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದೆ.