ಜಮ್ಶೆಡ್ಪುರ: ಜಾರ್ಖಂಡ್ನ ಜಮ್ಶೆಡ್ಪುರದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 6 ಮಂದಿ ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಜರುಗಿದೆ.
ಕಾರು ನಿಯಂತ್ರಣ ಕಳೆದುಕೊಂಡು ಡಿವೈಡರ್ಗೆ ಗುದ್ದಿದ ಪರಿಣಾಮ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಕಾರಿನಲ್ಲಿ ಒಟ್ಟು 8 ಪ್ರಯಾಣಿಕರು ಇದ್ದರು, ಅವರೆಲ್ಲ ಅದಿತ್ಯಪುರ ನಿವಾಸಿಗಳು ಎಂದು ತಿಳಿದುಬಂದಿದೆ. ಮೃತ 6 ಮಂದಿಯಲ್ಲಿ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಓರ್ವ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮೃತದೇಹಗಳನ್ನು ಆಸ್ಪತ್ರೆಗೆ ರವಾನಿಸಿ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.
ದಲಿತ ಮಹಿಳೆಗೆ ಥಳಿಸಿದ ಇನ್ಸ್ಸ್ಪೆಕ್ಟರ್: ಇನ್ಸ್ಸ್ಪೆಕ್ಟರ್ವೊಬ್ಬರು ದಲಿತ ಮಹಿಳೆಯನ್ನು ಥಳಿಸಿದ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಿಹಾರದ ಸೀತಾಮರ್ಹಿಯಲ್ಲಿ ಈ ಘಟನೆ ನಡೆದಿದೆ.
ಬಾಲಕಿಯೊಬ್ಬಳ ಅಪಹರಣ ಸಂಬಂಧಿಸಿದಂತೆ ಮಹಿಳೆಯರಿಬ್ಬರ ನಡುವೆ ಮಾರಾಮಾರಿ ನಡೆದಿದೆ. ಈ ವೇಳೆ ಎಂಟ್ರಿ ನೀಡಿದ ಇನ್ಸ್ಸ್ಪೆಕ್ಟರ್ ಮಹಿಳೆಗೆ ಲಾಠಿಯಿಂದ ಥಳಿಸಿದ್ದಾರೆ.
ಸುರಸಂದ್ ಮಾರುಕಟ್ಟೆಯಲ್ಲಿ ಈ ಘಟನೆ ನಡೆದಿದ್ದು, ಸುರಸಂದ್ ಪೊಲೀಸ್ ಠಾಣೆಯ ಇನ್ಸ್ಸ್ಪೆಕ್ಟರ್ ರಾಜ್ಕಿಶೋರ್ ಸಿಂಗ್ ನಡುರಸ್ತೆಯಲ್ಲೇ ಮಹಿಳೆಗೆ ಲಾಠಿಯಿಂದ ಹೊಡೆದಿದ್ದಾರೆ. ಈ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಗಲಾಟೆ ಮಾಡುತ್ತಿದ್ದ ಮಹಿಳೆಯನ್ನು ಬೇರ್ಪಡಿಸುವ ದೃಷ್ಟಿಯಿಂದ ಇನ್ಸ್ಸ್ಪೆಕ್ಟರ್ ಲಾಠಿಯಲ್ಲಿ ಥಳಿಸಿದ್ದಾರೆ ಎನ್ನಲಾಗುತ್ತಿದೆ.
Another day, another case of a woman being beaten by police in Bihar….
Imagine the amount of outrage by so called secular-liberals-feminists if it was a BJP ruled state… pic.twitter.com/ROUA07ouD6
— Mr Sinha (@MrSinha_) December 31, 2023