CrimeNEWSನಮ್ಮರಾಜ್ಯ

KSRTC: ಕಂಡಕ್ಟರ್‌ ಮೊಬೈಲ್‌ ಒಡೆದುಹಾಕಿದ್ದು ಮಹಿಳೆ 9600 ರೂ.ದಂಡ ಕಟ್ಟಿದ್ದು ಪತಿ – ಶಿಕ್ಷೆಯಿಂದ ಆಕೆ ಬಚಾವ್‌ !

ವಿಜಯಪಥ ಸಮಗ್ರ ಸುದ್ದಿ

ಹಾಸನ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್‌ನಲ್ಲಿ ಉಚಿತ ಪ್ರಯಾಣ ಮಾಡಲು ಬಂದ ಮಹಿಳೆಯೊಬ್ಬರು ಸೀಟ್‌ ವಿಚಾರದಲ್ಲಿ ಕ್ಯಾತೆ ತೆಗೆದು ಕಂಡಕ್ಟರ್‌ ಮೊಬೈಲ್‌ ಫೋನ್‌ ಒಡೆದುಹಾಕಿ 9600 ರೂಪಾಯಿಗಳ ದಂಡ ಕಟ್ಟಿರುವ ಘಟನೆ ಹಾಸನ ಬಸ್‌ ನಿಲ್ದಾಣದಲ್ಲಿ ನಡೆದಿದೆ.

ಹಾಸನದಿಂದ ಶಕಲೇಶಪುರ, ಈ ಮಾರ್ಗದ ಹಾಸನ ವಿಭಾಗ ಹಾಸನ ಘಟಕ -1ರ ಬಸ್‌ ಹತ್ತಿದ್ದಾರೆ. ಈ ವೇಳೆ ಬಸ್‌ ರಶ್‌ ಆಗಿದ್ದರಿಂದ ನಿಂತುಕೊಂಡು ಪ್ರಯಾಣ ಮಾಡಬೇಕಿತ್ತು. ಆದರೆ ಅಲ್ಲಿಯವರೆಗೆ ನಿಂತುಕೊಂಡು ಹೋಗುವುದಕ್ಕೆ ಆಗುವುದಿಲ್ಲ ಎಂದು ಬಸ್‌ ಹೊರಡುವವರೆಗೂ ಸುಮ್ಮನಿದ್ದು ಬಳಿಕ ಬಸ್‌ ಮೂವ್‌ ಆಗಿ ನೂರಾರು ಮೀಟರ್‌ ಹೋದ ಮೇಲೆ ಇಳಿಯುವುದಕ್ಕೆ ಮುಂದಾಗಿದ್ದಾರೆ.

ಇನ್ನು ಆಕೆ ಮಾರ್ಗ ಮಧ್ಯೆ ಇಳಿಯುವುದಕ್ಕೆ ಮುಂದಾಗಿರುವುದನ್ನು ನಿರ್ವಾಹಕ ಕುಮಾರ್‌ ಪ್ರಶ್ನಿಸಿದ್ದಾರೆ. ನೀವು ಬಸ್‌ ನಿಲ್ದಾಣದಿಂದ ಸುಮ್ಮನೆ ಬಂದು ಈಗ ಬಸ್‌ ಇಳಿಯುತ್ತಿದ್ದೀರಿ ಒಂದು ವೇಳೆ ತನಿಖಾಧಿಕಾರಿಗಳು ಬಂದರೆ ನಾವು ಏನು ಮಾಡಬೇಕು ಎಂದು ಕೇಳಿದ್ದಾರೆ.

ಇದರಿಂದ ಕೋಪಗೊಂಡ ಮಹಿಳೆ ನಿರ್ವಾಹಕರಿಗೆ ತಮ್ಮ ಪಾದರಕ್ಷೆಗಳಿಂದ ಹೊಡೆಯುವುದಕ್ಕೆ ಮುಂದಾಗಿದ್ದಾರೆ. ಇದನ್ನು ಅರಿತ ನಿರ್ವಾಹಕ ತಮ್ಮ ಮೊಬೈಲ್‌ ಪೋನ್‌ನಿಂದ ಆಕೆಯ ವರ್ತನೆಯನ್ನು ವಿಡಿಯೋ ಮಾಡುವುದಕ್ಕೆ ಮುಂದಾಗಿದ್ದಾರೆ. ಈ ವೇಳೆ ನಿರ್ವಾಹಕನ ಮೊಬೈಲ್‌ ಕಿತ್ತುಕೊಂಡು ಒಡೆದುಹಾಕಿದ್ದಾಳೆ.

ನಿರ್ವಾಹಕನ ಮೊಬೈಲ್‌ ಎರಡು ಹೋಳಾಗಿದೆ. ಇದರಿಂದ ಗಾಬರಿಗೊಂಡ ನಿರ್ವಾಹಕ ಕುಮಾರ್‌ ತಮ್ಮ ಸಹೋದ್ಯೋಗಿ ಚಾಲಕರ ಮೂಲಕ ನಿಗಮದ ಅಧಿಕಾರಿಗಳಿಗೆ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಲ್ಲದೆ ಹಾಸನದ ಕೇಂದ್ರೀಯ ಬಸ್‌ ನಿಲ್ದಾಣಕ್ಕೆ ಬಸ್‌ ತಿರುಗಿಸಿಕೊಂಡು ಹೋಗಿದ್ದಾರೆ.

ಈ ವೇಳೆ ಪೊಲೀಸರು ಮತ್ತು ನಿಗಮದ ಅಧಿಕಾರಿಗಳು ಬಸ್‌ ನಿಲ್ದಾಣಕ್ಕೆ ಬಂದು ವಿಚಾರಣೆ ಮಾಡಿದಾಗ ಮಹಿಳೆ ಕಂಡಕ್ಟರ್‌ಗೆ ಪಾದರಕ್ಷೆಯಿಂದ ಹೊಡೆಯುವುದಕ್ಕೆ ಮುಂದಾಗಿದ್ದು ಅಲ್ಲದೆ ಅವರ ಮೊಬೈಲ್‌ ಕಿತ್ತುಕೊಂಡು ಒಡೆದುಹಾಕಿದ್ದಾಳೆ. ಇದರಲ್ಲಿ ನಿರ್ವಾಹಕನ ತಪ್ಪು ಏನು ಇಲ್ಲ ಎಂದು ಸಹ ಪ್ರಯಾಣಿಕರು ಪೊಲೀಸರಿಗೆ ತಿಳಿಸಿದ್ದಾರೆ.

ಬಳಿಕ ಪೊಲೀಸರು ಈ ಸಂಬಂಧ ದೂರು ದಾಖಲಿಸಿಕೊಳ್ಳಲು ಮುಂದಾಗಿದ್ದಾರೆ. ಆದರೆ, ಅಷ್ಟರಲ್ಲೇ ಮಹಿಳೆ ತನ್ನ ಗಂಡನಿಗೆ ಪೋನ್‌ ಮಾಡಿ ಅವರನ್ನು ಸ್ಥಳಕ್ಕೆ ಕರೆಸಿಕೊಂಡಿದ್ದಾರೆ. ಸ್ಥಳಕ್ಕೆ ಬಂದ ಆಕೆಯ ಪತಿ ತನ್ನ ಹೆಂಡತಿ ಮಾಡಿದ ತಪ್ಪಿಗೆ ಕ್ಷಮೆ ಕೇಳಿ ಒಡೆದುಹಾಕಿರುವ ಮೊಬೈಲ್‌ ಪೋನ್‌ ಮೌಲ್ಯಕ್ಕೆ ಸಮಾನಾದ ಬೇರೊಂದು ಹೊಸ ಫೋನ್‌ಅನ್ನು ನಿರ್ವಾಹಕರಿಗೆ ತೆಗೆದುಕೊಟ್ಟು ಕ್ಷಮೆ ಕೇಳಿದ್ದಾರೆ.

ಹೆಂಡತಿ ಮಾಡಿದ ತಪ್ಪಿಗೆ ಗಂಡ ಬಂದು ಕ್ಷಮೆ ಕೇಳಿ ಹೊಸ ಮೊಬೈಲ್‌ ತೆಗೆದುಕೊಟ್ಟಿದ್ದರಿಂದ ನಿರ್ವಾಹಕ ಕುಮಾರ್‌ ಮತ್ತು ನಿಗಮದ ಅಧಿಕಾರಿಗಳು ಆಕೆಯ ವಿರುದ್ಧ ಯಾವುದೇ ದೂರು ದಾಖಲಿಸುವುದು ಬೇಡ ಎಂದು ಮಾನವೀಯತೆ ದೃಷ್ಟಿಯಿಂದ ಬಿಟ್ಟು ಕಳುಹಿಸಿದ್ದಾರೆ.

ಆದರೆ, ಈ ರೀತಿ ಸಾರಿಗೆ ಸಿಬ್ಬಂದಿ ನಡೆದುಕೊಂಡಿದ್ದರೆ ಅವರು ಸುಮ್ಮನೆ ಬಿಡುತ್ತಿದ್ದರೆ, ಖಂಡಿತ ಬಿಡುತ್ತಿರಲಿಲ್ಲ. ಮೇಲಧಿಕಾರಿಗಳು ಮೊದಲು ಅಮಾನತು ಮಾಡುತ್ತಿದ್ದರು. ಪೊಲೀಸ್‌ ಕೇಸ್‌ ಕೂಡ ದಾಖಲಾಗುತ್ತಿತ್ತು. ಜತೆಗೆ ಹೊಸ ಫೋನ್‌ ಕೂಡ ಕೊಡಿಸಬೇಕಿತ್ತು. ಆದರೂ ಸಮಸ್ಯೆಯನ್ನು ಎದುರಿಸಬೇಕಿತ್ತು.

ದಾಬಸ್‌ಪೇಟೆಯಲ್ಲೂ ಘಟನೆ – ಮಾಡದ ತಪ್ಪಿಗೆ ಕೋರ್ಟ್‌ಗೆ ಅಲೆಯುತ್ತಿರುವ ಸಿಬ್ಬಂದಿ: ಕೆಲವು ತಿಂಗಳುಗಳ ಹಿಂದೆ ದಾಬಸ್‌ಪೇಟೆ ಬಸ್‌ ನಿಲ್ದಾಣದಲ್ಲಿ ಮಹಿಳೆಯೊಬ್ಬರು ಆಯತಪ್ಪಿ ಬಿದ್ದಿದ್ದಾರೆ. ಆದರೆ ಅವರು ಬಸ್‌ನಲ್ಲಿ ಬಿದ್ದಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆದರೂ ಆಕೆ ನಾನು ಬಸ್‌ನಿಂದ ಬಿದ್ದೆ ಎಂದು ಹೇಳಿ ಪೊಲೀಸ್‌ ದೂರು ನೀಡಿದ್ದಾರೆ. ಈ ಬಗ್ಗೆ ಆ ಬಸ್‌ ಸಿಬ್ಬಂದಿಗೆ ಮಾಹಿತಿಯೇ ಇಲ್ಲ. ಅಂದು ಅವರ ಬಸ್‌ನಲ್ಲಿ ಯಾರು ಬಿದ್ದಿಲ್ಲ. ಬಿದ್ದಿದ್ದರೆ ಪ್ರಯಾಣಿಕರೇ ಹಿಗ್ಗಾಮುಗ್ಗಾ ಜಾಡಿಸುತ್ತಿದ್ದರು.

ಆ ರೀತಿಯ ಘಟನೆ ನಡೆಯದಿದ್ದರು ಪೊಲೀಸ್‌ ದೂರು ದಾಖಲಿಸಿ ಸುಖಸುಮ್ಮನೇ ಮಾಡದ ತಪ್ಪಿಗೆ ಚಾಲಕ ಮತ್ತು ನಿರ್ವಾಹಕರಿಬ್ಬರು ಕೋರ್ಟ್‌ಗೆ ಅಲೆಯುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಕೂಡ ಏನು ಕ್ರಮ ಕೈಗೊಳ್ಳದೆ ನಿರಪರಾಧಿಗಳನ್ನು ಅಲೆಸುತ್ತಿದ್ದಾರೆ. ಆದರೆ ಇಲ್ಲಿ ತಪ್ಪು ಮಾಡಿದ ಮಹಿಳೆಯನ್ನು ಮಾನವೀಯತೆ ದೃಷ್ಟಿಯಿಂದ ಬಿಟ್ಟು ಕಳುಹಿಸಲಾಗಿದೆ.

ಇಂಥ ಮಾನವೀಯತೆಯನ್ನು ಏಕೆ ಚಾಲನಾ ಸಿಬ್ಬಂದಿಗೆ ತೋರಿಸುವುದಿಲ್ಲ ಎಂಬುವುದೇ ಬಹಳ ನೋವಿನ ಸಂಗತಿಯಾಗಿದೆ. ಇನ್ನಾದರೂ ನೌಕರರನ್ನು ಗೌರವದಿಂದ ಕಾಣಬೇಕು ಎಂಬುವುದು ನಮ್ಮ ಕಳಕಳಿಯ ಮನವಿ.

Leave a Reply

error: Content is protected !!
LATEST
NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು