ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಹಾಲಿ ಸೇವೆ ಸಲ್ಲಿಸುತ್ತಿರುವ ನೌಕರರು ಮರಣ ಹೊಂದಿದರೆ ಅವರ ಕುಟುಂಬದ ಭದ್ರತೆಗಾಗಿ ನೀಡಿರುವ ಆದೇಶದಲ್ಲಿ KSRTCಗೂ BMTCಗೂ ತುಂಬಾ ವ್ಯತ್ಯಾಸಗಳು ಕಂಡುಬಂದಿವೆ ಎಂದು ಬಿಎಂಟಿಸಿ ಮಾಜಿ ನೌಕರ ಆನಂದ್ ವಿವರಿಸಿದ್ದಾರೆ.
ವಿಮಾ ಯೋಜನೆಯಲ್ಲಿ ನೌಕರರ ಜೇಬಿಕೆ ಕತ್ತರಿಯಾಕುವ ಮೂಲಕ 10 ಲಕ್ಷ ರೂ. ಮರಣ ಪರಿಹಾರ ಕೊಡುವುದಕ್ಕೆ ಮುಂದಾಗಿದೆ. ಈ ಬಗ್ಗೆ ಸಾರಿಗೆ ನೌಕರರೆ ಗಮನಿಸಿ. ನೋಡಿ ಕೆಎಸ್‌ಆರ್‌ಟಿಸಿ ಆದೇಶ ಪ್ರತಿ ಮತ್ತು ಬಿಎಂಟಿಸಿ ಪ್ರತಿಯನ್ನು. ಕೆಎಸ್‌ಆರ್‌ಟಿಸಿಯಲ್ಲಿ ನೌಕರರಿಂದ ಈ ಹಿಂದೆ ಪಡೆಯುತ್ತಿದ್ದ ಹಣದ ಮೊತ್ತ 100 ರೂ. ಈಗ ನೌಕರರಿಂದ 200 ರೂ. ಪಡೆಯುತ್ತಾರೆ.
ಅದೇ ಸಂಸ್ಥೆಯಿಂದ ಮೊದಲು ಪಡೆಯುತ್ತಿದ್ದ ಹಣ 50 ರೂ. ಈಗ 100 ರೂ. ಹಾಕಿ ಮೂರು ಲಕ್ಷದಿಂದ 10 ಲಕ್ಷಕ್ಕೆ ವಿಮಾ ಮೊತ್ತವನ್ನು ಏರಿಸಿದ್ದಾರೆ. ಆದರೆ ಅಪಘಾತದಿಂದ ಮರಣ ಹೊಂದಿದರೂ, ಅಥವಾ ಸಾಮಾನ್ಯವಾಗಿ ಅಂದರೆ ನ್ಯಾಚುರಲ್ಲಾಗಿ ಮರಣ ಹೊಂದಿದರು ಕೂಡ ಈ ಮೊತ್ತವನ್ನು ಕೆಎಸ್‌ಆರ್‌ಟಿಸಿ ನಿಗಮ ನೀಡುತ್ತದೆ.
ಇನ್ನು ಕೆಎಸ್‌ಆರ್‌ಟಿಸಿಯಲ್ಲಿ ಉಳಿದಂತೆ 50 ಲಕ್ಷ ಅಪಘಾತ ವಿಮೆಯ ಹಣವನ್ನು ಎಸ್‌ಬಿಐ ಬ್ಯಾಂಕ್ ಅಕೌಂಟ್ ಮತ್ತು ಯುನೈಟೆಡ್ ಬ್ಯಾಂಕಿನಿಂದಲೂ ಕೂಡ 50 ಲಕ್ಷ ಹಣವನ್ನು ನೀಡಲಾಗುತ್ತಿದೆ. ಅಂದರೆ, ಒಟ್ಟಾರೆ ಒಂದು ಕೋಟಿ ಹತ್ತು ಲಕ್ಷ ರೂಪಾಯಿಯನ್ನು ನೀಡಲಾಗುತ್ತಿದೆ.
ಆದರೆ ಬಿಎಂಟಿಸಿಯಲ್ಲಿ ಆ ರೀತಿ ಇಲ್ಲ. ಈ ಹಿಂದೆ ನೌಕರರಿಂದ ನೂರು ರೂಪಾಯಿ ಪಡೆದು ಸಂಸ್ಥೆಯಿಂದ ರೂ.50 ಹಾಕುತ್ತಿದ್ದರು. ಆದರೆ ನೌಕರರಿಂದ 350 ರೂ. ಪಡೆದು ಸಂಸ್ಥೆಯಿಂದ 150ರೂ. ಹಾಕಿ ವಿಮಾ ಯೋಜನೆಯನ್ನು ಮೂರು ಲಕ್ಷದಿಂದ 10 ಲಕ್ಷಕ್ಕೆ ಏರಿಸಿದ್ದಾರೆ. ಆದರೆ ಮತ್ತೊಂದು ವಿಚಾರ ಏನೆಂದರೆ ಅಪಘಾತದಿಂದ ಮರಣ ಹೊಂದಿದರೆ ಈ ಹತ್ತು ಲಕ್ಷ ರೂ.ಗಳನ್ನು ನೀಡುವುದಿಲ್ಲ ಎಂದು ಸ್ಪಷ್ಟವಾಗಿ ಅವರ ಆದೇಶದಲ್ಲಿ ತಿಳಿಸಿದ್ದಾರೆ.
ಅದನ್ನು ಸರಿಯಾಗಿ ಗಮನಿಸಿ ಉಳಿದಂತೆ ಯುನಿಟೆಡ್ ಬ್ಯಾಂಕ್‌ನಿಂದ 50 ಲಕ್ಷ ರೂ. ನೀಡುತ್ತೇವೆ ಎಂದು ತಿಳಿಸಿದ್ದಾರೆ. ಈ ಆದೇಶದ ಕಾಪಿಯನ್ನು ಸರಿಯಾಗಿ ಗಮನಿಸಿ, ಕೆಎಸ್‌ಆರ್‌ಟಿಸಿಯಲ್ಲಿ ಒಂದು ತರಹ ಆದೇಶ ಬಿಎಂಟಿಸಿಯಲ್ಲಿ ಒಂದು ತರ ಆದೇಶ ಮೇಲ್ನೋಟಕ್ಕೆ ಕಂಡು ಬರುತ್ತಿದೆ.
ಅದೇ ರೀತಿ ಒಂದು ಕೋಟಿ ಹಣವನ್ನು ನೀಡುತ್ತೇವೆ ಎಂದು ಈ ಆದೇಶದ ಪ್ರತಿಯಲ್ಲಿ ಹೇಳಿರುವುದಿಲ್ಲ. ಎಸ್‌ಬಿಐ ಬ್ಯಾಂಕ್ ನಿಂದ 50 ಲಕ್ಷ ಹಣವನ್ನು ಯಾವುದೇ ರೀತಿ ತೋರಿಸಿಲ್ಲ. ಇದು ಎಷ್ಟು ಸರಿ ಮೋಸ ಅಲ್ಲವೇ? ನೋಡಿ ಯೋಚಿಸಿ. ಈ ವ್ಯತ್ಯಾಸಗಳನ್ನು ಸರಿ ಮಾಡದೆ ಇದ್ದರೆ ನಾವು ಮುಂದಿನ ದಿನಗಳಲ್ಲಿ ಈ ಬಗ್ಗೆ ಹೋರಾಟ ಮಾಡಬೇಕಾಗುತ್ತದೆ ಎಂದು ಸಮಸ್ತ ಬಿಎಂಟಿಸಿ ನೌಕರರ ಪರವಾಗಿ ಎಚ್ಚರಿಕೆ ನೀಡುತ್ತಿರುವುದಾಗಿ ತಿಳಿಸಿದ್ದಾರೆ.