ನಂಜನಗೂಡು: ಬೇಸಿಗೆ ಬೇಗೆ ತಾಳಲಾರದೆ ಕೆರೆಯಲ್ಲಿ ಈಜಲು ಹೋದ ಯುವಕ 20 ಅಡಿ ಮೇಲಿಂದ ಕೆರೆಯಲ್ಲಿ ಡೈಹೊಡೆದು ನೀರು ಪಾಲಾದ ಘಟನೆ ತಾಲೂಕಿನ ಕೋಣನೂರು ಗ್ರಾಮದ ಕೆರೆಯಲ್ಲಿ ನಡೆದಿದೆ.
ಚಾಮರಾಜನಗರದ ರಾಮಸಮುದ್ರ ಗ್ರಾಮದ ದೊಡ್ಡ ಬೀದಿ ನಿವಾಸಿ ಗುಣಶೇಖರ್ (22) ಮೃತ ದುರ್ದೈವಿ.
ಗುಣಶೇಖರ್ ಸ್ನೇಹಿತರೊಂದಿಗೆ ಕೆರೆಗೆ ಈಜಲು ಹೋಗಿದ್ದ. ಕಪಿಲಾ ನದಿಯಿಂದ ಕೆರೆಗೆ ನೀರು ಹರಿಯುತ್ತಿದ್ದು, ನೀರಿನ ಬುಗ್ಗೆಯ ಮೇಲೆ ಜಿಗಿದಿದ್ದಾನೆ. ಸುಮಾರು 20 ಅಡಿ ಎತ್ತರದಿದ್ದ ನೀರು ಚಿಮ್ಮುವ ಬುಗ್ಗೆಗೆ ಮೇಲಿನಿಂದ ಕೆಳಗೆ ಜಂಪ್ ಮಾಡಿದ್ದಾನೆ.
ಮೇಲಿಂದ ಜಂಪ್ ಮಾಡಿದ ಪರಿಣಾಮ ಕೆಳಗಡೆ ಬಿದ್ದವನು ಮತ್ತೆ ಮೇಲೆ ಹೇಳಲೇ ಇಲ್ಲ. ಇದ್ರಿಂದ ಸ್ಥಳದಲ್ಲಿಯೇ ಯುವಕ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ.
ನೀರು ಬರುವ ಸ್ಥಳ ಅಪಾಯಕಾರಿಯಾಗಿದ್ದು, ಈ ಸ್ಥಳದಲ್ಲಿ ಹಲವಾರು ಯುವಕರು ಪ್ರಾಣವನ್ನು ತೆಗೆದುಕೊಂಡಿದ್ದಾರೆ ಎಂದು ಸ್ಥಳೀಯರು ಹೇಳಿದ್ದಾರೆ.
ಇನ್ನು ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಕವಲಂದೆ ಪೊಲೀಸ್ ಠಾಣೆಯ ಪಿಎಸ್ಐ ಕೃಷ್ಣಕಾಂತ ಕೋಳಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕವಲಂದೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.