NEWSದೇಶ-ವಿದೇಶನಮ್ಮರಾಜ್ಯ

ಜೂನ್​ 4ರಿಂದ ಗೂಗಲ್ ಪೇ ಕಾರ್ಯ ನಿರ್ವಹಿಸುದಿಲ್ಲ : ಅಚ್ಚರಿ ಮೂಡಿಸಿದ ನ್ಯೂಸ್‌

ವಿಜಯಪಥ ಸಮಗ್ರ ಸುದ್ದಿ

ನ್ಯೂಡೆಲ್ಲಿ: ಬ್ಯಾಂಕ್​ಗಳಿಗೆ ತೆರಳದೆ ಮೊಬೈಲ್​ ಮೂಲಕ ಸೇವೆಯನ್ನು ನೀಡುತ್ತಿರುವ ಆ್ಯಪ್​ಗಳು ನಿತ್ಯ ಹಣ ವ್ಯವಹಾರ ಮಾಡುವ ಮಂದಿಗೆ ಸಹಾಯಕವಾಗಿವೆ. ಆದರೀಗ ಇಂತಹ ಸೇವೆಯನ್ನು ಒದಗಿಸುತ್ತಿರುವ ಗೂಗಲ್ ಪೇ ಜೂನ್​ 4ರಿಂದ ಕಾರ್ಯ ನಿರ್ವಹಿಸುದಿಲ್ಲ ಎಂಬ ಸುದ್ದಿ ಹೊರಬಿದ್ದಿದೆ.

ಆನ್​ಲೈನ್​ ಪೇಮೆಂಟ್​ ಆಪ್​ಗಳಾದ ಗೂಗಲ್​ ಪೇ, ಪೇಟಿಯಂ, ಫೋನ್​ ಪೇಯನ್ನು ಅನೇಕರು ಬಳಸುತ್ತಿದ್ದಾರೆ. ಅದರ ಮೂಲಕ ಹಣದ ವ್ಯವಹಾರ ನಡೆಸುತ್ತಾರೆ. ಅಂರಂತೆ ಗೂಗಲ್​ ಪೇ ಡಿಜಿಟಲ್​ ಪೇಮೆಂಟ್​ ಉತ್ತೇಜಿಸುವ ಆಪ್​ ಆಗಿದೆ. ದೇಶದಲ್ಲಿ ಅನೇಕರು ಈ ಆಪ್​ ಅನ್ನು ಬಳಸುತ್ತಿದ್ದಾರೆ. ಕೇವಲ ಹಣದ ವ್ಯವಹಾರ ಮಾತ್ರವಲ್ಲ, ಗ್ಯಾಸ್​ ಬುಕ್ಕಿಂಗ್, ಫೋನ್‌ ರೀಚಾರ್ಜ್​, ಇನ್ಶುರೆನ್ಸ್​ ಹೀಗೆ ನಾನಾ ಸೇವೆಯನ್ನು ನೀಡುತ್ತಾ ಬಂದಿದೆ. ಆದರೀಗ ಗೂಗಲ್​ ಪೇ ಮುಂದಿನ ತಿಂಗಳಿನಿಂದ ಕಾರ್ಯ ನಿರ್ವಹಿಸುತ್ತಿಲ್ಲ ಎಂಬ ಸುದ್ದಿ ಎಲ್ಲರಿಗೂ ಅಚ್ಚರಿ ಮೂಡುವಂತೆ ಮಾಡಿದೆ.

ಗೂಗಲ್​ ಪೇಗೆ ಏನಾಯ್ತು?: ಪ್ರಪಂಚದಾದ್ಯಂತ ಗೂಗಲ್​ ಪೇ ಜನಪ್ರಿಯವಾಗಿದೆ. ಪೇಟಿಯಂ ಕಾರ್ಯ ಸ್ಥಗಿತಗೊಳಿಸಿದ ಬಳಿಕ ಅದರ ಬಳಕೆದಾರರು ಗೂಗಲ್​ ಪೇ ಮತ್ತು ಫೋನ್​ ಪೇಯತ್ತ ಮುಖ ಮಾಡಿರೋದು ಎಲ್ಲರಿಗೂ ಗೊತ್ತೇ ಇದೆ. ಅದರಲ್ಲೂ ಗೂಗಲ್​ ಪೇಯನ್ನು ಪ್ರಪಂಚದಾದ್ಯಂತ ಜನರು ಬಳಸುತ್ತಿದ್ದಾರೆ. ಆದರೆ ಕೆಲವು ದೇಶಗಳಲ್ಲಿ ಗೂಗಲ್​ ಪೇ ಕಾರ್ಯ ಮಾಡೋದಿಲ್ಲ. ಆದರೆ ಭಾರತೀಯರು ಟೆನ್ಶನ್​ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ. ಇದು ಇಂಡಿಯಾದಲ್ಲಿ ಕಾರ್ಯ ನಿರ್ವಹಿಸುತ್ತದೆ.

ಗೂಗಲ್​ ಯೋಚನೆಯೇ ಬೇರೆ?: ಗೂಗಲ್​ ತನ್ನ ಎಲ್ಲ ಬಳಕೆದಾರರನ್ನು ಗೂಗಲ್​ ವಾಲೆಟ್​ಗೆ ತೆರಳುವಂತೆ ಕೇಳಿಕೊಂಡಿದೆ. ಹಾಗಾಗಿ ಅದರ ಪ್ರಚಾರ ಮಾಡುತ್ತಿದೆ. ಇದೇ ಕಾರಣಕ್ಕೆ ಗೂಗಲ್​ ಪೇ ಕೆಲವು ದೇಶಗಳಲ್ಲಿ ಕಾರ್ಯನಿರ್ವಹಿಸುವುದನ್ನು ತಡೆಹಿಡಿದಿದೆ. ಆದರೆ ಭಾರತ ಮತ್ತು ಸಿಂಗಪುರದಲ್ಲಿ ಗೂಗಲ್​ ಪೇ ಕಾರ್ಯ ನಿರ್ವಹಿಸುತ್ತದೆ.

ಬಂದಿದೆ ಗೂಗಲ್​ ವಾಲೆಟ್​: ಇತ್ತೀಚೆಗೆ ಗೂಗಲ್​ ವಾಲೆಟನ್ನು ಭಾರತದಲ್ಲಿ ಪರಿಚಯಿಸಲಾಗಿದೆ. ಸದ್ಯ ಇದರ ಪ್ರಚಾರ ಕಾರ್ಯ ನಡೆಸುತ್ತಿದೆ. ಜತೆಗೆ ಬಳಕೆದಾರರನ್ನು ಸೆಳೆಯಲು ಕೆಲವು ಆಫರ್​ ನೀಡುತ್ತಿದೆ. ಅದರಲ್ಲಿ ಡೆಬಿಟ್​ ಕಾರ್ಡ್​, ಕ್ರೆಡಿಟ್​ ಕಾರ್ಡ್​​, ಲಾಯಲ್ಟಿ ಕಾರ್ಡ್​, ಉಡುಗೊರೆಗಳನ್ನು ನೀಡುತ್ತಿದೆ.

ಇನ್ನು ಗೂಗಲ್​ ವಾಲೆಟ್​ ಹಲವು ಫೀಚರ್ಸ್​ ಹೊಂದಿದೆ. ಈ ಅಪ್ಲಿಕೇಶನ್​ ಪಿನ್​ ರಕ್ಷಣೆ, ಕಳೆದು ಹೋದ ಸಾಧನದಲ್ಲಿರುವ ಅಕೌಂಟ್​ ಅನ್ನು ನಿಷ್ಟ್ರೀಯಗೊಳಿಸುವ ಸಾಮರ್ಥ್ಯ ಹೊಂದಿದೆ. ಮಾತ್ರವಲ್ಲದೆ ಸ್ನೇಹಿತರಿಗೆ ಸುಲಭವಾಗಿ ಹಣ ಕಳುಹಿಸಲು ಸಾಧ್ಯವಾಗುತ್ತದೆ. ಹೀಗಾಗಿ ನಮ್ಮ ದೇಶದಲ್ಲಿ ಇದರ ಕಾರ್ಯ ಸ್ಥಗಿತವಾಗುವುದಿಲ್ಲ ಎಂದು ಹೇಳಿದೆ.

Leave a Reply

error: Content is protected !!
LATEST
NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು