ಬೆಂಗಳೂರು: ಇಪಿಎಸ್ ಪಿಂಚಣಿದಾರರ 77ನೇ ಮಾಸಿಕ ಸಭೆ ಇಂದು ಜೂನ್ 2ರ ಭಾನುವಾರ ಲಾಲ್ ಬಾಗ್ ಆವರಣದಲ್ಲಿ ಜರುಗಿತು. ಸಭೆಗೆ ಚಿಕ್ಕಬಳ್ಳಾಪುರ ಕೆಎಸ್ಆರ್‌ಟಿಸಿ ಕ್ಷೇಮಾಭಿವೃದ್ಧಿ ಸಂಘ, ಗದಗ್ ಕೆಎಸ್‌ಆರ್‌ಟಿಸಿ ನಿವೃತ್ತರ ಸಂಘದ ಸದಸ್ಯರು ಪದಾಧಿಕಾರಿಗಳು ಸೇರಿದಂತೆ ನೂರಾರು ನಿವೃತ್ತರು ಆಗಮಿಸಿದ್ದರು.
ಲಾಲ್ ಬಾಗ್‌ನ ಸುಂದರ ಉದ್ಯಾನವನದಲ್ಲಿ ಬೆಳಗಿನ ವಾಯುವಿಹಾರ ನಡೆಸುವುದೇ ಮೈ ಸೊಬಗು, ನಮ್ಮ ಮನಸ್ಸಿನ ಎಲ್ಲ ದುಃಖ ದುಮ್ಮಾನಗಳು ಮರೆಯಾಗಿ ತನ್ನ ಹಳೆಯ ಸ್ನೇಹಿತರನ್ನು ಕಂಡೊಡನೆ, ಆದಮ್ಯ ಚೇತನ ಹುಕ್ಕಿ ಬರುತ್ತದೆ. ಅದಕ್ಕೆ ಸಾಕ್ಷಿ ಎಂಬಂತೆ ಇಂದು ನಿವೃತ್ತ ನೌಕರರಿಂದ ಲಾಲ್‌ಬಾಗ್ ಕಂಗೊಳಿಸುತ್ತಿತ್ತು ಎಂದು ಸಭೆಗೆ ಬಂದಿದ್ದ 60 ವರ್ಷ ದಾಟಿ ನಿವೃತ್ತರಾಗಿರುವ ಮುಸಂಜೆಯಲ್ಲಿರುವ ನೌಕರರ ಕುರಿತು ಬಿಎಂಟಿಸಿ & ಕೆಎಸ್ಆರ್ಟಿಸಿ ನಿವೃತ್ತ ನೌಕರರ ಸಂಘಟನೆಯ ಕಾರ್ಯಾಧ್ಯಕ್ಷ ನಂಜುಂಡೇಗೌಡ ಬಣ್ಣಿಸಿದರು.
ಸರ್ವೋಚ್ಚ ನ್ಯಾಯಾಲಯವು ನವಂಬರ್ 4, 2022 ರಂದು ಇಪಿಎಸ್ ನಿವೃತ್ತರ ಪರವಾಗಿ ನೀಡಿರುವ ತೀರ್ಪನ್ನು ಈ ವರವಿಗೂ ಅನುಷ್ಠಾನಗೊಳಿಸದೆ ಇಪಿಎಫ್ಒ ಅಧಿಕಾರಿಗಳು ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿ, ಮುಂದಿನ ದಿನಗಳಲ್ಲಿ ನಮ್ಮ ಹೋರಾಟವನ್ನು ತೀವ್ರಗೊಳಿಸಿ, ಅಧಿಕಾರಿಗಳು ಹಾಗೂ ಕೇಂದ್ರ ಸರ್ಕಾರದ ಮೇಲೆ ಹೆಚ್ಚಿನ ಒತ್ತಡ ಹೇರಬೇಕೆಂಬ ತೀರ್ಮಾನ ತೆಗೆದುಕೊಳ್ಳಲಾಯಿತು ಎಂದು ತಿಳಿಸಿದರು.
ಅಶಕ್ತ ಇಪಿಎಸ್ ನಿವೃತ್ತರಿಗೆ ಕನಿಷ್ಠ ಹೆಚ್ಚುವರಿ ಪಿಂಚಣಿ ಬೇಡಿಕೆ ₹7,500 + ಭತ್ಯೆ ಹಾಗೂ ವೈದ್ಯಕೀಯ ಸೌಲಭ್ಯ ಇದನ್ನು ಕೂಡಲೇ ಅನುಷ್ಠಾನಗೊಳಿಸಿ, ನೀಡಬೇಕೆಂದು ಆಗ್ರಸಲು ಎಲ್ಲ ನಿವೃತ್ತ ನೌಕರರು ಸಭೆಯಲ್ಲಿ ಒಮ್ಮತದಿಂದ ನಿರ್ಣಯ ತೆಗೆದುಕೊಂಡೆವು ಎಂದು ಹೇಳಿದರು.
ರಾಷ್ಟ್ರೀಯ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ಜಿಎಸ್ಎಂ ಸ್ವಾಮಿ ಮಾತನಾಡಿ, ನಿವೃತ್ತರು ಸಮರ್ಪಣಾ ಭಾವದಿಂದ ಈ ದೇಶಕ್ಕೆ ಸೇವೆ ಸಲ್ಲಿಸಿದ್ದು, ಅದನ್ನು ಮನ ಗಂಡು ಕೇಂದ್ರ ಸರ್ಕಾರ ಎಷ್ಟೊತ್ತಿಗೆ ನಮ್ಮ ಎಲ್ಲ ನಿವೃತ್ತರ ವೇದಿಕೆಗಳನ್ನು ಈಡೇರಿಸಬೇಕಾಗಿತ್ತು. ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ಕೂಡಲೇ ರಾಜ್ಯದ ಪ್ರತಿಯೊಬ್ಬ ಸಂಸದರನ್ನು ಭೇಟಿ ಮಾಡಿ, ಮನವಿ ಸಲ್ಲಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳೋಣ ಎಂದು ಸಲಹೆ ನೀಡಿದರು.
ಜೂನ್ 6, 2024 ರಂದು ರಾಷ್ಟ್ರೀಯ ಸಂಘರ್ಷ ಸಮಿತಿ ತನ್ನ ಸಂಸ್ಥಾಪನಾ ದಿನಾಚರಣೆಯನ್ನು ದೇಶಾದ್ಯಂತ ಆಚರಿಸಲು, ಕೇಂದ್ರಕಾರ್ಯಕಾರಿ ಸಮಿತಿ ಸಮಿತಿ ನಿರ್ಧರಿಸಿದ್ದು, ಈ ಬಗ್ಗೆ ಕಾರ್ಯಕ್ರಮ ಪಟ್ಟಿಯನ್ನು ಕೂಡಲೇ ಎಲ್ಲ ಸಂಘಟನೆಯ ನಿವೃತ್ತ ನೌಕರರಿಗೆ ನೀಡುವುದಾಗಿ ಎನ್ಎಸಿ ಉಪಾಧ್ಯಕ್ಷರಾದ ವೀರ ಕುಮಾರ್ ಗಡದ್ ತಿಳಿಸಿದರು.
ಮುಂದಿನ ದಿನಗಳಲ್ಲಿ ನಾವೆಲ್ಲರೂ ಸಂಘಟಿತರಾಗಿ ಹೋರಾಟ ಮಾಡಿದಲ್ಲಿ ಜಯ ಶತಸಿದ್ಧ. ಈ ಬಗ್ಗೆ ಯಾರು ಎದೆಗುಂದುವುದು ಬೆಡ ಎಂಬ ತೀರ್ಮಾನವನ್ನು ಸಭೆಯಲ್ಲಿ ಮಾಡಿರುವುದಾಗಿ ವಿವರಿಸಿದರು.
ಸಭೆ ಆರಂಭದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ, ಡೋಲಪ್ಪನವರು ಎಲ್ಲ ನಿವೃತ್ತರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾಡಿದರು. ಅಂತಿಮವಾಗಿ ಡೋಲಪ್ಪನವರ ಒಂದನಾರ್ಪಣೆಯೊಂದಿಗೆ ಸಭೆ ಮುಕ್ತಾಯಗೊಂಡಿತು.
ಸಭೆಯ ನಿರ್ವಹಣೆಯನ್ನು ಪದಾಧಿಕಾರಿಗಳಾದ ನಾಗರಾಜು, ಮನೋಹರ್ ಹಾಗೂ ರುಕ್ಮೇಶ್ ಅತ್ಯಂತ ಯಶಸ್ವಿಯಾಗಿ ನಡಸಿಕೊಟ್ಟರು. ಸಭೆಯ ಇಂದಿನ ನಡವಳಿ ಬಗ್ಗೆ ನಿವೃತ್ತರು ಹರ್ಷ ವ್ಯಕ್ತಪಡಿಸಿದರು.