ಪಿರಿಯಾಪಟ್ಟಣ: ಚಿಕಿತ್ಸೆಗೆಂದು ಬಂದ ಮಹಿಳೆಯ ಜತೆ ಅನುಚಿತವಾಗಿ ವರ್ತಿಸಿದ ವೈದ್ಯರೊಬ್ಬರನ್ನು ಮಹಿಳೆ ನೀಡಿದ ದೂರಿನ ಮೇರೆಗೆ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ತಾಲೂಕಿನ ಬೈಲಕುಪ್ಪೆ ಗ್ರಾಮದ ಡಾ.ಸಿ.ಎನ್. ರೆಡ್ಡಿ ಕ್ಲಿನಿಕ್ನ ವೈದ್ಯ ಡಾ.ಚಂದ್ರ ಸೇನಾ ರೆಡ್ಡಿ ಎಂಬುವರೆ ಮಹಿಳೆ ಜತೆ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ಕಂಬಿಹಿಂದೆ ಬಂಧಿಯಾಗಿದ್ದಾರೆ.
ಹೊಟ್ಟೆ ನೋವಿನಿಂದ ಬಳಲುತ್ತಿದ್ದ ತಿರುಮಲಪುರ ಗ್ರಾಮದ ಮಹಿಳೆ ಚಿಕಿತ್ಸೆಗೆಂದು ಕ್ಲಿನಿಕ್ಗೆ ಬಂದಾಗ ಡಾ.ಚಂದ್ರ ಸೇನಾ ರೆಡ್ಡಿ ತಪಸ್ಸಣೆ ಮಾಡುವ ನೆಪದಲ್ಲಿ ಮಹಿಳೆಯ ಅಂಗಾಂಗವನ್ನು ಅಸಭ್ಯವಾಗಿ ಮುಟ್ಟಿ ಅನುಚಿತವಾಗಿ ವರ್ತಿಸಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ.
ಅಲ್ಲದೆ ಈ ಸಂಬಂಧ ಬೈಲಕುಪ್ಪೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಎಸ್ಐ ಅಜಯ್ ಕುಮಾರ್ ಅವರು ಡಾ. ಚಂದ್ರ ಸೇನಾ ರೆಡ್ಡಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.