ಬೆಂಗಳೂರು: ಸ್ಯಾಂಡಲ್ವುಡ್ನ ಮತ್ತೊಂದು ಕ್ಯೂಟ್ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದೆ. ಹೌದು! ಕನ್ನಡ ಸಿನಿಮಾರಂಗದ ಸ್ಟಾರ್ ನಿರ್ದೇಶಕ ತರುಣ್ ಸುಧೀರ್ ಹಾಗೂ ನಟಿ ಸೋನಾಲ್ ಹೊಸ ಜೀವನಕ್ಕೆ ಕಾಲಿಡುತ್ತಿದ್ದು, ಇದಕ್ಕೂ ಮೊದಲು ಅದ್ದೂರಿಯಾಗಿ ಅರಿಶಿಣ ಶಾಸ್ತ್ರ ನೆರೆವೇರಿದೆ.
ಅರಿಶಿಣದ ನೀರನ್ನು ಹೊಯ್ದುಕೊಂಡು ಫೋಟೋಗೆ ತರುಣ್ ಹಾಗೂ ಸೋನಲ್ ಪೋಸ್ ಕೊಟ್ಟಿದ್ದಾರೆ. ಆಗಸ್ಟ್ 10ರಂದು ಬೆಂಗಳೂರಲ್ಲಿ ಆರತಕ್ಷತೆ ಜರುಗಲಿದೆ. ಆಗಸ್ಟ್ 11ರಂದು ಇವರ ವಿವಾಹ ನೆರವೇರುತ್ತಿದೆ. ಚಿತ್ರರಂಗದ ಅನೇಕರ ಜೊತೆ ತರುಣ್ ಸುಧೀರ್ಗೆ ಒಳ್ಳೆಯ ಗೆಳೆತನ ಇದೆ. ಹೀಗಾಗಿ ನೆನಪಿರಲಿ ಪ್ರೇಮ್, ಶರಣ್ ಸೇರಿದಂತೆ ಅನೇಕರು ಅರಿಶಿಣ ಶಾಸ್ತ್ರಕ್ಕೆ ಬಂದು ಪೋಸ್ ಕೊಟ್ಟಿದ್ದಾರೆ.
ಕೆಲವು ವರ್ಷಗಳಿಂದ ಪ್ರೀತಿಯಲ್ಲಿ ಮುಳುಗಿದ್ದ ತರುಣ್ ಸುಧೀರ್ ಹಾಗೂ ಸೋನಲ್ ಜೋಡಿ ತಮ್ಮ ಮ್ಯಾಟರ್ ಅನ್ನು ರಹಸ್ಯವಾಗಿಯೇ ಇಟ್ಟಿತ್ತು. ಮದುವೆಗೆ ಬೇಕಿರುವ ತಯಾರಿಗಳನ್ನು ಕೂಡ ಗುಟ್ಟಾಗಿಯೇ ಮಾಡಿಕೊಳ್ಳುತ್ತಿದ್ದರು. ಆದರೂ ಇವರಿಬ್ಬರ ಮದುವೆ ವಿಚಾರ ಹೊರಬಂದು ಲೀಕ್ ಆಗಿತ್ತು.
ಕೆಲ ದಿನಗಳ ಹಿಂದೆ ಸೋನಾಲ್ ಮಂಥೆರೋ ಜೊತೆ ಮದುವೆ ಆಗುತ್ತಿರುವ ವಿಷಯವನ್ನು ನಟ ತರುಣ್ ಸುಧೀರ್ ಅವರೇ ಅಧಿಕೃತಗೊಳಿಸಿದ್ದರು. ಈ ಜೋಡಿ ನಾಳೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದು, ಅದಕ್ಕೂ ಮುನ್ನ ಇಂದು ಚಿತ್ರರಂಗದ ಗಣ್ಯರಿಗಾಗಿ, ಆತ್ಮೀಯರರಿಗಾಗಿ ಆರತಕ್ಷತೆಯನ್ನು ಹಮ್ಮಿಕೊಳ್ಳಲಾಗಿದೆ. ಇದಕ್ಕೂ ಮುನ್ನವೇ ಮದುವೆ ಸಂಭ್ರಮ ಹಾಗೂ ಶಾಸ್ತ್ರಗಳು ಆರಂಭ ಆಗಿವೆ.
ಅಭಿಮಾನಿಗಳು ತರುಣ್-ಸೋನಾಲ್ ಹಸೆಮಣೆ ಏರುವುದನ್ನು ಕಣ್ತುಂಬಿಕೊಳ್ಳಲು ಫ್ಯಾನ್ಸ್ ತುದಿಗಾಲಲ್ಲಿ ನಿಂತಿದ್ದು, ಸದ್ಯ ಹಳದಿ ಸಂಭ್ರಮದಲ್ಲಿ ಸ್ಯಾಂಡಲ್ವುಡ್ನ ಹಲವು ಹಲವರು ಜೋಡಿಯ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ.
ಸೋನಲ್ ಅವರು ಮಂಗಳೂರಿನವರು. ಅವರು ಮೊದಲು ತಮಿಳು ಸಿನಿಮಾದಲ್ಲಿ ನಟಿಸಿದ್ದರು. ಆನ್ಲೈನ್ನಲ್ಲಿ ಇರುವ ಮಾಹಿತಿ ಪ್ರಕಾರ ಅವರು ಜನಿಸಿದ್ದು 1995ರ ಆಗಸ್ಟ್ 11ರಂದು. ಕೆಲವೇ ದಿನಗಳಲ್ಲಿ 29 ವರ್ಷ ತುಂಬಲಿದೆ. ತರುಣ್ ಸುಧೀರ್ ಅವರಿಗೆ 41 ವರ್ಷ ಎನ್ನಲಾಗಿದೆ. ಈಗ ಅವರು ಜನಿಸಿದ್ದು 1983ರಲ್ಲಿ. ಅಂದರೆ, ಇಬ್ಬರ ಮಧ್ಯೆ ಸುಮರು 12 ವರ್ಷಗಳ ಅಂತರ ಇದೆ.