ಬೆಂಗಳೂರು: ವೇತನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಾರಿಗೆ ನೌಕರರ ವಿವಿಧ ಸಂಘಟನೆಗಳ ಮುಖಂಡರು ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲು ಸಭೆ ಸೇರಿ ಚರ್ಚಿಸುತ್ತಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಸುಮಾರು 5 ವರ್ಷಗಳಿಂದ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮುಷ್ಕರ ಸೇರಿದಂತೆ ಹಲವು ರೀತಿಯಲ್ಲಿ ಸರ್ಕಾರದ ಗಮನ ಸೆಳೆದರೂ ಸರ್ಕಾರವಾಗಲಿ, ಸಾರಿಗೆ ನಿಗಮದ ಆಡಳಿತ ಮಂಡಳಿಯಾಗಲಿ ನೌಕರರಿಗೆ ಸ್ಪಂದಿಸಿಲ್ಲ.
ಹೀಗಾಗಿ ಸಾರಿಗೆ ನೌಕರರ ಕೆಲ ಸಂಘಟನೆಗಳ ಮುಖಂಡರು ಉಪವಾಸ ಸತ್ಯಾಗ್ರಹ ಮಾಡುವ ಮೂಲಕ ಈ ಬಾರಿ ನೌಕರರ ವೇತನ ಸಮಸ್ಯೆಯನ್ನು ನಿವಾರಿಸಲೇಬೇಕು ಎಂದು ನಿರ್ಧರಿಸಿಸುತ್ತಿದ್ದು, ಈ ನಿಟ್ಟಿನಲ್ಲಿ ಸಂಘದ ಕಚೇರಿಗಳು ಮತ್ತು ಹೋಟೆಲ್‌ಗಳಲ್ಲಿ ಚಹಾಕೂಡದ ನೆಪದಲ್ಲಿ ಸಭೆ ನಡೆಸುತ್ತಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಇನ್ನು ನಮ್ಮ ಈ ತೀರ್ಮಾನವನ್ನು ಕೆಲ ಸಂಘಟನೆಗಳ ಮುಖಂಡರು ಬೆಂಬಲಿಸುವುದಿಲ್ಲ. ಹೀಗಾಗಿ ಅವರಿಗೆ ವಿಷಯ ತಿಳಿಯದಂತೆ ನಾವೇ ಮೊದಲು ಉಪವಾಸ ಸತ್ಯಾಗ್ರಹ ಆರಂಭಿಸಿದರೆ, ಸರ್ಕಾರದ ಗಮನ ಸೆಳೆಯಬಹುದು. ಜತೆಗೆ ನೌಕರರಿಗೂ ಹತ್ತಿರವಾಗಬಹುದು ಎಂಬ ಲೆಕ್ಕಾಚಾರದೊಂದಿಗೆ ಗೌಪ್ಯ ಸಭೆಗಳನ್ನು ನಡೆಸಿ ಚರ್ಚಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಸಾರಿಗೆ ನೌಕರರ ಬೇಡಿಕೆಯನ್ನು ಸರ್ಕಾರ ಪೂರೈಸಲೇ ಬೇಕು ಎಂದು ಪಟ್ಟುಹಿಡಿದು ಉಪವಾಸ ಸತ್ಯಾಗ್ರಹ ಕುಳಿತುಕೊಳ್ಳುವುದಕ್ಕೆ ಬೇಕಾದ ಸಿದ್ಧತೆ ಹಾಗೂ ವಿಪಕ್ಷಗಳ ಬೆಂಬಲವನ್ನು ಪಡೆಯುವುದು ಹೇಗೆ ಎಂಬ ನಿಟ್ಟಿನಲ್ಲೂ ವಿಸ್ತೃತ ಚರ್ಚೆ ನಡೆಯುತ್ತಿದೆ ಎಂದು ತಿಳಿದು ಬಂದಿದೆ.
ಇದಿಷ್ಟೇ ಅಲ್ಲದೆ ಸುಮಾರು 5 ವರ್ಷಗಳಿಂದ ಛಿದ್ರ ಛಿದ್ರವಾಗಿರುವ ನೌಕರರ ಮನಸ್ಸುಗಳನ್ನು ಮತ್ತೆ ಒಂದುಗೂಡಿಸುವ ಮೂಲಕ ತಮ್ಮ ವೈಯಕ್ತಿಕ ದ್ವೇಷವನ್ನು ಬದಿಗೊತ್ತಿ ಎಲ್ಲರೂ ಉಪವಾಸ ಸತ್ಯಾಗ್ರಹಕ್ಕೆ ವೈಯಕ್ತಿಕವಾಗಿ ಆಗಮಿಸಬೇಕು. ಜತೆಗೆ ಈ ಬಾರಿಯ ಉಪವಾಸ ಸತ್ಯಾಗ್ರಹದಲ್ಲಿ ಪ್ರಮುಖವಾಗಿ ಸಾರಿಗೆಯ ನಾಲ್ಕೂ ನಿಗಮಗಳ ಅಧಿಕಾರಿಗಳು ಬೆಂಬಲ ನೀಡಬೇಕು ಆ ಮೂಲಕ ಒಗ್ಗಟ್ಟು ಪ್ರದರ್ಶನ ಮಾಡಬೇಕು.
ಹೀಗೆ ಅಧಿಕಾರಿಗಳು ಬೆಂಬಲ ನೀಡಿದರೆ ಯಾವೊಬ್ಬ ನೌಕರರನ್ನು ಅಮಾನತು, ವಾಜಾ ಮತ್ತು ವರ್ಗಾವಣೆ ಮಾಡಲು ಸಾಧ್ಯವಿಲ್ಲ. ಅಲ್ಲದೆ ಅಧಿಕಾರಿಗಳು ಮಾನಸಿಕವಾಗಿ ಸಿದ್ಧರಾಗುವ ಮೂಲಕ ಈ ಬ್ರಿಟಿಷ್ ಪದ್ಧತಿಯಿಂದ ಹೊರಬಂದು ತಮ್ಮ ವೇತನವನ್ನು ಹೆಚ್ಚಿಸಿಕೊಳ್ಳುವ ಮೂಲಕ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿಯಾದರೂ ಬೆಂಬಲ ನೀಡಬೇಕಿದೆ.
ಇದಕ್ಕಾಗಿ ಮೊದಲು ಅಧಿಕಾರಿಗಳನ್ನು ಭೇಟಿ ಮಾಡಿ ಅವರಿಂದ ಸಲಹೆ ಪಡೆದು ಬಳಿಕ ಅವರ ಬೆಂಬಲದೊಂದಿಗೆ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಬೇಕು. ಒಂದು ವೇಳೆ ಅಧಿಕಾರಿಗಳು ಸಾಥ್ ನೀಡದಿದ್ದರೆ ನಮ್ಮ ಹೋರಾಟ ಹೊಳೆಯಲ್ಲಿ ಹುಣಸೆಹಣ್ಣು ತೇಯ್ದಂತೆ ಆಗುತ್ತದೆ. ಹೀಗಾಗಿ ಮೊದಲು ಅಧಿಕಾರಿಗಳು ಈ ಬಗ್ಗೆ ಏನು ಹೇಳುತ್ತಾರೆ ಎಂಬುದನ್ನು ತಿಳಿದುಕೊಳ್ಳಬೇಕು ಎಂದು ಕೆಲ ಮುಖಂಡರು ಸಭೆಯಲ್ಲಿ ಅಭಿಪ್ರಾಯಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನು ಈ ಬಾರಿ ನೌಕರರು ಕೂಡ ದೃಢನಿರ್ಧಾರ ತೆಗೆದುಕೊಂಡಿದ್ದು, ನಮ್ಮ ಅಧಿಕಾರಿಗಳು ಈ ವೇತನ ಹೆಚ್ಚಳ ಸಂಬಂಧ ಬೆಂಬಲ ನೀಡಿದರೆ ಮಾತ್ರ ನಾವು ಹೋರಾಟದಲ್ಲಿ ಭಾಗಿಯಾಗೋಣ ಇಲ್ಲದಿದ್ದರೆ ಅವರಿಗೆ ಆದಂತೆ ನಮಗೂ ಆಗುತ್ತದೆ. ಹೀಗಾಗಿ ನಮ್ಮ ಪಾಡಿಗೆ ನಾವು ಕೆಲಸ ಮಾಡೋಣ. ನಾವು ಬೀದಿಗಿಳಿದು ಹೋರಾಟ ಮಾಡಿ ಅಮಾನತು, ವಜಾ, ವರ್ಗಾವಣೆ ನೋವನ್ನು ಅನುಭವಿಸಿ ಅಧಿಕಾರಿಗಳಿಗೆ ಲಾಭ ಮಾಡಿಕೊಡಲು ಏಕೆ ಮುಂದಾಗಬೇಕು ಎಂಬ ಅನಿಸಿಕೆಗಳು ಸಭೆಯಲ್ಲಿ ವ್ಯಕ್ತವಾಗಿ ಎನ್ನಲಾಗುತ್ತಿದೆ.
ಈ ಎಲ್ಲವನ್ನು ಗಮನಿಸಿದರೆ ಇಲ್ಲಿ ಅಧಿಕಾರಿಗಳು ಸಾಥ್ ನೀಡದಿದ್ದರೆ ಈ ಬಾರಿ ನೌಕರರು ಸಂಘಟನಗಳು ನೀಡುವ ಹೋರಾಟದ ಕರೆಗೆ ಕಿವಿಗೊಡುವುದಿಲ್ಲ. ಹೀಗಾಗಿ ಬರಿ ಸಂಘಟನೆಗಳ ಮುಖಂಡರಷ್ಟೇ ಹೋರಾಟಕ್ಕೆ ಇಳಿಯಬೇಕಷ್ಟೆ. ಇದರಿಂದ ಸರ್ಕಾರದ ಮಟ್ಟದಲ್ಲಿ ಯಾವುದೇ ಬೇಡಿಕೆಯಾದರೂ ಸಮರ್ಪಕವಾಗಿ ಈಡೇರುವುದಿಲ್ಲ ಎಂಬ ನಿಟ್ಟಿನಲ್ಲೂ ಚರ್ಚೆಯಾಗುತ್ತಿದೆ ಎಂದು ತಿಳಿದು ಬಂದಿದೆ.
ಒಟ್ಟಾರೆ ಸಾರಿಗೆ ಅಧಿಕಾರಿಗಳು ಹೋರಾಟಗಳಿಗೆ ಸಾಥ್ ನೀಡದೆ ಹೋದರೆ ನೌಕರರು ಈ ಬಾರಿ ಯಾವುದಕ್ಕೂ ಬೀದಿಗಿಳಿಯುವುದಿಲ್ಲ ಎಂಬುವುದು ಇತ್ತ ಸರ್ಕಾರಕ್ಕೆ ಹಾಲು ಕುಡಿದಷ್ಟು ಸಂತಸವಾಗುತ್ತಿದೆ. ಕಾರಣ ಈಗಾಗಲೇ ಸರ್ಕಾರಿ ನೌಕರರಿಗೆ ಶೇ.27.5ರಷ್ಟು ವೇತನ ಹೆಚ್ಚಳ ಮಾಡಿದ್ದು ಇದರಿಂದ ಉಂಟಾಗಿರುವ ಆರ್ಥಿಕ ಹೊರೆಯಿಂದ ಹೊರಬಂದರೆ ಸಾಕು. ಈ ನಡುವೆ ಸಾರಿಗೆ ನೌಕರರು ಪಟ್ಟು ಹಿಡಿದರೆ ಇನ್ನಷ್ಟು ಸಮಸ್ಯೆ ಆಗುತ್ತದೆ. ಹೀಗಾಗಿ ನಮಗೆ ಸರ್ಕಾರ ನಡೆಸುವುದು ಕಷ್ಟವಾಗುತ್ತದೆ. ಹೀಗಾಗಿ ಇದು ಒಂದು ರೀತಿ ಒಳ್ಳೆಯದೆ ಎನ್ನುತ್ತಿದೆ ಆಡಳಿತ ಪಕ್ಷ.
ಎಲ್ಲಾ ಸರಿ,ಅದೇನೋ ಪ್ರತಿಪಕ್ಷಗಳ ಬೆಂಬಲ ಕೋರುತ್ತೇವೆ ಅಂತ ಹೇಳಿದ್ದಿರಲ್ಲ,ಯಾವ ಪ್ರತಿಪಕ್ಷ ಅಧಿಕಾರದಲ್ಲಿದ್ದು ಮುಷ್ಕರ ಮಾಡಿದಾಗ ,ಲಿಖಿತವಾಗಿ ಬೇಡಿಕೆ ಈಡೇರಿಸುತ್ತೇವೆಂದು ಬರೆದು ಕೊಟ್ಟು ಆ ದಿನದ ಸಾಯಂಕಾಲ ನಾವು ಆ ರೀತಿ ಹೇಳಲಿಲ್ಲವೆಂದು ಜಾರಿಕೊಂಡು ,ಈಗಿನ ಪ್ರತಿಪಕ್ಷ ಅಯೋಗ್ಯ ನಾಯಕನ ಬೆಂಬಲವೇ?. ಆ ಅಯೋಗ್ಯ ನಿಮಗೆ ಯಾವ ಮುಖ ಇಟ್ಟುಕೊಂಡು ಬೆಂಬಲಕ್ಕೆ ಬಂದಾನು ಸ್ವಲ್ಪ ಯೋಚಿಸಿ , ಆ ಲೋಪರ್ ಬಿಎಸ್ವೈ ನ ಕಿರುಕುಳಗಳು ಮರೆತಿರಾ ,ಅಂತ ಕಾರ್ಮಿಕ ವಿರೋಧಿಗಳ ಬೆಂಬಲವೇ ?.ಯಾವ ಪುರುಷಾರ್ಥಕ್ಕೆ