NEWSಸಿನಿಪಥ

ಟೊವಿನೋ ಥಾಮಸ್ ಸಿನಿಮಾ ವಿತರಿಸಲಿದೆ ಹೊಂಬಾಳೆ ಫಿಲ್ಮ್!

ಎಆರ್​​ಎಂ​​ ಟೊವಿನೋ ಥಾಮಸ್ ಅವರ 50ನೇ ಚಿತ್ರ

ವಿಜಯಪಥ ಸಮಗ್ರ ಸುದ್ದಿ

ಮಿನ್ನಲ್ ಮುರಳಿ’ ಮತ್ತು ‘2018 – ಎವ್ರಿಒನ್​​ ಈಸ್ ಎ ಹೀರೋ’ ಚಿತ್ರಗಳ ಮೂಲಕ ರಾಷ್ಟ್ರವ್ಯಾಪಿ ಗಮನ ಸೆಳೆದಿರುವ ಮಲೆಯಾಳಂ ನಟ ಟೊವಿನೋ ಥಾಮಸ್.‌ ಸದಾ ವಿಭಿನ್ನ ಕಥೆ ಆಯ್ಕೆ ಮಾಡಿಕೊಳ್ಳುವ ಜನಪ್ರಿಯ ನಟನೀಗ “ಎಆರ್​​ಎಂ​​” (Ajayante Randam Moshanam /ಅಜಯಂತೇ ರಂದಮ್ ಮೋಷನಂ) ಎಂಬ ಫ್ಯಾಂಟಸಿ ಪ್ಯಾನ್ ಇಂಡಿಯಾ ಚಿತ್ರದೊಂದಿಗೆ ಮತ್ತೊಮ್ಮೆ ಪ್ರೇಕ್ಷಕರೆದುರು ಬರುತ್ತಿದ್ದಾರೆ.

ಜಿತಿನ್ ಲಾಲ್ ನಿರ್ದೇಶನದ ಚೊಚ್ಚಲ ಚಿತ್ರ. ಸಿನಿಮಾ ಸಂಪೂರ್ಣವಾಗಿ 3ಡಿಯಲ್ಲಿ ತಯಾರಾಗಿದೆ. ಮಲಯಾಳಂ ಇತಿಹಾಸದಲ್ಲೇ ತಾಂತ್ರಿಕ ವಿಷಯದಲ್ಲಿ ಶ್ರೀಮಂತ ಚಿತ್ರಗಳಲ್ಲಿ ಒಂದಾಗಿದೆ. ಈಗಾಗಲೇ ಬಿಡುಗಡೆಯಾಗಿ ಟ್ರೇಲರ್ ಚಿತ್ರದ ಸುತ್ತಲಿನ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸಿದೆ.

ಮಹಿಳೆಯೋರ್ವರು ಕಥೆಯನ್ನು ವಿವರಿಸುತ್ತಾರೆ. ಹಿಂಸಾಚಾರ ಮತ್ತು ನಾಯಕನ ಪ್ರವೇಶವನ್ನು ಟ್ರೇಲರ್​ನಲ್ಲಿ ತೋರಿಸಲಾಗಿದೆ. ಎಆರ್​​ಎಂ ಭರ್ಜರಿ ಆ್ಯಕ್ಷನ್​ ಸೀನ್​ಗಳೊಂದಿಗೆ ಅದ್ಭುತ ಸಿನಿಮೀಯ ಅನುಭವ ನೀಡಲಿದೆ ಎಂಬ ಸುಳಿವನ್ನು ಈ ಟ್ರೇಲರ್​​ ಕೊಟ್ಟಿದೆ.

ಟೊವಿನೋ ಥಾಮಸ್​​​ ಮೂರು ವಿಭಿನ್ನ ಪಾತ್ರಗಳನ್ನು ಚಿತ್ರಿಸಿದ್ದಾರೆ. ಮಣಿಯನ್, ಕುಂಜಿಕ್ಕೆಲು ಮತ್ತು ಅಜಯನ್ ಎಂಬ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಭೂಮಿಯ ಸಂಪತ್ತನ್ನು ರಕ್ಷಿಸುವ ಹೋರಾಟವಿದೆ. ಕೇರಳದ ಶ್ರೀಮಂತ ಸಂಸ್ಕೃತಿಯನ್ನು ಪ್ರದರ್ಶಿಸುತ್ತದೆ. ಒಂದು ಬಲವಾದ ಕಥೆಯೊಂದಿಗೆ ದೃಶ್ಯ ಚಮತ್ಕಾರವಿರಲಿದೆ ಎಂಬ ಭರವಸೆ ನೀಡಿದೆ.

ಎಆರ್​​ಎಂ​​ ಟೊವಿನೋ ಥಾಮಸ್ ಅವರ 50ನೇ ಚಿತ್ರವಾಗಿದ್ದು, ಟ್ರೇಲರ್​ನಿಂದ ಸಾಕಷ್ಟು ಕುತೂಹಲ ಹುಟ್ಟಿಸಿದೆ‌. ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸುವ ನಿರೀಕ್ಷೆಯಿದೆ. ಭರ್ಜರಿ ಆ್ಯಕ್ಷನ್ ಸೀಕ್ವೆನ್ಸ್‌ ನಿರ್ವಹಿಸಲು ನಟ ಕಳರಿಪಯಟ್ಟುವಿನ ವ್ಯಾಪಕ ತರಬೇತಿ ಪಡೆದಿದ್ದರು. ಕಾಂತಾರ ಖ್ಯಾತಿಯ ವಿಕ್ರಮ್ ಮೂರ್ ಮತ್ತು ಫೀನಿಕ್ಸ್ ಪ್ರಭು ಸ್ಟಂಟ್ಸ್ ಸಂಯೋಜಿಸಿದ್ದಾರೆ.

Leave a Reply

error: Content is protected !!
LATEST
NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು