NEWSನಮ್ಮಜಿಲ್ಲೆನಮ್ಮರಾಜ್ಯ

7ನೇ ವೇತನ ಆಯೋಗ ಯಥಾವತ್‌ ಜಾರಿಗೆ KSRTC ಆಫೀಸರ್ಸ್‌ ವೆಲ್ಫೇರ್‌ ಅಸೋಶಿಯೇಶನ್‌ ಪದಾಧಿಕಾರಿಗಳ ಒತ್ತಾಯ

ವಿಜಯಪಥ ಸಮಗ್ರ ಸುದ್ದಿ
  • ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್‌ ಮತ್ತು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರಿಗೆ ಮನವಿ ಸಲ್ಲಿಕೆ
  • ಶೇ.32ರಷ್ಟು ವೇತನ ವ್ಯತ್ಯಾಸವಿದೆ ಇದನ್ನು ಸರಿಪಡಿಸಲು 7ನೇ ವೇತನ ಆಯೋಗ ಜಾರಿಯಾಗಬೇಕು

ಬೆಂಗಳೂರು: ಕರ್ನಾಟಕ ರಾಜ್ಯದ ಸಾರಿಗೆ ಸಂಸ್ಥೆಯ ಅಧಿಕಾರಿಗಳಿಗೂ 7ನೇ ವೇತನವನ್ನು ನಿಗದಿಪಡಿಸಬೇಕು ಹಾಗೂ ಇತರೆ ಬೇಡಿಕೆಗಳ ಈಡೇರಿಸಬೇಕು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್‌ ಅವರಿಗೆ ಕೆಎಸ್‌ಆರ್‌ಟಿಸಿ ಆಫೀಸರ್ಸ್‌ ವೆಲ್ಫೇರ್‌ ಅಸೋಶಿಯೇಶನ್‌ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.

ಈ ಸಂಬಂಧ ಅ.5ರಂದು ಸಾರಿಗೆ ಸಚಿವರನ್ನು ಭೇಟಿ ಮಾಡಿದ ಪದಾಧಿಕಾರಿಗಳು ಕರ್ನಾಟಕದ ಜನರ ಜೀವನಾಡಿಯಾಗಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಪ್ರಸ್ತುತ 1.30 ಲಕ್ಷ ನೌಕರರನ್ನು ಹೊಂದಿದ್ದು, ಅದರಲ್ಲಿ ಅಧಿಕಾರಿಗಳ ಸಂಖ್ಯೆಯು 799 ಇದೆ. ಅಂದರೆ ಅಧಿಕಾರಿಗಳ ಸಂಖ್ಯೆಯು ಸಿಬ್ಬಂದಿಗಳಿಗೆ ಹೊಲಿಸಿದಲ್ಲಿ ಶೇ.0.6ರಷ್ಟು ಇದೆ.

ಇದು ಅತೀ ಕಡಿಮೆ ಪ್ರಮಾಣದಲ್ಲಿದೆ ಹಾಗೂ ಅಕ್ಕ ಪಕ್ಕ ರಾಜ್ಯದ ಅಧಿಕಾರಿಗಳ ಅನುಪಾತಕ್ಕೆ ಹೊಲಿಸಿದಾಗ ಇದು ಕಡಿಮೆ ಅನುಪಾತವಾಗಿದೆ. ಕಾರಣ ಕೊರತೆ ಇರುವ ನೇಮಕಾತಿಯಾಗುವುದು ಅವಶ್ಯಕವಾಗಿದೆ ಹಾಗೂ ರಾಜ್ಯದ ಜನತೆಗೆ ಉತ್ತಮವಾದ ಸೇವೆಯನ್ನು ನೀಡುವ ದೃಷ್ಟಿಯಿಂದ ಅಸ್ತಿತ್ವಗೊಂಡಿರುವ ಈ ಸಾರಿಗೆ ನಿಗಮ ಇದು ಒಂದು ವಾಣಿಜ್ಯ ಸಂಸ್ಥೆಯಾಗಿರದೇ, ಸಾರ್ವಜನಿಕ ಸೇವಾ ಸಂಸ್ಥೆಯಾಗಿಉ, ಸಾರ್ವಜನಿಕರಿಗೆ ಉತ್ತಮ ಸಾರಿಗೆ ಸೌಲಭ್ಯ ನೀಡುವುದು ಮೊದಲ ಆದ್ಯತೆಯಾಗಿದೆ.

ಭಾರತ ದೇಶದಲ್ಲಿ ಯಾವುದೇ ಸಾರಿಗೆ ಸಂಸ್ಥೆ ಲಾಭದಾಯಕವಾಗಿರುವುದಿಲ್ಲ. ಸಂಸ್ಥೆಯ ಆಡಳಿತದಲ್ಲಿ ನಿಯಂತ್ರಣ ಸಾಧಿಸಲು, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹಾಗೂ ಬೆಂಗಳೂರು ಮಹಾನಗನರ ಸಾರಿಗೆ ಸಂಸ್ಥೆ ಈ ನಾಲ್ಕು ಸಂಸ್ಥೆಗಳು ಸ್ವತಂತ್ರವಾಗಿ ಹಾಗೂ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಆದರೆ ಇತ್ತೀಚಿನ ದಿನಗಳಲ್ಲಿ ಸರಕಾರದ ಶಕ್ತಿಯೋಜನೆಯಿಂದ ಸಂಸ್ಥೆಗೆ ಸ್ವಲ್ಪ ಶಕ್ತಿ ಬಂದಂತಾಗಿ ಚೇತರಿಸಿಕೊಳ್ಳುತ್ತಿದೆ.

ಆದರೇ ಸಂಸ್ಥೆಗಳನ್ನು ಇನ್ನೂ ಉತ್ತಮವಾಗಿ, ಆರ್ಥಿಕವಾಗಿ, ಸ್ವಾವಲಂಬಿಯಾಗಿ ಹಾಗೂ ಸ್ವತಂತ್ರವಾಗಿ ಕಾರ್ಯನಿರ್ವಹಿಸುವಂತೆ ಮಾಡಬೇಕಾಗಿರುವುದು ನಮ್ಮೆಲ್ಲರ ಹಾಗೂ ಸರಕಾರದ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಅನಿಭವಿ ಹಾಗೂ ಹಿರಿಯ ಅಧಿಕಾರಿಗಳಿಂದ ಸಮಾಲೋಚನೆ ಮಾಡಿ ಸಂಸ್ಥೆಯ ಪುನರ್‌ಜ್ಜೀವನಕ್ಕೆ ಹಾಗೂ ಅವರ ಪ್ರಸ್ತುತ ಬೇಡಿಕೆಗಳ ಈಡೇರಿಸಬೇಕು ಎಂದು ಈ ಕೆಳಕಂಡ ಸಲಹೆಗಳನ್ನು ಈ ಮೂಲಕ ತಮ್ಮಲ್ಲಿ ಸಲ್ಲಿಸುತ್ತಿದ್ದೇವೆ.

1) ಅಧಿಕಾರಿಗಳಿಗೂ ಇಂದಿನ ದಿನಕ್ಕೆ ತಕ್ಕಂತೆ ವೇತನ ಪರಿಷ್ಕರಿಸುವುದು ಅಗತ್ಯವಿದೆ. ಈಗಾಗಲೇ ಕರ್ನಾಟಕ ರಾಜ್ಯ ಸರಕಾರ ಸರಕಾರಿ ನೌಕರರಿಗೆ 7ನೇ ವೇತನ ಅನುಷ್ಠಾನಗೊಳಿಸಿದೆ. ಕ.ರಾ.ರ.ಸಾ.ಸಂಸ್ಥೆಯ ಅಧಿಕಾರಿಗಳು Trade Union ವ್ಯಾಪ್ತಿಗೆ ಒಳಪಟ್ಟಿರುವುದಿಲ್ಲ. ಹಾಗೂ Management ನಿರ್ದೇಶನಗಳನ್ನು ಚಾಚು ತಪ್ಪದೇ ಅನುಷ್ಟಾನಗೊಳಿಸುವಲ್ಲಿ ವಿಶೇಷ ಪಾತ್ರವಹಿಸಿರುವ ಕಾರಣ ಅಧಿಕಾರಿಗಳು Management ನ ಭಾಗವಾಗಿರುವುದರಿಂದ ಅವರಿಗೆ ಸರಕಾರಿ ನೌಕರರಿಗೆ ನೀಡುತ್ತಿರುವ ವೇತವನ್ನು ನಿಗದಿಪಡಿಸುವುದು ವೈಜ್ಞಾನಿಕ ಕ್ರಮವಾಗಿದೆ.

ಇಷ್ಟು ವರ್ಷಗಳ ಕಾಲ Trade Union ನೌಕರರಿಗೆ ವೇತನ ಪರಿಷ್ಕರಿಸಲಾಗಿದ್ದರೂ ಇದು ಅಧಿಕಾರಿಗಳಿಗೆ ವೈಜ್ಞಾನಿಕ ವೇತನ ನಿಗದಿಪಡಿಸಿರುವುದಿಲ್ಲ ಹಾಗೂ ಸಮಂಜಸವಾಗಿರುವುದಿಲ್ಲ. ಕಾರಣ ಎಲ್ಲ ಅಧಿಕಾರಿಗಳು Management ಭಾಗವಾಗಿರುವುದರಿಂದ ಸರಕಾರಿ ನೌಕರರಂತೆ 7ನೇ ವೇತನವನ್ನು ನಮಗೂ ಅನುಷ್ಟಾನಗೊಳಿಸಬೇಕು. ಅಧಿಕಾರಿಗಳು ಕೇವಲ 799 ಇದ್ದು. ಇದು ಒಟ್ಟು ನೌಕರರ ಅನುಪಾತಕ್ಕೆ 0.6% ಇರುವುದರಿಂದ ಸಂಸ್ಥೆಗೆ ಹೇಳಿಕೊಳ್ಳುವಂತಹ ಆರ್ಥಿಕ ಹೊರೆ ಸಹ ಆಗುವುದಿಲ್ಲ.

2 ಮತ್ತು 3ನೇ ಬೇಡಿಕೆ ಸರ್ಕಾರಿ ನೌಕರರು ಮತ್ತು ಸಾರಿಗೆ ನೌಕರರಿಗೆ ಇರುವ ವೇತನ ವ್ಯತ್ಯಾಸದ ಬಗ್ಗೆ ತಿಳಿಸಿದರುವ ಕೋಷ್ಠಕವಿದೆ. ಅದನ್ನು ಕೊನೆಯಲ್ಲಿ ನೋಡಬಹುದು.

4) ಸಂಸ್ಥೆಯ ಸ್ತಂಭಗಳಾದ ಘಟಕ ವ್ಯವಸ್ಥಾಪಕರ ಹುದ್ದೆಯನ್ನು ಪರಿಣಾಮಕಾರಿಯಾಗಿಸುವುದು ಮತ್ತು ಕೆಲಸದ ಅವಧಿಯನ್ನು ನಿಗದಿಪಡಿಸುವ ಕುರಿತು, ಸಂಸ್ಥೆಯಲ್ಲಿ ಆದಾಯಗಳಿಸುವ ಪ್ರಮುಖ ಕೇಂದ್ರ ಘಟಕಗಳು. ಆದರೆ, ಇತ್ತೀಚಿನ ದಿನಗಳಲ್ಲಿ ಘಟಕ ವ್ಯವಸ್ಥಾಪಕರ ಹುದ್ದೆ ಅತೀ ನಿರ್ಲಕ್ಷತನಕ್ಕೆ ಒಳಗಾಗಿದ್ದು, ಇದರಿಂದಾಗಿ ಘಟಕ ವ್ಯವಸ್ಥಾಪಕರ ಸಾಧನೆ ಕಳಪೆಯಾಗುತ್ತಿದೆ. ಆದ ಕಾರಣ ಈ ಹಿಂದೆ ಘಟಕಗಳನ್ನು ಎ ಬಿ ಸಿ ಎಂದು ವರ್ಗಿಕರಣ ಮಾಡಿ ಉತ್ತಮ/ಅತ್ಯುತ್ತಮ ಘಟಕ ವ್ಯವಸ್ಥಾಪಕರನ್ನು ಗುರುತಿಸಿ ಎ ಮತ್ತು ಬಿ ಘಟಕ ವ್ಯವಸ್ಥಾಪಕರನ್ನು ನಿಯೋಜಿಸುವ ಪ್ರಕ್ರಿಯೆ ಸ್ಥಗಿತಗೊಂಡಿದೆ. ಇದರಿಂದ ಸಂಸ್ಥೆಯ ಪ್ರಗತಿ ಕುಂಠಿತವಾಗಲು ಕಾರಣವಾಗಿದೆ. ಇದನ್ನು ಸರಿಪಡಿಸುವ ಹಾಗೂ ಪ್ರೋತ್ಸಾಹಿಸುವ ಕೆಲಸವಾಗಬೇಕಾಗಿದೆ. ವಾ.ಕ.ರ.ಸಾ ಸಂಸ್ಥೆಯಲ್ಲಿ ಘಟಕ ವ್ಯವಸ್ಥಾಪಕರಿಗೆ ಕೆಲಸದ ಅವಧಿಯನ್ನು ನಿಗದಿಪಡಿಸುವುದು ಹಾಗೂ ಅವರನ್ನು ಮನೋಸ್ಥೆರ್ಯ ಹೆಚ್ಚಿಸುವ ಕೆಲಸವಾಗಬೇಕಾಗಿದೆ.

5) ತಾತ್ಕಾಲಿಕವಾಗಿ ಉನ್ನತ ವಿದ್ಯಾಭ್ಯಾಸ ಹಾಗೂ ವಿದ್ಯಾರ್ಜನೆಗಾಗಿ ಬೇರೆ ಬೇರೆ ಉದ್ಯೋಗಳಲ್ಲಿ ಆಸಕ್ತಿ ಇರುವ ಅಧಿಕಾರಿ/ಸಿಬ್ಬಂದಿಗಳಿಗೆ ವೇತನ ರಹಿತ ರಜೆಯ ಮೇಲೆ ಒಂದು ವರ್ಷದಿಂದ 5 ವರ್ಷದ ವರೆಗೆ ಅನುಮತಿ ನೀಡುವ ಪದ್ಧತಿ ಜಾರಿಯಲ್ಲಿತ್ತು. ಆದರೆ ಪ್ರಸ್ತುತ ಈ ಪದ್ಧತಿಯನ್ನು ಸ್ಥಗಿತಗೊಳಿಸಲಾಗಿದೆ. ಕಾರಣ ಈ ವಿಷಯಕ್ಕೆ ಸಂಬಂಧಿಸಿದಂತೆ ಈ ಹಿಂದೆ ಹೊರಡಿಸಿದ ಸುತ್ತೋಲೆ ಸಂಖ್ಯೆ 1192 ನ್ನು ತಡೆಹಿಡಿಯಲಾಗಿದ್ದು, ಸದರಿ ಸುತ್ತೋಲೆಯನ್ನು ಮರು ಪ್ರಾರಂಭಿಸಬೇಖು. ಇದರಿಂದಾಗಿ ಅಧಿಕಾರಿಗಳ ಗುಣಮಟ್ಟ ಸುಧಾರಿಸುವುದಲ್ಲದೇ, ಸಂಸ್ಥೆಯ ಹೊರೆಯು ಸಹ ಕಡಿಮೆಗೊಳಿಸಿದಂತಾಗುತ್ತದೆ.

6) ಸಂಸ್ಥೆಗಳು ತನ್ನ ಕಾರ್ಯಾಚರಣೆಯ ಶೇಕಡಾ 50 ಕ್ಕಿಂತ ಹೆಚ್ಚು ಭಾಗವನ್ನು ಗ್ರಾಮೀಣ ಪ್ರದೇಶದಲ್ಲಿ ಕಾರ್ಯಚರಣೆಗೊಳಿಸುತ್ತಿದ್ದು, ಈ ಕಾರ್ಯಾಚರಣೆಯಿಂದ 3 ಸಂಸ್ಥೆಗಳಿಗೆ ವಾರ್ಷಿಕವಾಗಿ ಸುಮಾರು ರೂ. 250 ರಿಂದ 300 ಕೋಟಿ ನಷ್ಟ ಉಂಟಾಗುತ್ತಿದೆ. ಕಾರಣ ಮಹಾರಾಷ್ಟ್ರ ಹಾಗೂ ಇತರೆ ರಾಜ್ಯಗಳಲ್ಲಿರುವಂತೆ, ಸದರಿ ಮೊತ್ತವನ್ನು ಸರ್ಕಾರವು ಮರುಪಾವತಿಸುವಂತೆ ಕೋರಲಾಗಿದೆ.

7) ಸಂಸ್ಥೆಯಲ್ಲಿ ನೇಮಕಗೊಂಡ ಕೆಲವು ಅಧಿಕಾರಿಗಳು 10 ರಿಂದ 15 ವರ್ಷ ಒಂದೇ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರೂ ಸಹ, ಅವರಿಗೆ ಮುಂಬಡ್ತಿ ನೀಡಿರುವುದಿಲ್ಲ. ಇದರಿಂದ ಅಧಿಕಾರಿಗಳು ಮಾನಸಿಕವಾಗಿ ಕುಂದಿರುತ್ತಾರೆ. ಕಾರಣ ಅಧಿಕಾರಿಗಳಿಗೆ ಕೆ.ಎ.ಎಸ್. ಅಧಿಕಾರಿಗಳಿಗೆ ಬಡ್ತಿ ನೀಡುವ ಮಾದರಿಯಲ್ಲಿ ಕಾಲಮಿತಿ (Time Bond) ಮುಂಬಡ್ತಿ ನೀಡುವುದು.

8) ನಾಲ್ಕು ಸಾರಿಗೆ ನಿಗಮಗಳಲ್ಲಿ ಸಂಸ್ಥೆಯ ಮಂಡಳಿಗಳಿದ್ದು, ಸದರಿ ಮಂಡಳಿಗಳಿಗೆ ಸರ್ಕಾರದಿಂದ ನೇಮಿಸಲ್ಪಟ್ಟ ಅಧಿಕಾರಿ/ಅಧಿಕಾರೇತರ ನಿರ್ದೇಶಕರು ಇದ್ದು, ಸಂಸ್ಥೆಯ ನಿಲುವುಗಳ ಬಗ್ಗೆ ನಿರ್ಧಾರ ಕೈಗೊಳ್ಳುತ್ತಿದ್ದಾರೆ. ಆದರೆ ಸಂಸ್ಥೆಯ ನಿಲುವುಗಳನ್ನು ಪರಿಣಾಮಕಾರಿಯಾಗಿ ನಿರ್ಧಾರ ತೆಗೆದುಕೊಳ್ಳಲು ಅನುಕೂಲವಾಗುವಂತೆ, ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದಿಂದ ನಾಮನಿರ್ದೇಶನಗೊಂಡ ಒಬ್ಬ ಅಧಿಕಾರಿಯನ್ನ ಹಾಗೂ ನೌಕರರ ವರ್ಗದವರಿಂದ ನಾಮನಿರ್ದೇಶನಗೊಂಡ ಒಬ್ಬ ನೌಕರನನ್ನು ಸಂಸ್ಥೆಯ ನಿರ್ದೇಶಕ ಮಂಡಳಿಗೆ ನಾಮನಿರ್ದೇಶನ ಮಾಡುವುದರಿಂದ ಅಧಿಕಾರಿಗಳ ಹಾಗೂ ನೌಕರರ ಹಿತ ಕಾಪಾಡಲು ಸಾಧ್ಯವಾಗುತ್ತದೆ.

9) ಸಂಸ್ಥೆಯಲ್ಲಿ ಅಧಿಕಾರಿಗಳ ವರ್ಗಾವಣೆ ಹಾಗೂ ಪದೋನ್ನತಿಯಲ್ಲಿ ಸಾಕಷ್ಟು ತಾರತಮ್ಯಗಳಿದ್ದು ಇದನ್ನು ನಿವಾರಿಸುವ ನಿಟ್ಟಿನಲ್ಲಿ ಪಾರದರ್ಶಕತೆ ತರುವುದು ಹಾಗೂ ತಾರತಮ್ಯ ನೀತಿಯನ್ನು ತೆಗೆದು ಹಾಕುವುದು ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ನಿಯಮಗಳ ಅವಶ್ಯಕತೆ ಇದೆ.ಆದ್ದುದರಿಂದ ಈ ರೀತಿಯ ನಿಯಮಗಳನ್ನು ನಿಲ್ಲಿಸುವ ಕ್ರಮವಾಗಬೇಕಿದೆ.

10) ಸಂಸ್ಥೆಯಲ್ಲಿ ಅಧಿಕಾರಿಗಳ ಜೇಷ್ಠತೆ ನಿಗದಿಪಡಿಸುವಲ್ಲಿ ಸರಿಯಾದ ಹಾಗೂ ನ್ಯಾಯಯುತವಾದ ನಿಯಮಾವಳಿಗಳಿಲ್ಲ. ಇದರಿಂದಾಗಿ ಹಿರಿಯ ಅಧಿಕಾರಿಗಳು, ಕಿರಿಯ ಅಧಿಕಾರಿಗಳ ಕೆಳಗಡೆ ಕೆಲಸ ಮಾಡುವಂತಾಗಿ, ಅಧಿಕಾರಿಗಳು ನೈತಿಕವಾಗಿ ಕುಸಿದಿರುತ್ತಾರೆ. ಕಾರಣ ಸಾಮಾನ್ಯ ಜೇಷ್ಠತೆ (Comman Seniority) ನಿಗದಿಪಡಿಸಿ, ಈಗಾಗಿರುವ ಜೇಷ್ಠತೆಯ ನ್ಯೂನ್ಯತೆಗಳನ್ನು ಸರಿಪಡಿಸುವುದು ಅವಶ್ಯಕವಾಗಿದೆ.

11) KSRTC CADRE AND REGULATIONS 1982 ರ ಪರಿಚ್ಛೇದ 17/1ರ ಮೇಲೆ ಸಾಕಷ್ಟು ಅಧಿಕಾರಿಗಳನ್ನು ಮೂಲ ಹುದ್ದೆಯಿಂದ ಬೇರೆ ಹುದ್ದೆಗೆ ನಿಯೋಜಿಸಲಾಗಿದ್ದು, ಇದರಿಂದಾಗಿ ಸಾಕಷ್ಟು ಅಧಿಕಾರಿಗಳ ಸೇವೆಯು ಸಮರ್ಪಕವಾಗಿ ಬಳಕೆ ಆಗುತ್ತಿಲ್ಲ. ಅಲ್ಲದೇ ಅಧಿಕಾರಿಗಳು ಸಮರ್ಪಕವಾಗಿ ಕಾರ್ಯಾನಿರ್ವಹಿಸಲು ಸಾಧ್ಯವಾಗದೇ, ಇದು ಸಂಸ್ಥೆಯ ಪ್ರಗತಿಗೆ ಕುಂಠಿತವಾಗಿದೆ. ಅಲ್ಲದೇ ಹಗರಣಗಳು ಆಗುವ ಸಾಧ್ಯತೆ ಇದೆ. ಆದ್ದರಿಂದ ಅತೀ ಅವಶ್ಯಕವಿದ್ದಲ್ಲಿ ಮಾತ್ರ ನಿಯೋಜಿಸುವುದು.

12) ಸಂಸ್ಥೆಯ ಅಧಿಕಾರಿಗಳ ವಿರುದ್ಧ ದಾಖಲಾದ ಶಿಸ್ತು ಪ್ರಕರಣಗಳನ್ನು ಕಾಲಮಿತಿಯಲ್ಲಿ ಮುಕ್ತಾಯಗೊಳಿಸಲು ಈಗಾಗಲೇ ಸಾಕಷ್ಟು ನಿಯಮಾವಳಿ/ಸುತ್ತೋಲೆಗಳು ಜಾರಿಯಲ್ಲಿವೆ. ಆದಾಗ್ಯೂ 5 ರಿಂದ 10 ವರ್ಷ ಅಪರಾಧ ಪ್ರಕರಣ ವಿಲೇವಾರಿ ಮಾಡದೇ ಹೆಚ್ಚಿನ ಅಧಿಕಾರಿಗಳಿಗೆ ಅನ್ಯಾಯವಾಗಿದೆ. ಅದರಂತೆ ಕಾಲಮಿತಿಯಲ್ಲಿ ಪ್ರಕರಣಗಳನ್ನು ವಿಲೇವಾರಿ ಮಾಡಲು ಕಟ್ಟುನಿಟ್ಟಿನ ಆದೇಶ ನೀಡಲು ಕೋರಿದೆ. ಕಾಲಮಿತಿಯಲ್ಲಿ ವಿಲೇವಾರಿ ಆಗದೇ ಇರುವುದರಿಂದ ಅನೇಕ ಅಧಿಕಾರಿಗಳು ಬಡ್ತಿಯಿಂದ ವಂಚಿತರಾಗಿದ್ದಾರೆ.

13) ಈಗಾಗಲೇ ನಿವೃತ್ತ ಅಧಿಕಾರಿಗಳಿಗೆ ಅವರ ಪತಿ/ಪತ್ನಿಯವರೊಂದಿಗೆ ಸಾಮಾನ್ಯ ಮತ್ತು ವೇಗದೂತ ಸಾರಿಗೆಗಳಲ್ಲಿ ಉಚಿತ ಹಾಗೂ ಪ್ರತಿಷ್ಟಿತ ಸಾರಿಗೆಗಳಲ್ಲಿ ಪ್ರಯಾಣ ದರದಲ್ಲಿ 50% ರಿಯಾಯಿತಿ ಸೌಲಭ್ಯ ಒದಗಿಸಲಾಗಿದೆ. ಆದರೆ ಸೇವೆಯಲ್ಲಿ ಮರಣ ಹೊಂದಿರುವ ಸಿಬ್ಬಂದಿ/ ಅಧಿಕಾರಿಗಳ ಪತಿ/ಪತ್ನಿಗೆ ಈ ಸೌಲಭ್ಯ ಒದಗಿಸಿಲ್ಲ ಹಾಗೂ ಸೇವೆಯಲ್ಲಿರುವ ಅಧಿಕಾರಿಗಳಿಗೆ ಅವರ ಪತಿ/ಪತ್ನಿಯವರೊಂದಿಗೆ ಪ್ರತಿಷ್ಟಿತ ಸಾರಿಗೆಗಳು ಸೇರಿದಂತೆ ಎಲ್ಲ ಸಾರಿಗೆಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡಬೇಕು ಹಾಗೂ ಸೇವೆಯಲ್ಲಿರುವ ಅಧಿಕಾರಿಗಳಿಗೆ ಹಾಗೂ ಪಾಲಕರಿಗೂ ಸಹ Family Pass ನೀಡಲು ಕ್ರಮಕೈಗೊಳ್ಳಬೇಕು.

14) ಸಂಸ್ಥೆಯಲ್ಲಿ ಅಧಿಕಾರಿಗಳು ಒತ್ತಡದಲ್ಲಿ ಕಾರ್ಯನಿರ್ವಹಿಸುವ ಅನಿವಾರ್ಯವಿದ್ದು, ಸಹಜವಾಗಿ ಆನಾರೊಗ್ಯಕ್ಕೆ ತುತ್ತಾಗುತ್ತಿದ್ದು, ಇಂತಹ ಸಂದರ್ಭಗಳಲ್ಲಿ ವೈದ್ಯಕೀಯ ವೆಚ್ಚಗಳನ್ನು ಮುರುಪಾವತಿಸಲು ಹಾಲಿ ನಿಯಮಗಳಲ್ಲಿ ಹಲವಾರು ನಿರ್ಬಂಧಗಳಿದ್ದು, ಹಾಲಿ ನಿರ್ಬಂಧಗಳನ್ನು ಸಡಿಲಗೊಳಿಸಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಯಾವುದೇ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದ ಸಂದರ್ಭಗಳಲ್ಲಿ CGHS ದರಗಳನ್ವಯ ಅವರುಗಳಿಗೆ ವೈದ್ಯಕೀಯ ವೆಚ್ಚ ಮರುಪಾವತಿಗೆ ವ್ಯವಸ್ಥೆ ಕಲ್ಪಿಸಬೇಕು.

15) ಕೆಎಸ್‌ಅರ್‌ಟಿಸಿ ವೆಲ್ಫೇರ್ ಅಸೋಶೀಯೇಶನ್ ಕಾರ್ಯಚಟುವಟಿಕೆಗಳಿಗೆ ಸ್ಥಳದ ಅವಶ್ಯಕತೆ ಇದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು, ಹುಬ್ಬಳ್ಳಿ ಹಾಗೂ ಕಲಬುರ್ಗಿ ಕೇಂದ್ರ ಸ್ಥಾನದಲ್ಲಿ ಲಭ್ಯವಿರುವ ಸಂಸ್ಥೆಯ ಆಸ್ತಿಯಲ್ಲಿ ಸುಮಾರು 50×80 ಅಡಿ ಸ್ಥಳಾವಕಾಶ ನೀಡಲು ಕೋರಿದೆ.

ಒಟ್ಟಾರೆಯಾಗಿ ಸಂಸ್ಥೆಯನ್ನು ಆರ್ಥಿಕವಾಗಿ ಸದೃಢಗೊಳಿಸುವಲ್ಲಿ ಸರಕಾರದ ಹಾಗೂ ನೌಕರರ ಪಾತ್ರ ಅಪಾರವಾಗಿದ್ದು, ತನ್ನ ಕಾಲ ಮೇಲೆ ತಾನು ನಿಲ್ಲಲು, ಇದರಲ್ಲಿ ಕೇವಲ ಒಂದು ವರ್ಗದ ಹಿತಾಸಕ್ತಿ ಇರುವುದಿಲ್ಲ, ಎಲ್ಲ ವರ್ಗದ ಅಧಿಕಾರಿ/ಸಿಬ್ಬಂದಿ/ನೌಕರರ ಹಾಗೂ ಅವರ ಕುಟುಂಬದವರ ಜೀವನದ ಪ್ರಶ್ನೆಯಾಗಿರುವುದಲ್ಲದೇ ಹಾಗೂ ನಾಡಿನ ಜನತೆಯ ಜೀವನಾಡಿಯಾದ ಸಾರಿಗೆ ಸಂಸ್ಥೆಯ ಉಳಿವಿನ ಪ್ರಶ್ನೆಯೂ ಇದಾಗಿದೆ. ಸರಕಾರ ಈ ಇಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಂಡಲ್ಲಿ ಮಾತ್ರ. ಈ ಮುಳಗುತ್ತಿರುವ ಹಡಗು ಮತ್ತೆ ಪ್ರಯಾಣಿಸಲು ಸಾಧ್ಯ. ಕಾರಣ ಈ ಸಲಹೆಗಳನ್ನು ಕಾರ್ಯರೂಪಕ್ಕೆ ತರಲು ಹಾಗೂ ಅಧಿಕಾರಿಗಳ ಬೇಡಿಕೆ ಈಡೇರಿಸಿ ಅವರ ಮನೋಸ್ಥೆರ್ಯ ಹೆಚ್ಚಿಸಲು ತಮ್ಮಲ್ಲಿ ಈ ಮೂಲಕ ಕೋರುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಕೆ.ಎಸ್.ಆರ್.ಟಿ.ಸಿ ಆಫೀಸರ್ಸ್ ವೆಲ್ಫೇರ್‌ ಅಸೋಶಿಯೇಶನ್ ಗೌರವಾಧ್ಯಕ್ಷ ಡಾ.ಎಂ.ಪಿ. ನಾಡಗೌಡ, ಅಧ್ಯಕ್ಷ ಅಶೋಕ ರು. ಪಾಟೀಲ ಮತ್ತು ಅಧಿಕಾರಿಗಳು ಈ ಸಂದರ್ಭದಲ್ಲಿ ಇದ್ದರು.

ಅಧಿಕಾರಿಗಳ ಬೇಡಿಕೆಯ ಮನವಿ ಪತ್ರ: Adobe Scan 05-Oct-2024

Leave a Reply

error: Content is protected !!
LATEST
NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು