ನ್ಯೂಡೆಲ್ಲಿ: ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ (ಡಿಎ)ಯನ್ನು ಶೇ.3 ರಷ್ಟು ಹೆಚ್ಚಳ ಮಾಡಲು ಕೇಂದ್ರ ಸಚಿವ ಸಂಪುಟ ಸಭೆ ಬುಧವಾರ ಅನುಮೋದನೆ ನೀಡಿದೆ.
ಈ ಮೂಲಕ ದೀಪಾವಳಿಗೂ ಮುನ್ನ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಸರ್ಕಾರ ಭರ್ಜರಿ ಗಿಫ್ಟ್ ನೀಡಿದ್ದು ನೌಕರರು ಖುಷಿಯಲ್ಲಿ ಹಬ್ಬ ಆಚರಣೆಗೆ ಮುಂದಾಗಿದ್ದಾರೆ.
ಇಂದು ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ, ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ ಏರಿಕೆ ಹಾಗೂ ಪಿಂಚಣಿದಾರರ ಡಿಆರ್ ಹೆಚ್ಚಳ ಪ್ರಸ್ತಾವನೆಗೆ ಅನುಮೋದನೆ ನೀಡಲಾಗಿದೆ.
ತುಟ್ಟಿ ಭತ್ಯೆಯನ್ನು ಶೇ.3ರಷ್ಟು ಏರಿಕೆ ಮಾಡಲು ಸಚಿವ ಸಂಪುಟ ಒಪ್ಪಿಗೆ ನೀಡಿದ್ದು, ಇದರಿಂದ 1.15 ಕೋಟಿಗೂ ಹೆಚ್ಚು ಕೇಂದ್ರ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರಿಗೆ ಅನುಕೂಲವಾಗಲಿದೆ.
ಕೇಂದ್ರ ಸರ್ಕಾರವು ತನ್ನ ಉದ್ಯೋಗಿಗಳ ಡಿಎಯನ್ನು ವರ್ಷಕ್ಕೆ ಎರಡು ಬಾರಿ ಪರಿಷ್ಕರಣೆ ಮಾಡುತ್ತದೆ. ಜನವರಿಯಲ್ಲಿ ಹಾಗೂ ಜುಲೈನಲ್ಲಿ. ಈಗ ಮಾಡಿರುವ ಡಿಎ ಪರಿಷ್ಕರಣೆ ಜುಲೈನಿಂದ ಪೂರ್ವಾನ್ವಯವಾಗಲಿದೆ.
ಇನ್ನು ಈ ಎರಡು ಬಾರಿ ಡಿಎ ಪರಿಷ್ಕರಣೆ ನಡೆಸುವುದು ರೂಢಿ. ಈ ಮೂಲಕ ಹಾಲಿ ಕೇಂದ್ರ ಸರ್ಕಾರಿ ನೌಕರರು ಡಿಎ ಪಡೆದರೆ ಪಿಂಚಣಿದಾರರು ಡಿಆರ್ (ಡಿಯರ್‌ನೆಸ್ ರಿಲೀಫ್) ಸ್ವೀಕರಿಸುತ್ತಾರೆ.
ಈ ಬೆನ್ನಲೇ ರಾಜ್ಯ ಸರ್ಕಾರ ಕೂಡ ತುಟ್ಟಿಭತ್ಯೆ ಏರಿಕೆ ಮಾಡಲಿದ್ದು ಎಷ್ಟು ಏರಿಕೆ ಆಗಲಿದೆ ಎಂದು ರಾಜ್ಯ ಸರ್ಕಾರಿ ನೌಕರರು ಕಾಯುತ್ತಿದ್ದಾರೆ. ಕೇಂದ್ರ ಸರ್ಕಾರದಂತೆ ನಮಗೂ ಶೇ.3ರಷ್ಟು ತುಟ್ಟಿಭತ್ಯೆ ಏರಿಕೆ ಆಗಲಿದೆ ಎಂಬ ನಿರೀಕ್ಷೆಯಲ್ಲಿ ಇದ್ದಾರೆ.
The angels like this chitty hole another someone
Isn t you have been cut on my boots were carrying metal pipes in