NEWSನಮ್ಮಜಿಲ್ಲೆನಮ್ಮರಾಜ್ಯ

ಸಾರಿಗೆ ನೌಕರರಿಗೆ ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆ ಅನುಷ್ಠಾನಗೊಳಿಸಿ : ಸರ್ಕಾರಕ್ಕೆ ಬೈರಣ್ಣ ಒತ್ತಾಯ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ವಿಧಾನಸಭೆ ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್‌ ಪಕ್ಷ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿರುವಂತೆ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳ ಅಧಿಕಾರಿಗಳು ಮತ್ತು ನೌಕರರಿಗೆ ಸರಿಸಮಾನ ವೇತನ ನೀಡಬೇಕು ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರ ಕುಟುಂಬ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಬೈರಣ್ಣ ಒತ್ತಾಯಿಸಿದ್ದಾರೆ.

ಈ ಸಂಬಂಧ ಮಾತನಾಡಿರುವ ಅವರು, ಕಾಂಗ್ರೆಸ್‌ ಪಕ್ಷ ಚುನಾವಣಾ ಪೂರ್ವದಲ್ಲಿ ಸುಮಾರು ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿತ್ತು. ಅದರಂತೆ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದೆ.

ಚುನಾವಣಾ ಪೂರ್ವದಲ್ಲಿ ಮಾಡಿದಂತಹ ಘೋಷಣೆಗಳ ಎಲ್ಲ ಗ್ಯಾರಂಟಿಗಳನ್ನು ತಾವು ಅನುಷ್ಠಾನಕ್ಕೆ ತಂದು ಆ ಘೋಷಣೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರಿಗೆ ಸರ್ಕಾರಿ ನೌಕರರರ ವೇತನಕ್ಕೆ ಸರಿಸಮಾನವಾಗಿ ಕೊಡುತ್ತೇವೆ ಎಂದು ಘೋಷಣೆ ಮಾಡಿದ್ರು, ಸಾರಿಗೆ ಸಂಸ್ಥೆ ನೌಕರರಿಗೆ ಯಾಕೆ ಇನ್ನೂ ಅನುಷ್ಠಾನಗೊಳಿಸಿಲ್ಲ ಎಂದು ಪ್ರಶ್ನಿಸಿದ್ದಾರೆ.

ಇನ್ನು ಈ ಶಕ್ತಿ ಯೋಜನೆ ಬಂದಮೇಲೆ ಸಾರಿಗೆ ಸಂಸ್ಥೆಗೆ ಅಧಿಕ ಲಾಭ ಬಂದಿದೆ ಅಂತ ನಮ್ಮ ಸಾರಿಗೆ ಸಚಿವರು ಪದೇಪದೇ ಹೇಳ್ತಾ ಇದ್ದಾರೆ. ಆದಾಯ ಬಂದರು ಸಹ ಬಾಕಿ 38 ತಿಂಗಳ ವೇತನ, ಮತ್ತೆ 1/1 2024 ರಿಂದ ವೇತನ ಪರಿಷ್ಕರಣೆಯನ್ನು
ಮಾಡಿಲ್ಲ. ಎಲ್ಲ ಇಲಾಖೆಗಳಿಗೂ ಸಂಬಳವನ್ನು ಹೆಚ್ಚು ಮಾಡ್ತಾ ಬಂದು ನಮ್ಮ ಸಾರಿಗೆ ಸಂಸ್ಥೆ ನೌಕರರಿಗೆ ಮಾತ್ರ ಮಾಡದೆ ತಾರತಮ್ಯವನ್ನು ತೋರಿಸ್ತಾ ಇದ್ದೀರಿ ಯಾಕೆ ಅಂತ ನಮಗೆ ಇನ್ನು ಗೊತ್ತಾಗಿಲ್ಲ.

ನೋಡಿ ಈ ಸಂಸ್ಥೆಯ ನೌಕರರು ಹಗಲು ರಾತ್ರಿ ಅನ್ನದೆ, ನಿದ್ದೆ ಇಲ್ಲದೆ ಸರಿಯಾದ ಸಮಯಕ್ಕೆ ಊಟ, ತಿಂಡಿ ಇಲ್ಲದೆ ದುಡಿತಾ ಇರ್ತಕ್ಕಂತ ವರ್ಗ, ಸಾರಿಗೆ ಸಂಸ್ಥೆಯ ನೌಕರರು. ಇವರ ದುರಿತದಿಂದ ಸಾರಿಗೆ ಸಂಸ್ಥೆ ಚೆನ್ನಾಗಿದೆ. ಹೀಗಾಗಿ ತಾವು ಏನು ಘೋಷಣೆ ಮಾಡಿದ್ದೀರಿ ಅದನ್ನು ಅನುಷ್ಠಾನಕ್ಕೆ ತರಬೇಕು ಅಂತ ಮನವಿ ಮಾಡಿದ್ದಾರೆ.

1ನೇ ತಾರೀಖು ಸಂಬಳವನ್ನು ನಿಗದಿ ಮಾಡಿ: ಮತ್ತೊಂದು ವಿಚಾರ ಕೆಎಸ್ಆರ್ಟಿಸಿ ನೌಕರರಿಗೆ ಒಂದನೇ ತಾರೀಖು ನೀವು ಸಂಬಳವನ್ನು ಕೊಡ್ತಾ ಇದ್ದೀರಾ, ಅದೇ ಸಂಸ್ಥೆಯಾದಂತಹ ಮೂರು ನಿಗಮಗಳ ಅಧಿಕಾರಿಗಳು ನೌಕರರಿಗೆ ಏಳನೇ ತಾರೀಖು ಇಲ್ಲ ಎಂಟನೇ ತಾರೀಖು ಕೊಡ್ತೀರಾ ಯಾಕೆ ಈ ತಾರತಮ್ಯ? ಒಂದೇ ಸಂಸ್ಥೆಯಲ್ಲಿ ಕೆಲಸ ಮಾಡ್ತಕ್ಕಂತಹ ನೌಕರರಿಗೆ ಈ ತಾರತಮ್ಯ ಯಾಕೆ ಮಾಡ್ತಾ ಇದ್ದೀರಾ ಅಂತ ನನಗೆ ಗೊತ್ತಾಗ್ತಾ ಇಲ್ಲ.

ಇನ್ನು ಮುಂದೆ ನಾಲ್ಕು ಸಾರಿಗೆ ನಿಗಮಗಳಿಗೂ ಒಂದನೇ ತಾರೀಖು ಸಂಬಳವನ್ನು ನಿಗದಿ ಮಾಡಿ ನೌಕರರಲ್ಲಿ ನಾವೆಲ್ಲ ಒಂದೇ ಸಂಸ್ಥೆಯ ನೌಕರರು ಎಂಬ ಆಶಾ ಭಾವನೆ ಮೂಡಿಸಿ ಉತ್ಸಾಹ ತುಂಬಬೇಕೆಂದು ಒತ್ತಾಯಿಸಿದ್ದಾರೆ.

Leave a Reply

error: Content is protected !!
LATEST
ಸಾರಿಗೆ ನೌಕರರಿಗೆ ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆ ಅನುಷ್ಠಾನಗೊಳಿಸಿ : ಸರ್ಕಾರಕ್ಕೆ ಬೈರಣ್ಣ ಒತ್ತಾಯ KSRTC: ಸಮಸ್ತ 4ನಿಗಮಗಳ ಅಧಿಕಾರಿಗಳು-ನೌಕರರು ಇಟ್ಟಿರುವ ಬೇಡಿಕೆಗಳ ಈಡೇರಿಸಿಕೊಳ್ಳುವುದು ಅಸಾಧ್ಯವೆ ಅಲ್ಲ! ಡಿ.9ರಿಂದ ವಿಧಾನಮಂಡಳ ಅಧಿವೇಶನ, ಉಕ ಪ್ರಗತಿಗೆ ಒತ್ತು: ಸ್ಪೀಕರ್ ಖಾದರ್ ವಿವಿಧ ಬೇಡಿಕೆಗಳ  ಈಡೇರಿಸಿ ಆಗ್ರಹಿಸಿ ಇಪಿಎಸ್ ಪಿಂಚಣಿದಾರರ ಪ್ರತಿಭಟನೆ: ಅಧಿಕಾರಿಗಳ ವಿರುದ್ಧ ಆಕ್ರೋಶ ಸರ್ಕಾರದ ತಾತ್ಸಾರದಿಂದಾಗಿ ಆರ್ಥಿಕವಾಗಿ ಸಬಲವಾಗಿದ್ದರೂ ಸಂಕಷ್ಟದ ಪರಿಸ್ಥಿತಿ ತಲುಪಿದ KSRTC ಸಾರಿಗೆ ನಿಗಮಗಳು! KSRTC ಚಾಲನಾ ಸಿಬ್ಬಂದಿ ಕಾರ್ಮಿಕರಲ್ಲ ನೌಕರರು - ಹುದ್ದೆ ಅರಿವಿಲ್ಲದವರು ಕಾರ್ಮಿಕ ಪದ ಬಳಸುತ್ತಿದ್ದಾರೆ..! ಸಾರಿಗೆ ಸಿಬ್ಬಂದಿಗಳಿಗೆ ಮೋಸ ಮಾಡಿರುವ ನಿಮಗೆ ಯಾವ ನೈತಿಕತೆ ಇದೆ: ಬಿಜೆಪಿಗರ ತರಾಟೆಗೆ ತೆಗೆದುಕೊಂಡ ರಾಮಲಿಂಗಾರೆಡ್ಡಿ ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್...