ಬೆಂಗಳೂರು: ರಾಜ್ಯ ಸೇರಿದಂತೆ ಎಲ್ಲಾ ಪ್ರಮುಖ ನಗರಗಳಲ್ಲಿ ನಾಳೆಯಿಂದ ಸಾರಿಗೆ ಬಸ್ ಸಂಚಾರಕ್ಕೆ ಸರ್ಕಾರ ಅನುಮತಿ ನೀಡಲಿದೆ ಎಂಬ ಹಿನ್ನೆಲೆಯಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಚಾಲಕರು ಆರೋಗ್ಯ ತಪಾಸಣೆ ಮಾಡಿಸಿಕೊಂಡು ಅದರ ದೃಢೀಕರಣ ಪತ್ರವನ್ನು ಸಂಸ್ಥೆಗೆ ಸಲ್ಲಿಸಬೇಕಿದೆ. ಹೀಗಾಗಿ ಇಂದು ಬೆಳಗ್ಗೆ 8.30 ರಿಂದ ಆರೋಗ್ಯ ಪ್ರಮಾಣ ಪತ್ರ ಪಡೆಯಲು ಬಿಎಂಟಿಸಿ ಸಿಬ್ಬಂದಿ ಕ್ಯೂನಲ್ಲಿ ನಿಂತಿದ್ದಾರೆ.
ಸಾರಿಗೆ ಸಂಸ್ಥೆಯ ಆಸ್ಪತ್ರೆಗಳಲ್ಲಿ ತಪಾಸಣೆಗೆ ಒಳಪಡುತ್ತಿರುವ ಚಾಲಕರು ಮತ್ತು ನಿರ್ವಾಹಕರು ಸರ್ಟಿಫಿಕೇಟ್ ಪಡೆದುಕೊಳ್ಳಲು ಮುಗಿ ಬಿದ್ದಿದ್ದರು ಇದರಿಂದ ನೂಕುನುಗ್ಗಲು ಉಂಟಾದ ಕಾರಣ ಒಂದೊಂದು ಡಿಪೋದವರಿಗೆ ಒಂದು ಸಮಯ ನಿಗದಿ ಗೊಳಿಸಿದ್ದು ಅದೇ ರೀತಿ ಆರೋಗ್ಯ ತಪಾಣೆಗೆ ಒಳಪಡಿಸಿ ಪ್ರಮಾಣ ಪತ್ರ ನೀಡಲಾಗುತ್ತಿದೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail
ಇನ್ನು ಆರೋಗ್ಯ ತಪಾಸಣೆ ಒಳಪಟ್ಟು ಸರ್ಟಿಫಿಕೇಟ್ ಪಡೆಯುತ್ತಿರುವ ಕೆಲ ಸಿಬ್ಬಂದಿ ನಮಗೆ ಆರೋಗ್ಯ ತಪಾಸಣೆ ಮಾಡಿ ಪ್ರಮಾಣ ಪತ್ರ ತೆಗೆದುಕೊಂಡು ಬರುವುದು ಕಡ್ಡಾಯ ಎಂದು ನಮ್ಮ ಅಧಿಕಾರಿಗಳು ಹೇಳಿದ್ದಾರೆ. ಆದರೆ ಪ್ರಯಾಣಿಕರಿಗೆ ಯಾವ ರೀತಿ ತಪಾಸಣೆ ಪತ್ರ ತರಲು ಹೇಳುತ್ತಾರೆ. ಬಂದವರಲ್ಲಿ ಕೊರೊನಾ ಸೋಂಕು ಇದೆಯೇ ಇಲ್ಲವೇ ಎಂಬುದನ್ನು ಹೇಗೆ ನಾವು ತಿಳಿಯುವುದು ಎಂಬ ಗೊಂದಲವಿದೆ ಎಂದು ಹೇಳುತ್ತಿದ್ದಾರೆ. ಇದಕ್ಕೆ ಸರ್ಕಾರ ಮತ್ತು ಬಿಎಂಟಿಸಿ ಅಧಿಕಾರಿಗಳು ಯಾವ ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ ಎಂಬುವುದನ್ನು ಸ್ಪಷ್ಟ ಪಡಿಸಬೇಕಿದೆ.
ಬಿಎಂಟಿಸಿ ಸೇರಿದಂತೆ ರಾಜ್ಯದಲ್ಲಿ KSRTC , NWKRTC, NEKRTC ನಿಗಮದ ಬಸ್ಗಳನ್ನು ಸ್ಥಳೀಯವಾಗಿಸಂಚಾರಕ್ಕೆ ಅನುಮತಿ ಮಾಡಿಕೊಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಆದರೆ ಇಲ್ಲಿ ಮುಖ್ಯವಾದ ವಿಷಯ ಎಂದರೆ ಚಾಲಕರು ಮತ್ತು ನಿರ್ವಾಹಕರಿಗೆ ಯಾವ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಮಾಡಿಕೊಟ್ಟಿವೆ ಈ ನಿಗಮಗಳು ಎಂಬುದನ್ನು ಯಾವ ಅಧಿಕಾರಿಗಳು ತಿಳಿಸಿಲ್ಲ. ಇನ್ನು ಸಿಬ್ಬಂದಿಗೆ ಕೊಡಬೇಕಿರುವ ಮೂಲ ಸೌಲಭ್ಯಗಳನ್ನು ಒದಗಿಸುವತ್ತ ಕ್ರಮ ಕೈಗೊಂಡಿಲ್ಲ. ಇನ್ನಾದರೂ ಸರ್ಕಾರ ಮತ್ತು ಎಲ್ಲಾ ನಾಲ್ಕು ನಿಗಮಗಳು ಈ ಬಗ್ಗೆ ಕಾಳಜಿಯೊಂದಿಗೆ ಮುಂದಾಗಬೇಕಿದೆ ಎಂಬುವುದು ಸಿಬ್ಬಂದಿಯ ಒತ್ತಾಯ ಆಗಿದೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail