ಬೆಂಗಳೂರು: ಇಂದಿನಿಂದ ಲಾಕ್‌ಡೌನ್ ಸಡಿಲಗೊಳಿಸಿ ಬಸ್‌ಗಳ ಸಂಚಾರಕ್ಕೆ ಸರ್ಕಾರ ಅನುಮಾಡಿಕೊಟ್ಟಿದ್ದು, ಈ ಹಿನ್ನೆಲೆಯಲ್ಲಿ ನಗರದ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಸಾರಿಗೆ ಸಿಬ್ಬಂದಿ ಇಂದು ಬೆಳಗ್ಗೆ 6.50ರ ಸುಮಾರಿನಲ್ಲಿ ಯಾವುದೇ ತೊಂದರೆ ಆಗದಿರಲಿ ಎಂದು ದೇವರಲ್ಲಿ ಪ್ರಾರ್ಥಿಸಿ ಬಸ್‌ಗಳಿಗೆ ಪೂಜೆ ಸಲ್ಲಿಸುವ ಮೂಲಕ ಸಂಚಾರಕ್ಕೆ ಚಾಲನೆ ನೀಡಿದರು.
54ದಿನದ ಬಳಿಕ ಬಸ್ ಸಂಚಾರ ಆರಂಭವಾಗಿರುವುದರಿಂದ ಇಷ್ಟುದಿನ ಖಾಲಿ ಕುಳಿತ್ತಿದ್ದ ಸಾರಿಗೆ ನೌಕರರು ಭಾರಿ ಹುಮ್ಮಸ್ಸಿನಿಂದಲೇ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಇನ್ನು ಕೆಎಸ್‌ಆರ್‌ಟಿಸಿಯ 1500 ಬಸ್‌ಗಳನ್ನು ಇಂದು ರಸ್ತೆಗಿಳಿದಿವೆ. ಬೆಂಗಳೂರು, ಮಂಗಳೂರು, ದಾವಣಗೆರೆ, ಶಿವಮೊಗ್ಗ, ಮೈಸೂರು ಹೀಗೆ ರಾಜ್ಯಾದ್ಯಂತ ಬಸ್‌ಗಳು ಸಂಚಾರ ಆರಂಭಿಸಿವೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail
ಇನ್ನು ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣ ಮಾಡುವವರು ದಿನದ, ವಾರದ ಅಥವಾ ತಿಂಗಳ ಪಾಸ್ ಪಡೆದೇ ಪ್ರಯಾಣ ಮಾಡಬೇಕು. ಸದ್ಯದ ಪರಿಸ್ಥಿತಿಯಲ್ಲಿ ಟಿಕೆಟ್ ಕೊಡುವುದಿಲ್ಲ. ಮತ್ತು ಎಲ್ಲೆಂದರಲ್ಲಿ ಹತ್ತುವ ಆಗಿಲ್ಲ ಎಂಬ ನಿಯಮವನ್ನು ಸರ್ಕಾರವೇ ಜಾರಿ ಮಾಡಿದೆ. ಒಂದು ಬಸ್‌ನಲ್ಲಿ 22 ಜನ ಮಾತ್ರ ಪ್ರಯಾಣಿಸಬೇಕು. ಅದಕ್ಕೂ ಮೊದಲು ನಿಮ್ಮ ಮೊಬೈನ್ ಫೋನ್ ನಂಬರ್, ಮತ್ತು ವಿಳಾಸವನ್ನು ತಪ್ಪದೆ ನೀಡಬೇಕಿದೆ.
ನಿತ್ಯ ಬೆಳಗ್ಗೆ 7ರಿಂದ ಸಂಜೆ 7ರವರೆಗೆ ಬಸ್ ಸಂಚಾರವಿರಲಿದೆ. ನಂತರ ಸಂಚಾರ ನಿಷೇಧವಾಗಿರುವುದರಿಂದ ಯಾವ ಜಿಲ್ಲೆಗೆ ಎಷ್ಟು ಹೊತ್ತಿನವರೆಗೆ ಬಸ್ ಬೆಂಗಳೂರಿನಿಂದ ಸಂಚರಿಸಲಿದೆ ಎಂಬ ಬಗ್ಗೆ ಈಗಾಗಲೇ ಸಾರಿಗೆ ಇಲಾಖೆ ಮಾಹಿತಿ ನೀಡಿದೆ. ಅದರಂತೆ ಪ್ರಯಾಣಿಕರು ಪ್ರಯಾಣವನ್ನು ಮಾಡಬೇಕಿದೆ. ಅಲ್ಲದೇ ಆಯಾಯಾ ಜಿಲ್ಲೆಗಳಿಂದ ಬೆಂಗಳೂರಿಗೆ ಬರುವವರಿಗೂ ಮಾಹಿತಿ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail