ಅಮೆರಿಕ: ಐದನೇ ತರಗತಿ ಓದುತ್ತಿರುವ 11 ವರ್ಷದ ಬಾಲಕನೊಂದಿಗೆ ಸಂಬಂಧ ಇಟ್ಟುಕೊಂಡಿದ್ದ ಮಹಿಳೆಯನ್ನು ಬಂಧಿಸಲಾಗಿದೆ. 24 ವರ್ಷದ ಮ್ಯಾಡಿಸನ್ ಬರ್ಗ್ಮನ್ ಬಂಧಿತ ಮಹಿಳೆ. ಇನ್ನೇನು ಮೂರು ತಿಂಗಳಲ್ಲಿ ಈಕೆಗೆ ಮದುವೆ ಆಗಬೇಕಿತ್ತು, ಅದೂ ಕೂಡ ಮುರಿದುಬಿದ್ದಿದೆ.
ಬಂಧಿತ ಆರೋಪಿಯು ಪ್ರಾಥಮಿಕ ಶಾಲೆ ಒಂದರ ಶಿಕ್ಷಕಿ. ಸೋಶಿಯಲ್ ಮೀಡಿಯಾದಲ್ಲಿ ವ್ಯಕ್ತಿಯೊಬ್ಬರು ಮಾಡಿರುವ ಪೋಸ್ಟ್ ಪ್ರಕಾರ, ಮ್ಯಾಡಿಸನ್ ಮುಂದಿನ ಜುಲೈ ತಿಂಗಳಲ್ಲಿ ಸ್ಯಾಮ್ ಹಿಕ್ ಅನ್ನೋರನ್ನು ಮದುವೆ ಆಗಲಿದ್ದರು. 11 ವರ್ಷದ ಬಾಲಕನ ಜೊತೆ ಸಂಬಂಧ ಇರುವ ಬಗ್ಗೆ ಬೆಳಕಿಗೆ ಬರುತ್ತಿದ್ದಂತೆಯೇ ಮದುವೆ ಮುರಿದುಬಿದ್ದಿದೆ.
ಅಂದ್ಹಾಗೆ ಈ ಪ್ರಕರಣ ನಡೆದಿರೋದು ಅಮೆರಿಕದಲ್ಲಿ. ವಿಚಾರ ಬೆಳಕಿಗೆ ಬರುತ್ತಿದ್ದಂತೆಯೇ ಪ್ರಸಿದ್ಧ ವೆಬ್ಸೈಟ್ನಿಂದ ಜೋಡಿಯ ವಿವಾಹದ ಪುಟವನ್ನು ತೆಗೆದುಹಾಕಲಾಗಿದೆ. ಜುಲೈ 27 ರಂದು ನಿಗದಿಯಾಗಿದ್ದ ಮದುವೆಯನ್ನು ರದ್ದು ಮಾಡಲಾಗಿದೆ ಎಂದು ಸ್ಯಾಮ್ ಸ್ನೇಹಿತ ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಸ್ಯಾಮ್ ಸ್ನೇಹಿತ ಆಕೆ ಬಾಲಕನೊಂದಿಗೆ ಸಂಬಂಧ ಹೊಂದುವ ಮೂಲಕ ದ್ರೋಹ ಬಗೆದಿದ್ದಾಳೆ. ಬಾಲಕ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿ ನೋವು ಅನುಭವಿಸುತ್ತಿದ್ದಾನೆ. ಚಿಕ್ಕ ಮಗುವಿಗೆ ಮೋಸ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಪೋಷಕರು ಮಗುವಿನ ಮೊಬೈಲ್ ಪರಿಶೀಲನೆ ಮಾಡಿದಾಗ ಬೆಚ್ಚಿಬಿದ್ದಿದ್ದಾರೆ. 24 ವರ್ಷದ ಮ್ಯಾಡಿಸನ್, ಅಶ್ಲೀಲ ಮೆಸೇಜ್ಗಳನ್ನು ಕಳುಹಿಸಿದ್ದಳು. ಸಂದೇಶಗಳನ್ನು ನೋಡಿ ಆಘಾತಕ್ಕೆ ಒಳಗಾದ ಅವರು, ಶಾಲೆಗೆ ಬಂದು ದೂರು ನೀಡಿದ್ದಾರೆ.
ಬಾಲಕನನ್ನು ಆಕೆ ಊಟದ ಸಮಯದಲ್ಲಿ ಹಾಗೂ ಶಾಲೆ ಬಿಟ್ಟ ನಂತರ ಭೇಟಿ ಆಗುತ್ತಿದ್ದಳು ಎಂದು ಮೆಸೇಜ್ಗಳಿಂದ ತಿಳಿದುಬಂದಿದೆ. ಸಂದೇಶಗಳಲ್ಲಿ ಮ್ಯಾಡಿಸನ್ ಮಗುವನ್ನು ಮುಟ್ಟಲು, ಮುದ್ದಿಸಲು ಇಷ್ಟಪಡುತ್ತೇನೆ ಎಂದು ಹೇಳಿದ್ದಾಳೆ. ಜೊತೆಗೆ ಮ್ಯಾಡಿಸಿನ್ ಬ್ಯಾಗ್ನಲ್ಲಿ ಬಾಲಕನಿಗೆ ಸಂಬಂಧಿಸಿದ ಕೆಲವು ವಸ್ತುಗಳು ಸಿಕ್ಕಿವೆ ಎಂದು ಹೇಳಲಾಗಿದೆ.
ಇನ್ನು ಟೀಚರ್ ಬಾಲಕನ ಜೊತೆ ಎಷ್ಟುದಿನಗಳಿಂದ ಹೀಗೆ ಮಾಡುತ್ತಿದ್ದಳು ಅನ್ನೋದ್ರ ಬಗ್ಗೆ ಮಾಹಿತಿ ಇಲ್ಲ. ಆತನ ತಾಯಿ ಕಳೆದ ಡಿಸೆಂಬರ್ನಲ್ಲಿ ಫೋನ್ ಕೊಡಿಸಿದ್ದಳು. ಬಂಧನಕ್ಕೆ ಒಳಗಾಗಿದ್ದ ಶಿಕ್ಷಕಿಯನ್ನು ಬೇಲ್ ಮೇಲೆ ಬಿಡುಗಡೆ ಮಾಡಲಾಗಿದೆ.