Please assign a menu to the primary menu location under menu

NEWSನಮ್ಮಜಿಲ್ಲೆನಮ್ಮರಾಜ್ಯ

4ದಿನ ಗೈರಾಗಿ ರಜೆದಿನ ಕೆಲಸ ಮಾಡಿದರೆ ಆ ಉದ್ಯೋಗಿ C-OFFಗೆ ಅರ್ಹ: ಆದರೆ BMTCಯಲ್ಲಿ ನಿಯಮಗಳಿಗೇ ಕಿಮ್ಮತ್ತಿಲ್ಲ

ವಿಜಯಪಥ ಸಮಗ್ರ ಸುದ್ದಿ
  • ಕಾರ್ಮಿಕ ಇಲಾಖೆ ನಿಯಮಗಳ ವಿರುದ್ಧವಾಗಿ ಯಾವುದೇ ಅಧಿಕಾರಿ ಆದೇಶ ಹೊರಡಿಸಿದರೆ ಅದು ಶಿಕ್ಷಾರ್ಹ ಅಪರಾಧ

ಬೆಂಗಳೂರು: ನೌಕರರು ಯಾವಾಗ ವಾರದ ರಜೆಗೆ ಅರ್ಹರು ಎಂದು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಕೇಂದ್ರ ಕಚೇರಿಯ ಸಿಬ್ಬಂದಿ ಶಾಖೆಯಿಂದ ಅವೈಜ್ಞಾನಿಕವಾಗಿ 2019ರ ಫೆಬ್ರವರಿ 1ರಂದು ಆದೇಶ ಒಂದನ್ನು ಹೊರಡಿಸಲಾಗಿದೆ.

ಇದು ವಾರದ ರಜೆ ತೆಗೆದುಕೊಳ್ಳುವ ನೌಕರರಿಗೆ ಭಾರಿ ತಲೆನೋವಾಗಿ ಪರಿಣಮಿಸಿದೆ. ವಾರದ ರಜೆ ತೆಗೆದುಕೊಳ್ಳಬೇಕು ಎಂದರೆ 6 ದಿನ ಕಡ್ಡಾಯವಾಗಿ ಡ್ಯೂಟಿ ಮಾಡಿರಬೇಕು ಎಂದು ತಮ್ಮ ಮನಸ್ಸಿಗೆ ಬಂದಂತೆ ಆದೇಶ ಹೊರಡಿಸಿರುವ ಸಿಬ್ಬಂದಿ ಶಾಖೆಯ ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರ ನಡೆ ಕಾರ್ಮಿಕ ಇಲಾಖೆಯ ನಿಯಮಗಳಿಗೆ ವಿರುದ್ಧವಾಗಿದೆ.

ಅದೇನು ಆದೇಶ: ಘಟಕಗಳಲ್ಲಿ ವಾರದ ರಜೆ/ ಗಳಿಕೆ ರಜೆ ಹಾಗೂ ಪರಿವರ್ತಿತ ರಜೆಗಳನ್ನು ಮಂಜೂರು ಮಾಡುವ ಬಗ್ಗೆ/ ಅರ್ಹತೆ ಬಗ್ಗೆ ಉಲ್ಲೇಖದಂತೆ ಮಾರ್ಗದರ್ಶನ ನೀಡಿದ್ದು, ಉಲ್ಲೇಖಿತ ಪತ್ರದಲ್ಲಿ ನೀಡಿರುವ ಮಾರ್ಗದರ್ಶನಕ್ಕೆ ಸಂಬಂಧಿಸಿದಂತೆ ಈ ಮುಂದುವರಿದ ಮಾರ್ಗದರ್ಶನದಲ್ಲಿ ಇರುವಂತೆ ರಜೆ ನೀಡಬೇಕು ಎಂದು ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರು ಅದೇಶ ಹೊರಡಿಸಿದ್ದಾರೆ.

ಅದರಲ್ಲಿ ಒಂದು ವಾರದಲ್ಲಿ ಎಷ್ಟು ದಿನ ಕರ್ತವ್ಯ ನಿರ್ವಹಿಸಿದರೆ ವಾರದ ರಜೆಗೆ ಅರ್ಹರಿರುತ್ತಾರೆ ಎಂದರೆ ನೌಕರರು ವಾರದಲ್ಲಿ 6 ದಿನಗಳು ಕರ್ತವ್ಯ ನಿರ್ವಹಿಸಿದ್ದಲ್ಲಿ ವಾರದ ರಜೆಗೆ ಅರ್ಹರಿರುತ್ತಾರೆ.

2) ವಾರದಲ್ಲಿ 4 ದಿನಗಳು ಕರ್ತವ್ಯ ನಿರ್ವಹಿಸಿ 2 ಅಥವಾ 3 ದಿನಗಳ ಅಧಿಕೃತ ರಜೆಯನ್ನು ಪಡೆದಲ್ಲಿ ವಾರದ ರಜೆಗೆ ಅರ್ಹರಿರುತ್ತಾರೆ. 3) ವಾರದಲ್ಲಿ 4 ದಿನ ಕರ್ತವ್ಯ ನಿರ್ವಹಿಸಿ ನಂತರದ 2 ದಿನಗಳಲ್ಲಿ ಗೈರುಹಾಜರಾದಲ್ಲಿ ವಾರದ ರಜೆಗೆ ಅರ್ಹರಿರುವುದಿಲ್ಲ.

4) ವಾರದಲ್ಲಿ 5 ದಿನ ಕರ್ತವ್ಯ ನಿರ್ವಹಿಸಿ ನಂತರ 1 ದಿನ ಗೈರು ಹಾಜರಾದಲ್ಲಿ ವಾರದ ರಜೆಗೆ ಅರ್ಹರಿರುವುದಿಲ್ಲ. 5) ವಾರದಲ್ಲಿ 3 ದಿನ ಕರ್ತವ್ಯ ನಿರ್ವಹಿಸಿ 2 ದಿನಗಳ ಅಧಿಕೃತ ರಜೆ ಪಡೆದು 1 ದಿನ ಗೈರುಹಾಜರಾದಲ್ಲಿ ಅರ್ಹರಿರುವುದಿಲ್ಲ.

6)ವಾರದಲ್ಲಿ 3ದಿನ ಕರ್ತವ್ಯ ನಿರ್ವಹಿಸಿ 2ದಿನಗಳ ಅಧಿಕೃತ ರಜೆ ಪಡೆದು 1ದಿನ ಗೈರಯಹಾಜರಾದಲ್ಲಿ ವಾರದ ರಜೆಗೆ ಅರ್ಹರಿರುವುದಿಲ್ಲ. 7) ವಾರದಲ್ಲಿ ಒಂದು ದಿನ ಗೈರುಹಾಜರಾದಲ್ಲಿ ವಾರದ ರಜೆಗೆ ಅರ್ಹರಿರುವುದಿಲ್ಲ ಎಂದು ನಿಗಮ ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರೆ ಆದೇಶ ಹೊರಡಿಸಿದ್ದಾರೆ.

ಈ ರೀತಿಯ ಆದೇಶ ಹೊರಡಿಸಿದ್ದರಿಂದ ನಿಗಮದ ನೌಕರರಾದ ವಿದ್ಯ ಉಮೇಶ್‌ ಎಂಬುವರು ಆರ್‌ಟಿಐಯಡಿ ಲಿಖಿತವಾಗಿ ನಿಮಗೆ ಕಾರ್ಮಿಕ ಇಲಾಖೆಯಿಂದ ಬಂದಿರುವ ಆದೇಶ ಪ್ರತಿಯನ್ನು ಕೊಡಬೇಕು ಎಂದು ಕೇಳಿದ್ದರು. ಅದಕ್ಕೆ ನಿಗಮದ ಆರ್‌ಟಿಐ ಅಧಿಕಾರಿಗಳು ಇಲ್ಲ ನಮಗೆ ಈ ರೀತಿಯ ಆದೇಶ ಕಾರ್ಮಿಕ ಇಲಾಖೆಯಿಂದ ಬಂದಿಲ್ಲ ಎಂದು ಉತ್ತರ ನೀಡಿದ್ದಾರೆ.

ರಾಜ್ಯದ ಸರ್ಕಾರಿ ನೌಕರರು, ಖಾಸಗಿ ಕಂಪನಿಯ ನೌಕರರು ಮತ್ತು ಸರ್ಕಾರದ ಅಧೀನದಲ್ಲಿರುವ ನಿಗಮ ಮಂಡಳಿಗಳ ನೌಕರರಿಗೆ ಈ ರೀತಿಯ ರಜೆ ಮುಂಜೂರು ಮಾಡುವುದಕ್ಕೆ ಕಾರ್ಮಿಕ ಇಲಾಖೆಯಲ್ಲಿ ಒಂದೊಂದು ನಿಯಮವಿಲ್ಲ. ಆದರೆ ಬಿಎಂಟಿಸಿ ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರು ತಮಗೆ ಅನಿಸಿದಂತೆ ಇಲ್ಲಿ ಅಧಿಕಾರ ದುರುಪಯೋಗಪಡಿಸಿಕೊಂಡು ಈ ರೀತಿ ನೌಕರರು ಯಾವಾಗ ಅರ್ಹರು ಮತ್ತು ಅರ್ಹರಲ್ಲ ಎಂಬುದನ್ನು ತಮ್ಮ ಮೂಗಿನ ನೇರಕ್ಕೆ ಮಾತ್ರ ಆದೇಶ ಹೊರಡಿಸಿದ್ದಾರೆ.

ಇದು ಕಾರ್ಮಿಕ ಇಲಾಖೆಯಿಂದ ಬಂದಿರುವ ಆದೇಶವಲ್ಲವಾದ್ದರಿಂದ ಈ ಅಧಿಕಾರಿಯ ವಿರುದ್ಧ ಕಾನೂನು ಕ್ರಮ ಜರುಗಿಸುವುದಕ್ಕೆ ಕಾನೂನಿನಡಿ ಅವಕಾಶವಿದೆ. ಅಲ್ಲದೆ ಯಾವುದೇ ನಿಗಮ ಮಂಡಳಿಗಳು, ಸರ್ಕಾರದ ಇಲಾಖೆಗಳು ಮತ್ತು ಖಾಸಗಿ ಕಂಪನಿಗಳಲ್ಲಿ ಉದ್ಯೋಗಿಯಾಗಿದ್ದರು ಅವರು ಒಂದು ದಿನ ಗೈರುಹಾಜರಾದ ದಿನದ ಹಿಂದಿನ ಮತ್ತು ಮುಂದಿನ ದಿನ ವಾರದ ರಜೆ ಇದ್ದರೆ ಆ ವಾರದ ರಜೆ ಪಡೆಯಲು ಅವರಿಗೆ ಹಕ್ಕಿದೆ.

ಆದರೆ ತುರ್ತು ಪರಿಸ್ಥಿತಿಯಲ್ಲಿ ಹೇಳದೆ ಕೇಳದೆ ಗೈರುಹಾಜರಾದರೆ ಅಥವಾ ಅಧಿಕಾರಿಗಳು ಬೇಕು ಬೇಕಂತಲೇ ಮುಂದಾಗಿ ಅವರ ಗಮನಕ್ಕೆ ತಂದರೂ ರಜೆ ಮಂಜೂರು ಮಾಡದೆ ಹೋದರೆ ಅ ಒಂದು ದಿನ ಮಾತ್ರ ಗೈರುಹಾಜರಿ ಎಂದು ತೋರಿಸಬೇಕು. ಅದನ್ನು ಬಿಟ್ಟು ಈ ರೀತಿ ವಾರದ ರಜೆಯನ್ನು ಗೈರುಹಾಜರಿ ಎಂದು ತೋರಿಸುವುದಕ್ಕೆ ಬರುವುದಿಲ್ಲ.

ಇನ್ನು ವಾರದಲ್ಲಿ 4ದಿನ ಗೈರುಹಾಜರಾಗಿ ಬಳಿಕ ವಾರದ ರಜೆಯಲ್ಲೂ ಕೆಲಸ ಮಾಡಿದರೆ ಅಂತ ಉದ್ಯೋಗಿ ಆ ವಾರದ ರಜೆಯಲ್ಲಿ ಕೆಲಸ ಮಾಡಿರುವುದಕ್ಕೆ ಬೇರೊಂದು ದಿನ C-OFF ತೆಗೆದುಕೊಳ್ಳುವುದಕ್ಕೆ ಅರ್ಹರಿರುತ್ತಾರೆ. ಆದರೆ ಬಿಎಂಟಿಸಿಯಲ್ಲಿ ಕಾರ್ಮಿಕ ಇಲಾಖೆಯ ನಿಯಮಗಳಿಗೆ ವಿರುದ್ಧವಾಗಿ ಈರೀತಿ ವಾರದ ರಜೆ ಪಡೆಯುವ ಅದೇಶವನ್ನು ಹೊರಡಿಸಿರುವುದು ಇದು ಶಿಕ್ಷಾರ್ಹ ಅಪರಾಧವಾಗುತ್ತದೆ ಎಂದು ವಕೀಲರು ತಿಳಿಸಿದ್ದಾರೆ.

Leave a Reply

error: Content is protected !!
LATEST
Kho Kho World Cup 2025: ತಿ.ನರಸೀಪುರದ ಚೈತ್ರಾ ನಾಡು, ದೇಶದ ಕೀರ್ತಿಯ ಮುಗಿಲೆತ್ತೆಕ್ಕೆ ಹಾರಿಸಿದ ಅಪ್ಪಟ ಗ್ರಾಮೀಣ ಪ... ಜಗಜಿತ್ ದಲೈವಾಲ 53 ದಿನಗಳ ಉಪವಾಸ ಕೈ ಬಿಟ್ಟು ಚಿಕಿತ್ಸೆಗೆ ಒಪ್ಪಿಗೆ ನೀಡಿರುವುದು ಸ್ವಾಗತಾರ್ಹ: ಕುರುಬೂರ್ ಶಾಂತಕುಮಾರ್ KSRTC ಬಸ್‌ ಬ್ರೇಕ್‌ ವೈಫಲ್ಯಗೊಂಡು ಪಲ್ಟಿ: 30ಕ್ಕೂ ಹೆಚ್ಚು ಮಂದಿಗೆ ಗಾಯ BMTC ಎಲೆಕ್ಟ್ರಿಕ್ ಬಸ್ ಬ್ರೇಕ್ ವೈಫಲ್ಯ: ಡಾಬಾ, ಬೀಡಾ ಅಂಗಡಿಗೆ ಡಿಕ್ಕಿ KSRTC: ಅಧಿಕಾರಿಗಳು, ಸಿಬ್ಬಂದಿಗಳಿಗೂ ಕಿರುಕುಳ ನೀಡುತ್ತಿದ್ದ ಸಂಚಾರಿ ನಿರೀಕ್ಷಕ ಉಮೇಶ್‌  ವಜಾ- ಸಿಟಿಎಂ ಆದೇಶ ಬೆಂಗಳೂರಿನಲ್ಲಿ ಶಾಲೆ ಕಲಿತ ಆ ದಿನಗಳ ಕನ್ನಡದಲ್ಲೇ ಬ್ಯಾಂಕಾಕ್‌ನಲ್ಲಿ ಮೆಲುಕುಹಾಕಿದ ಸೂಪರ್‌ಸ್ಟಾರ್‌ ರಜನಿಕಾಂತ್ KSRTC ನೌಕರರಿಗೆ ಉಚಿತ ಚಿಕಿತ್ಸೆ ನೀಡದಿದ್ದರೆ ಅಂಥ ಆಸ್ಪತ್ರೆಗಳು ಹೊರಕ್ಕೆ: ಅಧಿಕಾರಿಗಳ ಎಚ್ಚರಿಕೆ KSRTC: ನೌಕರರಿಗೆ ಸರಿ ಸಮಾನ ವೇತನ ಕೊಡುವುದು ಸರ್ಕಾರದ ಆದ್ಯ ಕರ್ತವ್ಯ-ಬೈರೇಗೌಡ KSRTC: ಗೊಂದಲದ ನಡುವೆಯೂ 1280 ಸಿಬ್ಬಂದಿಗಳಿಗೆ ಆರೋಗ್ಯ ಸೇವೆ ಮದುವೆಗೆ ಒಪ್ಪಿ ಬಳಿಕ ತಿರಸ್ಕರಿಸಿದ ಪ್ರಿಯತಮೆ: ಕೋಪಗೊಂಡು ಇರಿದ ಪ್ರಿಯತಮ