CrimeNEWSದೇಶ-ವಿದೇಶ

ಧ್ವನಿ ಬದಲಾಯಿಸುವ ಮೊಬೈಲ್​ ಆ್ಯಪ್ ಬಳಸಿ 7 ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರ ಎಸಗಿದ ಅನಕ್ಷರಸ್ಥ!!

ವಿಜಯಪಥ ಸಮಗ್ರ ಸುದ್ದಿ

ಭೋಪಾಲ್: ಧ್ವನಿ ಬದಲಾಯಿಸುವ ಮೊಬೈಲ್​ ಆ್ಯಪ್ ಬಳಸಿ ಕಾಲೇಜಿನ 7 ವಿದ್ಯಾರ್ಥಿನಿಯರ ಮೇಲೆ ಅನಕ್ಷರಸ್ಥನೊಬ್ಬ ಅತ್ಯಾಚಾರ ಎಸಗಿದ್ದಾನೆ. ಈ ಸಂಬಂಧ ಪೊಲೀಸರು ಒಟ್ಟು ಮೂವರನ್ನು ಅರೆಸ್ಟ್ ಮಾಡಿ ವಿಚಾರಣೆ ನಡೆಸುತ್ತಿದ್ದಾರೆ.

ಮಧ್ಯಪ್ರದೇಶದ ಸಿಧಿ ಜಿಲ್ಲೆಯ ಮಿಲ್​ ಕಾರ್ಮಿಕ ಬ್ರಜೇಶ್ ಕುಶ್ವಾಹಾ ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರ ಎಸಗಿ ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಂಡ ಪ್ರಮುಖ ಆರೋಪಿ.

ಅಚ್ಚರಿ ಎಂದರೆ ಈತನಿಗೆ ಓದು ಬರಹ ಏನೂಗೊತ್ತಿಲ್ಲ ಅನಕ್ಷರಸ್ಥನಾಗಿದ್ದಾನೆ. ಮಹಾರಾಷ್ಟ್ರದ ಕಂಪನಿಯೊಂದರಲ್ಲಿ ಕೆಲಸ ಮಾಡುವಾಗ ಕೈ ಸುಟ್ಟುಕೊಂಡಿದ್ದು, ಬಳಿಕ ತನ್ನ ಊರಿಗೆ ವಾಪಸ್ ಆಗಿದ್ದನು. ನಂತರ ಧ್ವನಿ ಬದಲಾಯಿಸುವ ಮೊಬೈಲ್​ ಆ್ಯಪ್​ ಬಳಸಿ ಕಾಲೇಜು ವಿದ್ಯಾರ್ಥಿನಿಯರೊಂದಿಗೆ ಮಹಿಳಾ ಪ್ರೊಫೆಸರ್​ನಂತೆ ಮಾತಾಡುತ್ತಿದ್ದನು ಎಂದು ತಿಳಿದು ಬಂದಿದೆ.

ವಿದ್ಯಾರ್ಥಿನಿಯರ ಜೊತೆಗೆ ಮಾತಾಡುವಾಗ ಮಹಿಳಾ ಪ್ರೊಫೆಸರ್​ನಂತೆ ಮಾತಾಡಿ ನಿಮ್ಮ ಮುಂದಿನ ಶಿಕ್ಷಣಕ್ಕೆ ಹಾಗೂ ಸ್ಕಾಲರ್ಶಿಪ್​ಗೆ ಸಹಾಯ ಮಾಡುವುದಾಗಿ ಹೇಳುತ್ತಿದ್ದನು. ಬಳಿಕ ಒಮ್ಮೆ ನಿರ್ಜನ ಪ್ರದೇಶದಲ್ಲಿ ಭೇಟಿ ಆಗಲು ಹೇಳಿ, ಬೈಕ್​ನಲ್ಲಿ ಬಂದು ಮನೆಗೆ ಕರೆದುಕೊಂಡು ಹೋಗುತ್ತಿದ್ದ.

ಬಳಿಕ ಅಲ್ಲಿಂದ ಅರಣ್ಯ ಪ್ರದೇಶಕ್ಕೆ ಜೊತೆಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗುತ್ತಿದ್ದ. ಇದೇ ರೀತಿ 7 ಕಾಲೇಜುಗಳ 7 ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದ ಎಂದು ಹೇಳಲಾಗಿದೆ.

ಇನ್ನು ಅತ್ಯಾಚರಕ್ಕೆ ಒಳಗಾದ ವಿದ್ಯಾರ್ಥಿನಿಯರು ಮಾನಕ್ಕೆ ಅಂಜಿ ದೂರು ನೀಡಲು ಮುಂದಾಗಿರಲಿಲ್ಲ. ಆದರೆ ಅವರಲ್ಲಿ ಒಬ್ಬ ಯುವತಿಯೊಬ್ಬರು ಈ ಸಂಬಂಧ ತನ್ನ ಮೇಲೆ ಅತ್ಯಾಚಾರವಾಗಿದೆ ಎಂದು ಪೊಲೀಸರಿಗೆ ದೂರು ನೀಡಿದ ಮೇಲೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಆರೋಪಿ ಕಾಲೇಜು ಬಳಿ ತಲೆಗೆ ಹೆಲ್ಮೆಟ್​ ಧರಿಸಿ ಬರುತ್ತಿದ್ದರಿಂದ ಪತ್ತೆ ಹಚ್ಚಲು ಪೊಲೀಸರಿಗೆ ಸ್ವಲ್ಪ ಕಷ್ಟವಾಗಿತ್ತು. ಆದರೆ ಎಲ್ಲ ಯುವತಿಯರ ಭೇಟಿ ಮಾಡಲು ಬಂದಾಗ ತನ್ನ ಕೈಗೆ ಆಗಿದ್ದ ಸುಟ್ಟ ಗಾಯ ಕಾಣಿಸಬಾರದೆಂದು​ ಹಾಕಿಕೊಳ್ಳುತ್ತಿದ್ದ ಗ್ಲೌಸ್​ಗಳೇ ಆರೋಪಿ ಹಿಡಿಯಲು ಪ್ರಮುಖ ಸುಳಿವು ನೀಡಿದವು.

ಸದ್ಯ ಆರೋಪಿಯ ಮನೆಯನ್ನು ಸರ್ಕಾರ ಬುಲ್ಡೋಜರ್ ಬಳಸಿ ಧ್ವಂಸಗೊಳಿಸಿದೆ. ಈ ಬಗ್ಗೆ ಇನ್ನು ಹೆಚ್ಚಿನ ತನಿಖೆ ನಡೆಸಿ ಎಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಆದೇಶ ಹೊರಡಿಸಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

error: Content is protected !!
LATEST
KSRTC : ಗಣಪತಿ ಪ್ರತಿಷ್ಠಾಪಿಸಿದ್ದರಿಂದ ಡಿಪೋ ಮುಂದೆ ಚಾಲಕ ರವಿ ಪಾರ್ಥಿವ ಶರೀರ ಇಡಲಾತ್ತು, ಪ್ರಮಾದವಾಗಿಲ್ಲ- ಡಿಎಂ ಸಮ... 10 ವರ್ಷದ ಆಧಾರ್‌ ನವೀಕರಣಕ್ಕೆ ಡೆಡ್‌ಲೈನ್‌ ಫಿಕ್ಸ್‌: ನಾಳೆ ಅಂತಿಮ ಗಡುವು- ಬಳಿಕ ದಂಡ ನಾಗಮಂಗಲ ಕೋಮುಗಲಭೆ ಪ್ರಕರಣ: ಇನ್ಸ್‌ಪೆಕ್ಟರ್ ಅಶೋಕ್ ಕುಮಾರ್ ಅಮಾನತು KSRTC ಸಿಬ್ಬಂದಿಯಿಂದಲೇ ಡಿಸಿಗೆ ಇರಿಯಲು ಯತ್ನ- ಕೈ ಅಡ್ಡಹಾಕಿ ಪ್ರಾಣಾಪಾಯದಿಂದ ಪಾರಾದ ಜಗದೀಶ್ ಕುಮಾರ್‌ "ARM" ಸಿನಿಮಾ ಇಂದು ಪ್ರಪಂಚದಾದ್ಯಂತ ಐದು ಭಾಷೆಗಳಲ್ಲಿ ಬಿಡುಗಡೆ ಸೆ.14ರಂದು ಸಾರಿಗೆ ಸಿಬ್ಬಂದಿಗಳಿಗೆ ಔಷಧೀಯ ಸಸ್ಯಗಳ  ಉಚಿತ ವಿತರಣೆ: ಅಧಿಕಾರಿಗಳು ಭಾಗಿ ಟೊವಿನೋ ಥಾಮಸ್ ಸಿನಿಮಾ ವಿತರಿಸಲಿದೆ ಹೊಂಬಾಳೆ ಫಿಲ್ಮ್! ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ದರ್ಶನ್‌ ಬಂಧನ ಅವಧಿ ಮತ್ತೆ ಒಂದು ದಿನ ವಿಸ್ತರಣೆ KSRTC ಚಿಕ್ಕಮಗಳೂರು: ಘಟಕದ ಗೇಟ್‌ ಬಳಿ ತ್ಯಾಜ್ಯಗಳ ನಡುವೆ ಚಾಲಕನ ಪಾರ್ಥಿವ ಶರೀರವಿಟ್ಟು ಅಂತಿಮ ದರ್ಶನಕ್ಕೆ ವ್ಯವಸ್ಥೆ-... ವಾಲ್ಮೀಕಿ ಹಗರಣ: ಬಳ್ಳಾರಿಯಿಂದ ಬಿಜೆಪಿ ಪಾದಯಾತ್ರೆ - ಛಲವಾದಿ ನಾರಾಯಣಸ್ವಾಮಿ