Search By Date & Category

CrimeNEWSದೇಶ-ವಿದೇಶ

ಸಾಮಾಜಿಕ ಕಳಂಕಕ್ಕೆ ಹೆದರಿ ಆಗತಾನೆ ಹುಟ್ಟಿದ ತನ್ನ ಮಗುವನ್ನೇ ಎಸೆದು ಕೊಂದ ಮದುವೆಯಾಗದ ಯುವತಿ

ವಿಜಯಪಥ ಸಮಗ್ರ ಸುದ್ದಿ

ನ್ಯೂಡೆಲ್ಲಿ: ಸಾಮಾಜಿಕ ಕಳಂಕಕ್ಕೆ ಹೆದರಿದ ಮದುವೆಯಾಗದೇ ಮಗುವಿಗೆ ಜನ್ಮ ನೀಡಿದ 20 ವರ್ಷದ ಯುವತಿ ಅಪಾರ್ಟ್ಮೆಂಟ್‌ನ ಬಾತ್‌ರೂಮ್ ಕಿಟಕಿಯಿಂದ ಆಗತಾನೇ ಜನ್ಮನೀಡಿದ ತನ್ನ ಮಗುವನ್ನೇ ಎಸೆದಿರುವ ಘಟನೆ ಪೂರ್ವ ದೆಹಲಿಯ ನ್ಯೂ ಅಶೋಕ್ ವಿಹಾರದಲ್ಲಿ ನಡೆದಿದೆ.

ನೋಯ್ಡಾದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ ಯುವತಿ, ಸೋಮವಾರ ಮಗುವಿಗೆ ಜನ್ಮ ನೀಡಿದ್ದಾರೆ. ನಂತರ ಸಾಮಾಜಿಕ ಕಳಂಕಕ್ಕೆ ಹೆದರಿ ಮಗುವನ್ನು ತಾನು ವಾಸಿಸುತ್ತಿದ್ದ ಜೈ ಅಂಬೆ ಅಪಾರ್ಟ್ಮೆಂಟ್‌ನ ಬಾತ್‌ರೂಮ್ ಕಿಟಕಿಯಿಂದ ಎಸೆದಿದ್ದಾಳೆ. ಈ ವೇಳೆ ಕೆಳಗೆ ಬಿದ್ದ ಮಗು ಸ್ಥಳದಲ್ಲೇ ಅಸುನೀಗಿದೆ. ಬಳಿಕ ಆಕೆಯನ್ನು ಪೊಲೀಸರು ಬಂಧಿಸಿದ್ದಾರೆ.

ಮಗು ರಸ್ತೆಯಲ್ಲಿ ಬಿದ್ದಿದ್ದನ್ನು ಕಂಡ ಸ್ಥಳೀಯರು ನೋಯ್ಡಾದ ಮೆಟ್ರೋ ಆಸ್ಪತ್ರೆಗೆ ಕರೆದೊಯ್ದಿದ್ದರು. ಅಲ್ಲಿ ಪ್ರಥಮ ಚಿಕತ್ಸೆಕೊಡಿಸಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಎಲ್‌ಬಿಎಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು.

ಆದರೆ ಅಷ್ಟರಲ್ಲಾಗಲೇ ಮಗು ಮೃತಪಟ್ಟಿತು. ನಂತರ ಶಿಶು ಪತ್ತೆಯಾದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಪೊಲೀಸ್ ಉಪ ಆಯುಕ್ತ (ಪೂರ್ವ) ಅಮೃತ ಗುಗುಲೋತ್, ರಕ್ತದ ಕಲೆಗಳ ಜಾಡು ಹಿಡಿದು ಆರೋಪಿ ಯುವತಿಯನ್ನು ಬಂಧಿಸಿದ್ದಾರೆ.

ಬಂಧನಕ್ಕೊಳಗಾದ ಯುವತಿ ತನಿಖೆವೇಳೆ ತಾನು ಅವಿವಾಹಿತೆ, ಸಾಮಾಜಿಕ ಕಳಂಕಕ್ಕೆ ಹೆದರಿ ಮಗುವನ್ನು ಬಾತ್‌ರೂಂನ ಕಿಟಕಿಯಿಂದ ಎಸೆದಿದ್ದಾಗಿ ಒಪ್ಪಿಕೊಂಡಿದ್ದಾಳೆ.

ಆರೋಪಿ ಯುವತಿ ವಿರುದ್ಧ ಐಪಿಸಿ ಸೆಕ್ಷನ್ 302, 201 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಯುವತಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು, ಪೊಲೀಸರು ಕಣ್ಗಾವಲು ಇರಿಸಲಾಗಿದೆ.

Leave a Reply

error: Content is protected !!